ಕರವೇ ಇಂದ ಕಥೆ ಕವನಗಳಿಗೆ ಆಹ್ವಾನ

ಕರವೇ ನಲ್ನುಡಿ ರಾಜ್ಯೋತ್ಸವ ವಿಶೇಷಾಂಕ ಕಥೆ/ಕವನ ಸ್ಪರ್ಧೆಗೆ ಆಹ್ವಾನ

ಕರವೇ ನಲ್ನುಡಿ ಮುಂದಿನ ರಾಜ್ಯೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಕಥಾ ಸ್ಪರ್ಧೆ ಮತ್ತು ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರು, ಕವಿಗಳಿಂದ ಕಥೆ, ಕವನಗಳನ್ನು ಆಹ್ವಾನಿಸುತ್ತಿದ್ದೇವೆ.

ಕಥಾ ಸ್ಪರ್ಧೆಯ ಪ್ರಥಮ ಬಹುಮಾನ ೨೫೦೦೦ ರೂ. ದ್ವಿತೀಯ ಬಹುಮಾನ ೧೫,೦೦೦ ಹಾಗು ತೃತೀಯ ಬಹುಮಾನ ೧೦,೦೦೦ ರೂ.ಗಳಾಗಿರುತ್ತದೆ. ಕವಿತೆ ಸ್ಪರ್ಧೆಯ ಪ್ರಥಮ ಬಹುಮಾನ ೧೦,೦೦೦, ದ್ವಿತೀಯ ಬಹುಮಾನ ೮೦೦೦ ಹಾಗು ತೃತೀಯ ಬಹುಮಾನ ೫೦೦೦ ರೂ.ಗಳಾಗಿರುತ್ತದೆ.

ಸ್ಪರ್ಧೆಗೆ ಕಳುಹಿಸುವ ಕಥೆ, ಕವಿತೆಗಳು ಕೃತಿಚೌರ್ಯವಾಗಿರಕೂಡದು. ಸ್ಪರ್ಧೆಗೆ ಕಳುಹಿಸುವ ಕಥೆ\ಕವನ ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆಗಾರರು\ಕವಿಗಳು ತಮ್ಮ ಕಥೆ\ಕವಿತೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದು ಅಥವಾ ಟೈಪ್ ಮಾಡಿಸಿರಬೇಕು. ಕಥೆ, ಕವಿತೆಗಳನ್ನು ಅ.೧೫ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರುತ್ತೇವೆ. ಸಂಪಾದಕರು, ಕಥೆ-ಕವನ ಸ್ಪರ್ಧೆ ವಿಭಾಗ, ಕರವೇ ನಲ್ನುಡಿ ಮಾಸಪತ್ರಿಕೆ, ನಂ.೬/೨, ಕನಸು ಕ್ರಿಯೇಷನ್ಸ್, ಶಿವಾನಂದ ವೃತ್ತ, ಕುಮಾರಕೃಪ ರಸ್ತೆ, ಬೆಂಗಳೂರು-೧. ದೂರವಾಣಿ: ೨೨೩೪ ೧೭೯೨. ನುಡಿ ತಂತ್ರಾಂಶದಲ್ಲಿ ಟೈಪಿಸಿ ಸಾಫ್ಟ್ ಪ್ರತಿಯನ್ನು [email protected] ಈ ವಿಳಾಸಕ್ಕೆ ಕಳುಹಿಸಿದರೂ ಆದೀತು.

ಕಥೆಗಾರರು/ಕವಿಗಳು ತಮ್ಮ ಇತ್ತೀಚಿನ ಭಾವಚಿತ್ರವನ್ನು ಕಳುಹಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮ. ಈ ಬಗ್ಗೆ ಯಾವುದೇ ಸಂಪರ್ಕಕ್ಕೂ ಆಸ್ಪದವಿಲ್ಲ.

ಬಹುಮಾನಿತ ಕಥೆ\ಕವಿತೆಗಳನ್ನು ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು. ಆಯ್ದ ಉತ್ತಮ ಕಥೆ\ಕವಿತೆಗಳನ್ನು ಕರವೇ ನಲ್ನುಡಿ ಪತ್ರಿಕೆಯ ಸಂಚಿಕೆಗಳಲ್ಲಿ ಬಳಸಿಕೊಳ್ಳಲಾಗುವುದು.

‍ಲೇಖಕರು G

September 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This