ಕಚ್ಚಿದ ೨೪ ಫ್ರೇಮ್ …

blog-head.jpg

ಅಭಯ ಸಿಂಹ ಆರ್ಥಾತ್  ಅಭಯ. ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ಕಲಿತು ಬಂದ ಈತ ಈಗಾಗಲೇ ಗಾಂಧಿನಗರದಲ್ಲಿ ಹೆಜ್ಜೆ ಊರಿದ್ದಾನೆ. ‘ಗುಬ್ಬಚ್ಚಿಗಳು’ ಈತನ ನಿರ್ದೇಶನದ ಮೊದಲ ಚಿತ್ರ.

ಕಡಲ ದಂಡೆಯಿಂದ ಎದ್ದು ಬಂದ ಅಭಯ ಹಿಡಿದ ಪಟ್ಟು ಬಿಡುವ ಹುಡುಗನಲ್ಲ. ಥೇಟ್ ತಂದೆಯಂತೆ, ಅಥವಾ ಅಜ್ಜನಂತೆ. ಜಿ. ಟಿ. ನಾರಾಯಣರಾಯರ ಮೊಮ್ಮಗ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ -ದೇವಕಿಯವರ ಮಗ. ಇಬ್ಬರೂ ಈತನಲ್ಲಿ ಹುಟ್ಟು ಹಾಕಿದ ಈ ಗುಣವೇ ಈತನನ್ನು ಈಗ ಎತ್ತರಕ್ಕೆ ಕೊಂಡೊಯ್ದಿದೆ.

ಮಂಗಳೂರಿನಲ್ಲಿದ್ದಾಗಲೇ ಅವಳಿ, ತ್ರಿವಳಿ ಅದಕ್ಕೂ ಮೀರಿದವರ ಬಗ್ಗೆ ಸಾಕ್ಷಚಿತ್ರ ತಯಾರಿಸಿದಾತ. ನಂತರ ನೇರ ಪೂನಾಗೆ ತೆರಳಿದ. ಅಲ್ಲಿದ್ದಾಗಲೇ ಪುಟಾಣಿ ಚಿತ್ರ ತಯಾರಿಸಿದ. ಮಂಗಳೂರಿನ ಬಗ್ಗೆ ಸಾಕ್ಷಚಿತ್ರ ತಯಾರಿಸಿದ. ಈಗ ಬೆಂಗಳೂರು ಈತನ ತಾಣ. ಇಸ್ಮಾಯಿಲ್ ಹೇಳಿದ ಕಥೆಯ ಎಳೆಯನ್ನೇ ಹಿಡಿದು ಗುಬ್ಬಚ್ಚಿಗಳು ನಿರ್ದೆಶಿಸುತ್ತಿದ್ದಾನೆ. ಬಿ ಸುರೇಶ್ ನಿರ್ಮಿಸುತ್ತಿದ್ದಾರೆ.

ಅದು ಹೇಗಾದರೂ ಇರಲಿ ಅಭಯ ಇಂದು ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ  ಆತನಿಗೆ ಬದುಕು ಎಂಬುದು ೨೪ ಫ್ರೇಂಗಳ ಮೊತ್ತ. ಹಾಗಾಗಿಯೇ Shutterbug ಎಂಬ ಬ್ಲಾಗ್ ಮಾಡಿದ್ದಾನೆ. ಚೆನ್ನಾಗಿದೆ ಎನಿಸಿದೆ. ನಿಮಗೂ ಚೆನ್ನಾಗಿದೆ ಎನಿಸಿದಲ್ಲಿ [email protected] ಮೈಲ್ ಮಾಡಿ. ಖುಷಿಯಾದಾನು. ಅಷ್ಟೇ ಅಲ್ಲ ಬಿಡುಗಡೆಯಾದಾಗ ಸಿನೆಮಾ ನೋಡಿ.

‍ಲೇಖಕರು avadhi

February 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This