ಕಳ್ಳ ಸಾಗಣೆದಾರನ ಬಳಿ ನನ್ನ ದೂರು ಪತ್ರದ ನಕಲುಗಳಿತ್ತು – ಅಶೋಕ ವರ್ಧನ

ನಿನ್ನೆ ನವೀನ್ ಸೂರಂಜೆಯವರು ಮಂಗಳೂರಿನ ಸ್ಟೇ ಹೋಮ್ ಹಲ್ಲೆಯ ಬಗ್ಗೆ ಸತ್ಯ ಶೋಧನಾ ಸಮಿತಿಯ ಮುಂದೆ ನೀಡಿದ ಹೇಳಿಕೆಯನ್ನು ಪ್ರಕಟಿಸಿದ್ದೆವು.

ಅದಕ್ಕೆ ಅಶೋಕವರ್ಧನರು ನೀಡಿದ ಪ್ರತಿಕ್ರಿಯೆ ಇಲ್ಲಿದೆ :

ಅಶೋಕವರ್ಧನ ಜಿ.ಎನ್

ಸರಕಾರೀ ಇಲಾಖೆಗಳ ಕಾರ್ಯ ವೈಖರಿ ಗೊತ್ತಿದ್ದವರಿಗೆ ನವೀನ್ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆಂದು ಕಾಣುತ್ತದೆ. ಚುಟುಕದಲ್ಲಿ ನನ್ನೆರಡು ಉದಾಹರಣೆಗಳು: ೧. ಸುಮಾರು ಆರು ವರ್ಷದ ಹಿಂದೆ, ಕಾಯ್ದಿಟ್ಟ ಅರಣ್ಯದಿಂದ ಅದೂ ಸುಮಾರು ಮೂರು ಎಕ್ರೆ ವ್ಯಾಪ್ತಿಯಲ್ಲಿ ಮರಕಡಿಯುತ್ತಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ, ಅರಣ್ಯ ಅಧಿಕಾರಿ ಮತ್ತು ತನಿಖಾದಳಕ್ಕೆ ನಾನು ನಕ್ಷೆ ಸಹಿತ, ಲಿಖಿತ ದೂರನ್ನು ಸ್ಪೀಡ್ ಅಂಚೆಯಲ್ಲಿ ಕಳಿಸಿಕೊಟ್ಟೆ. ನನಗೆ ಇಂದಿನವರೆಗೆ ಒಂದು ಗೆರೆ ಉತ್ತರ ಬರಲಿಲ್ಲ. ಕೆಲವು ವಾರಗಳ ವಿರಾಮದಲ್ಲಿ ಕಡಿತ, ಸಾಗಣೆ ಮುಗಿದ ಹಂತದಲ್ಲಿ ಸಿಕ್ಕ ಮುಖ್ಯ `ಕಳ್ಳ ಸಾಗಣೆದಾರ’ನ ಬಳಿ ನನ್ನ ದೂರು ಪತ್ರದ ನಕಲುಗಳಿತ್ತು. ೨. ಮಂಗಳೂರಿನಲ್ಲೇ ಸಪುರ ಓಣಿಯೊಂದರ ಚರಂಡಿ ಮುಚ್ಚಲು ಎರಕ ಹೊಯ್ದ ಕಾಂಕ್ರೀಟ್ ಹಲಗೆಗಳನ್ನು ನಮ್ಮೆಲ್ಲ ಪ್ರಯತ್ನಗಳ ಮೇಲೂ ತೆಗೆದು ದಾರಿ ತೆರವು ಮಾಡುವವರಿಲ್ಲದ್ದು ಕಂಡು ನಾನು ಪೂರ್ವ ಪರಿಚಯದ ವಿಶ್ವಾಸದಲ್ಲಿ ಕಮೀಶನರಿಗೆ ದೂರವಾಣಿಸಿದೆ. ಆತ “ಅಯ್ಯೋ ಜೂನಿಯರ್ ಇಂಜಿನಿಯರೊಬ್ಬನಿಗೆ ಹೇಳಬೇಕಾದ್ದನ್ನು ನನ್ನಲ್ಲಿ ಹೇಳ್ತೀರಲ್ಲಾ” ಎಂದು ರಿಸೀವರ್ ಕುಕ್ಕಿದರು.  ]]>

‍ಲೇಖಕರು G

September 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

೧ ಪ್ರತಿಕ್ರಿಯೆ

  1. prasad raxidi

    ಇಂಥ ನೂರಾರು ಉದಾಹರಣೆಗಳನ್ನು ಕೊಡಬಹುದು, ಕೆಲವು ತಿಂಗಳಹಿಂದೆ ನಮ್ಮೂರಿನ ಎತ್ತಿನ ಹಳ್ಳದ ಪಕ್ಕದಲ್ಲಿ ಕೆಲವರು ಶಿಕಾರಿ ಮಾಡುತ್ತಿದ್ದರು ಅವರಲ್ಲಿ ಒಂದೆರಡು ಜನ ಪ್ಲಾಂಟರುಗಳು, ಹಾಗೇ ಒಂದಿಬ್ಬರು ಪತ್ರಕರ್ತರೂ ಇದ್ದರು. ಅದನ್ನು ನೋಡಿದ ನನ್ನ ಗೆಳೆಯರೊಬ್ಬರು, ಶಿಕಾರಿದಾರರ ಹೆಸರು ಹಾಗೂ ಅಲ್ಲೇ ನಿಲ್ಲಸಿದ್ದ ವಾಹನ ಸಂಖ್ಯೆ ಗಳನ್ನೂ ಗುರುತಿಸಿಕೊಂಡು ಅರಣ್ಯಇಲಾಖೆಗೆ ಫೋನ್ ಮಾಡಿದರು. ಅದಾಗಿ ಹತ್ತು ನಿಮಿಷಗಳಲ್ಲೇ ಈ ಶಿಕಾರಿದಾರರೆಲ್ಲ ವಾಹನ ಹತ್ತಿ ಪರಾರಿಯಾದರು. ಒಂದು ಗಂಟೆ ಕಳೆದನಂತರ ಅರಣ್ಯ ಇಲಾಕೆ ಸಿಬ್ಬಂದಿ ಕಾಟಾಚಾರಕ್ಕೆ ಬಂದು ನೋಡಿ ಯಾರೂ ಶಿಕಾರಿ ಮಾಡುತ್ತಿಲ್ಲವೆಂದು “ಖಚಿತ” ಪಡಿಸಿಕೊಂಡು ಹೋದರು..!(ಶಿಕಾರಿ ಮಾಡುತ್ತಿದ್ದವರಿಗೆ ಇವರೇ ಪರಾರಿಯಾಗಲು ತಿಳಿಸಿದ್ದರು).
    ಹೀಗೆ ಮರಕಡಿಯುವವರನ್ನು ತಡೆಯಲುಹೋದರೆ ಅವರೆಲ್ಲ ಒಗ್ಗಟ್ಟಾಗಿ ದೂರುದಾರನಿಗೆ ಧಮಕಿ ಹಾಕುವುದು, ಮತ್ತು ಅವರಿಗೆ ಇಲಾಖೆಯವರೇ ದೂರುದಾರರ ಮಾಹಿತಿ ನೀಡುವುದರ ಬಗ್ಗೆ ..ನಿನ್ನೆ ಹಾಸನದಲ್ಲಿ ಪ್ರತಿಭಟನೆಯೂ ನಡೆಯಿತು. (ನೋಡಿ ಇಂದಿನ ‘ಜನತಾಮಾಶಧ್ಯಮ’ ದಿನಪತ್ರಿಕೆ)

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ prasad raxidiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: