ಕಾನೂನಿನ ಮೊರೆ ಹೋದರೆ ಹಾವಳಿ ತಡೆಯಲು ಸಾಧ್ಯ

blogging

ಶ್ರೀವತ್ಸ ಜೋಶಿ

“ಬ್ಲಾಗ್ ಲೋಕದ ಹೂಳೆತ್ತುವಿಕೆ”ಗೆ ಸಂಬಂಧಪಟ್ಟಂತೆ ನಿಮ್ಮ ಮೂಲ ಲೇಖನ ಮತ್ತು ಅದಕ್ಕೆ ಬಂದಿರುವ ಎಲ್ಲ ಪ್ರತಿಕ್ರಿಯೆಗಳನ್ನೂ ಒಂದೇ ಕಡೆ consolidate ಮಾಡಿ ಪ್ರಕಟಿಸುವುದು ಸಾಧ್ಯವೇ? ಈಗ ಇಲ್ಲಿ ಎಲ್ಲ ಚಲ್ಲಾಪಿಲ್ಲಿಯಾಗಿ ಇವೆ, ಕೆಲವು ರಿಪೀಟ್ ಆಗಿವೆ. ಗೊಂದಲದ ಗೂಡಾಗಿದೆ. ಸ್ವಲ್ಪ attentionಇಸುತ್ತೀರಾ?

ಶ್ರೀನಿವಾಸಗೌಡ

ಈ ಅನಾನಿಮಸ್ ಅನ್ನೊದು ಒಂದಷ್ಠು ಸ್ವಾತಂತ್ರವನ್ನ ಕಲ್ಪಿಸಿಕೊಡುತ್ತದೆ ಅನ್ನೊದನ್ನ ಎಲ್ಲಾರು ಒಪ್ಪುವಂತದೇ, ಆದರೆ ಅನಾನಿಮಸ್ ಹೆಸರಲ್ಲಿ ಒಳ್ಳೇ ಚರ್ಚೆ ಹುಟ್ಟುಹಾಕಲಿ, ಅದು ಬಿಟ್ಟ ಮತ್ತೋಬ್ಬರ ಮೇಲೆ ವಿಪರೀತ ಟೀಕೆ , ಬೈಗುಳ ಮಾಡೋದು ಸರಿ ಅಲ್ಲ ಅಲ್ಲವಾ. ಬ್ಲಾಗ್ ನಲ್ಲಿ ಬರೆದದ್ದೂ ಅಲ್ಲದೆ ಯಾರ್ಯಾರೋ ಅನಾನಿ ಗಳು ಕಳಿಸಿದ ಕಾಮೆಂಟ್ ಗಳನ್ನು ಪ್ರಕಟಿಸಿ ವಿಕೃತ ಸಂತೋಷ ಪಡೆಯೋದು ತಪ್ಪು ಅನಿಸುತ್ತೆ, ಕನ್ನಡದಲ್ಲಿ ಈಗ ತಾನೆ ಹೆಚ್ಚುತ್ತಿರುವ ಬ್ಲಾಗ್ ಲೋಕದಲ್ಲಿ ಬೇಗ ಒಳ್ಳೆ ಚರ್ಚೆ ಆರಂಭವಾಗಿದೆ. ಎಲ್ಲರೂ ಸೇರಿದರೆ ಏನಾದರೊಂದು ಮಾರ್ಗ ಇದ್ದೆ ಇರತ್ತೆ.

ಅನಾನಿಮಸ್ ಬ್ಲಾಗ್ ಬಗ್ಗೆ ಹೆಂಗಪ್ಪಾ ತಿಳಿದುಕೊಳ್ಳೋದು ಅಂತ ಗೂಗ್ಲ್ ಮಾಡಿದಾಗ ಸಿಕ್ಕ ಸುದ್ದಿ ತುಣುಕು ಇದು. ಗೂಗಲ್ ಕೂಡ ಈಗ ಅನಾನಿಮಸ್ ಬ್ಲಾಗ್ ಮಾಡಿದವರ ಐಡಿ ಕೊಡಬೇಕು ಅಂತ ಅಮೆರಿಕದ ಸುಪ್ರಿಂ ಕೋರ್ಟ್ ಹೇಳಿದೆ. ನಮ್ಮಲ್ಲೂ ಯಾರಾದರೂ ರೊಚ್ಚಿಗೆದ್ದು ಕಾನೂನಿನ ಮೊರೆ ಹೋದರೆ ಹಾವಳಿ ತಡೆಯಲು ಸಾದ್ಯವೇನೋ.

ಸುದ್ದಿಯ ಲಿಂಕ್ ಇಲ್ಲಿದೆ.

ಎಚ್ ಎನ್ ಈಶಕುಮಾರ್

ಸುಮ್ಮ ಸುಮ್ಮನೆ ಯಾವುದೋ ತೆವಲಿಗೆ ಬಿದ್ದವರಂತೆ ಕಾಮ್ಮೆನ್ಟ್ಗಳನ್ನು ಮಾಡಿ ಅದರಿಂದ ಸಿಗುವ ಯಾವುದೋ ವಿಚಿತ್ರ ಖುಷಿಯನು ಪಡೆದು, ತಾವು ಮಾಹನ್ ಕಾರ್ಯ ಮಾಡಿದ್ದೇವೆ ಎನುವಂತೆ ವರ್ತಿಸುತ್ತಿರುವ ಅಂತ ಕಾಮೆಂಟ್ ಧಾರಿಗಳ ಮಾನಸಿಕ ಪರಿಸ್ಥಿತಿಯ ಬಗ್ಗೆ ಅವರು ಗಮನ ಹರಿಸಿದರೆ ಅವರಿಗೆ ಒಳಿತು ಎನಿಸುವುದು.ಅಂತಹ ಕಾಮೆಂಟ್ ಗಳಿಂದ ತಮಗಾಗಲಿ,ಬ್ಲೋಗಿಗರಾಗಲಿ ವೈಯಕ್ತಿಕವಾಗಿ ಯಾವುದೇ ಪ್ರಯೋಜನ ವಿಲ್ಲ ಎನುವುದನ್ನು ಎಲ್ಲರು ಅರಿತರೆ ಒಳಿತು

ಜಯದೇವ

Moderate ಮಾಡದೆ ಪಬ್ಲಿಶ್ ಮಾಡಿದ್ರೆ ಹೀಗೆಲ್ಲಾ ಆಗುತ್ತೆ. ಆದ್ದರಿಂದ ದಯವಿಟ್ಟು ಬ್ಲಾಗ್ ಅನ್ನ ಮೋಡರೇಟ್ ಮಾಡಿ. ಒಂದು ವಾರ್ತಾಪತ್ರಿಕೆ ಕಛೇರಿಗೂ ಎಲ್ಲಾ ಥರದ ಕಾಮೆಂಟ್ಸ್ ಬರುತ್ತೆ. ಆದ್ರೆ ಅವ್ರು ಎಲ್ಲಾ ಪಬ್ಲಿಷ್ ಮಾಡೋದಿಲ್ಲ ಅಲ್ವೆ?

ಇನ್ನೊಂದು ವಿಷ್ಯ. . . ಸಂಪಾದಕರು ಮಾಡರೇಟ್ ಮಾಡಿಯೇ ಪಬ್ಲಿಷ್ ಮಾಡೋ ಬ್ಲಾಗ್ ಅಥವಾ ಪೋರ್‍ಟಲ್ಗಳಲ್ಲೂ ಅಸಂಬದ್ಧ, ಅಶ್ಲೀಲ ಕಾಮೆಂಟ್ಸ್ ಬರುತ್ತಲ್ವ? ಅದಕ್ಕೆ ಏನು ಹೇಳೋಣ?

ಬಿ ಆರ್ ಸತ್ಯನಾರಾಯಣ

ಮುಖವಾಡ ಒಂದಿಲ್ಲ ಒಂದು ದಿನ ಕಳಚಿ ಬೀಳಲೇಬೇಕು! ಆದರೆ ಮುಖವೇ ಇಲ್ಲದವರನ್ನು ಏನು ಮಾಡುವುದು?

ಉಮೇಶ್ ದೇಸಾಯಿ

ಬ್ಲಾಗ್ ಬರೆದು ಭೇಷ ಎನಿಸಿಕೊಳ್ಳಬೇಕು ಎಂಬುದು ಕೆಲವರ ಖಯಾಲಿ ಇಂತಹವರು ಸಿಕ್ರೆ ಸಾಕು ಎಂದು ಹಲವರು ಕಾದು ಕುಳಿತಿರ್ತಾರ ತಗೊರಿ ಮತ್ತೇನು ಆಳಿಗೊಂದು ಕಲ್ಲು ಹೊಡಿಸಿಕೊಂಡವ ಮತ್ತ ಎಂದೂ ಈ ಬ್ಲಾಗ್ ಕಡೆ ತಲಿಹಾಕೂದಿಲ್ಲ…!

ನವೋಮಿ

ಹೆಚ್ಚು ತಲೆಕೆಡಿಸಿಕೊಳ್ಳೋ ಅಗತ್ಯ ಇಲ್ಲ ಅನ್ನಿಸುತ್ತೆ.ಉದಾಸೀನ ಓಳ್ಳೇ ಔಷಧಿ.ಇಂಥವ್ರು ಎಲ್ಲಾ ಕಡೆಗೂ ಇರ್ತಾರೆ.ಅದರಲ್ಲೂ ಮಾಧ್ಯಮ ವಲಯದಲ್ಲಿ ಇಂಥವ್ರು ಸ್ವಲ್ಪ ಜಾಸ್ತಿನೇ

‍ಲೇಖಕರು avadhi

August 22, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This