ಕತ್ತಲು ಬೆಳಕಿನಾಟ…

ಸುಚಿತ್ರಾ ಹೆಗಡೆ

ಬೆಳಕ ಬಸಿದು ಇರುಳಿನ ಅನ್ನ
ಅರಳುವ ಹೊತ್ತು
ಚುಕ್ಕೆಗಳಂಗಡಿ ಸಾಲು
ಹುಣ್ಣಿಮೆ ಸಂತೆಯಲಿ
ನದಿ-ದಂಡೆಯ ಹುಚ್ಚು ಪ್ರೀತಿಗೆ
ತಿಂಗಳಬೆಳಕಿನ ಕಣ್ಣು ಕಿಸಿರಾಗಿತ್ತು
ಕಡಲು ಓಡೋಡಿ ಬಂಡೆಯ ತೊಡೆಯೇರಿ
ಕುಲು ಕುಲು ನಕ್ಕಾಗ
ಚಂದ್ರ ಬಿಸಿಯೇರಿ ಕಡಲ ಸೆಳೆದೊಯ್ದ
ಅಲೆಗಳ ಕುಸುಕುಸು ಕೊಸರಾಟ
ದೂರದಲಿದ್ದ ಹಡಗೇಕೊ ನಿಂತಲ್ಲೇ ಹೊಯ್ದಾಡುತ್ತಿತ್ತು.

ಕ್ಷುದ್ರ ಜಂತುಗಳ ರೇವು ಪಾರ್ಟಿಗೆ
ನಿಶೆಯ ಕಂಡೂ ಕಾಣದ ಕುಮ್ಮಕ್ಕು
ಕಪ್ಪು ಮುಸುಗಿನ ಒಳಗೆ
ಕಾಣದ ಕೈಗಳ ಮಾಯದಾಟ
ರಾತ್ರಿಯ ಪಾಪದ ಕೊಡ
ತುಂಬಿ ತುಳುಕುವ ಸಮಯ
ಬಾನಿನ ಹೊಟ್ಟೆ ಸೀಳಿ ಹೊರ ಬಂದ
ಬಂದ ರವಿ ಕತ್ತಲ ಹುಟ್ಟಡಗಿಸಿದ!
…ಬೆಳಕ ಬಸಿದು ಇರುಳಿನ…

‍ಲೇಖಕರು Avadhi

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This