
ನಾಗರೇಖಾ ಗಾಂವಕರ
ಬರೆಯುತ್ತಲೇ ಹೋದ
ದಿನಕ್ಕೊಂದು ಕವಿತೆ
ಗಳಿ ಬೆದಕಿ ಕುಟುಕಿ ಹಲವು ಮನಸ್ಸುಗಳ,
ಕೊಂಕಿನ ಕುಟುಕಿನ ಕುಠಾರ ಪಿ
ಕಾಸುಗಳ ಹಿಡಿದು.
ಶಬ್ದಗಳ ಗದ್ದುಗೆ ಹಿಡಿದ ಅನು
ನಾಯಿಗಳ ದೊಡ್ಡ ದಂಡನ್ನು
ಕಟ್ಟಿ, ಸಜ್ಜನರೆನ್ನುತ್ತಾ ಸ್ವ
ಜನ ಪಕ್ಷಪಾತದ ಎಂಟೆನಾದಲ್ಲಿ
ಪ್ರಸಾರವಾದುದೆಲ್ಲ ಅವರದೇ ಆ
ಲಾಪ ಪ್ರಲಾಪ
ಜನ ಮನವ ಅರಿಯಲಾಗದ
ಕವಿ ಹೆಣೆದ ಭಾವಗಳ
ಕಾಗದ ಛಾಪಿಸುವ ಯಂತ್ರದಂತೆ
ನಿನ್ನೆ ಇಂದು ನಾಳೆ
ಬೆಳೆಯುತ್ತಲೇ ಹೋದವು
ಬರಡು ಬೆಳೆ

ಬರೆದು ಬೆಳೆಯುವ ಮನದ
ಮೂಲೆಯೊಳಗೊಂದು ಸ್ವಾರ್ಥದ ಎಳೆ
ಹಂಗಿಸುವ ಭಂಗಿಸಿ ಖುಷಿ ಪಡುವ
ವೈಚಾರಿಕತೆಯ ವಿಚಿತ್ರ ಕೊಳೆ
ಮತ್ಸರದ ಮಹಲಿನ
ಏರು ಪಲ್ಲಂಗದಲ್ಲೇ ಓಲಾಡುತ್ತಾ,
ಕೈಯಲ್ಲಿ ಕುಯ್ಯುವ, ಕೊರೆಯುವ,
ಕತ್ತಿ ಹಿಡಿದು,
ನಾಲಿಗೆಯಲ್ಲಿ ನಯ ನಾಜೂಕಿನ
ಸದ್ಗುಣಗಳ ಪಠಣ.
ನಾಲಿಗೆಯ ಉದ್ದ ಬಿಡುವುದು
ಸಮಯಕ್ಕೆ ಸರಿಯಾಗಿ ಒಳಗೆಳೆದುಕೊಳ್ಳುವುದು
ಎಲ್ಲೆಲ್ಲಿ ಯಾವಾಗ ಹೇಗೆ ಬಳಸುವುದು
ಪಾಪ! ಹಾವಿಗೆ ಮಾತ್ರ ಗೊತ್ತು.
ಅದಕ್ಕಿರುವುದು ಎರಡೇ ನಾಲಿಗೆ.
ಆದರೆ…
ದಿನಕ್ಕೊಂದು ಕವಿತೆಗೆ ಎಷ್ಟೊಂದು ನಾಲಿಗೆ
ನಾಗರೆಖಾ ಗಾಂವಕರ ಅವರ ‘ಕವಿತೆಗೆ ಎಷ್ಟೊಂದು ನಾಲಿಗೆ’ ಸಹಜವಾಗಿ ಹೊರಳಾಡುತ್ತಾ ಆಳವಾಗಿ ಇಳಿದು
ಅನೇಕ ಸಂಗತಿಯ ಒಳಗೊಳ್ಳುತ್ತದೆ.
ಖುಷಿ ಎನಿಸುತ್ತದೆ. ಅಭಿನಂದನೆಗಳು.