ಕಳ್ಳರಂಗಡಿಯ ಬಾಗಿಲು ತೆರೆದಿದೆ…

ಬ್ಲಾಗ್ ಲೋಕದ ಸ್ವಯಂಘೋಷಿತ ಕಳ್ಳರು ಮತ್ತೆ ಬಾಗಿಲು ತೆರೆದಿದ್ದಾರೆ.
ನಿಮ್ಮ ನಿಮ್ಮ ತನುವ ರಕ್ಷಿಸಿಕೊಳ್ಳಿ.
ಭೇಟಿ ನೀಡಿ..ಕಳ್ಳ ಕುಳ್ಳ

ವೈದೇಹಿ ಅವರ ಕ್ರೌಂಚ ಪಕ್ಷಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ಸುದ್ದಿ. ಅವರ ಕತೆಗಳ ರುಚಿ ಹತ್ತಿದವರಿಗೆ ವೈದೇಹಿ ಅವರಿಗೆ ಸಂದ ಈ ಪ್ರಶಸ್ತಿ ದೊಡ್ಡ ಸಂತೋಷ ಕೊಡುವ ವಿಷಯ. ಎಲ್ಲಾ ಪಂಜರದ ಗಿಣಿಗಳಿಗೆ, ಹೊಸ ಕಾಲದ ಹಳೆ ಹಿಂಸೆಗಳಿಗೆ ಮೈ ಒಡ್ಡಿದ ಸ್ತ್ರೀ ಜಗತ್ತಿಗೆ ಇದರಿಂದ ಸಮಾಧಾನವಾದರೂ ಆದೀತೇನೋ?
ಸುಮಾರು ಹದಿಮೂರು ವರ್ಷಗಳ ಹಿಂದೆ ತಮ್ಮ ಕಥಾ ಸಂಕಲನವೊಂದರಿಂದ ಪರಿಚಿತರಾದಾಗ, ಎಲ್ಲೋ ಯಾವ ಊರಲ್ಲೋ, ಯಾವ ಪುಸ್ತಕದ, ಯಾವ ಪುಟಗಳಲ್ಲೋ ಕತೆಗಳನ್ನು ತಮ್ಮ ಪಾಡಿಗೆ ಕಟ್ಟುತ್ತಿದ್ದ ವೈದೇಹಿ ಹೀಗೊಬ್ಬ ಅಜ್ಞಾತ ಅಭಿಮಾನಿಯ ಉತ್ಕಟ ಓದನ್ನು ಕಲ್ಪಿಸಿಯೂ ಇರಲಾರರಾಗಿದ್ದರೇನೋ? ಆದರೆ ಅಂಥ ಅಸಂಖ್ಯ ಓದುಗರನ್ನು ತಮ್ಮ ಸಂವೇದನೆಯಿಂದ ಮುಟ್ಟಿದರು. ಅವರ ಕತೆಗಳ ಪ್ರಪಂಚ ಹೆಣ್ಮಕ್ಕಳ ಸುತ್ತಲೇ ಸುತ್ತುತ್ತಿತ್ತಾದ್ದರೂ ಆ ಜಗತ್ತಿನಲ್ಲಿ ಏನಿತ್ತು, ಏನಿರಲಿಲ್ಲ? ಕ್ರೌರ್ಯ ತಣ್ಣಗೆ ಕೂತಿರುತ್ತಿತ್ತು, ನಗು ಗೊಳ್ಳನೆ ತಂಗಿರುತ್ತಿತ್ತು, ಜೀವನ ಪ್ರೀತಿ ತೋಳ್ತೆರೆದು ಕರೆಯುತ್ತಿತ್ತು, ಕಣ್ಣೀರು ಕಣ್ಣ ರೆಪ್ಪೆಯಲ್ಲಿ ಮೂಡಿದಾಗಲೇ ಅವರು ತಮ್ಮ ಕುಂದಾಪ್ರ ಕನ್ನಡದಿಂದ ಮತ್ತೆ ನಗುವಿನ ಬತ್ತಿಯನ್ನು ನಮ್ಮೆಲ್ಲರ ಗುಳಿಕೆನ್ನೆಯಲ್ಲಿಟ್ಟು ಹಚ್ಚುತ್ತಿದ್ದರು.
ನಮ್ಮ ನಿಮ್ಮ ಮನಸ್ಸಲ್ಲಿ ಕಟ್ಟಳೆಗಳ ಸರಳುಗಳ ಮಧ್ಯೆ ಒಂದು ವಾಂಛೆ, ಕಾಮನೆ ಕಳ್ಳನಂತೆ ಕೂತಿದ್ದಾಗ, ಹೊರಬರಲು ಕಾದಿದ್ದಾಗ ಅವರು ತಮ್ಮ ಕತೆಗಳ ಪಾತ್ರಗಳಲ್ಲಿ ಅದನ್ನೆಲ್ಲಾ ದಿಕ್ಕರಿಸಿ ತೋರಿಸಿದರು (ಸೌಗಂಧಿಯ ಸ್ವಗತಗಳು). ಅವರ ಅಕ್ಕುವಿನ ಟುವಾಲು, ಪುಟ್ಟಮ್ಮತ್ತೆಯ ಕೈರುಚಿ, ಶಾಕುಂತಲೆಯ ಬಿಗಿದ ಎದೆ ವಸ್ತ್ರ, ಆಭಾಳ ಮೇಕಪ್ ಕಿಟ್, ಹೆಣ್ಮಕ್ಕಳ ಸಂದಣಿಯ ಗುಟ್ಟು ಹಡೆ ಮಾತು…ವೈದೇಹಿ ಅವರ ಈ ಪ್ರಶಸ್ತಿ ಸಂದರ್ಭದಲ್ಲಿ ಸುಮ್ಮನೆ ನೆನಪಾಗುತ್ತಿದೆ.
‘ಕಳ್ಳ ಕುಳ್ಳ’ರ ಬ್ಲಾಗಂಗಡಿ ಮುಚ್ಚಿತ್ತು. ಒಂದು ಸುಂದರ ಸಂದರ್ಭದಲ್ಲಿ ಮತ್ತೆ ತೆರೆದುಕೊಳ್ಳಲು ಕಾಯುತ್ತಿತ್ತು. ಆದರೀಗ ನಮ್ಮ ವಸಂತಕ್ಕನ ಪ್ರಶಸ್ತಿ ಸಂಭ್ರಮದಿಂದಾಗಿ ಮತ್ತೆ ಈ ಬ್ಲಾಗ್ ಗೆ ಖುಷಿ ಮರಳಿದೆ. ಇಲ್ಲಸಲ್ಲದ ಮಾತುಗಳ, ಸಂದರ್ಭಕ್ಕೊದಗದ ಮೌನದ, ಬರಬಾರದ ಜಾಣ ಕಿವುಡಿರುವ ಈ ಕಾಲದಲ್ಲಿ ಮತ್ತೆ ಏನಾದರೂ ಮಾತಾಡುವ ತವಕ. ವೈದೇಹಿ ಅವರ ಅಕ್ಷರ ಹೊಲದಲ್ಲಿ ಪ್ರಶಸ್ತಿಯ ಪೈರು ಮೂಡಿದೆ. ಆ ಪೈರಿನ ಸುಗ್ಗಿಯನ್ನು ಸಂಭ್ರಮಿಸಲು ಮತ್ತಷ್ಟು ಅಕ್ಷರಗಳೇ ಮೊಳಕೆಯೊಡೆಯಬೇಕು. ಹಾಗಾದರೆ ಅದೇ ಅವರಿಗೆ ನಾವೆಲ್ಲಾ ಸಲ್ಲಿಸಬಹುದಾದ ಗೌರವ.
ಜೋಗಿ ಪುಸ್ತಕ ಬಿಡುಗಡೆ(ಬೆಳಿಗ್ಗೆ ಹತ್ತಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್), ಜಿಎಸ್ಎಸ್ ಅವರ ಕಾವ್ಯ ‘ಚೈತ್ರೋದಯ’(ಬೆಳಿಗ್ಗೆ ಹತ್ತೂವರೆಗೆ, ರವೀಂದ್ರ ಕಲಾಕ್ಷೇತ್ರ)ಗಳ ಜೊತೆ ಈ ಭಾನುವಾರ (27, ಡಿಸೆಂಬರ್, 2009) ಸಾಹಿತ್ಯ ಲೋಕದಲ್ಲಿ ಹಬ್ಬ. ವೈದೇಹಿ ಅವರ ಪ್ರಶಸ್ತಿಯನ್ನು ಅಲ್ಲೇ ನಾವೆಲ್ಲಾ ಸಂಭ್ರಮಿಸೋಣ, ಆಚರಿಸೋಣ.

‍ಲೇಖಕರು avadhi

December 26, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This