`ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು…

a6ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನಿ ಅಷ್ಟೇ ಅಲ್ಲ, ವಿಜ್ಞಾನ ಬರಹಗಾರ ಕೂಡ. ನಾಗೇಶ ಹೆಗಡೆ ಅವರ ಸಹವಾಸಕ್ಕೆ ಸಿಕ್ಕವರು ಬರಹಗಾರರಾಗದೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕೆ ಎನ್ ಗಣೇಶಯ್ಯ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಇಬ್ಬರೂ ಹಾಗೆ ಕನ್ನಡ ಬರವಣಿಗೆಯಲ್ಲಿ ಹೊಸ ಎತ್ತರ ಕಂಡವರು. ಕರಿಸಿರಿಯಾನವನ್ನ್ನು ಹಾಲ್ದೊಡ್ಡೇರಿ ಸುಧೀಂದ್ರ ಇಲ್ಲಿ ಒರೆಗೆ ಹಚ್ಚಿ ನೋಡಿದ್ದಾರೆ. ಗಣೇಶಯ್ಯ ಎಂಬ ಬರಹ ಆಯಸ್ಕಾಂತದ ಬಗ್ಗೆ ಮಾತನಾಡಿದ್ದಾರೆ. ಪುಸ್ತಕ ಬಿಡುಗಡೆಗೆ ಮಾಡಿಕೊಂಡಿದ್ದ ಟಿಪ್ಪಣಿ ಇಲ್ಲಿ ನೀಡುತ್ತಿದ್ದೇವೆ.

ಸಿರಿ ಹುಡುಕುವ ಯಾನದಲ್ಲಿ ಕರಿಯ ಮೇಲೆ ಕುಳಿತುಕೊಂಡು …..

– ಸುಧೀಂದ್ರ ಹಾಲ್ದೊಡ್ಡೇರಿ

ಕೆಲವೊಂದು ಲೇಖಕರು ಕುತೂಹಲ ಹುಟ್ಟಿಸುತ್ತಾರೆ, ಮತ್ತೆ ಕೆಲವರು ಇಷ್ಟವಾಗುತ್ತಾರೆ, ಹಾಗೆಯೇ ಆಪ್ತರಾಗುತ್ತಾರೆ. ಕೆಲವರಂತೂ ಎಡೆಬಿಡದೆ ಕಾಡತೊಡಗುತ್ತಾರೆ. ಒಂದಷ್ಟು ಜನ ನಮ್ಮೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. `ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು ನನ್ನನ್ನು ಇಡಿಯಾಗಿ ಆವರಿಸಿಬಿಟ್ಟಿದ್ದರು. ಎಷ್ಟರ ಮಟ್ಟಿಗೆಂದರೆ ನಿನ್ನೆ ಕಚೇರಿಯಿಂದ ಹಿಂದಿರುಗಿ ಬರುವ ರಾತ್ರಿ ಪುಸ್ತಕದ ಕೊನೆಯ ಇಪ್ಪತ್ತು ಪುಟಗಳನ್ನು ಓದುತ್ತಿದ್ದೆ. ವಿಜಯನಗರದ ಅರಸರು ಹುದುಗಿಸಿಟ್ಟಿದ್ದ ನಿಧಿ ಕಾದಂಬರಿಯ ಪೂಜಾ-ಭಾವನಾರ ಕಣ್ಣಿಗೆ ಬಿದ್ದು ಮುಂದೆ ಅದು ಸಕರ್ಾರದ ಖಜಾನೆಯನ್ನು ತುಂಬುತ್ತದೆಂಬ ನನ್ನ ನಿರೀಕ್ಷೆ ಸುಳ್ಳಾಗಿತ್ತು. ಕತೆಯನ್ನು ದಿಢೀರೆಂದು ನಿಲ್ಲಿಸಿಬಿಟ್ಟರಲ್ಲ ಎಂದು ಗಣೇಶಯ್ಯನವರನ್ನು ಶಪಿಸುತ್ತಲೇ ಬಸ್ಸಿನಿಂದಿಳಿದೆ. ಪುಣ್ಯಕ್ಕೆ ಅದು ವಿಜಯನಗರವಾಗಿರಲಿಲ್ಲ, ಜಯನಗರವೇ ಆಗಿತ್ತು. ಮಾರತ್ಹಳ್ಳಿಯಿಂದ ಹೊರಟಿದ್ದ ಆ ವೋಲ್ವೊ ಬಸ್ ನಾನಿಳಿಯಬೇಕಿದ್ದ `ರಾಗಿಗುಡ್ಡ’, ನಂತರದ ಮಾರೇನಹಳ್ಳಿಯನ್ನೂ ದಾಟಿ ಜಯನಗರ ಐದನೇ ಬ್ಲಾಕ್ ಬಸ್ ನಿಲ್ದಾಣವನ್ನು ಮುಟ್ಟಿತ್ತು. ಅಲ್ಲಿಯವರೆಗೂ ಸ್ಟೇಜ್ ಬದಲಾವಣೆ ಇರದಿದ್ದ ಕಾರಣ, ಕಂಡಕ್ಟರ್ನ ಬೈಗಳಿಂದ ಬಚಾವಾಗಿದ್ದೆ. ಮತ್ತೆ ಮುಕ್ಕಾಲು ಗಂಟೆ ಎಚ್ಚರ ತಪ್ಪಿದ್ದರೆ ಆ ಬಸ್ಸು ಬೆಂಗಳೂರಿನ ವಿಜಯನಗರಕ್ಕಂತೂ ನನ್ನನ್ನು ತಲುಪಿಸಿರುತ್ತಿತ್ತು.

kari1kari2

`ಸುಧಾ’ದಲ್ಲಿ `ಕನಕ ಮುಸುಕು’ ಧಾರಾವಾಹಿಯಾಗಿ ಪ್ರಕಟವಾಗುವಷ್ಟರಲ್ಲಿ ನಾನು ಧಾರಾವಾಹಿಗಳನ್ನು ಓದುವುದು ಬಿಟ್ಟಿದ್ದೆ. ಕಾರಣ, ವಾರದಿಂದ ವಾರಕ್ಕೆ ಕತೆಗಳ ಮುಂದುವರಿಕೆಯನ್ನು ನೆನಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಈ ವಾರದ ಭಾಗವನ್ನು ಓದುವಷ್ಟರಲ್ಲಿ ಕಳೆದ ವಾರ ಏನಾಗಿತ್ತು? ಎಂಬ ಸಂಪರ್ಕ ಕೊಂಡಿ ಕಳಚಿ ಹೋಗಿರುತ್ತಿತ್ತು. ಪ್ರೌಢಶಾಲೆ/ಕಾಲೇಜು ವಿಧ್ಯಾಥರ್ಿಯಾಗಿದ್ದ ಕಾಲದಲ್ಲಿ `ಸುಧಾ’ದಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳು ನಮ್ಮಲ್ಲಿ ಚಚರ್ೆಯ ವಿಷಯಗಳಾಗಿದ್ದವು. ಟಿ.ಕೆ.ರಾಮರಾವ್, ಡಾ||ದೊಡ್ಡೇರಿ ವೆಂಕಟಗಿರಿರಾವ್ ಅವರ ಕಾದಂಬರಿಗಳು ಪ್ರಕಟವಾಗುತ್ತಿದ್ದ ಕಾಲದಲ್ಲಿ `ಸುಧಾ’ ಪತ್ರಿಕೆಗಾಗಿ ಅರ್ಧ ಗಂಟೆ ಮೊದಲೇ ಎದ್ದು ಕಾಯುತ್ತಿದ್ದುದು ನೆನಪಿದೆ. ಟೀವಿ/ಇಂಟರ್ನೆಟ್ಗಳಿಲ್ಲದಿದ್ದ ಆ ದಿನಗಳಲ್ಲಿ ಚಿತ್ರಮಂದಿರಗಳ ಸಿನಿಮಾ ವೀಕ್ಷಣೆ ಬಿಟ್ಟರೆ ವಾರಪತ್ರಿಕೆಗಳ ಧಾರಾವಾಹಿಗಳು ರೋಮಾಂಚನ ಹುಟ್ಟಿಸುತ್ತಿದ್ದವು.

ಕಾದಂಬರಿಯ ಶೀಷರ್ಿಕೆಗೊ, ಅದನ್ನು ಬರೆದವರ ಹೆಸರನ್ನು ಮೊದಲ ಬಾರಿ ಕೇಳುತ್ತಿದ್ದರಿಂದಲೊ, ಅಥವಾ ಮೊದಲ ಕಂತಿನಲ್ಲೇ ಲೇಖಕರು ಒದಗಿಸಿದ್ದ ಚಿತ್ರಗಳು, ಕ್ಲಿಷ್ಟ ಬಂಧಗಳು, ಆಕರ ಮಾಹಿತಿಯ ವಿವರಗಳಿಂದಲೊ …. `ಕನಕ ಮುಸುಕು’ ನನ್ನನ್ನು ಸೆಳೆದಿತ್ತು. ಮತ್ತೆ ಧಾರಾವಾಹಿ ಓದಿಗೆ ಅಂಟಿಕೊಳ್ಳುವಂತೆ ಮಾಡಿತು. ಮಿದುಳಿಗೆ ಸಾಕಷ್ಟು ಕೆಲಸ ಕೊಡುತ್ತಿದ್ದ ಆ ಕತೆಯ ಮುಂದಿನ ಕಂತಿಗೆ ಕಾಯುವಂತೆ ಮಾಡಿತು. ಕತೆ ಮುಗಿದಂತೆ ಅದನ್ನು ರಚಿಸಲು ಗಣೇಶಯ್ಯನವರು ಏನೆಲ್ಲಾ ತಯಾರಿ ಮಾಡಿಕೊಳ್ಳಬಹುದು? ಅದೆಷ್ಟು ಹೊಸ ವಿಷಯಗಳನ್ನು ಅಥರ್ೆಸಿಕೊಂಡಿರಬಹುದು? ಎಂದು ಅಚ್ಚರಿ ಪಟ್ಟಿದ್ದೆ. ಈ ಬಗೆಯ ಪೂರ್ವಸಿದ್ಧತೆಗಳನ್ನು ಎಸ್.ಎಲ್.ಭೈರಪ್ಪನವರು ಮಾಡುತ್ತಾರೆಂದು ಕೇಳಿದ್ದೆ.

`ಕನಕ ಮುಸುಕು’ ಕೃತಿಯ ನಂತರ ಗಣೇಶಯ್ಯನವರನ್ನು ಮರೆಯೋಣವೆಂದರೆ ಅವರೆಲ್ಲಿ ಬಿಡುತ್ತಾರೆ? `ಶಾಲಭಂಜಿಕೆ’ ಬಂತು, `ಕಪಿಲಿಪಿಸಾರ’ ಬಂತು, `ಪದ್ಮಪಾಣಿ’ಯೂ ಬಂತು, ಕೊನೆಗೆ `ಕರಿಸಿರಿಯಾನವೂ’ ಬಂದಿದೆ. ಇದೀಗ `ಚಿತಾದಂತ’ ಧಾರಾವಾಹಿಯಾಗಿ ಕಾಡುತ್ತಿದೆ. ಗಣೇಶಯ್ಯನವರು ನಮ್ಮನ್ನು ಕಾಡುತ್ತಾರೆಂದು ಮತ್ತೆ ಮತ್ತೆ ಆರೋಪಿಸಲು ನನ್ನಲ್ಲಿ ಬಲವಾದ ಕಾರಣವಿದೆ. ಅವರ ಕಾದಂಬರಿಗಳು ಕೇವಲ ಸಮಯ ಕಳೆಯಲಷ್ಟೇ ಅಲ್ಲ, ಮತ್ತಷ್ಟು ಓದಲು ಪ್ರೇರೇಪಿಸುತ್ತವೆ. ಆಪ್ತರೊಂದಿಗೆ ಚಚರ್ೆ ಮಾಡಲು ನಮ್ಮನ್ನು ದೂಡುತ್ತವೆ. ಕತೆಯ ಅಂತ್ಯಕ್ಕೆ ಹೀಗೂ ಒಂದು ಸಾಧ್ಯತೆ ಇತ್ತೆ? ಎಂದು ಚಿಂತಿಸುವಂತೆ ಮಾಡುತ್ತವೆ.

ಗಣೇಶಯ್ಯನವರ ಕತೆಯ ಹೆಚ್ಚುಗಾರಿಕೆಯೇನು? ಎಂದು ಪಟ್ಟಿ ಮಾಡಲು ಹೊರಟರೆ ನನಗೆ ಗೋಚರಿಸುವ ಮೊದಲ ವೈಶಿಷ್ಟ್ಯ ಸ್ಥಳ ವಿವರಣೆ. ತಿರುಪತಿ ಕ್ಷೇತ್ರವನ್ನು ನಾನು ಇದುವರೆಗೂ ನೋಡಿಲ್ಲ. ಗಣೇಶಯ್ಯನವರ ಕತೆಯ ಒಂದು ಪಾತ್ರಧಾರಿಯಂತೆ ನನಗೂ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಂತು, ವಿಶೇಷ ದರ್ಶನಕ್ಕೆ ವಶೀಲಿ ಪತ್ರಗಳನ್ನು ಹಿಡಿದೊಯ್ಯುವ ರೇಜಿಗೆ ಹಿಡಿಸುವುದಿಲ್ಲ. ಆದರೆ ಪುಸ್ತಕ ಓದಿದ ನಂತರ ವಿಜಯನಗರ-ತಿರುಪತಿಗಿದ್ದ ವಿಶೇಷ ನೆಂಟಿನ ಪರಿಚಯದೊಂದಿಗೆ, ತಿರುಪತಿ-ಪೆನುಕೊಂಡ ಕ್ಷೇತ್ರಗಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಿಗುತ್ತದೆ. ಆರ್.ಕೆ.ನಾರಾಯಣರು ಮಾಲ್ಗುಡಿಯನ್ನು ಪರಿಚಯಿಸುವಷ್ಟೇ ಸರಳವಾಗಿ ಗಣೇಶಯ್ಯನವರು ತಿರುಪತಿ ದರ್ಶನ ಮಾಡಿಸಿಬಿಡುತ್ತಾರೆ.

ಗಣೇಶಯ್ಯನವರು ಪತ್ತೇದಾರಿ ಕಾದಂಬರಿಗಳಂತೆ ತಮ್ಮ ಕತೆಗಳ ರೋಚಕತೆಯನ್ನು ಹೆಚ್ಚಿಸಬಲ್ಲರು. ಕುತೂಹಲಕಾರಿ ಸಮಕಾಲೀನ ಘಟನೆಗಳನ್ನು ಸಂದರ್ಭಕ್ಕೆ ತಕ್ಕಂತೆ ಹೆಣೆಯಬಲ್ಲರು. ಆಂಧ್ರದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯಿಡು ಅವರ ಕಾರಿನ ಸ್ಫೋಟ ಪ್ರಯತ್ನ, ನಕ್ಸಲರ ಮೇಲಿನ ಪೊಲೀಸರ ದಾಳಿ ಇವುಗಳನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಕತೆಯಲ್ಲಿನ ಕೇಡಿಗರು ತಮ್ಮ ಕೆಲಸವಾದ ನಂತರ ಸಹಾಯ ಒದಗಿಸಿದವರನ್ನು ನಿವಾರಿಸಿಕೊಳ್ಳಲು ಅವರನ್ನು ನಕ್ಸಲರೆಂದು ಬಿಂಬಿಸುವ ಪ್ರಯತ್ನ ಭಯ ಹುಟ್ಟಿಸುತ್ತದೆ.

ಜಾನಪದ ಗೀತೆಗಳನ್ನು ಹಾಡುತ್ತಿದ್ದ ನಂಜಮ್ಮ ಕೊಲೆಯಾಗುವುದು, ಆಕೆಯ ಹಾಡುತ್ತಿದ್ದ ಗೀತೆಯಲ್ಲಿ ನಿಧಿಯ ಹುಡುಕಾಟಕ್ಕೆ ಬೇಕಾಗಿದ್ದ ಸೂತ್ರ, ಆಕೆಯ ಮನೆಯಲ್ಲಿ ಕಳುವಾದ ಕತ್ತಿಯ ಮೇಲಿದ್ದ ಚಿಹ್ನೆಗಳು ಹಾಗೆಯೇ ಕದ್ದೊಯ್ಯಲ್ಪಟ್ಟ ಚರ್ಮದ ಎದೆ ಹೊದಿಕೆ ….. ಇವೆಲ್ಲದರಲ್ಲಿ ಸಿಕ್ಕ ಸುಳಿವುಗಳನ್ನು ನಿಧಿಯ ಹುಡುಕಾಟಕ್ಕೆ ದುಷ್ಟ ಕೂಟ ಬಳಸಿಕೊಳ್ಳುತ್ತದೆ. ತನ್ನ ಸಂಚಿಗೆ ಈ ತಂಡ ಪ್ರಾಚ್ಯವಸ್ತು ಸಂಶೋಧಕರನ್ನು ಸಿಲುಕಿಸುತ್ತದೆ. ನಿಧಿಯ ಹುಡುಕಾಟ ಆರಂಭವಾದಂತೆ ದೇಶ ಭದ್ರತೆಯ ಹೊಣೆಹೊತ್ತ ಬೇಹುಗಾರರು ಸಂಶೋಧಕರ ಬೆನ್ನು ಹತ್ತುತ್ತಾರೆ. ರಕ್ಷಣೆಯ ಕವಚವನ್ನೂ ನೀಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣೆದ ಈ ಹುನ್ನಾರದಲ್ಲಿ ಅರಿವಿಲ್ಲದೆಯೆ ಕೆಲವು ಅಮಾಯಕ ಪ್ರಾಜ್ಞರೂ ಭಾಗಿಯಾಗುತ್ತಾರೆ. ಹಂಪಿ-ತಿರುಪತಿ-ಪೆನುಕೊಂಡ ಸುತ್ತಲಿನ ನಿದರ್ಿಷ್ಟ ಸ್ಥಳಗಳಲ್ಲಿ ಸಿಗುವ ಸುಳಿವುಗಳನ್ನು ಪರಿಷ್ಕರಿಸಿ, ಸೂತ್ರದೊಂದಿಗೆ ಬಂಧಿಸಿ, ಆ ಮೂಲಕ ನಿಧಿ ಇರಬಹುದಾದ ಚಕ್ರತೀರ್ಥಕ್ಕೆ ಓದುಗರನ್ನು ಎಳೆದು ತರುವಲ್ಲಿ ಗಣೇಶಯ್ಯನವರು ಸಫಲರಾಗುತ್ತಾರೆ. ಒಂದಷ್ಟು ಕಾಲ ಸುಳಿಯಲ್ಲಿ ಸಿಲುಕಿಸಿ ಅವರು ಚಡಪಡಿಸುವಂತೆ ಮಾಡುತ್ತಾರೆ.

ಸಾಮಾನ್ಯವಾಗಿ ಇಂಥ ಸಸ್ಪೆನ್ಸ್ ಥ್ರಿಲ್ಲರ್ಗಳನ್ನು ಓದುವಾಗ ಕುತೂಹಲ ಹೆಚ್ಚಾದಂತೆ ಪುಟಗಳನ್ನು ಎಗರಿಸಿ ಕೊನೆ ಮುಟ್ಟುವ ತವಕ ಓದುಗರಿಗಿರುತ್ತದೆ. ಅಂಥದೊಂದು ಅವಕಾಶವನ್ನು ಗಣೇಶಯ್ಯ ನಮಗೆ ನಿರಾಕರಿಸಿಬಿಡುತ್ತಾರೆ. ಪತ್ರಿಕೆಯೊಂದರಲ್ಲಿ ಸುಡೊಕು ಬಿಡಿಸುವಾಗ ಸುತ್ತಲಿನ ಜಾಗದಲ್ಲಿ ಅಂಕೆಗಳನ್ನು ಬರೆದು ತಲೆಕೆಡಿಸಿಕೊಳ್ಳುವಂತೆ ಇಲ್ಲಿಯೂ ನಾವು ತಿಣಕಾಡುವಂತೆ ಮಾಡುತ್ತಾರೆ. ಹಾಡು-ಚಿತ್ರ-ಅಕ್ಷರಗಳ ಸೂತ್ರಬಂಧಗಳ ಮೋಡಿ ಮಾಡುತ್ತಾರೆ. ಇದು ಐತಿಹಾಸಿಕ ಘಟನೆಯೊಂದನ್ನು ರೋಚಕ ಕಥಾನಕ ಮಾಡುವ ಜಾಣ್ಮೆ. ಈ ಕಾರ್ಯದಲ್ಲಿ ಗಣೇಶಯ್ಯ ಸಫಲರಾಗಿದ್ದಾರೆ.

ಸಿನಿಮಾ ವಿಮಶರ್ೆಯ ಭಾಷೆಯಲ್ಲಿ ಹೇಳುವುದಾದರೆ ಈ ಕಾದಂಬರಿಯಲ್ಲಿ ಎಲ್ಲ ಪಾತ್ರಗಳನ್ನೂ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. ಏಕತಾನತೆಯಿಲ್ಲದೆಯೇ ಪಾತ್ರಗಳು ನಿದರ್ಿಷ್ಟ ಕಾಲಮಿತಿಯಲ್ಲಿಯೇ ಬಂದು-ಹೋಗಿ ಮಾಡುತ್ತಾ ಓದುಗರನ್ನು ಸೆರೆ ಹಿಡಿಯುತ್ತವೆ. ಇಲ್ಲಿ ಮತ್ತೊಂದು ಬೆರಗು ಹುಟ್ಟಿಸುವ ಅಂಶವನ್ನು ಪ್ರಸ್ತಾಪಿಸಲೇ ಬೇಕು. ಅದು ವೈಜ್ಞಾನಿಕ ವಿಷಯಗಳನ್ನು ಗಣೇಶಯ್ಯನವರು ಪ್ರಸ್ತುತ ಪಡಿಸುವ ರೀತಿ. ಸರಳವಾದ ಭಾಷೆಯಲ್ಲಿಯೇ ಅವರು ಓದುಗರ ಮಿದುಳಿಗೆ ಹೊಸ ಕಲ್ಪನೆಯೊಂದನ್ನು ಛಾಪಿಸಿಬಿಡುತ್ತಾರೆ.

ಉದಾಹರಣೆಗೆ, ಹಂಪಿಯಲ್ಲಿ ಈಗಿರುವ ಸಸ್ಯರಾಶಿಗಳ ಸಮೀಕ್ಷೆ ಮಾಡಿ, ಪಂಪ ಮತ್ತು ರಾಘವಾಂಕರ ಸಾಹಿತ್ಯ ರಚನೆಗಳನ್ನಾಧರಿಸಿ ಆಗಿನ ಕಾಲದ ಸಸ್ಯಗಳ ಹೆಸರನ್ನು ಪಟ್ಟಿ ಮಾಡುವುದು. ಅವುಗಳಿಂದ ವಿಜಯನಗರ ಕಾಲದ ಸುಮಾರು 120 ಸಸ್ಯಜಾತಿಗಳನ್ನು ಗುರುತಿಸುವುದು. ಹಾಗೆಯೇ ವಿಜಯನಗರ ಕಾಲದಲ್ಲಿನ ಪರಾಗರೇಣುಗಳನ್ನು ಮಣ್ಣಿನಿಂದ ಹೊರತೆಗೆದು ಎಲ್ಲೆಲ್ಲಿ ಹೂವಿನ ಉದ್ಯಾನಗಳಿದ್ದವು ಎಂಬುದರ ನಕ್ಷೆ ತಯಾರಿಸುವುದು. ಈ ಕೆಲಸಕ್ಕೆ ಹಂಪಿಯ ಹಲವಾರು ಕಡೆಗಳಿಂದ ನಾಲ್ಕೈದು ಅಡಿಗಳಷ್ಟು ಆಳದ ಮಣ್ಣಿನ ತಿರುಳುಗಳನ್ನು ಭೂಮಿಯಿಂದ ಅಗೆದು ತೆಗೆಯುವುದು. ಮಣ್ಣಿನ ದಿಂಡುಗಳನ್ನು ಪ್ರಯೋಗಾಲಯದಲ್ಲಿ ನೀರಿನಿಂದ ತೊಳೆದಾಗ ತೇಲುವ ಪರಾಗರೇಣುಗಳನ್ನು ಸಂಗ್ರಹಿಸಿ, ಪರಿಶೀಲಿಸಿ, ಆಗಿನ ಕಾಲದ ಸಸ್ಯಜಾತಿಗಳನ್ನು ಕಂಡು ಹಿಡಿಯುವುದು. ವಿಜ್ಞಾನವನ್ನು ಅಲ್ಪ ಮಟ್ಟದಲ್ಲಿ ತಿಳಿದವರಿಗೂ ಗಹನವಾದ ವಿಷಯವೊಂದನ್ನು ಮುಟ್ಟಿಸುವ ಕಲೆ ಗಣೇಶಯ್ಯನವರಲ್ಲಿದೆ ಎನ್ನುವುದಕ್ಕೆ ಇದು ಸಾಕ್ಷಿ.

ಅವರು ಪ್ರಸ್ತಾಪಿಸುವ ಶಿಲಾವಲ್ಕ (ಐಛಿಜಟಿ) ವಿಷಯಕ್ಕೆ ಬರೋಣ. ನೂರು ವರ್ಷಗಳಲ್ಲಿ ಕೇವಲ ಒಂದು ಸೆಂಟಿಮೀಟರ್ನಷ್ಟು ಮಾತ್ರ ಬೆಳೆಯುವ `ರೈಜೋಕಾರ್ಪನ್’ ಎಂಬ ಶಿಲಾವಲ್ಕದ ಹುಡುಕಾಟ. ಅದು ಸಿಕ್ಕಿದ ಸ್ಥಳದಲ್ಲಿಯೇ ವಿಜ್ಞಾನಿ ಶಿಲಾವಲ್ಕದ ರೂಪರೇಷೆಗಳನ್ನು ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ಮಾಡುವುದು. ತಾನು ಹೊತ್ತು ತಂದ ಚಿತ್ರಗಳೊಂದಿಗೆ ತುಲನೆ ಮಾಡಿ ಆ ಸ್ಥಳಕ್ಕೆ ಎಷ್ಟು ವರ್ಷಗಳಿಂದ ಜನ ಸಂಪರ್ಕವಿರಲಿಲ್ಲ ಎಂದು ನಿರ್ಧರಿಸುವುದು. ಇದು ನನ್ನನ್ನು ಎಷ್ಟೆಲ್ಲಾ ಕಾಡಿತೆಂದರೆ ನಿನ್ನೆ ನಡೂ ರಾತ್ರಿಯ ತನಕ ಲಿಚೆನ್ಸ್ಗಳ ಬಗ್ಗೆ ಇಂಟರ್ನೆಟ್ ಹುಡುಕಾಟದಲ್ಲಿ ತಲ್ಲೀನನಾಗುವಂತೆ ಮಾಡಿತು.

ಆಗಿಂದಾಗ್ಗೆ ಗಣೇಶಯ್ಯನವರಲ್ಲಿ ಷೆಲರ್ಾಕ್ ಹೋಮ್ಸ್ ಸುಳಿದಾಡುತ್ತಾನೆ. ನಿಷೇಧಿತ ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಕಲು ಮಾಡುವ ಕಲೆ. ತಿರುಪತಿಯ ವಸ್ತುಸಂಗ್ರಹಾಲಯದಲ್ಲಿ ವೃತ್ತಾಕಾರದ ಕಲ್ಲಿನ ಬಿಲ್ಲೆಯ ಚಿತ್ರ ತೆಗೆದುಕೊಳ್ಳಬೇಕು. ಅದು ಸಾಧ್ಯವಾಗುವುದಿಲ್ಲ. ಭದ್ರತಾ ಅಧಿಕಾರಿ ಕಾಫಿಗೆಂದು ಹೊರ ಹೋದ ಸಮಯದಲ್ಲಿ ವಿಜ್ಞಾನಿ ತನ್ನ ಕೈಚೀಲದಿಂದ ಒಂದು ಕಚರ್ಿಫ್ ಮತ್ತು ಲಿಪ್ಸ್ಟಿಕ್ ತೆಗೆದು, ಕಚರ್ಿಫನ್ನು ಆ ವೃತ್ತದ ಮೇಲೆ ಹರಡಿ, ಲಿಪ್ಸ್ಟಿಕ್ ಅನ್ನು ತನ್ನ ಕೈಗೆ ಹಚ್ಚಿಕೊಂಡು ಆ ಕಚರ್ಿಫಿನ ಮೇಲೆ ನಯವಾಗಿ ಸವರುತ್ತಾಳೆ. ಥೇಟ್ ಮಕ್ಕಳು ರೂಪಾಯಿ ನಾಣ್ಯದ ಮೇಲೆ ಕಾಗದ ಹರಡಿ ಪೆನ್ಸಿಲ್ನಿಂದ ಬಣ್ಣ ಹಚ್ಚಿ ಮುದ್ರೆ ತೆಗೆಯುವ ಹಾಗೆ, ಆ ಕಚರ್ಿಫ್ ಮೇಲೆ ವೃತ್ತದಲ್ಲಿದ್ದ ಶಂಖ ಮತ್ತು ಕೆಲವು ಅಕ್ಷರಗಳು ಮೂಡುತ್ತವೆ. ಆ ಪ್ರತಿಯನ್ನು ಪಡೆದು, ವಿಜ್ಞಾನಿ ಕಚರ್ಿಫನ್ನು ಮತ್ತೆ ಕೈಚೀಲಕ್ಕೆ ಸೇರಿಸಿ ಹೊರಬರುತ್ತಾಳೆ.

ನನಗನಿಸುವ ಮಟ್ಟಿಗೆ ಇಂಥ ಸಾಹಸಗಳನ್ನು ಸ್ವತಃ ಗಣೇಶಯ್ಯನವರೇ ಮಾಡಿದ್ದಾರೆ. ಈ ಶಂಕೆ ಏಕೆಂದರೆ ಪುಸ್ತಕದ ಕೊನೆಯಲ್ಲಿ ಕತೆ ಮೂಡಿಬಂದ ಬಗ್ಗೆ ಗಣೇಶಯ್ಯ ಹೀಗೆ ಬರೆಯುತ್ತಾರೆ. `ಮಗದೊಮ್ಮೆ ತಿರುಪತಿಯ ಬೆಟ್ಟವನ್ನು ಕಾಲುದಾರಿಯಲ್ಲಿಯೇ ಹತ್ತಿ ಹಲವಾರು ಕಡೆ ಸ್ಥಳಗಳ ವಿವರಗಳನ್ನು ಸಂಗ್ರಹಿಸಿ ಫೋಟೋ ತೆಗೆಯಬೇಕೆಂದು ನಾವು ಹೋದ ಹಿಂದಿನ ದಿನವೇ ಚಂದ್ರಬಾಬು ನಾಯಿಡು ಅವರ ಮೇಲೆ ಬಾಂಬ್ ದಾಳಿಯಾಗಿದ್ದು. ಪೊಲೀಸ್ ತಪಾಸಣೆ ಅತಿಯಾಗಿ ನಡೆದಿತ್ತು. ಡಿಜಿಟಲ್ ಕ್ಯಾಮೆರಾ ಏಕೆ ಮೊಬೈಲ್ ಕೂಡ ಬಿಡುತ್ತಿರಲಿಲ್ಲ. ಆದರೆ 13 ವರ್ಷದ ಪುಣ್ಯಳ ಕೈಯಲ್ಲಿದ್ದ ಒಂದು ಡಿಜಿಟಲ್ ಕ್ಯಾಮೆರಾವನ್ನು ಅದೊಂದು ಆಟಿಕೆ ಸಾಮಾನೆಂದು ಬಿಟ್ಟಿದ್ದು ನಮ್ಮ ಅದೃಷ್ಟವಾಗಿಯೇ ಪರಿಣಮಿಸಿತ್ತು. ದಾರಿಯುದ್ದಕ್ಕೂ ಕಾವಲಿದ್ದ ಪೊಲೀಸ್ ಕಣ್ಣು ತಪ್ಪಿಸಿ ಆಗಾಗ ಕಾಡಿನೊಳಗೆ ನುಸುಳಿ ಹೋಗಿ ಚಿತ್ರ ತೆಗೆದು ಕ್ಯಾಮೆರಾ ಮುಚ್ಚಿಟ್ಟುಕೊಂಡು ಮತ್ತೆ ಬಂದು ಕಳ್ಳತನದಲ್ಲಿ ಜನರ ಸಾಲು ಸೇರಿ ಮುಂದೆ ಸಾಗುವುದು ಒಂದು ಶ್ರಮವೇ ಆಗಿತ್ತು’.

ಇಷ್ಟೆಲ್ಲಾ ಕಷ್ಟ ಪಡುವ ಗಣೇಶಯ್ಯ ಸುಮ್ಮನಿರುವವರಲ್ಲ. ತಮ್ಮ ಆಪ್ತರಿಗೂ ಸಾಕಷ್ಟು ಕಾಟ ಕೊಡುತ್ತಾರೆ. ಮಡದಿ ವೀಣಾ, ಮಗಳು ಪುಣ್ಯ, ಕೊನೆಗೆ ಶಿರಸಿಯ ಅರಣ್ಯ ಕಾಲೇಜಿನ ತಮ್ಮ ಆಪ್ತ ಮಿತ್ರ ಕಮ್ ಶಿಷ್ಯ ವಾಸುದೇವ ಅವರನ್ನೂ ಬಿಡುವುದಿಲ್ಲ. ಕನ್ನಡ ಓದುಗರಿಗೆ `ಕರಿಸಿರಿಯಾನ’ ಸೇರಿದಂತೆ ಹಲವಾರು ಹೊಸ ಬಗೆಯ ಕೃತಿಗಳನ್ನು ನೀಡಿರುವ ಗಣೇಶಯ್ಯನವರಿಗೆ ಥ್ಯಾಂಕ್ಸ್ ಹೇಳುವ ಮುನ್ನ ವೀಣಾ, ಪುಣ್ಯ, ವಾಸುದೇವ್ ಅವರಿಗೂ ಧನ್ಯವಾದಗಳನ್ನಪರ್ಿಸಬೇಕು. ಮರೆಯುವ ಮುನ್ನ `ಸುಧಾ’ ಪತ್ರಿಕೆಯ ಮೂಲಕ ಗಣೇಶಯ್ಯನವರನ್ನು ಪರಿಚಯಿಸಿ ಅವರು ನಮ್ಮನ್ನು ಸತತವಾಗಿ ಕಾಡುವಂತೆ ಮಾಡಿದ ನಾಗೇಶ ಹೆಗಡೆಯವರಿಗೆ ವಿಶೇಷ ವಂದನೆಗಳನ್ನು ಅಪರ್ಿಸಬೇಕು.

ನನಗೀಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಕುತೂಹಲ ಕಳೆದು ಹೋಗಿದೆ. ಮುಂದೆಂದಾದರೂ ತಿರುಪತಿಗೆ ಭೇಟಿ ಕೊಟ್ಟರೆ ಥೇಟ್ ಗಣೇಶಯ್ಯನವರಂತೆ ಕೇಶಮುಂಡನ ಮಾಡಿಸುವ ವಸತಿಗೃಹದ ಮೂರು ಮಹಡಿಗಳ ಮೇಲೆ ಕಳ್ಳತನದಲ್ಲಿ ಹತ್ತಿ, ಜೂಂ ಲೆನ್ಸ್ ಉಪಯೋಗಿಸಿ ದೇವಾಲಯದ ಪೂಜಾ ಪ್ರಾಂಗಣದ ಪ್ರಾಕಾರ ಹಾಗೂ `ಬಂಗಾರು ಬಾವಿ’ಯ ಚಿತ್ರ ತೆಗೆದು, ಕಂಪ್ಯೂಟರ್ಗೆ ಹೊಯ್ದು ನೋಡುವ ಬಯಕೆಯಾಗುತ್ತಿದೆ!

ಮೂಲತಃ ನಾನೊಬ್ಬ ಸೋಮಾರಿ. ಒಪ್ಪಿಕೊಂಡ ಕೆಲಸಗಳನ್ನು ಕೊನೆಯ ನಿಮಿಷದವರೆಗೂ ದೂಡಿಕೊಂಡು, ಆ ಕ್ಷಣಗಳಲ್ಲಿ ಅನುಭವಿಸುವ ಟೆನ್ಶನ್ಗಳನ್ನು ಆನಂದಿಸುವವ. `ಕರಿಸಿರಿಯಾನ’ದ ಬಗ್ಗೆ ಮಾತನಾಡುತ್ತೇನೆಂದು ಒಪ್ಪಿಕೊಂಡವನಿಗೆ ಮೊನ್ನೆಯ ತನಕ ಪುಸ್ತಕ ಓದಲು ಸಮಯ ಸಿಕ್ಕಿರಲಿಲ್ಲ. ವಿಪರೀತ ಓಡಾಟದ ನಡುವೆಯೂ `ಕರಿಸಿಯಾನ’ ನನ್ನನ್ನು ಮತ್ತೆ ಮತ್ತೆ ಓದುವಂತೆ ಮಾಡಿತು, ಕಾಡಿತು. ಪುಸ್ತಕದ ಆಕರಗಳೊಂದರಲ್ಲಿ ಉಲ್ಲೇಖವಾಗಿರುವಂತೆ ಗಣೇಶಯ್ಯನವರಿಗೆ `ಸ್ಯಾಂಡಲ್ವುಡ್’ ಬಗ್ಗೆ ವಿಶೇಷ ಆಸಕ್ತಿ ಹಾಗೂ ಪರಿಣತಿಯಿದೆ. ದಕ್ಷಿಣ ಭಾರತದಲ್ಲಿನ ಶ್ರೀಗಂಧ ಸಿರಿಯ ಜೈವಿಕ ವೈವಿಧ್ಯದ ಬಗ್ಗೆ ಅವರು ಮೋಜಣಿ ಮಾಡಿದ್ದಾರೆ. ಅವರ ಕೃತಿಗಳು ನಮ್ಮ ಸಿನಿಮಾ `ಸ್ಯಾಂಡಲ್ವುಡ್’ನಲ್ಲಿಯೂ ವಿಜೃಂಭಿಸಬಹುದೆಂಬ ನಂಬಿಕೆ ನನ್ನದು.

[13-09-2009ರಂದು `ಕರಿಸಿರಿಯಾನ’ ಬಿಡುಗಡೆಯ ಸಂದರ್ಭದಲ್ಲಿ ಕೃತಿಯ ಕುರಿತು ಮಾತನಾಡಲು ಸಿದ್ಧಪಡಿಸಿಕೊಂಡ ಟಿಪ್ಪಣಿಗಳು]

‍ಲೇಖಕರು avadhi

September 14, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

 1. Shamala

  ನಮಸ್ಕಾರ ಸಾರ್……..
  ನೀವು ಹೇಳಿದ್ದು ಅಕ್ಷರಶ: ಸರಿ.. ಗಣೇಶಯ್ಯನವರು, ನಮ್ಮೆಲ್ಲರನ್ನೂ ತುಂಬಾ ಕಾಡಿಸುತ್ತಾರೆ. ಸುಧಾದಲ್ಲಿ ಧಾರಾವಾಹಿಯಾಗಿ ಬಂದಾಗ, ಕಾಯುವುದು ಅತಿ ಬೇಸರ ತರಿಸುತ್ತಿತ್ತು….ಅವರ ಕಥೆಗಿಂತ ಅವರು ಕೊಡುವ ವಿವರಣೆಗಳು, ಅದನ್ನು ಇತಿಹಾಸಕ್ಕೆ ಜೋಡಿಸುವುದು, ತುಂಬಾ ರೋಚಕ ಅನ್ನಿಸುತ್ತೆ. ಕಥೆ ಓದುವಷ್ಟೂ ಹೊತ್ತು, ನಾವು ಇತಿಹಾಸದಲ್ಲಿ ಮುಳುಗಿ, ಈಗ ನಮ್ಮೆದುರಿಗೆ ನಡೆಯುತ್ತಿದೆಯೇನೋ ಎಂಬಂಥ ಭಾಂತಿ ಉಂಟುಮಾಡುತ್ತದೆ. ನಿಮ್ಮ ಟಿಪ್ಪಣಿ ಕೂಡ ಸುಂದರವಾಗಿದೆ…….

  ಶ್ಯಾಮಲ

  ಪ್ರತಿಕ್ರಿಯೆ
 2. ಶ್ರೀವತ್ಸ ಜೋಶಿ

  “`ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು…”ವನ್ನು ಓದುವಷ್ಟರಲ್ಲಿ ಈ ಹಾಲ್ದೊಡ್ಡೇರಿಯವರ ಫೊಟೊ ಬದಲಾಗಿದೆಯಲ್ಲ! (ನಿನ್ನೆ ಇದೇ ಪೋಸ್ಟ್‌ಗೆ ಬೇರೆ ಫೊಟೊ ಇತ್ತು, ಇವತ್ತು ಬೇರೆ ಇದೆ. ಅದನ್ನು ಗಮನಿಸಿ ಹೀಗೆ ಬರೆದಿದ್ದೇನೆ.

  ಗಣೇಶಯ್ಯನವರ ’ಕರಿಸಿರಿಯಾನೆ’ ಪುಸ್ತಕದಲ್ಲಿನ ಸೊಬಗನ್ನು ಸುಧೀಂದ್ರ ಬಹಳ ಚಂದವಾಗಿ ಸಮ್ಮರಿಸಿದ್ದಾರೆ (summaryಇಸಿದ್ದಾರೆ). ಅವರಿಂದ ಟಿಪ್ಪಣಿಗಳನ್ನು ಪಡೆದು ಮೋಹನ್ ಅವನ್ನು ನಮ್ಮೆಲ್ಲರ ಓದಿಗೆ ಒದಗಿಸಿದ್ದಾರೆ. ಎಲ್ಲರಿಗೂ ಅಭಿನಂದನೆ ಪ್ಲಸ್ ಧನ್ಯವಾದ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: