ಕರೆದರು ಇಲ್ಲ ಹಾಲೂ ಬೆಲ್ಲ ಕಾಯಿಸಿ ಇಟ್ಟಿದ್ದೆ…

ಮಗನ೦ತೆ ಸಾಕಿದ ಮುದ್ದು ಬೆಕ್ಕನ್ನು ಕ್ಯಾನ್ಸರ್ ಕಸಿದುಕೊ೦ಡಾಗ ಅನುಭವಿಸಿದ ಯಾತನೆಯನ್ನು ನಿನ್ನೆ ಶಾ೦ತಿ ಬಾಲಚ೦ದ್ರ ಅವರು ನಮ್ಮೊ೦ದಿಗೆ ಹ೦ಚಿಕೊಡಿದ್ದರು. (ಆ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಅದನ್ನು ಓದಿದ ಜಗದೀಶ್ ಕೊಪ್ಪ ಅವರು ಬರೆದ ಸಾ೦ತ್ವನದ ನುಡಿಗಳು ಇಲ್ಲಿ.. :

ಸಹೋದರಿಗೊಂದು ಸಾಂತ್ವನ

  ಪ್ರಿಯ ಸಹೋದರಿ ಶಾಂತಿಯವರಿಗೆ, ನಿಮ್ಮ ಮಗು ವೈಟಿ ಕುರಿತಾದ ಲೇಖನವನ್ನು ಅವಧಿಯಲ್ಲಿ ಓದಿದೆ ಸಂಕಟವಾಯಿತು. ನಿಮ್ಮ ಮಗು ಸತ್ತಿಲ್ಲ, ಅದು ನಮ್ಮ ಮನೆಯಲ್ಲಿದೆ ದಯಮಾಡಿ ಬೇಕು ಎನಿಸಿದಾಗ ಬಂದು ನೋಡಿಕೊಂಡು ಹೋಗಿ. ನಾನು ನನ್ನ ಹೆಂಡತಿ ಅದಕ್ಕೆ ಪೂಸಿ ಎಂದು ನಾಮಕರಣ ಮಾಡಿದ್ದೇವೆ. ನಾವು ಸಾಕಿ ಬೆಳಸಿದ ಮಕ್ಕಳಿಬ್ಬರೂ ವಯಸ್ಕರಾದ ಕಾರಣ ಅವರ ಕಾಳಜಿ ಬಿಟ್ಟು, ದಿನ ನಿತ್ಯ ಪೂಸಿಯ ಕಾಳಜಿಯಲ್ಲಿದ್ದೇವೆ. ಈ ಮುದ್ದಿನ ಕೂಸು ನಾಲ್ಕು ವರ್ಷದ ಹಿಂದೆ ನಾನು ಧಾರವಾಡದ ಮಿಲಿಟರಿ ಅಧಿಕಾರಿಯೊಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದಾಗ ಸಿಕ್ಕಿತು. ಅರ್ಧ ಎಕರೆ ತೋಟವನ್ನು ಒಳಗೊಂಡಿದ್ದ ಆ ಮನೆಯ ಹಿಂದಿನ ಮಾವಿನ ಮರದ ಬಳಿ ಎರಡು ದಿನದ ಮರಿಯಾಗಿದ್ದಾಗ,, ಮೊಲದ ಮರಿ ಎಂದು ಭಾವಿಸಿ ಎತ್ತು ತಂದಾಗ ಅದು ಬೆಕ್ಕಿ ಮರಿಯಾಗಿತ್ತು. ಅಂದಿನಿಂದ ಇಂದಿನವರೆಗೆ ನಿಮ್ಮ ಮಗುವಿನಂತೆ ಸಾಕಿದ್ದೇವೆ. ಇದಕ್ಕಾಗಿ ನಾನು ಮತ್ತು ನನ್ನ ಹೆಂಡತಿ ಒಂದು ದಿನವೂ ಮನೆ ಬಿಟ್ಟು ಜೋಡಿಯಾಗಿ ಹೊರಗೆ ಹೋಗಿಲ್ಲ. ಪ್ರತಿ ದಿನ ಒಂದು ಲೀಟರ್ ಶುಭಂ ಹಾಲು ಮತ್ತು ಮೊಟ್ಟೆ , ವಾರಕ್ಕೆ ಎರಡು ದಿನ ಮೀನು ಮತ್ತು ಕೋಳಿ ಮಾಂಸಕ್ಕೆ ತಿಂಗಳ ಬಜೆಟ್ ನಲ್ಲಿ ಹಣವನ್ನು ಮೀಸಲಿರಿಸಿದ್ದೇವೆ. (ಇದಕ್ಕೆ ಹಸಿ ಮಾಂಸದ ಅಭ್ಯಾಸವಿಲ್ಲ. ಮಸಾಲೆ ಹಾಕಿ ಬೇಯಿಸಿದ ಮಾಂಸವೆಂದರೆ ಪ್ರಾಣ). ನನ್ನ ಮಗ ಅನನ್ಯನಿಗೆ ಪೂಸಿ ಎಂದರೆ, ಪಂಚಪ್ರಾಣ. ಅವನು ಮೈಸೂರು ವಿ.ವಿ.ಯಲ್ಲಿ ಓದುತಿದ್ದಾಗ ಇದರ ಜೊತೆ ಆಟವಾಡಲು ಪ್ರತಿ ವಾರ ಧಾರವಾಡಕ್ಕೆ ಬಂದು ಹೋಗುತಿದ್ದ. ಈಗ ದೂರದ ಮಧ್ಯಪ್ರದೇಶದ ಭೂಪಾಲ್ ಬಳಿ ಅರಣ್ಯಾಧಿಕಾರಿಯಾಗಿ ತರಬೇತಿ ಪಡೆಯುತಿದ್ದಾನೆ. ಪ್ರತಿ ರಾತ್ರಿ 9-30 ಕ್ಕೆ ಪೋನ್ ಮಾಡುತ್ತಾನೆ. ಮೊಬೈಲ್ ನಲ್ಲಿ ಇದರ ಧ್ವನಿ ಕೇಳಿದರೆ, ಅವನಿಗೆ ಸಮಾಧಾನ. ಸಾಕು ಪ್ರಾಣಿಗಳನ್ನ ಸಾಕಿದವರಿಗೆ ನಿಮ್ಮ ಸಂಕಟ ಅರ್ಥವಾಗುತ್ತದೆ. ನಾನು ಬಾಡಿಗೆಗೆ ಇದ್ದ ಮನೆಯ ಯಜಮಾನ ಮಿಲಿಟರಿಯಲ್ಲಿ ಮೇಜರ್ ಆಗಿದ್ದವರು. ಈಗ ಅವರು ಲ್ಯಾಂಬ್ರಡ ತಳಿಯ ನಾಯಿಗಳನ್ನು ಸಾಕಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ನನಗೊಂದು ಮರಿಯನ್ನು ಉಡುಗರೆಯಾಗಿ ಕೊಡಲು ಮುಂದಾಗಿದ್ದರು. ನಾನು ಬೇಡವೆಂದು ನಿರಾಕರಿಸಿ ಬಿಟ್ಟೆ. ಇವುಗಳ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಅವಲೋಕಿಸಿದರೆ, ಮತ್ತೆಂದೂ ಸಾಕು ಪ್ರಾಣಿಗಳನ್ನು ಸಾಕಬಾರದು ಎನಿಸಿದೆ. ನಿಮಗೆ ನಿಮ್ಮ ವೈಟಿ ನೆನಪಾದರೆ, ದಯವಿಟ್ಟು ಈ ನಿಮ್ಮ ಅಣ್ಣನ ಮನೆಗೆ ಬನ್ನಿ. ಇಂತಿ ಪ್ರೀತಿಯಿಂದ ಡಾ. ಎನ್. ಜಗದೀಶ್ ಕೊಪ್ಪ  ]]>

‍ಲೇಖಕರು G

August 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

4 ಪ್ರತಿಕ್ರಿಯೆಗಳು

 1. D.RAVI VARMA

  ಸರ್,ನಮಸ್ಕಾರ. ನಿಮ್ಮ ಸಾಂತ್ವನದ ಸ್ಪಂದನ ನಿಜಕ್ಕೂ ಕುಶಿ ಕೊಡ್ತು ,ನನಗೆ ಈ ಸಂಭಂದಗಳ ಸೂಕ್ಷ್ಮತೆ ತುಂಬಾ ಘಾಡವಾಗಿ ಕಾಡುತ್ತಿದೆ,ಪಕ್ಕದ ಮನೆಯಲ್ಲಿ ಸಾವಾದಾಗ ತಿರುಗಿ ನೋಡದ ಜನ ಇಲ್ಲದಿರುವ , ಅಥವಾ ಅಸ್ಟೊಂದು ಸ್ವಾರ್ಥಿಗಳಿರುವ.
  ಇಲ್ಲಿ ,ದೂರದ ಚೆನ್ನೈನಲ್ಲಿ ತಮ್ಮ ಮಗನನ್ತಿದ್ದ ಬೆಕ್ಕನ್ನು ಕಳೆದುಕೊಂಡು ದುಕ್ಕಿಸುವ ಶಾಂತಿ ಬಾಲಚಂದ್ರ ಅವರ ನೋವಿಗೆ ಹುಬ್ಬಳ್ಳಿಯ ನೀವು, ನಿಮ್ಮಂಥವರು ಅವರ ನೋವಿಗೆ ಸ್ಪಂದಿಸುವುದು, ನೋಡಿದಾಗ ನಿಜಕ್ಕೂ ಇನ್ನು ಇಲ್ಲಿ ಈ ನೆಲದಲ್ಲಿ ಮಾನವೀಯ
  ಸಂಭಂದಗಳು ಸಂಪೂರ್ಣ ನಾಶವಾಗಿಲ್ಲ, ಇನ್ನು ಜೀವಂತವಾಗಿವೆ ಎಂದು ಸಮಾಧಾನ ಮತ್ತು ಕುಶಿಯಾಗುತ್ತಿದೆ.. ಈ ಸಾಂತ್ವನದ ಕೊಂಡಿಯಾದ ಅವಧಿಗೊಂದು hats off ಹೇಳಬೇಕೆನಿಸುತ್ತೆ . long live human relations ……
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. D.RAVI VARMA

  ಒಮ್ಮೊಮ್ಮೆ ಇಲ್ಲಿ, ಈ ನಾಡಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಅವಗಡಗಳು ಹಿಂಸೆ, ಅನ್ಯಾಯ ಎಲ್ಲವನ್ನು ನೋಡಿ ಏನು ಮಾಡಲಾಗದೆ ಕೈ ಕಟ್ಟಿ ಕೂತು ವಿಚಲಿತನಾಗಿಬಿಡುತ್ತೇನೆ ‘ಹಿಂದೊಮ್ಮೆ ಕನ್ನಡ ವಿಶ್ವವಿದ್ಯಾಲಯ ಕ್ಕೆ ಉಪನ್ಯಾಸ ನೀಡಲು ಬಂದಿದ್ದ
  ಡಿ.ಆರ್ ,ನಾಗರಾಜ್ ಸಂಜೆ ನಡೆದ ಕಾಸಗಿ ಪಾರ್ಟಿಯಲ್ಲಿ ತುಂಬಾ ಘಮ್ಬೀರವಾಗಿ ಮಾತನಾಡುತ್ತ “ಯಾವ ನಾಡಲ್ಲಿ ರಾಜಕೀಯ ಸಂಸ್ಕೃತಿ, ಶಿಕ್ಷಣ ,ಧರ್ಮ brastagolluttadeyo ಆ ನಾಡಿಗೆ ಉತ್ತಮ ಭವಿಸ್ಯ ಕಷ್ಟ ಸಾದ್ಯ ‘ ಎಂದು ಮಾರ್ಮಿಕವಾಗಿ ಮಾತನಾಡುತ್ತ ದುರಂತವೆಂದರೆ ಬರೀ ರಾಜಕೀಯ brastagondare ಅದನ್ನು ಸರಿಪಡಿಸಬಹುದು, ಆದರೆ ಶಿಕ್ಷಣ, ಧರ್ಮ, ಸಂಸ್ಕೃತಿ brastagondaaga ಅದನ್ನು ಸರಿಪಡಿಸೋದು ಕಷ್ಟ ಸಾದ್ಯ ಎಂದು ಹಲುಬಿದ ಮಾತುಗಳು ನನಗಿನ್ನೂ ನೆನಪಿವೆ,
  ಆದರೆ ಇಲ್ಲಿಯ ದಿನನಿತ್ಯದ ಬದುಕು ನೋಡಿ ..ಒಮ್ಮೊಮ್ಮೆ ಈ ನಾಡಿನ ಬದುಕು ಸಹನೀಯವಾಗಲು ಸಾದ್ಯವೇ ಇಲ್ಲವೇ ಎಂದು ಕಾಡುತ್ತಿರುವಾಗ , ತೀರ ಇತ್ತೀಚಿಗೆ ಮಂಗಳೂರಿನ ಮಹಿಳೆಯರ ಮೇಲಾದ ಧಾರ್ಮಿಕ ಗುಂಪಿನ ಗುಂಡಾಗಿರಿ, ಅಮಾನವೀಯ ವರ್ತನೆ, ಅದನ್ನುಖಂಡಿಸಿದ ,ಅದರ ವಿರುಧ್ಹ ಪ್ರತಿಭಟಿಸಿದ ಜನರ ಕೂಗು ಪ್ರತಿಭಟನೆಯ ಸೊಲ್ಲೆತ್ತಿದ ಹಲವು ಸಂಘಟನೆಗಳು ಮಾದ್ಯಮಗಳು ,ಬಂದ ಲೇಖನಗಳು ನೋಡಿದಾಗ, ಬರದ ಬಿಸಿಲಿಗೆ, ಹಸಿವಿನಿದ ಬೆಂದು ಹೋದ ನಾಡಿಗೆ ಹೋಗಿ ,ಅವೊರೊಳಗೊಂದಾಗಿ, ಉಸಿರಿಗೆ ಉಸಿರಾಗಿ ಅವರ ಬದುಕನ್ನು ಅರ್ಥಿಸಿಕೊಂಡು
  ಅದಕ್ಕೊಂದು ಜೀವಂತಿಕೆ ಕೊಟ್ಟು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ಶ್ರೀ ಪಿ ಸಾಯಿನಾಥ್ ಅದನ್ನು ಬರಿ ಒಂದು ಪುಸ್ತಿಕೆಯಾಗಿಸದೆ ಅದೊಂದು ಜೀವ ಕಾವ್ಯ ವನ್ನಾಗಿ ಬರೆದ ಅವರ ಪುಸ್ತಿಕೆ ‘everybody loves ಅ good drought ‘ ಅದನ್ನು ಅಸ್ತೆ
  ಜವಾಬ್ದಾರಿಯಿಂದ, ಕಳಕಳಿಯಿಂದ ಅದನ್ನು ಬರಿ ಅನುವಾದವಾಗಿಸದೆ, ಅದಕ್ಕೊಂದು ಕನ್ನಡದ ಜೀವಂತಿಕೆ ಕೊಟ್ಟು ಅನುವಾದಿಸಿದ ಸರ್ ಜಿ , ಏನ್ ಮೋಹನ್ …. ಹೀಗೆ ಹೀಗೆ ನಾಡಿನ ಯಾವುದೋ ಮೂಲೆ ಯಿಂದ ಪ್ರತಿಭಟನೆಯ ಕೂಗು, ಸ್ಪಂದನ, ಸಾಂತ್ವನ . ನೋಡಿದಾಗ ಇನ್ನ್ನು ಸುಂದರ ನಾಡಿನ ಕನಸು ಸಾಧ್ಯವೇನೋ ಎನ್ನುವ ಆಶಾಕಿರಣ ಮೂಡುತ್ತದೆ…. ಈ ನಿಟ್ಟಿನಲ್ಲಿ ಈ ದ್ವನಿಗಳೆಲ್ಲ ಒಟ್ಟಾಗಿ ಸೇರುವ ಅಗತ್ಯತೆ, ಅನಿವಾರ್ಯತೆ ಕೂಡ ಇದೆಯೇನೂ ……
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 3. rekha

  ನಮ್ಮ ಮನೆಯಲ್ಲೂ ಒಂದು ವೈಟಿ ಇದೆ. ಅದರ ಪ್ರೀತಿ ಎಷ್ಟೆಂದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ನಾವು ಮನೆಗೆ ಬಂದ ತಕ್ಷಣ ಯಾವ ಮೂಲೆಯಲ್ಲಿದ್ದರೂ ಓಡಿಬಂದ್ದು ಯಾವಾಗ ಇವರು ಕುಳಿತು ಕೊಳುತ್ತಾರೆ. ನಾನು ಯಾವಾಗ ಅವರ ತೊಡೆ ಮೇಲೆ ಕುಳಿತು ಕೊಳ್ಳಲ್ಲಿ ಎಂದು ಹಂಬಲಿಸುತದೆ. ಆದರೆ ಇವತ್ತು ಬೆಳಿಗ್ಗೆ ಬಂದ ನಮ್ಮ ಮನೆಯ ಓನರ್ ಅಲ್ಲಲ್ಲ ವಾನರ್ ಮನೆಯಲ್ಲಿ ಬೆಕ್ಕು ಇರಬಾರದು ಹಾಗೆ ಹೀಗೆ ಅಂದ್ರು ಕೆಟ್ಟ ಕೊಪಬಂತ್ತು. ನಮ್ಮ ವೈಟಿ ಬೇರೆ ಬೆಕ್ಕು ತರಹ ಅಲ್ಲ ಅಂತ ನಾನು ರೇಗಾಡಿದೆ. ಆದರು ಆ ಮನುಷ್ಯ ಕೇಳಲಿಲ್ಲ. ನಾವು ನಮ್ಮ ವೈಟಿಯನ್ನ ಎಲ್ಲೂ ಬಿಡಲ್ಲ ಅಂತ ಸ್ಟ್ರೈಕ್ ಮಾಡತ್ತೀವಿ.

  ಪ್ರತಿಕ್ರಿಯೆ
 4. shanthi k.a.

  ನಮಸ್ತೆ ಸರ್,
  ನಿಮ್ಮ ಸಾಂತ್ವನದ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುತ್ತಿಲ್ಲ.ನೀವು ಹೇಳಿದ್ದು ನಿಜ .ಪ್ರಾಣಿ ಸಾಕುವವರಿಗೆ,ಸಹೃದಯರಿಗೆ ಮಾತ್ರ ಅವುಗಳ ಅಗಲಿಕೆ ನೋವು ತಾಕಲು ಸಾಧ್ಯ.ತೀರ ಎರಡು ದಿನದ ಮರಿಯನ್ನು ಸಾಕಲು ನೀವೆಷ್ಟು ಮುತುವರ್ಜಿ ವಹಿಸಿರಬಹುದೆಂದು ನನಗೆ ತಿಳಿಯುತ್ತದೆ. ಹಾಗೆ ಸಾಕುವುದರಿಂದಲೋ ಏನೋ ಅವು ನಮಗೆ ಥೇಟ್ ಮಕ್ಕಳೇ ಅನಿಸಿಬಿಡುತ್ತವೆ.ಅವಕ್ಕೂ ನಮ್ಮ ಮೇಲೊಂದು ಆತ್ಮೀಯ ನಂಬಿಕೆ ,ಬೆಳೆದು ಬಿಡುತ್ತದೆ.ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದುಕೊಳ್ಳಲು ಸಾಧ್ಯ. ಲ್ಯಾಬ್ರಡಾರ್ ತಳಿಯ ನಾಯಿಗಳು ಅತ್ಯಂತ ಸ್ನೇಹಮಯಿ ಮತ್ತು ಬುದ್ದಿಶಾಲಿಯಾಗಿರುತ್ತವೆ.ನಿಮ್ಮ ಪೂಸಿಯೊಂದಿಗೆ ಬಲುಬೇಗ ಗೆಳೆತನ ಮಾಡಿಕೊಂಡು ಬಿಡುತ್ತೆ..ನೋಡಿ.
  ನಿಮ್ಮ ಪೂಸಿಯ ಮೇಲೆ ನೀವಿಟ್ಟಿರುವ ಪ್ರೀತಿಗೆ ನನ್ನ ಮನಸು ತುಂಬಿ ಬಂತು.ಒಂದು ಆರೋಗ್ಯಕರ ಬೆಕ್ಕು ಸರಾಸರಿ ಹನ್ನೆರಡರಿಂದ ಹದಿನೈದು ವರುಷ ಬದುಕುತ್ತದೆ. ಆದರೆ ನಮ್ಮ ವೈಟಿ ಯನ್ನು ಕಣ್ಣಿನ ಗೊಂಬೆಯಂತೆ ನೋಡಿಕೊಂಡರೂ ಕೆಟ್ಟ ಕಾಯಿಲೆ ಅವನನ್ನು ಕಸಿದುಕೊಂಡು ಬಿಟ್ಟಿತು.
  ಅದ್ದರಿಂದ ನಮ್ಮ ಪೂಸಿಯನ್ನು ದೇವರು ಆರೋಗ್ಯ ,ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ.ನಿಮ್ಮ ಅಕ್ಕರೆಯ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು .ವೈನಿಗೆ ,ಅನನ್ಯನಿಗೆ ವಂದನೆಗಳು.ಪೂಸಿಗೊಂದು ಅಕ್ಕರೆಯ ಸವಿ ಮುತ್ತು.
  ಹುಬ್ಬಳ್ಳಿಗೆ ಬಂದಾಗ ಖಂಡಿತ ನಿಮ್ಮಲ್ಲಿಗೆ ಬರುವೆ.ನಿಮ್ಮ ಸಹೃದಯ ಸ್ಪಂದನಕ್ಕೆ ….ಮನಸು ಮೂಕ.
  ಅಂದ ಹಾಗೆ ರವಿ ಸರ್,ನಿಮ್ಮ ಮಾತು ನಿಜ ..ಮಾನವೀಯ ಸಂಭಂದಗಳಿನ್ನೂ..ದೇಶ ,ಕಾಲದೆಲ್ಲೆಯನ್ನೂ ಮೀರಿ ಜೀವಂತವಾಗಿವೆ.
  ಧನ್ಯವಾದಗಳು.
  shantibaalachandra.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: