ರವಿ ಅಜ್ಜೀಪುರ ಕಲಾವಿದ, ಪತ್ರಕರ್ತ. ಓ ಮನಸೇ!, ಹಾಯ್ ಬೆಂಗಳೂರು ಪತ್ರಿಕೆಗಳ ನಡುವೆ ಸುಳಿವಾತ್ಮ. ಎದೆಯೊಳಗೆ ಒಂದು ನವಿರು ಭಾವ ಹುಟ್ಟಿಸುವ ಬರವಣಿಗೆಗೆ ಹೆಸರುವಾಸಿ. ಅವರ ‘ನದಿಪ್ರೀತಿ’ ಬ್ಲಾಗ್ ನಿಂದ ಕಡ ತಂದ ಅವರ ಕಾಮ ಇಲ್ಲಿದೆ-
ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು ಬರೆಸಿಕೊಂಡ ಪುಟ್ಟ ಪುಟ್ಟ ಸಾಲುಗಳಿವು. ಯಾಕೆ, ಏನು ಅಂತ ಕೇಳಬೇಡಿ. ಸುಮ್ಮನೆ ಓದಿಕೊಳ್ಳಿ. ಹಾಗೇ ಇಷ್ಟ ಆಗಿರಲಿ, ಆಗದೇ ಇರಲಿ ಪ್ರತಿಕ್ರಿಯಿಸಿ.
–ರವಿ ಅಜ್ಜೀಪುರ
1
ಮುಟ್ಟು ಅಂದರೂ ಮುಟ್ಟಲ್ಲ
ಸುಮ್ಮನೆ ಆಸೆಪಡುತ್ತೀಯಲ್ಲ
ಒಮ್ಮೆ ಕೈ ತಾಕಿಸು ಗೆಳೆಯ
ಎದೆಯ ಪುಟಗಳಿಗೆ
ಸುಗ್ಗಿ ಬರಲಿ
1
ನೀನು ಮಲಗಿದೆ
ನಾನೂ ಮಲಗಿದೆ
ಎಚ್ಚರಾದಾಗಲೇ ಗೊತ್ತಾಗಿದ್ದ
ನಮ್ಮ ನಡುವೆ ಮತ್ತೊಬ್ಬನಿದ್ದ
ಕಾಮಿ
3
ನೀನು ಏನನ್ನೂ ಬಿಚ್ಚಬೇಡ
ಸುಮ್ಮನೆ ಬಚ್ಚಿಟ್ಟಿಕೋ
ಬಟಾ ಬಯಲಾಗುವುದೂ ಕೂಡ
ಕೆಲವೊಮ್ಮೆ ಬೋರ್ ಹೊಡೆಸುತ್ತದೆ.
4
ಇವತ್ಯಾಕೋ
ನೀನು ಬೇಕೆನಿಸುತ್ತಿದೆ
ಬಂದು ಹೋಗೋ
ಮೈಗೆ ಸೋಲುವುದು ಗೊತ್ತಿದ್ದಂತೆ
ಸುಖಕ್ಕೆ ತೇಲುವುದು ಗೊತ್ತಿದೆ
ಅವೆರಡನ್ನೂ ಕಲಿಸುತ್ತೇನೆ
5
ನನ್ನ ಪಾದದ ಕಿರುಬೆರಳಿಗೂ
ನಿನ್ನ ನೆನಪಿದೆ ಕಣೋ
ಕಚ್ಚಿದ
ಗುರುತು ಮಾಸಿ ಹೋಗಿಲ್ಲ
ಇವತ್ತಾದರೂ ಬಂದು
ಮುಲಾಮು ಹಚ್ಚಬಾರದಾ?
6
ನೀನು ಏನೋ ಹುಡುಕಿದೆ?
ನಾನು ಏನೋ ತಡಕಿದೆ?
ಗೊತ್ತಿಲ್ಲ, ಆದರೆ
ಇಬ್ಬರಲ್ಲೂ ಏನೋ ಸಿಕ್ಕ ಖುಷಿ ಇದೆ
7
ಏನೂ ಬೇಡ
ಸುಮ್ಮನೆ ತಬ್ಬಿಕೋ!
ಬುದ್ಧನ ಕಥೆ
ಸವಿರಾಜ್ ಆನಂದೂರು ಜಗದ ಗೋಳನು ಕಂಡು ಸಿದ್ಧಾರ್ಥನೆದೆ ಮರುಗಿತುರಾತ್ರೋರಾತ್ರಿ ಮನೆ ಬಿಟ್ಟು ಹೊರಟವನಬಾಗಿಲಲ್ಲೇ ತಡೆದು ನಿಲ್ಲಿಸಿದವಳು...
ಒಂದೊಂದು ಸಾಲೂ ಚೆನ್ನ… ಚಿನ್ನ… ಕಾಮಿಯಲ್ಲ… ಬದುಕೇ ಅಡಗಿದೆ ಇವುಗಳಲ್ಲಿ..
ಓದುತಿದ್ದರೆ ನೀಲು ನೆನಪಾಗುತ್ತಾಳೆ,
ಅದ್ಭುತ ಅನುಭೂತಿ ನೀಡುವುದರೊಂದಿಗೆ.
– ಚಂದಿನ
ಓ ಕಾಮಿ
ನಿನಗೆ ಸಾವಿರ ಸಲಾಂ
-ಜಿ ಎನ್ ಮೋಹನ್
wow….
ಚೆಂದದ ಫೋಟೋ . . .ಚೆಂದದ ಸಾಲುಗಳು, ಇಷ್ಟ ಆಯ್ತು.
ellu helabedi
summane odikolli!!
kaaami avaru numbergaLa anukramaNike tappihoguvashtu talleenaraagiddare alve?
ಕಾಮಿ , ಚೆನ್ನಾಗಿದೆ ಸರ್ ,
ನಿಮ್ಮ ಪ್ರೀತಿಗೆ ನನ್ನ ಸಲಾಮ್
ಪ್ರಿಯರೇ
ಮೊದಲಿಗೆ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ನನ್ನ ಸಲಾಮ್.
ಕಾಮಿ ಹುಟ್ಟಿದ್ದು ಹಾಗೇ ಸುಮ್ಮನೆ.ಅವು ಬಲವಂತದಿಂದ ಬಂದವಲ್ಲ. ಕೈ
ಹಿಡಿದ ಹುಡುಗಿ ಹುಡುಗನನ್ನ ಕಣ್ಣ ಸನ್ನೆಯಲ್ಲೇ ಒಲಿಸುಕೊಳ್ಳುತ್ತಾಳಲ್ಲ ಹಾಗೆ ಕೈ ಹಿಡಿದು
ಬರೆಸಿಕೊಂಡಂತವು ಕಾಮಿ ಸಾಲುಗಳು. ಕಾಮಿಯವರು ನಂಬರ್ ತಪ್ಪಿಹೋಗುವಷ್ಟು
ತಲ್ಲೀನರಾಗಿದ್ದಾರೆ ಅಂತ ರೇಗ್ ರೇಗಿಸಿದ್ದಾರೆ ಪ್ರೀತಿ. ನಾರಾಯಣ ಹೆಗಡೆಯವರು ಸೂಪರ್ರ್
ಅಂದಿದ್ದಾರೆ. ಪ್ರೀತಿಯ ಜಿ ಎನ್ ಮೋಹನ್ ಮೆಚ್ಚಿಕೊಂಡಿದ್ದಾರೆ. ಓದುತ್ತಿದ್ದರೆ ನೀಲು
ನೆನಪಾಗುತ್ತಾಳೆ ಅಂದಿದ್ದಾರೆ ಚಂದಿನ. ಬರಹವೇ ಹಾಗೆ. ಯಾರದನ್ನೋ ಓದುತ್ತಿದ್ದರೆ
ಇನ್ನಾರದೋ ನೆನಪಾಗುತ್ತದೆ. ಬದುಕೇ ಹಾಗೆ. ಇನ್ನಾರದನ್ನೋ ನೋಡಿ
ನಮ್ಮ ಬದುಕು ನೆನಪಾಗುತ್ತದೆ. ಮೂಲ ಮಾತ್ರ ಒಂದೆ. ಎಲ್ಲ ಬದುಕಿನಿಂದಲೇ ಹೆಕ್ಕಿ ತೆಗೆದಂತವು.
ಪ್ರತಿಕ್ರಿಯಿಸಿದ ಎಲ್ಲರಿಗೂ ಋಣಿ.
ಪ್ರೀತಿ ಮುಂದುವರೆಯಲಿ.
ರವಿ ಅಜ್ಜೀಪುರ
good…olleya prayatna ravi…..