ಕಾಡುವ ಒಂದು ಹಾಡು ನಿಮಗಾಗಿ. ಅಪರಿಚಿತ’ ಸಿನೆಮಾದಿಂದ.
ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿನೆನಪುಗಳು ಬೇಕು ಸವಿಯಲೀ ಬದುಕು…
ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು
ಸವಿನೆನಪುಗಳು ಬೇಕು ಸವಿಯಲೀ ಬದುಕು…
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮತಕಾಗಿದೆ
ಅರಳುವ ಹೂವೊಂದು ಅಮರವ ಭಯದಲೀ
ಸಾಗುತಿದೆ ಬದುಕು
ಸವಿನೆನಪುಗಳು ಬೇಕು ಸವಿಯಲೀ ಬದುಕು…
ಇದೆ ರೀತಿಯ ಇನ್ನೊಂದು ಹಾಡು “ಹೋದೆಯ ದೂರ ಓ ಜೊತೆಗಾರ..” ವಿ ಮನೋಹರ್ ಬರೆದ ಇದರ ಸಾಹಿತ್ಯ ಇಲ್ಲಿದೆ :http://www.kannadalyrics.com/?q=node/465”
ಹಾಡನ್ನು ಇಲ್ಲಿ ನೋಡಿ: http://www.youtube.com/watch?v=NOUgv7dLnYQ
There are mistake in lyrics.