ಕರ್ನಾಟಕಕ್ಕೊಂದು ಜ್ಞಾನಪೀಠ


ಭಾರತದ ಮಟ್ಟದಲ್ಲಿ ಜ್ಞಾನಪೀಠ, ಕರ್ನಾಟಕದ ಮಟ್ಟದಲ್ಲಿ …..?
ಈ ಕೊರತೆಯನ್ನು ಗೀತಾ ನಾಗಭೂಷಣರವರು ಗುರುತಿಸಿದ್ದಾರೆ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ನಡುವೆ ಕರ್ನಾಟಕದ ಮಟ್ಟದಲ್ಲಿ ಸಾಹಿತ್ಯಕ್ಕೆಂದು ಜ್ನಾನಪೀಥದಂತಹ ಅತ್ಯುನ್ನತ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕಿರುವುದು ತುರ್ತಿನ ಅಗತ್ಯವೆಂದರಲ್ಲದೆ, ಈ ವಿಷಯವಾಗಿ ವೇದಿಕೆಯ ಮೇಲಿದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ತಮ್ಮನೆಂದು ಕರೆದು, ಈ ವಿಚಾರವಾಗಿ ಅವರು ಈ ಕೂಡಲೇ ಗಮನ ಹರಿಸಬೇಕೆಂದು, ಅದಕ್ಕೆ ಅವರ ಒಂದು ದಿನದ ಸಂಪಾದನೆಯೇ ಭರ್ಜರಿ ಮೊತ್ತವಾದೀತು, ಎಂದು ಹೇಳಿ ಅಚ್ಚರಿಪದಿಸಿದರು

ಇದು ಒಂದು ಉತ್ತಮ ಒಳ್ಳೆಯ ಭಾಷಣ, ಮಾಮೂಲಿ ಚರ್ವಿತ ಚರ್ವಣ ಇಲ್ಲ. ಸಮಕಾಲೀನ ದುರಂತಗಳ ಕಡೆ ಲಕ್ಷ್ಯ ಕೊಟ್ಟಿದ್ದು ಹಿಡಿಸಿತು. ಇದ್ದೀಯ ಭಾಷಣ ಅವರು ಬೆಳೆದು ಬಂದ ದಲಿತ ಬಂಡಾಯದ ಹಿನ್ನಲೆಯಲ್ಲಿ ಮೂಡಿ ಬಂದಿದ್ದು ಒಟ್ಟಾರೆಯಾಗಿ ಸಮಾಜಮುಖಿ ಚಿಂತನೆಯ ಮೈಗೂಡಿಸಿಕೊಂಡ ಪ್ರಗತಿಪರ ನಿಲುವು ತಾಳಿರುವ ಭಾಷಣ.
– ಚಂಪಾ
ಗೀತಾನಾಗಭೂಷಣರವರು ತಮ್ಮ ಭಾಷಣದಲ್ಲಿ ಕರ್ನಾಟಕದ ಮಟ್ಟಿಗೆ ಜ್ಞಾನಪೀಠ ಪ್ರಶಸ್ತಿಯ ಸರಿಸಮನಾದಂತಹ ಮತ್ತೊಂದು ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಕೋರುವುದು ಹೊಸ ಪ್ರವೃತ್ತಿಯಾಗಿದೆ. ಮೊದಲಿಗೆ ಇದ್ದ ಪ್ರಶಸ್ತಿಗಳನ್ನು ಪಡೆಯಲು ಲಾಬಿ ನಡೆಯುತ್ತಿತ್ತು. ಈಗಿನ ಹೊಸ ಟ್ರೆಂಡ್, ಇದು. ಪ್ರಶಸ್ತಿಗಳನ್ನು ಸ್ಥಾಪಿಸಲು ಲಾಬಿ ಶುರುವಾಗಿದೆ. ಈಗ ಕೊಡಮಾಡುತ್ತಿರುವ ಅನೇಕ ಪ್ರಶಸ್ತಿಗಳೇ ಸಾಂಸ್ಕೃತಿಕ ಮೌಲ್ಯವಿಲ್ಲದಿರುವಾಗ ಹೊಸ ಪ್ರಶಸ್ತಿಗಳ ಸ್ಥಾಪನೆ ಅರ್ಥವಿಲ್ಲದ ತೋರಿಕೆಯಾದಿತು. ಗೀತಾ ನಾಗಭೂಷಣರವರು ವೇದಿಕೆಯ ಮೇಲೆ ಇದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ಓಲೈಸುತ್ತಿದ್ದ ರೀತಿ ಹಿನ್ನೆಲೆಗು ವಯಸ್ಸಗಿದೆಯೆಂದು ನನ್ನ ನಂಬಿಕೆ.
– ರವೀಂದ್ರ ರೇಷ್ಮೆ
ಹಿಂದೆ- ನುಡಿದರೆ ಮುತ್ತಿನ ಹಾರದಂತಿರಬೇಕು, ಆದರೆ ಈಗ- ನುಡಿದರೆ ವಿಧಾನಸೌಧ ಗದಗದ ನಡಗು ವಂತಿರಬೇಕು.ಸರ್ವಾಧ್ಯಕ್ಷರ ಪ್ರಶಸ್ತಿಯ ಆಶಯವೇನೋ ಸರಿಯಿರಬಹುದು. ಆದರೆ, ಒಂದನ್ನು ಯೋಚನೆ ಮಾಡಬೇಕು. ನಡ ನೂರೆಂಟು ವನ್ತಿರಬೇಕು ಸರಮಾಲೆಯೇ ಇನ್ನು ಪ್ರಶಸ್ತಿಯ ವಿಷಯ ಅರ್ಹತೆಯನ್ನು, ಇನ್ನು ಪ್ರಶಸ್ತಿಯ ವಿಚಾರ. ಸಂಪಾದಿಸಿಕೊಳ್ಳೊ ನಿಟ್ಟಿನಲ್ಲಿ ದುಡಿಯೋದು ಮುಖ್ಯ. ಪ್ರಶಸ್ತಿಯ ಸೃಷ್ಟಿಯಲ್ಲ.
– ಹಂಪಾ ನಾಗರಾಜಯ್ಯ
ಇದು (ಗೀತಾ ನಾಗಭೂಷಣ ಅವರ ಅಧ್ಯಕ್ಷ ಭಾಷಣ) ಈ ವರೆಗೆ ನಾನು ಓದಿದ, ನಾನು ಕೇಳಿದ ಅಧ್ಯಕ್ಷ ಭಾಷಣಗಳ್ಲಿ ಉತ್ತಮವಾದದ್ದು. ಈ ಹಿಂದೆ ಬಸವರಾಜು ಅವರ ಭಾಷಣದಲ್ಲಿ ಸಿಟ್ಟು ಮಾತ್ರ ಇತ್ತು. ಇಲ್ಲಿ ಸಂಯಮವೂ ಇದೆ, ತಪ್ಪುಗಳನ್ನು ಗುರುತಿಸಿ ಹೇಳುವ ತಾಳ್ಮೆಯೂ ಇದೆ. ಇದು ತಾಯೊಯೊಬ್ಬಳಿಂದ ಮಾತ್ರ ಆಗಬಹುದಾದ ಕೆಲಸ. ಪ್ರಶಸ್ತಿಯ ಸ್ಥಾಪನೆಯಿಂದ ಕನ್ನಡ ಉದ್ಧಾರ ಆಗೋದಿಲ್ಲ.
-ಬಿ. ಸುರೇಶ
ಪ್ರಶಸ್ತಿಗಳ ಸ್ಥಾಪನೆಯಿಂದ ಕನ್ನಡ ಖಂಡಿತಾ ಬೆಳೆಯೋಲ್ಲ. ಅದು ಮೂರರಲ್ಲಿ ಮತ್ತೊಂದು ಆಗುತ್ತದೆ ಅಷ್ಟೇ. ಮೊದಲು ಆಗಬೇಕಿರುವ ಕೆಲಸ ಕನ್ನಡ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳುವಂತೆ ಮಾಡುವುದು.
-ಈಶ್ವರ್ ದೈತೋಟ

‍ಲೇಖಕರು avadhi

February 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

2 ಪ್ರತಿಕ್ರಿಯೆಗಳು

  1. test

    ಹೊಸ ಪ್ರಶಸ್ತಿ ಸ್ಥಾಪಿಸಿ, ಅದನ್ನು ಮತ್ತೆ ಅದೇ ದೇಜಗೌ‌ಗೆ ಕೊಡೋ ಬದ್ಲು ಸುಮ್ನೆ ಇರೋದು ವಾಸಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: