ಓದಿದ ಕೂಡಲೇ ಬರೆಯುತ್ತಿದ್ದೇನೆ..

ಪ್ರಶಾಂತ್ ಹಿರೇಮಠ

ಓದಿದ ಕೂಡಲೇ ಬರೆಯುತ್ತಿದ್ದೇನೆ.. “ಸಂಬಂಜಾ ಅನ್ನೋದು ದೊಡ್ಡದು ಕನಾ” ಅನ್ನೋದು ನೆನಪಾಗುತ್ತಿದೆ.. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿಯ ಕೊನೆಯ ಮಾತು.. ಅದೇ ಕಾದಂಬರಿಯ ಮೊದಲ ಪುಟದಲ್ಲಿ ಅಲ್ಲಮನ “ಎತ್ತಣ ಮಾಮರ..? ಎತ್ತಣ ಕೋಗಿಲೆ..” ವಚನವೂ ಇದೆ.. ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಇಷ್ಟವಾಗುತ್ತದೆ..? ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಅಂಟಿಕೊಳ್ಳುತ್ತದೆ..? ಇದು ನಿಗೂಢ.. ಅದರಲ್ಲೂ ತಾನು ನಿರಾಯಾಸವಾಗಿ ತಿನ್ನಬಹುದಾದ ನಾಯಿಮರಿಗಾಗಿ ತನ್ನ ಪ್ರಾಣವನ್ನು ತ್ಯಜಿಸಿಬಿಡುವ ಸಿಂಹ.. ಅವಮಾನವೆಂದು ಕರೆಯಬಹುದಾದ ಮೀಸೆಯನ್ನು ಜಗ್ಗಿಸಿಕೊಂಡು ಮುದಗೊಳ್ಳುವುದು.. ತಾಯಿಯಂತೆ ತನ್ನ ತೋಳ ಮೇಲೆ ಮಲಗಿಸಿಕೊಳ್ಳುವುದು.. ಇದನ್ನೇನೆಂದು ಕರೆಯುವುದು..? ದುಃಖವೇ..? ವೈರಾಗ್ಯವೇ..? ಬದುಕಿನ ನಶ್ವರತೆಯ ಶಾಶ್ವತ ಸತ್ಯದ ಅರಿವೇ..?

ಕತೆ ಅದ್ಭುತವಾಗಿದೆ.. ಟಾಲ್ಸ್ಟಾಯ್ ಗೂ ನಟರಾಜ್ ಹೊನ್ನವಳ್ಳಿಯವರೇ, ನಿಮಗೂ ಧನ್ಯವಾದಗಳು.. ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದೀರಿ.. ಧನ್ಯವಾದಗಳು.. ಶ್ರೇಷ್ಙ ಕಲೆ ಮತ್ತು ಶ್ರೇಷ್ಠ ಸಾಹಿತ್ಯ ಮಾಡುವ ಪರಿಣಾಮ ಒಂದೇ ರೀತಿಯದು.. ಅದು ಓದುಗನನ್ನು, ನೋಡುಗನನ್ನು ಅಥವಾ ಪ್ರೇಕ್ಷಕನನ್ನು ಮೂಕನನ್ನಾಗಿಸುತ್ತದೆ.. ಇನ್ನೂ ಕರಾರುವಕ್ಕಾಗಿ ಹೇಳಬಹುದಾದರೆ.. ಮಾತುಗಳು ಹೊಳೆಯದಂತಹ ಸ್ಥಿತಿಗೆ ತಳ್ಳುತ್ತದೆ.. ಮಾತಿಗೂ ಮೀರಿದಂಥ ನಿರ್ವಾಣ ಶ್ರೇಣಿಯಲ್ಲಿ ಅರ್ಥಗಳ ದರ್ಶನ ಮಾಡತೊಡಗುತ್ತದೆ.. ಇಲ್ಲಿನ ಸಿಂಹ ಮತ್ತು ನಾಯಿಗಳು ತಮ್ಮ ಪ್ರಾಣಿತನದ ಮಾಂಸದ ಮೂರ್ತತೆಯನ್ನು ಮೀರಿ ಅಮೂರ್ತಗಳಾಗುತ್ತವೆ.. ಪ್ರಾಯಶಃ ಸಂಕೇತಗಳು ಸಿದ್ಧಿಸುವ ಪರಿ ಇದೇ ಇರಬೇಕು..   ನಾನು ನಾಟಕದವನು.. ನಟ.. ಇದನ್ನು ಅದ್ಭುತ ನಾಟಕ ಮಾಡಬಹುದು ಅನ್ನಿಸುತ್ತಿದೆ. ನಾಟಕವೂ ಹಾಗೇಯೇ.. ಸಿಂಹ ನಾಯಿಯನ್ನು ತಿಂದುಬಿಟ್ಟಿದ್ದರೆ ಅದು ನಾಟಕವಾಗುತ್ತಿರಲಿಲ್ಲ.. ತಿನ್ನದೇ ಇರುವುದಷ್ಟೆ ಅಲ್ಲ.. ನಾಯಿ ಸತ್ತಾಗ ಆ ದುಃಖದಲ್ಲಿ ತಾನೂ ಉಪವಾಸ ಮಾಡಿ ಕೊನೆ ಕಾಣುವುದು ಅದ್ಭುತ ನಾಟಕ.. ಕೊನೆಗೂ ನಾಟಕವೆಂದರೆ ನಿಜದ ಹುಡುಕಾಟ ತಾನೇ..   ತುಂಬಾ ಚೆನ್ನಾಗಿದೆ.. ತುಂಬು ಹೃದಯದ ಧನ್ಯವಾದಗಳೊಂದಿಗೆ, ಪ್ರಶಾಂತ್ ಹಿರೇಮಠ, ರಂಗಾಯಣ,    ]]>

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This