'ಕಾಮರೂಪಿ' ಎಂಬ ಎಂ ಎಸ್ ಪ್ರಭಾಕರ್

‘ಕಾಮರೂಪಿ’ ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ಬ್ಲಾಗ್ ಅಂಕಣಕ್ಕೆ ಇಳಿದಿದ್ದಾರೆ. ಕನ್ನಡ ಕಂಡ ಒಬ್ಬ ಮಹತ್ವದ ಬರಹಗಾರ ತಮ್ಮ ವಯಸ್ಸನ್ನು ಸೋಲಿಸುತ್ತಾ ಯೌವನಕ್ಕೆ ಕೈ ಚಾಚುತ್ತಿರುವುದು ‘ಅವಧಿ’ಗೆ ಸಂತಸ ತಂದಿದೆ.
ಇತ್ತೀಚೆಗಷ್ಟೇ ಸುಗತ ಶ್ರೀನಿವಾಸರಾಜು ‘ಔಟ್ ಲುಕ್’ ನ ತಮ್ಮ ಅಂಕಣದಲ್ಲಿ ಕಾಮರೂಪಿಯನ್ನು ಪರಿಚಯಿಸಿದ್ದರು. ಈಗ ಅವರ ಬರಹಗಳನ್ನೋಳಗೊಂಡ ಬ್ಲಾಗ್ ನಿಮ್ಮ ಮುಂದಿದೆ. ಸ್ವೀಕರಿಸಿ.

ಅದು, ಇದು
ನಮಸ್ಕಾರ. ಇದು ನನ್ನ ಬ್ಲಾಗ್. ಬ್ಲಾಗ್ ಪದದ ಕನ್ನಡದ ಏನಾದರೂ ಇದ್ದರೆ ಅದು ನನಗೆ ಗೊತ್ತಿಲ್ಲ. ಇರುವ ವಿಷಯ ಹೇಳಬೇಕಾದರೆ ಈ ಬ್ಲಾಗುಗಳ ಬಗ್ಯೆ ನನಗೆ ಏನೇನೂ ಗೊತ್ತಿಲ್ಲ. ಆದರೂ ಈಚೆಗೆ ಪರಿಚಯವಾಗಿರುವವರೊಬ್ಬರ ಸಹಾಯ ಮತ್ತು ಉತ್ತೇಜನೆಯ ಧೈರ್ಯ ತೆಗೆದುಕೊಂಡು ಈ ಸಾಹಸ ಮಾಡುದ್ದೇನೆ, ಈ ನನ್ನ ಎಪ್ಪತ್ಮೂರನೇ ವರುಷದ ಇಳಿ ವಯಸ್ಸಿನಲ್ಲಿ ಹೊಸ ಒಂದು ಅಂಗಣದಲ್ಲಿ ಇಳಿದಿದ್ದೇನೆ. ಮೊದಲನೆಯ entry ಅಂದಂತೆ ನನ್ನ ಕೆಲವು ಹಳೆಯ, ಬಹಳ ಹಳೆಯ, ಬರವಣಿಗೆಗಳನ್ನು ಇಲ್ಲಿ ಅಂಟಿಸಿದ್ದೇನೆ. ಸ್ವಲ್ಪ ಅಭ್ಯಾಸ ಆದನಂತರ ಈಗಿನ ಬರವಣಿಗೆಗಳನ್ನೂ ಇಲ್ಲಿ ತುಂಬುತ್ತೇನೆ.
ಇನ್ನೊಂದು ಮಾತು. ಅನೇಕ ವರುಷಗಳು ಕನ್ನಡ ಮಾತನಾಡುವ, ಬರೆಯುವ, ಕಿವಿಯಲ್ಲಿ ಕೇಳುವ ಅಭ್ಯಾಸ ಸಹ ಇಲ್ಲದಿದ್ದುದರಿಂದ ಬರವಿಣಿಗೆಯಲ್ಲಿ ತಪ್ಪುಗಳಿದ್ದರೆ ಮಾಫಿ ಮಾಡುವುದು.
-ಪ್ರಭಾಕರ / ಕಾಮರೂಪಿ.
+++
ನಾನು
ನಾನು ಯಾರು? ದಂಧೆ ಏನು? ವಿವರವೆಲ್ಲ ತಿಳಿಸಿರಿ.
ಕವನವೊಂದು ಬರೆಯಿರಿ.
ಸಾಲು ಮಾತ್ರ ಆರರಿಂದ ಹತ್ತರೊಳೆಗೆ ನಿಲ್ಲಿಸಿ,
ಕಾವ್ಯ ಕಳಿಸಬೇಡಿರಿ!”
ಬಿಳಿಯ ಹಾಳೆ, ಬರಹ ಚೂಪು, ವಿನಯ ಶೈಲಿ, ಕೊರತೆಯೇ/
ನನ್ನ ಹೆಮ್ಮೆ ಕಮ್ಮಿಯೇ?
ಹತ್ತು ಮಂದಿ ಬರಹಗಾರರಲ್ಲಿ ನಾನು ಒಬ್ಬನೇ?
ನಂಬುವಂಥ ವಿಷಯವೇ?
ನಾಡಿಗೆಲ್ಲ ದೊಡ್ಡ ವೃತ್ತ ಪತ್ರಿಕೆಯ ಸಂಪಾದಕ,
(ಪ್ರಾಸಕಿಲ್ಲಿ ಕಂಟಕ!)
ದೂರನಾಡಿನಲ್ಲಿನವಗೆ ಬೆಣ್ಣೆ ಏಕೆ ತೀಟುವ?
ಗುರುತು ಕೂಡ ಕಾಣ್ದವ?
ತತ್ಕಾರಣ, ಇದಿಗೋ:
ಹೆಸರು, ಪ್ರಭಾಕರ.
ಬೆಳೆದೂರು, ಕೋಲಾರ.
ವಾಸ, ಪ್ರಾಗ್ಜೋತಿಷಪುರ.
ಬಲು ದೂರ? ಬಲು ಹತ್ತಿರ!
ತುಪ್ಪ
ತಾತನಿಗೆ ಬೇಕಿತ್ತು ದಿನಸೊಲಿಗೆ ತುಪ್ಪ.
ಒಮ್ಮೆ ಮಾಡುತ್ತಿದ್ದ ಊಟಕ್ಕೆ ಅರೆಸೊಲಿಗೆ.
ಮಿಕ್ಕ ಅರೆಸೊಲಿಗೆ ಮೈತಲೆಗೆ ಲೇಪಿಸಿಕೊಂಡು
,
ಅರೆಘಂಟೆ ಬೆನ್ನನ್ನು ಎಳಬಿಸಿಲಕಡೆ ತೋರಿ
ಹಂಡೆ ಕುದಿನೀರನ್ನು ತಲೆ ಮೇಲೆ ಬಸಿಕೊಂಡು
ಹಳೆಯ ಧಾವಣಿ ಮುಸುಕಿನಲ್ಲಿ ಮಯ್ಯನು ತೂರಿ
“ಹರಿ ಹರೀ! ಶಿವ ಶಿವಾ! ಬೆವರಿದರೆ ಬಲು ಸೌಖ್ಯ.
ಮುದಿವಯಸ್ಸಿನಲ್ಲಿ ಪ್ರತಿ ನಿತ್ಯವೂ ಈ ಭಾಗ್ಯ
ಅನುಭವಿಸಬೇಕೆಂದು ವರಕೇಳಿ ಬಂದೆ.
ಈ ಭಾಗ್ಯ ನನ್ನ ಮಗ ಪಡೆಯುವನೋ, ಇಲ್ಲವೋ!”
ಈ ಚಿಂತೆಯಲ್ಲಿಯೇ ಅಭ್ಯಂಗನದ ಸ್ವಾಸ್ಥ್ಯ
ಮುರಿದು, ತೊಂಭತ್ತನೇ ಜನ್ಮದಿವಸದ ರಾತ್ರಿ
ಲಕ್ವಪೆಟ್ಟನು ತಿಂದು, ಹನ್ನೆರಡು ದಿನ ನರಳಿ
ತಾತ ಸತ್ತ.
ಪ್ರತಿ ನಿತ್ಯವೂ ತುಪ್ಪದಭ್ಯಂಗನದ ಭಾಗ್ಯ
ಅಪ್ಪನಿಗೆ ದೊರೆಕಿತೋ, ಇಲ್ಲವೋ, ನಾನರಿಯೆ.
ನನಗೆ?
ತುಪ್ಪ ಕಂಡರೆ ವಾಕರಿಕೆ.
ಎಣ್ಣೆ ನೀರು ಹಾಕಿಸಿಕೊಂಡು ಹನ್ನೆರಡು ವರುಷಗಳಾಯಿತು.
[ಕಾಮರೂಪಿ / Mawkyrwat, 6 June 1974]

‍ಲೇಖಕರು avadhi

August 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

3 ಪ್ರತಿಕ್ರಿಯೆಗಳು

 1. chetana chaitanya

  Thanks avadhi…
  bahaLa khushiyAytu KAma rUpiyavara BLOG bagge tiLidu. inneega avara barahatANadatta horaDuve.
  Vande,
  Chetana

  ಪ್ರತಿಕ್ರಿಯೆ
 2. laxminarasimha

  ‘kaamaroopi’ prabhakararu,tumbaa varshagalanantara kannada dalli bareyuththiruvudu santoshada sangathi. dakshina aafrika mattu eeshanya bharatada avara aaLavaada thiLuvaLike kannadada manassugaLigu haridu barali endu haaraisuve-kelana

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ laxminarasimhaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: