ಕನ್ನಡಕ್ಕೊಂದು ವೆಬ್ ಸೈಟ್

ದೂರದ ಅಮೆರಿಕಾದಲ್ಲಿದ್ದೂ ಕನ್ನಡದ ಬೆಳವಣಿಗೆಯ ಒಂದೊಂದು ಹೆಜ್ಜೆಯನ್ನೂ ಹಿಂಬಾಲಿಸುವ ತ್ರಿವೇಣಿ ಶ್ರೀನಿವಾಸರಾವ್ ಅವರು ತಮ್ಮ ಗಮನಕ್ಕೆ ಬಂದ ಈ ವಿಷಯವನ್ನು ಕಳಿಸಿಕೊಟ್ಟಿದ್ದಾರೆ. ಕನ್ನಡ, ಶಾಸ್ತ್ರೀಯ ಭಾಷೆಯಾದ ಹಿನ್ನೆಲೆಯಲ್ಲಿ ಹುಟ್ಟುಹಾಕಿರುವ ವೆಬ್ ಸೈಟ್ ನ ಯೋಜನೆಯಿದು. ನೀವೂ ಭೇಟಿ ಕೊಡಿ
Fullscreen capture 6182009 35931 PM.bmp
ಇದು, ಕನ್ನಡವನ್ನು ಶಾಸ್ತ್ರೀಯಭಾಷೆಯೆಂದು ಗುರುತಿಸಿರುವ ಸನ್ನಿವೇಶ. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಗಳ ಪಾರಂಪರಿಕ ನೆಲೆಗಳನ್ನು ಕುರಿತ ತಿಳಿವಳಿಕೆಯನ್ನು, ಆಸಕ್ತರಾದವರಿಗೆ ತಲುಪಿಸುವುದು ಇಂದಿನ ಅಗತ್ಯ ಇಂತಹ ಅಗತ್ಯಗಳನ್ನು ಪೂರೈಸಲೆಂದು ಈ ವಿದ್ಯುನ್ಮಾನ ತಾಣವು(ವೆಬ್ ಸೈಟ್) ರೂಪಿತವಾಗಿದೆ. ಇದು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಇರುವ ಮಾಹಿತಿ ತಾಣ. ಕನ್ನಡ ಭಾಷೆಯನ್ನು ತಿಳಿಯದವರಿಗಾಗಿ ಇಂಗ್ಲಿಷಿನಲ್ಲಿಯೂ ಮತ್ತು ಕನ್ನಡ ಬಂದರೂ ಸಂಸ್ಕೃತಿ-ಸಾಹಿತ್ಯಗಳಲ್ಲಿ ಪರಿಣಿತರಲ್ಲದವರಿಗಾಗಿ ಕನ್ನಡದಲ್ಲಿಯೂ ಈ ವೆಬ್ ಸೈಟ್ ಅನ್ನು ರೂಪಿಸಲಾಗಿದೆ. ಆದ್ದರಿಂದ ಮಾಹಿತಿ ಮತ್ತು ವಿಶ್ಲೇಷಣೆಗಳು ಇಲ್ಲಿನ ಮೂಲ ನೆಲೆಗಳು. ಕನ್ನಡದಲ್ಲಿ ನಡೆದಿರುವ ಕೆಲಸವನ್ನು ಅನ್ಯಭಾಷೆಗಳವರಿಗೆ ಮತ್ತು ಅವರು ನಮ್ಮ ನಾಡು-ನುಡಿಗಳ ಬಗ್ಗೆ ಮಾಡಿರುವ ಕೆಲಸವನ್ನು ಕನ್ನಡ ಬಲ್ಲವರಿಗೆ ತಲುಪಿಸುವುದೂ ನಮ್ಮ ಆಶಯವಾಗಿದೆ. ಕರ್ನಾಟಕದ ಬಹುಭಾಷಿಕ ಮತ್ತು ಬಹುಸಾಂಸ್ಕೃತಿಕ ಆಯಾಮಗಳನ್ನು ಇಲ್ಲಿ ಗಮನಿಸಲಾಗಿದೆ.
ಈ ವೆಬ್ ಸೈಟ್ ನಲ್ಲಿ ಭಾಷೆ, ಸಾಹಿತ್ಯ, ಶಾಸನಗಳು, ಕಲೆಗಳು ಮತ್ತು ವಾಸ್ತುಶಿಲ್ಪ, ಜಾನಪದ ಮತ್ತು ಜನಪದ ಕಲೆಗಳು, ಪಾರಂಪರಿಕ ಜ್ಞಾನದ ಆಕರಗಳು, ಸಂಶೋಧಕರು, ಪ್ರಮುಖ ಸ್ಥಳಗಳು, ಧರ್ಮಗಳು, ಕರ್ನಾಟಕ ಅಧ್ಯಯನಗಳು ಮತ್ತು ನಾಡು, ನುಡಿ ಹಾಗೂ ಪ್ರಮುಖ ವ್ಯಕ್ತಿಗಳು ಎಂಬ ಹನ್ನೊಂದು ವಿಭಾಗಗಳಲ್ಲಿ ವಿಷಯಗಳನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ನಮೂದಿಗೂ, ಪೂರಕವಾದ ಅಧ್ಯಯನ ಸಾಮಗ್ರಿಯನ್ನು ಸೂಚಿಸಲಾಗಿದೆ. ಅಗತ್ಯವಿರುವ ನಮೂದುಗಳಿಗೆ ದೃಶ್ಯ ಹಾಗೂ ಶ್ರವ್ಯರೂಪದ ಮಾಹಿತಿಗಳನ್ನೂ ಒದಗಿಸಲಾಗುತ್ತದೆ. ಒಂದು ನಮೂದನ್ನು ಓದುವಾಗ ಸಂಬಂಧಿಸಿದ ಇತರ ನಮೂದುಗಳಿಗೂ ಲಿಂಕ್ ಅನ್ನು ಒದಗಿಸಲಾಗಿದೆ. ಈ ತಾಣದಲ್ಲಿ ಹದಿನೇಳನೆಯ ಶತಮಾನದ ಕೊನೆಯವರೆಗಿನ ಆಗುಹೋಗುಗಳಿಗೆ ಒತ್ತು ಕೊಡಲಾಗಿದೆ. ಅನಂತರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳು ಹೊಸ ದಿಕ್ಕನ್ನು ಹಿಡಿದವೆನ್ನುವುದು ಇಲ್ಲಿನ ಗ್ರಹಿಕೆ. ಹೊಸಗನ್ನಡದ ಬಳಕೆಯೂ ಸರಿಸುಮಾರು ಆಗಲೇ ಮೊದಲಾಯಿತು.
ಇದು ನಿರಂತರವಾಗಿ ಬೆಳೆಯುವ ತಾಣ. ಹೊಸ ನಮೂದುಗಳನ್ನು ಸೇರಿಸಲು, ಇರುವ ನಮೂದುಗಳಿಗೆ ಹೊಸ ಮಾಹಿತಿಯನ್ನು ಸೇರಿಸಲು, ಅರೆ-ಕೊರೆಗಳನ್ನು ಸರಿಪಡಿಸಿಕೊಳ್ಳಲು ಸದಾ ಅವಕಾಶವಿರುತ್ತದೆ. ಈ ತಾಣವನ್ನು ಉಪಯೋಗಿಸುವವರ ಪ್ರತಿಕ್ರಿಯೆಗಳು ಕೂಡ ಇದು ಇನ್ನಷ್ಟು ಒಪ್ಪವಾಗಲು ನೆರವಾಗುತ್ತದೆ. ಕರ್ನಾಟಕವನ್ನು ಕುರಿತು ತಿಳಿಯಲು ಬಯಸುವ ಎಲ್ಲ ಆಸಕ್ತರಿಗೂ ಇದು ಉಪಯುಕ್ತವಾದ ತಾಣವಾಗುವುದೆಂದು ನಮ್ಮ ನಂಬಿಕೆ.
ಈ ತಾಣವು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥಾನದಲ್ಲಿ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್) ರೂಪಿತವಾಗಿದೆ. ಕರ್ನಾಟಕದ ಹಿರಿಯ ವಿದ್ವಾಂಸರಾದ ಪ್ರೊ. ಎಂ. ಚಿದಾನಂದಮೂರ್ತಿ,  ಪ್ರೊ. ಎಂ.ಎಂ. ಕಲಬುರ್ಗಿ, ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರೀ, ಪ್ರೊ. ಕೆ.ವಿ.ನಾರಾಯಣ ಮತ್ತು ಡಾ. ಎನ್.ಎಸ್. ತಾರಾನಾಥ ಅವರು ಸದಸ್ಯರಾಗಿರುವ ಸಲಹಾ ಸಮಿತಿಯು ಈ ಯೋಜನೆಯ ಹೊಳಹು ಹಾಕಿತು.
ಭಾಷಾಸಂಸ್ಥಾನದ ನಿರ್ದೇಶಕರಾದ ಪ್ರೊ. ಉದಯನಾರಾಯಣಸಿಂಗ್ ಮತ್ತು ಪ್ರೊ. ಕೆ.ವಿ. ನಾರಾಯಣ ಅವರು ಸಲಹೆಗಾರರಾಗಿ ಅಮೂಲ್ಯ ಸೂಚನೆಗಳನ್ನು ನೀಡಿದ್ದಾರೆ. ಈ ಯೋಜನೆಗೆ ಶ್ರೀ ಲಿಂಗದೇವರು ಹಳೇಮನೆಯವರು ಶೈಕ್ಷಣಿಕ ಸಂಯೋಜಕರಾಗಿಯೂ ಡಾ. ಮಲ್ಲಿಕಾರ್ಜುನ ಅವರು ತಾಂತ್ರಿಕ ಸಂಯೋಜಕ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು ಈ ಯೋಜನೆಯ ಸಂಪನ್ಮೂಲ ವ್ಯಕ್ತಿಗಳು. ಶ್ರೀಮತಿ ಸುನೀತಾ ರಾಜೇಂದ್ರ, ಶ್ರೀ ಕೆ.ಎನ್. ಅಶೋಕ್ ಮತ್ತು ಶ್ರೀ ಕೇಶವಮೂರ್ತಿಯವರು ಅಗತ್ಯವಾದ ತಾಂತ್ರಿಕ ನೆರವನ್ನು ನೀಡಿದ್ದಾರೆ. ಈಗ ಆಂಶಿಕವಾಗಿ ಬಿಡುಗಡೆಯಾಗುತ್ತಿರುವ ಈ ವೆಬ್ ಸೈಟ್ ಅನತಿಕಾಲದಲ್ಲಿಯೇ ಪೂರ್ಣಪ್ರಮಾಣವನ್ನು ಪಡೆಯಲಿದೆ.

‍ಲೇಖಕರು avadhi

June 18, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

7 ಪ್ರತಿಕ್ರಿಯೆಗಳು

  • avadhi

   ಕೊಂಡಿ ಹಾಗೂ ವೆಬ್ ಪುಟವನ್ನು ನೀಡಲಾಗಿದೆ. ಥ್ಯಾಂಕ್ಸ್

   ಪ್ರತಿಕ್ರಿಯೆ
   • vasanth

    The design is not up to the standard.
    Instead of marque flash would have been good for image and viewers can read the website without any distractions.

    ಪ್ರತಿಕ್ರಿಯೆ
 1. ಶೆಟ್ಟರು (Shettaru)

  ಉತ್ತಮ ಪ್ರಯತ್ನ, ಹೀಗೆ ಮುಂದುವರೆಯಲಿ.
  ಕನ್ನಡ ಮೇರು ಕೃತಿಗಳ ಡಿಜಿಟಲ್ ಕಾಪಿಗಳು ಸಿಗುವಂತಾಗಲಿ
  -ಶೆಟ್ಟರು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: