'ಕರಾಳ ದಿನವನ್ನಾಗಿ ಆಚರಿಸೋಣ!' – ನಾ ದಿವಾಕರ್

– ನಾ ದಿವಾಕರ್

ಕರಾಳ ದಿನವನ್ನಾಗಿ ಆಚರಿಸೋಣ ! ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮಹಿಳೆಯರ ಹಕ್ಕೊತ್ತಾಯಗಳು ಮತ್ತೊಮ್ಮೆ ದನಿಗೂಡುತ್ತವೆ. ವಿಚಾರ ಸಂಕಿರಣಗಳಲ್ಲಿ, ಸಕರ್ಾರಿ ಕೃಪಾಪೋಷಿತ ವೇದಿಕೆಗಳಲ್ಲಿ, ಮಹಿಳಾ ಸಂಘಟನೆಗಳ ಆಕ್ರೋಶದ ದನಿಗಳಲ್ಲಿ ವಿಶ್ವದಾದ್ಯಂತ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ಪ್ರತಿಫಲಿಸುತ್ತವೆ. ಆಳ್ವಿಕರಿಂದ ಮಹಿಳಾ ಸಬಲೀಕರಣ, ಸಮಾನತೆ, ಘನತೆ, ಗೌರವಗಳನ್ನು ಕುರಿತ ಭರವಸೆಗಳು, ಆಶ್ವಾಸನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ದೇಶದ ರಾಜಕಾರಣದಲ್ಲಿ ವಿಜೃಂಭಿಸುತ್ತಿರುವ ಮಹಿಳಾ ರಾಜಕಾರಣಿಗಳಾದ ಮಾಯಾ-ಮಮತಾ-ಜಯಾ-ಶೀಲಾ ದೀಕ್ಷಿತ್ ಅವರುಗಳನ್ನು ಮುಂದಿಟ್ಟುಕೊಂಡು ಮಹಿಳೆಯರ ಉನ್ನತ ಸ್ಥಾನಮಾನಗಳನ್ನು ಚಚರ್ಿಸಲಾಗುತ್ತದೆ. ಈ ರಂಜನೀಯ ವೈಭವೀಕರಣದ ನಡುವೆಯೇ ನಾಗರಿಕ ಸಮಾಜದ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಂಡು, ಸುಶಿಕ್ಷಿತ, ಪ್ರಜ್ಞಾವಂತ ಸಮಾಜದ ಪುರುಷ ಮಹಾಶಯರಿಂದ ತುಳಿತಕ್ಕೊಳಪಟ್ಟ ಮಹಿಳೆಯರು, ಯುವತಿಯರು, ಬಾಲಕಿಯರ ಆಕ್ರಂದನದ ದನಿ ಕ್ಷೀಣವಾಗಿಬಿಡುತ್ತದೆ. ಹೌದು, ಈ ಆಕ್ರಂದನ, ಈ ಆಕ್ರೋಶ, ಈ ಗದ್ಗದಿತ ನೋವಿನ ದನಿಗಳು ಕ್ಷೀಣವಾದರೂ ಎಲ್ಲೋ ಒಂದೆಡೆ ಕೇಳಿಬರುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಕಾಪರ್ೋರೇಟ್ ವಲಯದಲ್ಲಿ, ಸಕರ್ಾರಿ ಕಚೇರಿಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ, ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರು ರಾರಾಜಿಸುತ್ತಿದ್ದಾರೆ ಎಂಬ ರಂಜನೀಯ ವರದಿಗಳ ನಡುವೆಯೇ ಕ್ರೂರ ಪುರುಷ ಸಮಾಜದ ದಬ್ಬಾಳಿಕೆಗೆ ಒಳಗಾದ ಅಪ್ರಾಪ್ತ ಯುವತಿಯರ, ಅಸಹಾಯಕ ಮಹಿಳೆಯರ ಆಕ್ರಂದನದ ದನಿ ಕೇಳಿಬರುತ್ತಿದೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಆಗ್ರಹಿಸುತ್ತಿರುವಾಗಲೇ, ಮಹಿಳೆಯನ್ನು ಭೋಗ ವಸ್ತುವನ್ನಾಗಿ ನೋಡುವ ಪುರುಷ ಸಮಾಜದ ಪ್ರತಿನಿಧಿಗಳು, ಪವಿತ್ರ ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಮೂಲಕ ತಮ್ಮ ಪೌರುಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜ ತನ್ನ ಅಧಿಪತ್ಯವನ್ನು ಸಾಧಿಸಲು ಸದನದ ಅಂಗಣವನ್ನು ವಿಕೃತ ರೂಪದಲ್ಲಿ ಬಳಸಿಕೊಳ್ಳುತ್ತಿರುವುದನ್ನು ಈ ಘಟನೆಯಲ್ಲಿ ಕಾಣಬಹುದು. ಮತ್ತೊಂದೆಡೆ ದೇಶಾದ್ಯಂತ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ಅಶ್ಲೀಲ ಚಿತ್ರ ವೀಕ್ಷಿಸಿದ ನಮ್ಮ ಶಾಸಕರ ಭೌದ್ಧಿಕ ಅತ್ಯಾಚಾರ ಒಂದೆಡೆಯಾದರೆ, ದೇಶದ ವಿವಿಧೆಡೆಗಳಲ್ಲಿ ಮಹಿಳೆಯರ ಮೇಲಿನ ದೈಹಿಕ ಅತ್ಯಾಚಾರ ಪ್ರಕರಣಗಳು ನಿತ್ಯ ಸುದ್ದಿಗಳಾಗಿವೆ. ನೊಯಿಡಾದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಮಹಿಳೆಯ ಮೇಲೆ ಐವರು ದುಷ್ಕಮರ್ಿಗಳು ಅತ್ಯಾಚಾರ ಮಾಡುತ್ತಾರೆ. ಕೊಲ್ಕತ್ತಾದ ಕೇಂದ್ರ ಪ್ರದೇಶವಾದ ಪಾಕರ್್ ಸ್ಟ್ರೀಟ್ನಲ್ಲಿ 37 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗುತ್ತದೆ. ರೈಲಿನಲ್ಲಿ ಡಕಾಯಿತರನ್ನು ದಿಟ್ಟತನದಿಂದ ಎದುರಿಸಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗುತ್ತದೆ. ಆಸ್ಪತ್ರೆಯೊಂದರಲ್ಲಿ ಕಿವುಡ-ಮೂಕ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ. ಎಪ್ಪತ್ತು ವರ್ಷದ ಮುದುಕ ಏಳು ವರ್ಷದ ಬಾಲಕಿಯನ್ನು ರೇಪ್ ಮಾಡುತ್ತಾನೆ. ಶಾಲಾ ಮುಖ್ಯ ಶಿಕ್ಷಕ ವಿದ್ಯಾಥರ್ಿನಿಯ ಮೇಲೆ ಅತ್ಯಾಚಾರ ಎಸಗುತ್ತಾನೆ. ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಸಂಶೋಧನಾ ವಿದ್ಯಾಥರ್ಿನಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ದೇಶದ ಪ್ರತಿಷ್ಠಿತ ರಾಜಕಾರಣಿಗಳು ಭವಾರಿದೇವಿ ಎಂಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡುತ್ತಾರೆ. ಇವೆಲ್ಲವೂ ಇತ್ತೀಚೆಗೆ ವರದಿಯಾಗುತ್ತಿರುವ ಘಟನೆಗಳು. ಮಹಿಳೆಯರ ಮೇಲಿನ ಈ ದೌರ್ಜನ್ಯಗಳನ್ನು ಅಂಕಿ ಅಂಶಗಳ ಮೂಲಕ ಪರಾಮಶರ್ಿಸುವುದಕ್ಕಿಂತಲೂ ಸಾಮಾಜಿಕ ಹಿನ್ನೆಲೆ ಮತ್ತು ಪುರುಷ ಪ್ರಧಾನ ಸಮಾಜದ ಅಧಿಪತ್ಯ ರಾಜಕಾರಣದ ಮೂಲಕ ಪರಿಶೀಲಿಸುವುದು ಉಪಯುಕ್ತ ಎನಿಸುತ್ತದೆ. ಇಲ್ಲಿ ಉಲ್ಲೇಖಿಸಲಾಗಿರುವ ಹಲವು ಘಟನೆಗಳಲ್ಲಿ ನೊಂದ ಮಹಿಳೆಯರು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ನ್ಯಾಯ ದೊರೆಯದೆ ಮಾಧ್ಯಮಗಳ ಅಥವಾ ಕೆಲವು ಸಂಘಟನೆಗಳ ಮೊರೆ ಹೋಗಿರುವುದೂ ಉಂಟು. ಆದರೆ ಪುರುಷ ಸಮಾಜ ತನ್ನನ್ನು ಸಮಥರ್ಿಸಿಕೊಳ್ಳಲು ನಾನಾ ವಿಧಾನಗಳನ್ನು ಅನುಸರಿಸುತ್ತದೆ. ಆತ್ಯಾಚಾರಕ್ಕೊಳಗಾದ ಮಹಿಳೆಯ ಚಾರಿತ್ರ್ಯವನ್ನೇ ಪ್ರಶ್ನಿಸುತ್ತದೆ. ಮಹಿಳೆಯ ಪ್ರಚೋದಕ ಉಡುಪುಗಳನ್ನೇ ದೂಷಿಸಲಾಗುತ್ತದೆ. ನಮ್ಮ ರಾಜ್ಯದ ಸಚಿವರೂ ಸಹ ಇತ್ತೀಚೆಗೆ ಇದೇ ಪ್ರತಿಕ್ರಿಯೆ ನೀಡಿದ್ದರು. ಅಂದರೆ ಮಹಿಳೆಯರು ತಮ್ಮನ್ನು ದೌರ್ಜನ್ಯದಿಂದ ರಕ್ಷಿಸಿಕೊಳ್ಳಬೇಕಾದಲ್ಲಿ ಕೆಲವು ನೀತಿ ಸಂಹಿತೆಗಳನ್ನು ಅಳವಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಪುರುಷರಿಗೆ ಅತ್ಯಾಚಾರ ಎಸಗುವ ಸಾಂವಿಧಾನಿಕ ಹಕ್ಕು ಇದೆ ಎಂದು ಪುರುಷ ಸಮಾಜ ಭಾವಿಸಿದಂತಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನೈತಿಕ ಹೊಣೆಗಾರಿಕೆಯನ್ನು ಮಹಿಳೆಯರ ಮೇಲೆ ಹೊರಿಸಿ ತಮ್ಮ ಅಧಿಪತ್ಯವನ್ನು ಸ್ಥಾಪಿಸುವ ಪಿತೃ ಪ್ರಧಾನ ವ್ಯವಸ್ಥೆಯ ಈ ಧೋರಣೆಯ ವಿರುದ್ಧ ಹೋರಾಡುವುದು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ. ಜಾತಿ ಅಸ್ಮಿತೆಯ ನೆಪದಲ್ಲಿ ಪುರುಷರ ದೌರ್ಜನ್ಯವನ್ನು ಸಮಥರ್ಿಸಿಕೊಳ್ಳುವ ಹೀನ ಮಟ್ಟಕ್ಕೆ ನಮ್ಮ ನಾಗರಿಕ ಸಮಾಜ ಕುಸಿದಿದೆ. ಪುರುಷರ ಮನೋನಿಗ್ರಹದ ಹೊಣೆಗಾರಿಕೆಯನ್ನು ಮಹಿಳೆಯರ ಮೇಲೆ ಹೊರಿಸಲಾಗಿದೆ. ನೀವು ಸುರಕ್ಷಿತವಾಗಿರಬೇಕೆಂದರೆ ನಮ್ಮನ್ನು ಪ್ರಚೋದಿಸಬೇಡಿ, ಕೆಣಕಬೇಡಿ ಎಂದು ಪುರುಷ ಸಮಾಜ ಮಹಿಳೆಯರಿಗೆ ಕೂಗಿ ಹೇಳುತ್ತಿದೆ. ಇದು ನಮ್ಮ ನಾಗರಿಕ ಸಮಾಜದ ಅನಾಗರಿಕ ಧೋರಣೆಯ ಸಂಕೇತವಾಗಿಯೇ ಕಾಣುತ್ತದೆ. ಆದರೆ ಆಧುನಿಕ ಸಮಾಜದ ಮಹಿಳೆಯರು ಸಮಾನತೆಯ ಭಿಕ್ಷೆ ಬೇಡುತ್ತಿಲ್ಲ, ತಮ್ಮ ಗೌರವ ಘನತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂಬ ಅಂಶವನ್ನು ಪುರುಷ ಸಮಾಜ ಗ್ರಹಿಸಬೇಕಿದೆ.    ]]>

‍ಲೇಖಕರು G

March 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: