`ವಿಕ್ರಾಂತ ಕರ್ನಾಟಕ’ ವಾರಪತ್ರಿಕೆಯ ಸಂಸ್ಥಾಪಕ ರವಿ ಕೃಷ್ಣಾ ರೆಡ್ಡಿ ನಡೆಸಿದ ಗಾಂಧಿಜಯಂತಿ ಕಥಾ ಸ್ಪರ್ಧೆ ಫಲಿತಾಂಶ ಇಲ್ಲಿದೆ.
ಗಾಂಧೀಜಿಯ ಮೌಲ್ಯವನ್ನಾಧರಿಸಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ, ಅದೇ ಸಮಯದಲ್ಲಿ ಕಲಾತ್ಮಕವಾಗಿರುವ, ಸಮಕಾಲೀನ ವ್ಯವಸ್ಥೆಯನ್ನು ಭವಿಷ್ಯಕ್ಕೂ ಕಟ್ಟಿಕೊಡುವ ಕತೆಗಳಿಗೆ ಬಂದ ಸ್ಪಂದನ ಇದು.
ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್ ತೀರ್ಪುಗಾರರಾಗಿದ್ದರು.
ಬಹುಮಾನ ವಿಜೇತರು:
ಮೊದಲ ಬಹುಮಾನ ರೂ. 6000, ಬಹುಮಾನಿತ ಕತೆ- ಗಾಂಧಿಕಟ್ಟೆ- ಕತೆಗಾರರು- ಕಲಿಗಣನಾಥ ಗುಡದೂರು
ಎರಡನೆಯ ಬಹುಮಾನ ರೂ. 4000, ಬಹುಮಾನಿತ ಕತೆ- ವಂದೇಮಾತರಂ- ಕತೆಗಾರರು- ಭಾಗೀರಥಿ ಹೆಗಡೆ
ಮೂರನೆಯ ಬಹುಮಾನ ರೂ. 3000, ಬಹುಮಾನಿತ ಕತೆ- ಗಾಂಧಿ ವೇಷ- ಕತೆಗಾರರು- ವಿಶ್ವನಾಥ ಪಾಟೀಲ ಗೋನಾಳ
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೊ. ಕಿ.ರಂ. ನಾಗರಾಜ ಅವರು ಬಹುಮಾನ ವಿತರಣೆ ಮಾಡಿದರು. ವಿಕ್ರಾಂತ ಕರ್ನಾಟಕ ಪತ್ರಿಕೆಯ ರವೀಂದ್ರ ರೇಷ್ಮೆ, ಬಸವರಾಜು ಹಾಗೂ ಬಹುಮಾನವನ್ನು ಪ್ರಾಯೋಜಿಸಿದ ರವಿ ಕೃಷ್ಣಾ ರೆಡ್ಡಿಯವರು ಉಪಸ್ಥಿತರಿದ್ದರು
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ತಮ್ಮ ವಿಶಿಷ್ಠ ಕಥಾ ವಸ್ತುವಿನ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಯುವ ಕಥೆಗಾರ ಕಲಿಗಣನಾಥ ಗುಡದೂರು ಅವರಿಗೆ ವಿಕ್ರಾಂತ ಕನರ್ಾಟಕದ ಕಥಾ ಪ್ರಶಸ್ತಿ ಎರಡನೇ ಬಾರಿಗೆ ಬಂದಿರುವುದು ಸಂತಸದ ವಿಷಯ.
-ಬಸವರಾಜ ಹಳ್ಳಿ, ಹಸಮಕಲ್
Congrat’s Kaligananathare!
ಎಲ್ಲಾ ಬಹುಮಾನಿತರಿಗೂ ಅಭಿನಂದನೆಗಳು.
ವಸುಧೇಂದ್ರ