ಕಾಗದ ಬಂದಿದೆ…

ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ ಪ್ರತಿಕ್ರಿಯೆ- 

untitled

ನಿಮ್ಮ ಲೇಖನದಲ್ಲಿ  ಪ್ರಸ್ತಾಪಿತವಾಗಿರುವ  ಮಲ್ಟಿಪ್ಲೆಕ್ಸ್ ಸಂಸ್ಕೃತಿಯನ್ನು ಮತ್ತಷ್ಟು ಆಳವಾಗಿ ವಿವರಿಸಿದ್ದರೆ ಚೆನ್ನಾಗಿತ್ತು. ನಮ್ಮ ಜನಪ್ರಿಯ ಶೈಲಿಯ ಚಲನ ಚಿತ್ರಗಳು ಯಾವಾಗ ವಾಸ್ತವವನ್ನು ಬಿಂಬಿಸುವ, ವಾಸ್ತವವಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದ್ದವು?

ಮಲ್ಟಿಪ್ಲೆಕ್ಸುಗಳಲ್ಲೂ ಸಮಾನಾಂತರ ಸಿನೆಮಾ ಚಳುವಳಿ ಚಾಲ್ತಿಯಲ್ಲಿರಬೇಕು ಎಂದಿರುವಿರಿ, ಮಲ್ಟಿಪ್ಲೆಕ್ಸುಗಳಿಗೆ ಬರುವವರು ಇಂಥವರೇ ಎಂದು ನೀವು ಗೆರೆ ಎಳೆದು ತೋರಿಸಿರುವಾಗ ಅವರು ಸಮಾನಾಂತರ ಸಿನೆಮಾಗಳನ್ನು ನೋಡುತ್ತಾರೆಯೇ? ಏಲ್ಲೋ ಬ್ಯಾಲೆನ್ಸ್ ತಪ್ಪಿದಂತಿದೆ ನಿಮ್ಮ ಲೇಖನ.

 -ಸುಪ್ರೀತ್

[email protected]

+++

 

untitled4

 

ಇಲ್ಲ್ಲಿ “ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ” ಎಂಬ ವಾಕ್ಯವಿದೆ.

ತಿಳಿಯದವರಿಗೆ ತಪ್ಪುಕಲ್ಪನೆಯಿರುತ್ತದೆ. ಆದರೆ ತಿಳಿದವರೂ ತಪ್ಪು ಕಲ್ಪನೆಗೆ ಜೋತು ಬಿದ್ದಿದ್ದಾರೆ!.

“ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ”.

ಈ ತಪ್ಪು ಕಲ್ಪನೆಯನ್ನು ತೊಲಗಿಸಿಕೊಳ್ಳಿ.

 

-ಶುಭದಾ
[email protected]

+++

 

untitled1

ತುಂಬಾ ಒಳ್ಳೆಯ ಲೇಖನ.
ಆದ್ರೆ ಮಲ್ಟಿಪ್ಲೆಕ್ಸ್ ಸಿನೆಮಾಗಳ ಬಗ್ಗೆ ನಾವು ಪೂರ್ವಾಗ್ರಹ ಪೀಡಿತರಾಗಿದ್ದೇವೆ ಅನ್ನಿಸುತ್ತೆ. ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲಾ ಬಗೆಯ ಸಿನೆಮಾಗಳನ್ನೂ ತೋರಿಸ್ತಾರೆ.ಆದ್ರೆ ಅಲ್ಲಿ ಬಹಳಷ್ಟು ಆಯ್ಕೆ ಇರೊದ್ರಿಂದ ಕೆಲವರಿಗೆ ಕಷ್ಟವಾಗೋದೂ ಇದೆ. ಒಂದು ಸಿನೆಮಾವನ್ನು ನೋಡಲು ಬಂದವರು ’ಕೊನೆ’ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ ’ಇನ್ನೊಂದು ’ ಸಿನೆಮಾಗೆ ಹೋಗಿದ್ರಿಂದ ’ಒಂದು’ ಸಿನೆಮಾದವನಿಗೆ ಸ್ವಲ್ಪ ನಷ್ಟವಾಗಬಹುದು ಅಷ್ಟೆ.

ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಸಿನೆಮಾ ನೋಡೋದಕ್ಕೆ ಅಂತ ಹೋದ್ರೆ ಒಳ್ಳೆಯ ಸಿನೆಮಾಗಳಿಗೆ ಯಾವಾಗ ನೋಡಿದ್ರೂ ಟಿಕೆಟ್ ಸಿಗೋದೆ ಇಲ್ಲ! ಜನ ಬರೋದಕ್ಕಿಂತ ಮುಂಚೇನೇ ಟಿಕೆಟ್ ಖಾಲಿ.ಆದ್ರೆ ಬ್ಲ್ಯಾಕ್ ನಲ್ಲಿ ಮಾತ್ರ ಎಷ್ಟು ಬೇಕಾದ್ರೂ ಸಿಗುತ್ತೆ.

ಇನ್ನೊಂದು ವಿಶ್ಯ ಅಂದ್ರೆ ಮಲ್ಟಿಪ್ಲೆಕ್ಸ್ ಗೆ ಹೋಗೋರು ಅಲ್ಲಿನ ಸವಲತ್ತುಗಳನ್ನು ಇಷ್ಟಪಟ್ಟು ಹೋಗಿರ್ತಾರೆ.ಮೆಜೆಸ್ಟಿಕ್ ಚಿತ್ರಮಂದಿರಗಳಿಗೆ ಹೋಗಿ ಘಂಟೆ ಗಟ್ಟಲೆ ಕಾದು ಟಿಕೆಟ್ ತಗೊಂಡು ಒಳಗೆ ಹೋಗಿ ಕೂತಾಗ ಬರುವ ಪಾನ್ ಪರಾಗ್ ಘಾಟು .ಇತ್ಯಾದಿಗಳ ರಗಳೆಯೇ ಬೇಡ ಅಂದುಕೊಂಡು ಮಲ್ಟಿಪ್ಲೆಕ್ಸ್ ಗಳಿಗೆ ಹೋಗುವ ಜನರ ಸಂಖ್ಯೆ ಜಾಸ್ತಿ ಇದೆ.

ಕಾಸು ಗಿಟ್ಟುತ್ತೆ ಅಂತಿದ್ರೆ ಆರ್ಟ್ ಫಿಲಂ ಏನು ಸಾಕ್ಶ್ಯಚಿತ್ರ ಕೂಡಾ ಹಾಕೋದಿಕ್ಕೆ ಮಲ್ಟಿಪ್ಲೆಕ್ಸ್ ಜನ ಸಿದ್ಧರಿದ್ದಾರೆ.ನಾವು ಅವರನ್ನು ತಪ್ಪು ತಿಳೊಂಡಿದ್ದೀವಿ ಅಂತ ಅನ್ನಿಸುತ್ತೆ ನನಗೆ.

ಸಂದೀಪ್ ಕಾಮತ್
kadalateera.blogspot.com
[email protected]

+++

 

untitled3

ತು೦ಬಾ ವಿಚಾರ ಹೊತ್ತ ಲೇಖನ, ನೀವು ಹೇಳಿದ್ದು ನೂರಕ್ಕೆ ನೂರು ನಿಜ..ಒಳ್ಳೆದ್ದಕ್ಕಿ೦ತ ಕೆಟ್ಟದ್ದೇ ಜಾಸ್ತಿ.

-Pramod
[email protected]

‍ಲೇಖಕರು avadhi

December 20, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

 1. ಬಿ.ಸುರೇಶ

  ಸುಪ್ರೀತ್ ಅವರ ಪ್ರತಿಕ್ರಿಯೆಗೆ
  ಗೆಳೆಯರು ಹೇಳುತ್ತಾ ಇರುವುದು ಸರಿ. ಈ ಲೇಖನದಲ್ಲಿ ಎಲ್ಲವೂ ಚರ್ಚಿತವಾಗಿಲ್ಲ. ಚರ್ಚಿತವಾಗಬಹುದಾದ ಅನೇಕ ವಿಷಯಗಳಿವೆ. ಪ್ರಾಯಶಃ ಈಗ ಇರು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇಡೀ ವಿವರವನ್ನ ಮರುಪರಿಶೀಲಿಸಬಹುದು.
  ಆದರೆ ಎರಡನೆಯ ಅರ್ಧದಲ್ಲಿ ನೂವು ಕೇಳುತ್ತಾ ಇರುವ ಪ್ರಶ್ನೆಗಳಿಗೆ ಬಹುತೇಕ ಉತ್ತರಗಳು ಲೇಖನದಲ್ಲಿ ಸಿಗುತ್ತವೆ.
  ಮಲ್ಟಿಪ್ಲೆಕ್ಸ್‌ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ. ತಲೆಗೆ ಐನೂರು ರೂ.ಕೊಟ್ಟು ಸೌಲಭ್ಯ ಕೊಳ್ಳುವವರು ಎಂತಹವರು ಎಂದು ಬಿಡಿಸಿ ಹೇಳಬೇಕೆ?
  ನನ್ನ ಲೇಖನದಿಂದ ನಿಮ್ಮ ತಲೆಯಲ್ಲಿ ಒಂದು ಹುಳು ಮಾತ್ರ ಬಿಟ್ಟಿದ್ದೇನೆ. ಅದು ಏನೇನು ಮಾಡುತ್ತದೋ ನೋಡೋಣ, ನನಗೂ-ನಿಮಗೂ…
  ಒಳಿತಾಗಲಿ, ಸುಪ್ರೀತ್

  ಪ್ರತಿಕ್ರಿಯೆ
 2. ಬಿ.ಸುರೇಶ

  ಸಂದೀಪ್ ನಾಯಕ್ ಅವರ ಪ್ರತಿಕ್ರಿಯೆಗೆ
  ಕಾಸು ಗಿಟ್ಟತ್ತೆ ಅಂತ ಅವರು ನೀಲಿ ಚಿತ್ರ ಹಾಕ್ತಾ ಇಲ್ಲ. ಅವರು ಸಮಾಜಸೇವೆ ಹೆಸರಲ್ಲಿ ಮಾಡ್ತಾ ಇರುವ ವ್ಯಾಪಾರವನ್ನ ಗಮನಿಸಬೇಕು, ಗೆಳೆಯರೇ…
  ಅದೇ ಇಲ್ಲಿ ದೊಡ್ಡ ಪ್ರಶ್ನೆ.
  ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ಅದಕ್ಕೆ ಇರುವ ಜವಾಬ್ದಾರಿಗಳು ಬಹಳ ದೊಡ್ಡದು ಅಲ್ವಾ?
  ಮೊದಲು ನಮ್ಮ ರಸ್ತೆಯಲ್ಲೇ ಇದ್ದ ದಿನಸಿ ಅಂಗಡಿಯಲ್ಲಿ ನಾವು ಚೌಕಾಸಿ ಮಾಡುತ್ತಿದ್ದೆವು. ಈಗ ಮಾಲ್‌ನಲ್ಲಿ ಚೌಕಾಸಿಗೆ ಅವಕಾಶವಿಲ್ಲ.
  ಹಾಗೆಯೇ ಚಿತ್ರಮಂದಿರದ ವಿವರವನ್ನ ಗಮನಿಸಬೇಕು.
  ಇದು ಆರ್ಥಿಕ ನೆಲೆಯಿಂದ, ಸಾಮಾಜಿಕ ನೆಲೆಯಿಂದ ಚರ್ಚಿತವಾಗಬೇಕಾದ ವಿಷಯ.
  ಒಮ್ಮೆ ಜೋಸೆಫ್‌ ಸ್ಟಿಗ್ಲಿಟ್ಸ್‌ನ ಓದಿ.

  ಪ್ರತಿಕ್ರಿಯೆ
 3. ಬಿ.ಸುರೇಶ

  ಶುಭದಾ ಅವರ ಪ್ರತಿಕ್ರಿಯೆಗೆ
  ಥ್ಯಾಂಕ್ಸ್! ನಾನು ಕನ್ನಡವನ್ನೂ ರಾಷ್ಟ್ರಭಾಷೆ ಎನ್ನುತ್ತೇನೆ. ಅದು ನನ್ನ ಖುಷಿಗೆ.
  ಅಥವಾ ಕನ್ನಡಾಭಿಮಾನಿಗಳ ಖುಷಿಗೆ. ಅದು ರಾಷ್ಟ್ರೀಯ ಸತ್ಯವಲ್ಲ ಎಂಬುದು ನಿಮಗೂ ಗೊತ್ತು, ನನಗೂ ಗೊತ್ತು.
  ಹಿಂದಿಯನ್ನ ಹೇರಲಾಗಿದೆ. ಅದರ ಸಂಕಷ್ಟವನ್ನ ಪ್ರತಿಭಾರೀ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುಭವಿಸುತ್ತಾ ಇದ್ದೇವೆ.
  ಇದರಿಂದ ಬಿಡಿಸಿಕೊಳ್ಳಲು ಹೋರಾಟವಾಗುತ್ತಿದೆ. ಗೆಲುವು ಸಿಗಬೇಕಿದೆಯಷ್ಟೆ.
  ಪ್ರತಿಕ್ರಿಯೆಗೆ ವಂದನೆಗಳು.
  ಬಿ.ಸುರೇಶ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: