ಕಸಾಪ ಹೋಗ್ತಾ ಇರುವ ದಿಕ್ಕು ಯಾವುದು?

‘ಕನ್ನಡ ಸಾಹಿತ್ಯದ ಕೇಸರೀಕರಣ’
ಸಚಿವೆ ಉಮಾಶ್ರೀಯವರಿಗೊಂದು ಬಹಿರಂಗ ಪತ್ರ

ಗೌರವಾನ್ವಿತರೆ,

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನಗಳನ್ನು ಒಂದು ಧರ್ಮದ ಕಾರ್ಯಕ್ರಮವೆಂಬ ರೀತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಚರಿಸುತ್ತಾ ಬರುತ್ತಿದೆ.

ಕಳೆದೆರಡು ವರ್ಷಗಳಿಂದ ಜಿಲ್ಲೆಯ ಕೆಲವು ಪ್ರಜ್ಞಾವಂತ ಸಾಹಿತಿಗಳಿಂದ ಇದಕ್ಕೆ ಸ್ವಲ್ಪಮಟ್ಟಿನ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಅದು ಕೇವಲ ಅರಣ್ಯ ರೋಧನವಷ್ಟೆ ಆಗಿದೆ. ಈ ವಿಚಾರದಲ್ಲಿ ಮೊಟ್ಟ ಮೊದಲಿಗೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದವರು ಹಿರಿಯ ಸಾಹಿತಿಗಳೂ, ಶಿಕ್ಷಣ ತಜ್ಞರೂ ಆಗಿದ್ದ ದಿವಂಗತ ಸಿ.ಎಚ್. ಕೃಷ್ಣಶಾಸ್ತ್ರಿ ಬಾಳಿಲ, ಸುರೇಶ್ ಭಟ್, ಬಾಕ್ರಬೈಲ್, ಶ್ರೀನಿವಾಸ್ ಕಾರ್ಕಳ, ಐವನ್ ಡಿಸಿಲ್ವಾ, ವಿದ್ಯಾ ಕಾರ್ಕಳ, ಮಹೇಶ್ ನಾಯಕ್ ಕಲ್ಲಚ್ಚು ಮತ್ತು ನಾನೂ ಸೇರಿದಂತೆ ಕೆಲವು ಬೆರಳೆಣಿಕೆಯ ಮಂದಿ ಪತ್ರಿಕೆಗಳಲ್ಲಿ ಕೆಲವು ಲೇಖನ, ಪತ್ರಗಳನ್ನು ಬರೆದರೂ ಈ ವರೆಗೆ ನಮ್ಮ ಪ್ರತಿರೋಧಕ್ಕೆ ಕನಿಷ್ಠ ಪ್ರತಿಸ್ಪಂದನೆಯೂ ಸಿಕ್ಕಿಲ್ಲ ಎಂದು ತಿಳಿಸಲು ವಿಷಾದಪಡುತ್ತೇನೆ.

A worker at a jewellery showroom displays gold idols of Hindu elephant god Ganesh (L) and Hindu goddess Lakshmi in Kolkata August 30, 2013. REUTERS/Rupak De Chowdhuri/Files

೨೦೧೪ರಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದರೆ, ೨೦೧೫ರಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಪುನಃ ಈ ಬಾರಿ ಉಜಿರೆಯ ದೇವಸ್ಥಾನವೊಂದರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಿದ್ಧತೆಗಳಾಗುತ್ತಿವೆ. ನಮಗೆ ಯಾವುದೇ ದೇವಸ್ಥಾನ, ಮಸೀದಿ, ಚರ್ಚ್ಗಳ ಕುರಿತಂತೆ ಯಾವುದೇ ಪೂರ್ವಾಗ್ರಹಗಳಿಲ್ಲ.

ನಮ್ಮ ಬೇಡಿಕೆಯಿಷ್ಟೆ.ಕನ್ನಡ ಸಾಹಿತ್ಯವನ್ನು ಯಾವುದೇ ಧರ್ಮದ ಸಂಕೋಲೆಯೊಳಗೆ ಬಂಧಿಸದಿರಿ. ಕನ್ನಡ ಸಾಹಿತ್ಯಕ್ಕೆ ಕನಕದಾಸ, ಪುರಂದರದಾಸರ ಧಾರ್ಮಿಕ ಹಿನ್ನೆಲೆಯಿರುವಂತೆಯೇ ಬಸವಣ್ಣ, ಲಂಕೇಶ್, ಅನಂತಮೂರ್ತಿ ಮುಂತಾದವರ ವೈಚಾರಿಕ ಹಿನ್ನೆಲೆಯೂ ಇದೆ. ಒಂದು ವೇಳೆ ದೇವಸ್ಥಾನದ ಬದಲಾಗಿ ಮಸೀದಿ, ಚರ್ಚ್ಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದರೂ ನಾವು ಇದೇ ರೀತಿ ಅದನ್ನು ವಿರೋಧಿಸಲು ಬದ್ಧರಿದ್ದೇವೆ.

ಧಾರ್ಮಿಕ ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬಾರದು ಎಂಬ ನಮ್ಮ ಪ್ರತಿಪಾದನೆಗೆ ನಮಗೆ ಸ್ಪಷ್ಟವಾದ ತಾತ್ವಿಕ ನಿಲುವಿದೆ.

-ಮೊದಲನೆಯದಾಗಿ, ದೇವಸ್ಥಾನಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದರೆ ಅಲ್ಲಿ ಸಾಹಿತ್ಯಕ್ಕಿಂತ ಧಾರ್ಮಿಕ ಕ್ರಿಯೆಗಳೇ ಹೆಚ್ಚು ವಿಜೃಂಭಿಸಲ್ಪಡುತ್ತದೆ.

-ಎರಡನೆಯದಾಗಿ, ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಕೋಮು ಸೂಕ್ಷ್ಮ ಜಿಲ್ಲೆಯಾದುದರಿಂದ ಹಿಂದೂಯೇತರ ಸಮುದಾಯದ ಸಾಹಿತ್ಯ ಪ್ರೇಮಿಗಳು ದೇವಸ್ಥಾನಕ್ಕೆ ಹೋಗಲು ಹಿಂಜರಿಯುತ್ತಾರೆ.

-ಮೂರನೆಯದಾಗಿ ಸಾಹಿತ್ಯಾಭಿಮಾನಿ ಆಸ್ತಿಕ ಮಹಿಳೆಯರು ಮುಟ್ಟಾದ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋಗುವುದಿಲ್ಲ. ಅದೊಂದು ಖಾಸಗಿ ವಿಷಯವಾದರೂ ಅವರ ಮನಃಸ್ಥಿತಿ ಮುಟ್ಟಿನ ಸಂದರ್ಭ ದೇವಸ್ಥಾನಕ್ಕೆ ಹೋಗಲು ಬಿಡುವುದಿಲ್ಲ.

ಈ ವಿಚಾರಗಳನ್ನು ಪದೇ ಪದೇ ಪತ್ರಿಕೆಗಳಲ್ಲಿ ಬರೆದರೂ ಜಿಲ್ಲಾ ಸಾಹಿತ್ಯ ಪರಿಷತ್ ನಮ್ಮ ಅಭಿಪ್ರಾಯಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಈ ಬಗ್ಗೆ ಸಾಹಿತ್ಯ ಪರಿಷತ್ತಿನವರಲ್ಲಿ ಪ್ರಶ್ನಿಸಿದಾಗ ದೇವಸ್ಥಾನದಲ್ಲಾದರೆ ಊಟದ ಖರ್ಚು ಉಳಿತಾಯವಾಗುತ್ತದೆ ಎಂಬ ಬಾಲಿಶ ಉತ್ತರ ನೀಡುತ್ತಾರೆ.

ಹಾಗಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮುಖಾಂತರ ಪ್ರತೀ ವರ್ಷ ಸಾಹಿತ್ಯ ಸಮ್ಮೇಳನಕ್ಕೆ ಐದು ಲಕ್ಷ ರೂಪಾಯಿ ಅನುದಾನ ನೀಡುವ ಔಚಿತ್ಯವೇನು?

kasapa-sammelana16ಮುನ್ನೂರರಿಂದ ಐನೂರು ಜನ ಸೇರುವ ಕಾರ್ಯಕ್ರಮವೊಂದಕ್ಕೆ ಸರಳ ಊಟೋಪಚಾರ ನೀಡಲು ಎಷ್ಟು ಖರ್ಚಾಗಬಹುದು? ನಮಗೆಲ್ಲಾ ತಿಳಿದಿರುವಂತೆ ದೇವಸ್ಥಾನದಲ್ಲಿ ನೀಡಲಾಗುವ ಊಟದ ಮೆನು ಅತ್ಯಂತ ಸರಳವಾದುದು. ಹೆಚ್ಚೆಂದರೆ ಒಂದು ಊಟಕ್ಕೆ ೩೦ ರೂಪಾಯಿ ಖರ್ಚು ತಗಲಬಹುದಷ್ಟೆ. ತರ್ಕಕ್ಕೆ ೫೦ ರೂಪಾಯಿ ಖರ್ಚು ತಗಲುತ್ತದೆಂದೇ ಇಟ್ಟುಕೊಳ್ಳೋಣ. ೫೦×೫೦ = ೨೫,೦೦೦ ರೂಪಾಯಿಗಳು ವೆಚ್ಚವಾಗಬಹುದಷ್ಟೆ. ಅದೂ ಬೇಡ ಒಂದು ಊಟಕ್ಕೆ ನೂರು ರೂಪಾಯಿ ಎಂದೇ ಇಟ್ಟುಕೊಳ್ಳೋಣ ಆಗಲೂ ಊಟದ ಖರ್ಚಿಗೆ ಬೇಕಾಗುವುದು ೫೦,೦೦೦ ರೂಪಾಯಿಗಳಷ್ಟೆ.

ಸಾಹಿತ್ಯ ಸಮ್ಮೇಳನಕ್ಕೆ ಬರುವವರೆಲ್ಲ ಕೇವಲ ಊಟ ಮಾಡುವುದಕ್ಕಷ್ಟೇ ಬರುವವರಲ್ಲ. ಚಪ್ಪರ, ಕುರ್ಚಿಗಳು, ವೇದಿಕೆ, ಧ್ವನಿವರ್ಧಕ, ಪ್ರಕಟನೆಗಳು, ಸಂಭಾವನೆ ಹೀಗೆ ಎಷ್ಟೇ ಖರ್ಚಾದರೂ ಅದು ಮೂರು ಲಕ್ಷ ರೂಪಾಯಿಗಳನ್ನು ಮೀರಲಾರದು.
ಸರಕಾರದ ವತಿಯಿಂದ ಐದು ಲಕ್ಷ ಅನುದಾನವಲ್ಲದೆ, ಜಿಲ್ಲಾ ಸಾಹಿತ್ಯ ಪರಿಷತ್ತಿನವರು ಬ್ಯಾಂಕುಗಳಿಂದ, ಖಾಸಗಿ ಉದ್ಯಮಪತಿಗಳಿಂದ, ಕ್ಯಾಪಿಟೇಶನ್ ಶಿಕ್ಷಣೋದ್ಯಮಿಗಳಿಂದ ಬಹಳಷ್ಟು ಜಾಹೀರಾತುಗಳನ್ನೂ ಪಡೆಯುತ್ತಾರೆ. ಹಾಗಾದರೆ ಇವರು ಇಷ್ಟು ಮೊತ್ತವನ್ನು ಯಾವುದಕ್ಕೆಲ್ಲ ವ್ಯಯಿಸುತ್ತಾರೆ?

ಕೇವಲ ಉಚಿತ ಊಟದ ವಿಚಾರ ಮುಂದೊಡ್ಡಿ ಸಾಹಿತ್ಯ ಸಮ್ಮೇಳನಗಳನ್ನು ಭಜನೆಯ ಮಟ್ಟಕ್ಕಿಳಿಸುವವರಿಂದ ಕನ್ನಡ ಸಾಹಿತ್ಯವನ್ನು ಮುಕ್ತಿಗೊಳಿಸಬೇಕಾಗಿದೆ. ಅದು ಸಾಧ್ಯವಿಲ್ಲವಾದರೆ ಜನರ ಬೆವರಿನ ಶ್ರಮದಿಂದ ಕಟ್ಟಿದ ತೆರಿಗೆಯ ದುಡ್ಡನ್ನು ಸಾಹಿತ್ಯ ಸಮ್ಮೇಳನಕ್ಕೆ ನೀಡುವುದನ್ನು ನಿಲ್ಲಿಸಬೇಕಾಗಿದೆ.

ನಮ್ಮ ಈ ಅಹವಾಲನ್ನು ತಾವು ಅರ್ಥೈಸಿ ಸಕಾರಾತ್ಮಕ ಕ್ರಮಕೈಗೊಳ್ಳುವಿರಾಗಿ ನಂಬುತ್ತೇವೆ.

-ಇಸ್ಮತ್ ಫಜೀರ್

‍ಲೇಖಕರು Admin

December 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

2 ಪ್ರತಿಕ್ರಿಯೆಗಳು

 1. Anonymous

  I fully endorse your view. Literature festivals should be held in public places and not in religious places.

  ಪ್ರತಿಕ್ರಿಯೆ
 2. R. Shivakumaraswamy kurki

  ***** ಕಸಾಪ ಅಧಿಕಾರ ಅವಧಿ
  ಐದು ಬೇಡ ಮೂರೇ ಇರಲಿ *****
  ಆತ್ಮೀಯ ಕನ್ನಡ ಮಹನೀಯರೆ ನಮಸ್ಕಾರ….
  ಕರ್ನಾಟಕದಲ್ಲಿ ನೂತನ ಸರಕಾರ ಬರುತ್ತಿದ್ದಂತೆ ಸರ್ಕಾರ ನೇಮಿಸಿದ ಪ್ರಾತಿನಿಧಿಕ ಸಂಸ್ಥೆಗಳ ಅಧ್ಯಕ್ಷರನ್ನು ತಮ್ಮ ಅಧಿಕಾರದಿಂದ ಮುಕ್ತಗೊಳಿಸಿತು.
  ಆದರೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳ ಅಧ್ಯಕ್ಷರು ಚುನಾವಣೆಯಲ್ಲಿ ಅಯ್ಕೆಯಾಗಿ ಬಂದ 3 ವರ್ಷ ಸಮಯ ಮೀರಿದ್ದರೂ ನೆಲರಾವಿ ತೆವಳಿಕೊಂಡೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.
  ದೂರದ ಕೋಟಾಕ್ಕೆ ತಮ್ಮ ಗುಂಪು ಕರೆದೊಯ್ದು 15 ನಿಮಿಷವಷ್ಟೇ ಸಭೆ ನಡೆಸಿ 100 ವರ್ಷಗಳ ಹಿಂದೆ ಕನ್ನಡ ದಿಗ್ಗಜರು ನಿರ್ಮಿಸಿ ಜೋಪಾನವಾಗಿ ಬೆಳಸಿಕೊಂಡು ಬಂದಿದ್ದ ಬೈಲಾದಲ್ಲಿದ್ದ 3 ವರ್ಷದ ಅಧಿಕಾರ ಅವಧಿಯನ್ನು ತಮ್ಮ ಅಧಿಕಾರ ಅವಧಿಯಿಂದಲೇ 5 ವರ್ಷಕ್ಕೆ ಬದಲಾಯಿಸಿಕೊಂಡ ಒಂದು ದೊಡ್ಡ ದುರಂತ ನಡೆದು ಹೋಯಿತು.
  ಕೂಡಲೆ ದಾವಣಗೆರೆಯ ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕರ ಬಳಗ ಕಟ್ಟಿಕೊಂಡು ತೀವ್ರ ವಿರೋಧ ವ್ಯಕ್ತಪಡಿಸಿ ಧರಣಿ ಹೋರಾಟಕ್ಕೆ ಇಳಿದೆವು.
  ಬಗ್ಗದೆ ನುಗ್ಗಿದ ಕಸಾಪ ಪಡೆಯ ಜಗ್ಗಿ ನಿಲ್ಲಿಸಲು ರಿಜಿಸ್ಟರ್ ನ್ಯಾಯಾಲಯ ಹಾಗೂ ಹೈಕೋರ್ಟ್ ಮೊರೆ ಹೋದೆವು.
  ಬೆಂಗಳೂರು ಕನ್ನಡ ಸಂಘರ್ಷ ಸಮಿತಿಯೂ ಪ್ರಬಲ ವಿರೋಧ ವ್ಯಕ್ತಪಡಿಸಿ ಹೋರಾಟಕ್ಕಿಳಿಯಿತು. ಅಲ್ಲದೆ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ, ಸಂಘ ಸಂಸ್ಥೆಗಳ ರಿಜಿಸ್ಟರ್ ಕಛೇರಿಯ ನ್ಯಾಯಾಲಯ ಹಾಗೂ ಹೈಕೋರ್ಟಲ್ಲಿ ದೂರು ಸಲ್ಲಿಸಿ ಈಗಲೂ ಹೋರಾಡುತ್ತಿದೆ. ಅನೇಕ ವಿಚಾರಣೆ ನಡೆದಿವೆ. ಹೈಕೋರ್ಟಲ್ಲಿ ಅಕ್ಟೋಬರ್ 6 ರಂದು ಇನ್ನೂ ವಿಚಾರಣೆ ನಡೆಯಲಿದೆ.
  ದಾವಣಗೆರೆಯಲ್ಲಿ ಹಾಲಿ ರಾಜ್ಯ ಕಸಾಪ ಸಮಿತಿಯ ಭ್ರಷ್ಟತನದ ವಿರುದ್ಧ ಸಂಘಟಿತರಾಗಿ ಹೋರಾಡಿದೆವು. ಬರುಬರುತ್ತ ಹಲವರು ಹಿಂದೆ ಸರಿದರು. ಏಕಾಂಗಿಯಾದ ನಾನೊಬ್ಬನೇ ಕೈಯಿಂದ
  ಕೋರ್ಟ್ ಫೀಜ್ ಕೊಟ್ಟು ಓಡಾಡಿ ಸಾಕಾಯಿತು. ಆಗದೆ ಹಿಂದೆ ಮುಂದೆ ನೋಡುವಂತಾದಾಗ ಬೆಂಗಳೂರು ಸಂಘರ್ಷ ಸಮಿತಿ ಅಧ್ಯಕ್ಷರಾದ ಕೋ.ವೆಂ.ರಾಮಕೃಷ್ಣೇಗೌಡರೇ ಛಲ ಬಿಡದೆ ಹೈಕೋರ್ಟ ಮೆಟ್ಟಿಲೇರಿದರು. ಈಗಲೂ ತಮ್ಮ ಪಟ್ಟು ಬಿಡದೆ ಕಾಸು ಕಾಲ ಕಳೆದುಕೊಂಡು ಹೋರಾಡುತ್ತಿದ್ದಾರೆ.
  ನನ್ನ ಮತ್ತು ಅವರ ಹಿಂದೆ ನಿಂತ ಅನೇಕರು ಕಾಸು ಕಾಲ ಕಳೆದುಕೊಳ್ಳಲಾರದೆ ಹಿಂದೆ ಸರಿದರು.
  ಇನ್ನೂ ಕೆಲವರು ನಮ್ಮೊಡನಿದ್ದು ಆರಂಭ ಶೂರತ್ವ ತೋರಿಸಿ ಎದ್ದೆದ್ದು ಹಾರಾಡಿ ಕೂಗಾಡಿದವರು ಕೈಕೊಟ್ಟು ಕಾಲು ಜಾರಿ ಬಿದ್ದು ಹೋದರು.
  ಅವರೆಲ್ಲಾ ಹಾಲಿ ಕಸಾಪ ರಾಜ್ಯ ಮತ್ತು ಜಿಲ್ಲಾ ಸಮಿತಿಯವರು ತಮ್ಮ ಮೂಗಿನ ತುದಿಗೆ ಹಚ್ಚಿದ ನಾರುವ ತುಪ್ಪ ನೆಕ್ಕಿಕೊಳ್ಳುತ್ತ, ಕರೆದು ಹಾಕಿದ ಪ್ರಸಾಧ, ತೊಡಿಸಿದ ಹಳೆಯದಾದ ಮೈಸೂರು ಪೇಟ, ಹೊದಿಸಿದ ಕೊಳೆಯಾದ ಶಾಲಿಗೆ ತಲೆ ಮೈ ಕೈ ಬಾಗಿ ಸ್ವೀಕರಿಸಿ ತ್ರಿಶಂಕು ಧನ್ಯತೆ ಹೊಂದಿದರು.
  ಇನ್ನು; ದೊಡ್ಡವರೆಂಬ ಕನ್ನಡ ಕಿರೀಟತೊಟ್ಟವರಂತೂ ತಮ್ಮ ಮುಡಿ ಏರಿರುವ ಕೀರ್ತಿ ಪ್ರೀತಿ ಎಲ್ಲಿ ಜಾರಿಹೋಗುವುವೋ ಎಂಬ ಆತಂಕದಲ್ಲಿ ತೀನ್ ಮಂಕಿ ಗಾಂಧಿ ವಾದವನ್ನು ಮುಂದಿಟ್ಟುಕೊಂಡು ಕೂತಿದ್ದಾರೆ ಮತ್ತಾವುದೋ ಸನ್ಮಾನ ಪ್ರಶಸ್ತಿ ಅಧ್ಯಕ್ಷತೆ ನೀಡುತ್ತಾರೆ ಕಸಾಪ ಅಧಿಕಾರ ದಾಹಿಗಳು ಅಂತ.
  ಒಟ್ಟಿನಲ್ಲಿ ಕಸಾಪವನ್ನು ಕಸದಪುಟ್ಟಿ ಮಾಡುತ್ತಿದ್ದಾರೆಂಬ ಸತ್ಯ ತಿಳಿದಿದ್ದರೂ ಬಡಾಯಿ ಸಾಹಿತಿಗಳು ಮೌನಕ್ಕೆ ಜಾರಿದ್ದಾರೆ. ಬಣವೆಗೆ ಬಿಟ್ಟ ಧನಗಳಂತೆ ಈ ಜನ ಮೇಯುತ್ತಿದ್ದಾರೆ.
  ಮೈಸೂರು ಅರಸರು, ಸರ್.ಎಂ.ವಿಶ್ವೇಶ್ವರಯ್ಯನವರು ಕಟ್ಟಿದ, ಕನ್ನಡದ ಮಹಾನ್ ದಿಗ್ಗಜ ಕವಿಗಳು ಬೆಳೆಸಿಕೊಂಡು ಬಂದ ಕನ್ನಡಿಗರ ಜ್ಞಾನಮಂದಿರವಾದ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಪುಡಾರಿಗಳ ನೆಲೆದಾಣವಾಗುತ್ತಿರುವುದು ಸುಳ್ಳಲ್ಲ.
  ಈಗ ಹೈಕೋರ್ಟಲ್ಲಿ ನಡೆಯುತ್ತಿರುವ ವಿಚಾರಣೆ ಆಶಾದಾಯಕವಾಗಿದ್ದು ಈ ಮೊದಲಿಂದ ಇರುವಂತೆ 3 ವರ್ಷವೇ ಆಡಳಿತಾವಧಿ ಇರಲಿ ಎಂಬ ತೀರ್ಪು ಹೊರಬರಲಿ ಎಂಬ ಆಶಯಬಾವ ಹೊಂದಿರೋಣ.

  *ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ* ವನ್ನು
  *ಫೆಬ್ರುವರಿ 5, 6 ಹಾಗೂ 7 ರಂದು ನಡೆಸಲು ಆಯೋಜನೆ* ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮನು ಬಳಿಗಾರ ಅವರು ಘೋಷಣೆ ಮಾಡಿದ್ದಾರೆ.
  ಆದರೆ ಹೈಕೋರ್ಟಿನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಆದರೂ ಯಾವುದೇ ನೈತಿಕತೆ ಇರದ ಈ ಮನುಬಳಿಗಾರ ಮತ್ತು ಅವರ ಪಟಾಲಂ ಸಮ್ಮೇಲನ ಮಾಡ ಹೊರಟಿರುವುದು ಸ್ವಾಭಿಮಾನಿ ಕನ್ನಡಿಗರ ಅಸ್ಥಿತ್ವವನ್ನು ಪ್ರಶ್ನಿಸಿದಂತಾಗುತ್ತಿಲ್ಲವೇಮ? ಏನಾಗಿದೆ ಇನ್ನೂ ಬದುಕುಳಿದಿರುವ ಹಿರಿ ಕಿರಿ ಬರಹಗಾರರಿಗೆ?
  ಆಕಸ್ಮಿಕವಾಗಿ ಅಲ್ಲೂ ನ್ಯಾಯ ಸಿಗದೇ ಹೋದಲ್ಲಿ ಸುಪ್ರೀಂ ಕೋರ್ಟಿಗೆ ಹೋಗಿಯಾದರೂ ಕಸಾಪ ಉಳಿಸಿಕೊಳ್ಳುವ ಸಂಕಲ್ಪ ಹಾಗೂ ಸಿದ್ದತೆಯನ್ನು ಮಾಡಿಕೊಳ್ಳಬೇಕಿದೆ.
  ಶತಾಯ ಗತಾಯ ಇದನ್ನು ಕನ್ನಡಿಗರು ತಡೆಯಬೇಕಿದೆ. ಎಲ್ಲಿಂದ ? ಯಾವಾಗಿನಿಂದ? ಯಾರು ಪ್ರತಿಭಟಿಸಬೆಕು? …..ಈಗಿನಿಂದಲೇ, ನಮ್ಮ ನಿಮ್ಮಿಂಲೇ ……..! ಹೇಗೆ ಮಾಡೋಣ ??
  ಓ! ಒಂದು ಹೊಸದಾದ ಸರಳವಾಗಿ ತತಕ್ಷಣ ಮಾಡಬಹುದಾದ ಪರಿಣಾಮಕಾರಿ ಪ್ರತಿಭಟನೆ ಮಾಡೋಣ. ಅದೇನೆಂದರೆ ನಮ್ಮ ಅಂಗೈ ಮೇಲೆ ಪೆನ್ ಬಳಸಿ *ಮನು ಬಳಿಗಾರ್ ತೊಲಗಿಸಿ, ಕಸಾಪ ಉಳಿಸಿ* ಎಂದು ಬರೆದು ಫೊಟೊ / ವೀಡಿಯೋ ತೆಗೆದು ವಾಟ್ಸಪ್, ಫೇಸ್ಬುಕ್, ಟ್ಟಟರ್, ಇಮೇಲ್ ಮೂಲಕ ತಮ್ಮ ಸಂಪರ್ಕದಲ್ಲಿರುವ ಎಲ್ಲರಿಗೂ ಹಾಗೂ ಕ.ಸಂ.ಇ. ಸಚಿವರು ಮತ್ತು ಮುಖ್ಯ ಮಂತ್ರಿಗಳಿಗೂ ಕಳುಹಿಸಿರಿ.
  ಇಷ್ಟೂ ಮಾಡಲಾಗದಿದ್ದರೆ ಕನ್ನಡ ಅಭಿಮಾನವಿಲ್ಲದವರೆಂದು ಸ್ವಯಂ ಒಪ್ಪಿಕೊಂಡಂತೆ. ಈ ವಿಷಯವನ್ನು ಎಲ್ಲಾ ಮಾದ್ಯ ಮಿತ್ರರೂ ಪ್ರಕಟಿಸಿ ರೆಂದು ವಿನಂತಿಸುವೆ..
  *….ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ* ಮೊ 8970948221
  ( ದಿ:11-11-2019 ರಾತ್ರಿ – ಸಮಯ 11.11 ನಿಮಿಷ )

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: