ಓಹ್! ಓದಲೇ ಬೇಕಾದ ಪುಸ್ತಕ

green_l.jpg‘ತೊತ್ತೋ ಚಾನ್’ ಓದಿದ್ದೀರಾ? ಇಲ್ಲವಾ. ಛೆ! ಅದು ಹೇಗೆ ಸಾಧ್ಯ. ‘ತಾರೆ ಜಮೀನ್ ಪರ್’ ನೋಡಿ ಎಷ್ಟು ಒಳ್ಳೆಯ ಸಿನೆಮಾ ಎಂದು ಸಂತೋಷಪಟ್ಟೆವಲ್ಲಾ, ಅದಕ್ಕೂ ಮೀರಿದ ಕಥೆ ತೆತ್ಸುಕೋ ಕುರೋಯಾನಾಗಿ ಅವರ ತೊತ್ತೋ-ಚಾನ್. ಇದು ಸಮಸ್ಯೆಯಿಂದ ನರಳುವ ಮಗುವಿನ ಬಗ್ಗೆ ಖಂಡಿತಾ ಅಲ್ಲ. ಒಂದು ಚಟುವಟಿಕೆಯ ಪುಟಾಣಿಯ ಬಗ್ಗೆ.

ಬಿ ವಿ ಕಾರಂತರು ನಿರ್ದೇಶಿಸಿದ ರವೀಂದ್ರನಾಥ ಟ್ಯಾಗೂರರ ‘ಪಂಜರ ಶಾಲೆ’ ನಾಟಕ ನೋಡಿದ್ದೀರಾ? ಶಿಕ್ಷಣ ಈಗ ಕೇವಲ ಗಿಳಿಪಾಠ. ಅದನ್ನು ಕಲಿಯದೆ ಮನಸ್ಸು ನಾಲ್ಕು ಗೋಡೆಯಾಚೆ ಜಿಗಿದರೆ ಆ ಮಗು ಪ್ರಯೋಜನವಿಲ್ಲ ಎಂಬ ತೀರ್ಮಾನ. ತೊತ್ತೋ-ಚಾನ್ ನಲ್ಲಿರುವುದು ಆಡಲು-ಹಾಡಲು-ಕುಣಿಯಲು ಬಯಸುವ ಮಗುವಿನ ಕಥೆ. ಅಂದಿನ ತೊತ್ತೋ ಚಾನ್ ಇಂದಿನ ಖ್ಯಾತ ಟಿ ವಿ ನಿರೂಪಕಿ ತೆತ್ಸುಕೋ ಆಗಿ ಬದಲಾಗಿದ್ದಾಳೆ.

chi02_l.jpgಈ ಪುಸ್ತಕ ಶಿಕ್ಷಣದ ಬಗ್ಗೆ ಎಂತಹ ಬೆಳಕು ಚೆಲ್ಲಿದೆ ಎಂದರೆ ಪ್ರಪಂಚದ ಬಹುತೇಕ ಎಲ್ಲಾ ಭಾಷೆಗೂ ಅನುವಾದವಾಗಿದೆ. ಜಪಾನಿ ಭಾಷೆಯಲ್ಲಿ ಮೊದಲು ಪ್ರಕಟವಾದಾಗ ಮೊದಲ ವರ್ಷದಲ್ಲಿಯೇ ೪೫ ಲಕ್ಷ ಪ್ರತಿ ಮಾರಾಟವಾಯಿತು. ಅದು ಇಂದಿಗೂ ಅಳಿಸದೆ ಉಳಿದಿರುವ ದಾಖಲೆ. ಪುಸ್ತಕಕ್ಕಾಗಿ, ಪುಸ್ತಕದ ಆಶಯಗಳನ್ನು ಬಿಂಬಿಸುವ ಕೆಲಸಕ್ಕಾಗಿ ವೆಬ್ ಸೈಟ್ಗಳು ಹುಟ್ಟಿಕೊಂಡಿವೆ. ಈ ಪುಸ್ತಕ ಬರೆದ ನಂತರ ಲೇಖಕಿಯನ್ನು ಯುನಿಸೆಫ್ ತನ್ನ ಸದ್ಭಾವನಾ ರಾಯಭಾರಿಯನ್ನಾಗಿಸಿ ಗೌರವ ನೀಡಿತು.

ಈ ಪುಸ್ತಕವನ್ನು ನ್ಯಾಷನಲ್ ಬುಕ್ ಟ್ರಸ್ಟ್ ಕನ್ನಡದ ಅಂಗಳಕ್ಕೆ ತಂದಿದೆ. ವಿ ಗಾಯತ್ರಿ ಇದನ್ನು ಅನುವಾದ ಮಾಡಿದ್ದಾರೆ. ಇದು ಇಂಗ್ಲಿಷ್ನಿಂದ ಬಂದ ಜಪಾನಿ ಪುಸ್ತಕ ಎಂಬ ಸುಳಿವೇ ಕೊಡದಂತೆ ವಿ ಗಾಯತ್ರಿ ಇದನ್ನು ಅನುವಾದಿಸಿದ್ದಾರೆ. ಗಾಯತ್ರಿ ಸಹಾ ಈ ಪುಸ್ತಕದ ರುಚಿ ಹೆಚ್ಚಲು ಕಾರಣರಾಗಿದ್ದಾರೆ ಎಂಬುದು ನಿಸ್ಸಂಶಯ.

ಈ ಪುಸ್ತಕಕ್ಕಾಗಿ ತೆತ್ಸುಕೋ ಅವರು ಬಳಸಿಕೊಂಡ ಮೂಲ ಚಿತ್ರಗಳನ್ನು ನಿಮಗಾಗಿ ನೀಡುತ್ತಿದ್ದೇವೆ. ಚಿಹಿರೋ ಇವಾಸಾಕಿ ಅವರ ಚಿತ್ರಗಳಿವು.

chi03_l.jpg

ತೊತ್ತೋ-ಚಾನ್
ತೆತ್ಸುಕೋ ಕುರೋಯಾನಾಗಿ
ನ್ಯಾಷನಲ್ ಬುಕ್ ಟ್ರಸ್ಟ್
ಬೆಳೆ: ರೂ ೪೦

‍ಲೇಖಕರು avadhi

February 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಪಾರ

    ತುಂಬಾ ಒಳ್ಳೆಯ ಪುಸ್ತಕ. ಇತ್ತೀಚೆಗೆ ಮೋಹನ್‌ ಕೊಟ್ಟು ಓದಿಸಿದ್ದರು. ನಿಜಕ್ಕೂ ಓದಲೇಬೇಕಾದ ಪುಸ್ತಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: