ಕನ್ನಡ ಶಾಲೆಗಳನ್ನು ಉಳಿಸೋಣ – ದಿನೇಶ್ ಕುಮಾರ್ ಬರೆಯುತ್ತಾರೆ

ದಿನೇಶ್ ಕುಮಾರ್

ಕಳೆದ ವರ್ಷದಿಂದ ಶುರುವಾಗಿ ಇದುವರೆಗೆ 3,000 ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ ಬೇರೆ ಶಾಲೆಗಳೊಂದಿಗೆ ಸೇರಿಸುವ ಕೆಲಸ ನಡೆದುಕೊಂಡು ಬಂದಿದೆ. ಇದೀಗ ಕರ್ನಾಟಕದೆಲ್ಲೆಡೆ ಒಟ್ಟು ಹತ್ತು ಸಾವಿರ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ ಇತರ ಶಾಲೆಗಳೊಂದಿಗೆ ಸೇರಿಸುವ ಶಿಫಾರಸ್ಸು ಸರ್ಕಾರದ ಮುಂದಿದೆಯೆಂದು ಪತ್ರಿಕೆಗಳ ವರದಿ ಹೇಳುತ್ತಿವೆ. “ಕಡಿಮೆ ಮಕ್ಕಳಿದ್ದರೆ ಶಾಲೆ ನಡೆಸಲು ಸಂಪನ್ಮೂಲಗಳನ್ನು ಒದಗಿಸುವುದು” ಕಷ್ಟ ಎಂದು ಹೇಳುತ್ತಾ ಸರ್ಕಾರವು ಈ ಕ್ರಮಕ್ಕೆ ಮುಂದಾಗಿರುವದು ಕಾಣುತ್ತದೆ. ಆದರೆ, ಶಿಕ್ಷಣವನ್ನು ಲಾಭ-ನಷ್ಟದ ಉದ್ದಿಮೆಯಂತೆ ನೋಡುವುದರಲ್ಲೇ ತಪ್ಪಿದ್ದು, ಶಿಕ್ಷಣವನ್ನು ಸಾಮಾಜಿಕ ಒಳಿತೆಂದು ಪರಿಗಣಿಸಬೇಕಾಗಿದೆ. ಶಿಕ್ಷಣವನ್ನು ನಾಡಿನ ನಾಳೆಗಳನ್ನು ಕಟ್ಟಲು ಬೇಕಾದ ಮಹತ್ತರ ಸಾಧನವೆಂಬುದನ್ನು ಅರಿತು, ಸರ್ಕಾರವು ಶಾಲೆಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ಮುಂದಾಗಬೇಕಿದೆ. ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ (ಸೇರಿಸುವ) ಮೂಲಕ, ಬಹುತೇಕ ಮಕ್ಕಳು ಶಾಲೆಗಳಿಂದ ದೂರವೇ ಉಳಿಯಬಹುದಾದಂತಹ ಗಂಡಾಂತರಕ್ಕೆ ಕನ್ನಡಿಗ ಸಮಾಜವನ್ನು ನೂಕದಿರಲಿ ನಮ್ಮ ಕರ್ನಾಟಕ ಸರ್ಕಾರ. ಈ ಆನ್ ಲೈನ್ ಪಿಟಿಶನ್ನಿಗೆ ಸಹಿ ಮಾಡುವ ಮೂಲಕ, ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುವಿಕೆಯ ವಿರುದ್ಧ ನಿಮ್ಮ ದನಿಗೂಡಿಸಿ. ನಮ್ಮ ದನಿಯನ್ನು ಸರ್ಕಾರಕ್ಕೆ ತಲುಪಿಸೋಣ. http://chn.ge/RICYwk]]>

‍ಲೇಖಕರು G

August 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

೧ ಪ್ರತಿಕ್ರಿಯೆ

  1. satya

    Just put a control on the fees of english medium schools. Make them same as kannada medium schools (gov). Then see how the people behind english medium schools start crying.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: