ಕವಿತಾಗೆ ಪ್ರಶಸ್ತಿ ಗರಿ

arivina-nade-final.jpg

ಕಡಲ ತಡಿಯ ಹುಡುಗಿ ಕವಿತಾರಿಗೆ ಪ್ರತಿಷ್ಠಿತ ವಿ ಎಂ ಇನಾಂದಾರ್ ಪ್ರಶಸ್ತಿ ಸಿಕ್ಕಿದೆ. ಕನ್ನಡದ ಕೃತಿಗಳನ್ನು ತನ್ನ ಸೂಕ್ಷ್ಮ ದೃಷ್ಟಿಯಿಂದ ಸಾಣೆ ಹಿಡಿಯುತ್ತಿದ್ದ ಕವಿತಾ ಎಲ್ಲರಿಗೂ ಕವಿಯಾಗಿಯೇ ಪರಿಚಯ. ಕ್ರೈಸ್ಟ್ ಕಾಲೇಜು ಇವರ ‘ಹಕ್ಕಿ ಹರಿವ ನೀರು’ ಹಾಗೂ ಅಭಿನವ ಇವರ ‘ನೀರ ತೇರು’ ಕೃತಿಗಳನ್ನು ಪ್ರಕಟಿಸಿದೆ.

‘ಕನ್ನಡದ ಮಹಿಳಾ ಕಾದಂಬರಿಗಳಲ್ಲಿ ವಿವಾಹ ಮತ್ತು ಕುಟುಂಬದ ಪರಿಕಲ್ಪನೆ’ ಇವರ ಮಹಾ ಪ್ರಬಂಧ. ಇದು ‘ಮಹಿಳೆ: ಅಸ್ತಿತ್ವದ ಸಂಕಥನ’ ವಾಗಿ ಪ್ರಕಟವಾಗಿದೆ. ಕೊಡವ ಸಾಹಿತ್ಯದ ಬಗ್ಗೆಯೂ ನೋಟ ಹರಿಸಿರುವ ಕವಿತಾ ಕನ್ನಡಕ್ಕೆ ಹೊಸತನ್ನು ಕಟ್ಟಿ ಕೊಡಬಲ್ಲರು. ಈ ನಿಟ್ಟಿನಲ್ಲಿ ವಿ ಎಂ ಇನಾಂದಾರ್ ಪ್ರಶಸ್ತಿ ಹುರುಪು ತುಂಬಲಿ. 

ಈ ‘ಅರಿವಿನ ನಡೆ’ಯನ್ನು ಪ್ರಕಟಿಸಿರುವ ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಕವಿತಾಳ ನಡೆಯನ್ನು ಕಂಡಿರುವುದು ಹೀಗೆ:

ವಿಮರ್ಶೆ ಕ್ಷೇತ್ರವನ್ನು ಆರಿಸಿಕೊಳ್ಳುವವರು ವಿರಳ. ಅದರಲ್ಲೂ ಮಹಿಳೆಯರು ತಮ್ಮ ಅನುಭವದ  ಅಭಿವ್ಯಕ್ತಿಗೆ ಕಥೆ ಹಾಗೂ ಕವಿತೆಗಳ ಗೋಡೆ ಇರಲಿ ಎಂದೇ ಬಯಸುತ್ತಾರೆ. ಇಂತಹವರ ಮಧ್ಯೆ ಕವಿತಾ ರೈ  ಭಿನ್ನ . ವಿಮರ್ಶೆ ಇವರ ಆಟದ ಅಂಗಳ. ಕವಿಯಾಗಿ ಈಗಾಗಲೇ ಹೆಸರು ಮಾಡಿರುವ ಕವಿತಾಳನ್ನು ವಿಮರ್ಶಕಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಲು ನಮಗೆ ಹೆಮ್ಮೆ.

ವಿಮರ್ಶೆಯಲ್ಲೂ ಈಕೆಯ ಆಸಕ್ತಿ ಭಿನ್ನ. ಕೊಡಗು, ಕರಾವಳಿಯ ಅಗುಳಿ ಹಾಕಿದ ಲೋಕವನ್ನು ಬಿಚ್ಚಿಡುವಲ್ಲಿ ಕವಿತಾ ಸದಾ ಮುಂದು. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಅಂತಃಕರಣದ ವಿಮರ್ಶಕಿ ದಕ್ಕಲಿ.

‍ಲೇಖಕರು avadhi

January 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

೧ ಪ್ರತಿಕ್ರಿಯೆ

 1. Dr. B H SHEKAR

  ಕವಿತಾ ರೈ ಗೆ ಇನಾಂದಾರ್ ಪ್ರಶಸ್ತಿಗಾಗಿ ಅಭಿನಂದನೆಗಳು. ಅವರ ಬರಹಗಳನ್ನು ಸದಾ ಗಮನಿಸುತ್ತಾ ಬಂದ ಓದುಗರಲ್ಲಿ ನಾನೂ ಒಬ್ಬ. ‘ಹಕ್ಕಿ ಹರಿವ ನೀರು’ ಕವನ ಸಂಕಲನದ ‘ಒಲೆ’ ಕವನ ಹಲವು ಕಾರಣಗಳಿಗಾಗಿ ೯೮ರಲ್ಲಿ ಅದು ಪ್ರಕಟವಾದಾಗ ನಾನು ಮೆಚ್ಚಿಕೊಂಡದ್ದಿದೆ. ಇಂದಿಗೂ ಒಲೆ, ಬಾವಿಕಟ್ಟೆ ಅಲ್ಲದೆ ‘ನೀರತೇರು’ ಸಂಕಲನದ ಹಲಹತ್ತು ಕವನಗಳು ನನಗೆ ಮೆಚ್ಚುಗೆ. ‘ಒಲೆ’ ಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಮೂಲ ಕವನ ಹಾಗೂ ಅದರ ಇಂಗ್ಲಿಷ್ ಅನುವಾದ ನಿಮಗಾಗಿ:

  ಒಲೆ

  ನಾನೇನು ಕಾಣದ್ದಲ್ಲ
  ನಾನಿರುವಂತಹ ಮನೆಗಳನ್ನು
  ಹಜಾರ ಅಡುಗೆ ಬಚ್ಚಲು ಮಲಗಲು
  ಬೆರಳೆಣಿಕೆಯ ಕೋಣೆಗಳು
  ಗಾಳಿ ಬೆಳಕಿಗೆ ಎರಡು ಬಾಗಿಲು
  ದಿಕ್ಕಿಗೊಂದರಂತೆ ಕಿಟಕಿ

  ಅಡುಗೆ ಮನೆಯ ಕೇಂದ್ರ ಒಲೆ
  ಅಜ್ಜಿ ಅಮ್ಮ ಈಗ ಸರದಿಯಲ್ಲಿ ನಾನು
  ಕುಳಿತ ಭಂಗಿಗಳೆಷ್ಟು ಊದಿ
  ಊದಿ ಹೊಗೆ ಹೀರಿದ್ದೆಷ್ಟು
  ಹೊಸ್ತಿಲು ಹಿತ್ತಲು ಹಜಾರ
  ಎವೂ ಇರಲಿ ಮಲಗುವ
  ಕೋಣೆಗಳ ಪಿಸಿ ಪಿಸಿ
  ಹುಸಿ ಬಿಸಿ ಒಣ ಒಡಕು
  ಮಾತು ಕತೆಗಳಿಗೆಲ್ಲ ಒಲೆ
  ಮುಂದಿನ ನಿಟ್ಟುಸಿರೇ ಪರಿಹಾರ

  ಇಲ್ಲಿ ಏನೆಲ್ಲ ಬೆಂದಿಲ್ಲ!
  ಹಸಿ ಹಸಿರು ಕಾಯಿಪಲ್ಲೆಗಳೆಲ್ಲ
  ಕಂದು ಕಪ್ಪಾಗಿ ಮಾಗಿಲ್ಲ
  ಹಿಟ್ಟು ರೊಟ್ಟಿಯಾಗಿ ರುಚಿಗಟ್ಟಿಲ್ಲ
  ಅಪರೂಪಕ್ಕೆ ಮಾಂಸವೂ ಬೆಂದಿಲ್ಲ!

  ಇಲ್ಲವೆನ್ನುವವರು ಯರು
  ಅಜ್ಜಿ ಅವಳಮ್ಮ ನನ್ನಮ್ಮ
  ನಾನು ಹೇಳುತ್ತೇನೆಯೇ
  ಹೋಗಲಿ ಒಲೆ ಹೇಳುತ್ತದೆಯೇ
  ಅದು ಕೇಳಿದ ಕತೆಗಳನು
  ಒಲೆ ತಾನೆ ಏನು ಹೇಳೀತು
  ಎಲ್ಲವು ಉರಿದು ಬೂದಿಯಾಗಿದೆ
  ಬೂದಾಗಿದೆ ಬಣ್ಣ ಕಳೆದು ಕೊಂಡಿದೆ
  ಪಡೆದು ಕೊಂಡದ್ದೂ ಇದೆ
  ಇತ್ತೀಚೆಗೆ ಮಾವ ಬೇಡವೆಂದರೂ
  ಇವರು ಒಲೆ ತೆಗೆಸಿದ್ದು
  ಕಟ್ಟೆ ಹಾಕಿಸಿದ್ದು ಗ್ಯಾಸ್ ಕೊಂಡದ್ದು

  ಈಗ ಹೊಗೆ ಇಲ್ಲ ಧಗೆಯಿಲ್ಲ
  ಕೊತ ಕೊತ ಕುದಿ ಕಾಣುವುದಿಲ್ಲ
  ಇಕ್ಕಳವಿದೆಯಲ್ಲ ಕೈಸುಡುವುದಿಲ್ಲ
  ಒಲೆಯ ಜೊತೆಗೆ ಬದಲಾಗಿದೆ
  ಬಚ್ಚಲಿನಿಂದ ಎಲ್ಲವೂ ಹಜಾರದವರಗೆ
  ಎರಡು ಬಾಗಿಲಿದ್ದರೇನು ಹೊಸ ಗಾಳಿ
  ಬೆಳಕಿನ ವ್ಯವಸ್ಥೆ ಎಲ್ಲಾ
  ಮನೆಯೊಳಗೆ ಇದೆ
  ಬದಲಾದ ಬಗ್ಗೆ ಮತ್ತೆ ಮಾವನ ಮಾತಿಲ್ಲ

  ಇಂದು ಇವರು ಹೇಳುತ್ತಾರೆ
  ನಾನು ನಿನ್ನ ಜೊತೆಗೆ ಇದ್ದೇನೆ
  ಅಡುಗೆ ಮನೆಯಲ್ಲಿ ನಿನ್ನ ಸೆರಗು ಹಿಡಿದಿಲ್ಲ
  ಕೈಗೆ ಕಾಲಿಗೆ ಬೇಕು ಬೇಕಾದ್ದು ಇದೆಯಲ್ಲ
  ಕೆಲಸಕ್ಕೆ ಜೊತೆ ಸೇರಿದ್ದೇನೆ ಸುಖಿ ನೀನು
  ನಮ್ಮಜ್ಜಿ ನಿನ್ನಜ್ಜಿ ಅಮ್ಮಂದಿರಿಗಿಂತ

  ಒಳಗೆ ಕುಕ್ಕರು ಕೂಗುತ್ತಿದೆ ಒತ್ತಡದಿಂದ
  ಒಲೆ ಬದಲಾದರೇನು ಉರಿ ಬದಲಾಗಿದೆಯೆ
  ಅಡುಗೆಯ ಅನುಭವ ಇಬ್ಬರಿಗೂ ಇದೆ
  ಉಷ್ಣತೆಯ ತಾಪಕ್ಕೆ ಮುಚ್ಚಳ ಹಾರೀತು
  ಕುಕ್ಕರಲ್ಲವೇ ತಾನೇ ತಣಿಯಲೆಂದು ಕಾಯಲಾಗುವುದಿಲ್ಲ
  ಆವಿ ಹೋಗಲೇಬೇಕು ಹೊರಗೆ.

  (ಹಕ್ಕಿ ಹರಿವ ನೀರು: ಕವಿತಾ ರೈ)
  Kavitha Rai, [email protected]

  The English version of the same is as follows:

  Hearth

  Haven’t I seen
  The houses I live in
  Hall, Kitchen, bathroom,
  A few rooms to sleep in
  Two doors to let in air and light
  A window in each direction

  Hearth, the centre of the kitchen
  Grandmother and mother
  And my turn now
  How many posters are sitting
  How much of blowing
  Seeking in of smoke
  Let alone the porch, garden, hall
  Whispers from the bedroom
  False, hot, dry, broken words all
  Find their solace
  In the sigh at the hearth

  What hasn’t boiled here
  Fresh green vegetables
  Haven’t they turned brown
  Black and cooked
  Flour turned to tasty cake
  Even meat baked, rarely though!

  Who denies
  Grand mother, her mother
  My mother or even
  Could I or the hearth, tell?
  The tales it had heard
  What could it tell
  All has burned become ash
  Turned gray, discolored
  Sometimes gained color too
  Lately despite
  Father-in-laws disapproved
  He laid the pavement
  Bought gas

  No more smoke, no more heat
  No more bubbling and seething seen
  No more burning hands
  Thanks to tongs
  With the hearth changed all
  From bathrooms to hall
  What if there are
  Two doors new air and light
  Everything in the home stands arranged
  On the change
  Father-in-law has no word

  Today he says
  I am with you
  Am not behind you in the kitchen
  Every needed is at hand
  I have joined you in work
  Happier you are
  Than my grand mother
  Your grand mother and the mothers

  In there the cooker is
  Whistling out of the pressure
  What if the hearth has
  Changed, has the fire?
  We both know to cook
  To burning heat the lid
  Might explode
  A cooker it is
  Can’t wait for to cool on its own
  Steam has to find its
  Way out.

  (Bird Float Water –Translated by Dr. Shekar)

  Dr. B H Shekar,
  Department of Computer Science,
  Mangalore University,
  Mangalagangotri, MANGALORE
  [email protected]
  Mobile: +91-9480146921

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: