ಕಾಯುತ್ತಲೇ ಇದ್ದ ಭೀಷ್ಮ…

chetana2.jpg“ಭಾಮಿನಿ ಷಟ್ಪದಿ”

 

 

 

ಚೇತನಾ ತೀರ್ಥಹಳ್ಳಿ

ಮಾತೆತ್ತಿದರೆ ಸತ್ಯವತಿ ತಲೆಮೇಲೆ ಕೈ ಹೊತ್ತು ಮಲಗುತ್ತಾಳೆ.

ಅಪ್ಪ ಸತ್ತಾಗ, ಮೊದಲ ಸರ್ತಿ ಹೀಗೆ ಮೂಲೆಯಲ್ಲಿ ಕುಂತಿದ್ದಳು. ಚಿತ್ರ-ವಿಚಿತ್ರ ವೀರ್ಯರನ್ನ ಸಾಕುವ ಹೊಣೆ ನಾನೇ ಹೊತ್ತೆ. ಒಬ್ಬ, ಯುದ್ಧದಲ್ಲಿ ಸತ್ತ. ಮತ್ತೊಬ್ಬನಿಗೆ ಮದುವೆ ಮಾಡಲು ಹೆಣ್ಣುಗಳನ್ನ ಹೊತ್ತು ತಂದೆ.

ಅಂಬೆ, ಅಂಬಿಕೆ, ಅಂಬಾಲಿಕೆ. ಆ ಹಿರಿಯ ಹುಡುಗಿ ಶಾಲ್ವ ರಾಜನ್ನ ಪ್ರೇಮಿಸಿದ್ದಳಂತೆ. ಹೋಗುತ್ತೇನಂದಳು. ಬಿಟ್ಟುಕೊಟ್ಟೆ. ಅಂವ ಸ್ವೀಕರಿಸಲಿಲ್ಲವೆಂದು ವಾಪಸು ಬಂದಳು, ನನ್ನ ಮದುವೆಯಾಗೆಂದು ದುಂಬಾಲು ಬಿದ್ದಳು.

ನಾನೇನೂ ಬಯಸಿ ಬಯಸಿ ಬ್ರಹ್ಮಚಾರಿಯಾದವನಲ್ಲ. ಅದೊಂದು ಶಪಥ. ನನಗೆ ನಾನೇ ಕಟ್ಟಿಕೊಂಡ ಚೌಕಟ್ಟು. ಅದನ್ನ ಮೀರಲಾರದೆ ಹೋದೆ.

kattu.jpg

ಅವಳು ಉರಿಮೋರೆಯಲ್ಲಿ ಮುಂಜಾವದ ಸೂರ್ಯನ ಹಾಗೆ ಕಾಣ್ತಿದ್ದಳು. ಎತ್ತರದ ನಿಲುವಿನ ತೋರ ಮೊಲೆಗಳ ಕಾಶ್ಮೀರೀ ಸುಂದರಿ. ನನ್ನ ಬಾಹುಗಳಿಗೆ ಸವಾಲೆಸೆಯುವಂತಿತ್ತು ಅವಳ ದಿಟ್ಟ ನೋಟ. ಕಡೆದಿಟ್ಟ ಮೈ….. ಕೆಚ್ಚು ತುಳುಕುವ ಅಂಗಾಂಗ… ಇಲ್ಲ. ಮಾತಿಗೆ ತಪ್ಪಲಾರದಾದೆ. ನಾನು ಗಂಗೆಯ ಮಗ… ಗಾಂಗೇಯ!

ಅಂಬೆ ಅವಡುಗಚ್ಚಿದಳು. “ನನ್ನಿಂದಲೇ ನಿನಗೆ ಸಾವು!” ಆ ಸುಂದರಿಯನ್ನ ಬದುಕಾಗಿಸಿಕೊಳ್ಳುವ ಯೋಗ ನನಗಿರಲಿಲ್ಲ. ಅವಳಿಂದ ಸಾವಾದರೂ… ಆಹಾ! ಎಂಥ ಸುಂದರ ಸಜೆ!!

ಕಾಲ ಸರಿಯಿತು. ಮತ್ತೆ ಕುರುಕುಲ ಸಿಂಹಾಸನ ಬರಿದು. ಮೂಲೆಯಲ್ಲಿ ತಲೆಮೇಲೆ ಕೈಹೊತ್ತ ಮಾತೆ, ಸತ್ಯವತಿ. ಸೊಸೆಯರಿಗೆ ಮಕ್ಕಳಿಲ್ಲ. ಹೇಳುತ್ತಿದ್ದಾಳೆ ಆಕೆ: “ನೀನೊಂದು ಮದುವೆ ಮಾಡಿಕೋ.” ಅಪ್ಪ ಅವಳನ್ನ ಪ್ರೇಮಿಸಿದಾಗಲೇ ನನ್ನ ಮದುವೆ ಮಾತು ಮುರಿದುಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ಕಥೆ. ನಾನು ಬಿಲ್ಕುಲ್ ಆಗೋಲ್ಲವೆಂದು ಮುಖ ತಿರುವಿದೆ.

ರಾಜ ಕುಲಗಳಲ್ಲಿ ಕುರ್ಚಿಯುಳಿಸಲಿಕ್ಕೆ ನೂರೆಂಟು ಒಳದಾರಿ. “ನಿಯೋಗಕ್ಕೆ ಸಮ್ಮತಿಸು” ಅಂದಳು. ಅಂಬಿಕೆ, ಅಂಬಾಲಿಕೆಯರೊಟ್ಟಿಗೆ ನಿಯೋಗ!? ನನ್ನ ತಮ್ಮನ ಹೆಂಡತಿಯರೊಟ್ಟಿಗೆ ಮಲಗುವುದು? ಅದೂ ಅಂಬೆಯ ತಂಗಿಯರೊಟ್ಟಿಗೆ…?

ಅಂಬೆ… ಕೇಕೆ ಹಾಕಿ ನಗುತ್ತಿದ್ದಳು. ಕೆಂಪಗೆ ಮುನಿಯುತ್ತಿದ್ದಳು. ಅಷ್ಟುದ್ದ ಕೂದಲನ್ನ ಚಾವಟಿ ಮಾಡಿ ಎದೆಯ ಮೇಲೆ ಬೀಸಿ, ನೋಯಿಸಿ ಮಾಯವಾದಳು! ಎಲ್ಲಿ ಹೋದಳೋ? ಏನಾದಳೋ? ಈ ಚಿರಂಜೀವಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನಂದಿದ್ದಳು. ಅಲ್ಲಿಯವರೆಗೆ ಹೇಗೆ ಜೀವ ಹಿಡಿಯುವಳೋ? ಮತ್ತೆ ಹುಟ್ಟಿ ಬರುವಳೋ?

* * *

ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ.

ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ… ಗಂಡುಗಳು ಬರಡಾದಾಗಲೆಲ್ಲ… ಸತ್ಯವತಿ ತಲೆ ಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ… ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು ಮುಖ ನೆನಪಾದ ಘಳಿಗೆ ಘಳಿಗೆಯೆಲ್ಲ…

‍ಲೇಖಕರು avadhi

December 6, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

6 ಪ್ರತಿಕ್ರಿಯೆಗಳು

 1. mauni

  Canada dallidda ashtu dinavU kelasada ottaDada naDuve AVADHI yannu bahaLa miss mADikonDe.
  Chetana sogasaagi bareyuttAre. Bheeshmana oLatOTi heegU idditE?
  ChennAgide.

  ( Chetana avara ankaNa barahagaLa sangrahavideyE? iddare dayaviTTu elli siguvudendu tiLisi.)

  ಪ್ರತಿಕ್ರಿಯೆ
 2. neelanjana

  ಚೆನ್ನಾಗಿದೆ – ಭೀಷ್ಮನ ಕಾಯುವಿಕೆಯನ್ನು ಚೆನ್ನಾಗಿ ತೋರಿಸಿದ್ದೀರಿ.

  ಅಂದಹಾಗೆ, ಅಂಬೆ ಕಾಶಿಯ ಸುಂದರಿಯಲ್ಲವೆ;) ?

  -ನೀಲಾಂಜನ

  ಪ್ರತಿಕ್ರಿಯೆ
 3. chetana

  kShamisi… idu pramaadavE sari. Ambe Kashiya sundariyE haudu.
  Dhanyavaada.

  – Chetana.

  Avadhi balagakke…
  dayavittu nanna tappoppigeyannu prakatisi.
  Preetiyinda,
  Chetana

  ಪ್ರತಿಕ್ರಿಯೆ
 4. chetana thirthahalli

  Pls. deleat this post after copiying the article.
  In ofc., gmail doesn’t open, and no time to go brousing centre.

  – ಭಾಮಿನಿ ಷಟ್ಪದಿ –

  “ಹೆಂಗಸರಿಗೇನು? ಮೈ ಮಾರಿಯಾದರೂ ಜೀವನ ಮಾಡ್ತೀರಿ. ಕಷ್ಟವೆಲ್ಲ ನಮ್ಗೇ…!”
  ಅಂವ ಎಂಜಲು ಹಾರಿಸುತ್ತ ಒದರುತ್ತಿದ್ದರೆ, ಅವಳು ಬಾಯಿ ಹೊಲಿದುಕೊಂಡವರಂತೆ ಕುಂತಿದ್ದಳು.
  ತಾತ್ಸಾರ ಹೆಚ್ಚಿ ಉಮ್ಮಳಿಕೆ ಬಂದು ಸೆರಗೊತ್ತಿಕೊಂಡು ಕುಸಿದಳು.

  * * *

  ಅಂವ ಅಂದ ಹಾಗೆ ಅವಳು ಮೈ ಮಾರಿದ್ದೇನೋ ಹೌದು. ಆದರೆ, ಇಡಿಯ ದೇಹವನ್ನಲ್ಲ, ಗೇಣು ಹೊಟ್ಟೆಯನ್ನ.
  ಅಷ್ಟಕ್ಕೂ ಅದನ್ನ ಹಾಗೆ ಬಿಕರಿಗಿಟ್ಟಿದ್ದು ಅವನೇ.
  ಮಗು ಹೆರಲು ಹೆದರುತ್ತಿದ್ದ ನಾಜೂಕಿನ ಹೆಂಡತಿಯನ್ನ ಶ್ರೀಮಂತನೊಬ್ಬ ಆಸ್ಪತ್ರೆಗೆ ಕರಕೊಂಡು ಬಂದಿದ್ದ.
  ಅಲ್ಲೇ ವಾರ್ಡ್ ಬಾಯಾಗಿದ್ದ ಇಂವ ಹೆಂಡತಿಯ ಬಸಿರನ್ನೇ ಬಾಡಿಗೆಗಿಟ್ಟು ವ್ಯವಹಾರ ಕುದುರಿಸಿದ.
  ಆ ಗಂಡ-ಹೆಂಡತಿಯದ್ದನ್ನೆಲ್ಲ ಟೆಸ್ಟ್ ಟ್ಯೂಬಿಗೆ ಸುರಿದ ಡಾಕ್ಟರು ಅದೇನೇನೋ ಮಾಡಿ ಅಂತೂ ಅವಳ ಹೊಟ್ಟೆಗೆ ಬಿಟ್ಟರು.

  ಮನೆಯಲ್ಲಿ ಹಬ್ಬ! ಹಾಲಲ್ಲಿ ಕೈತೊಳೆಯುವುದು ಅಂದರೆ ಇದೇ… ಅಂವ ಕುಣಿದಾಡಿಬಿಟ್ಟ.
  ಮೂರರ ಮಗನ ಕಣ್ಣುತುಂಬಾ ಸೇಬುಸೇಬು. ಕೆಲಸದವಳ ಕೆಲಸಕ್ಕೂ ಒಬ್ಬ ಕೆಲಸದಾಳು!
  ಹೆಂಡತಿಯ ಬಯಕೆ ನೆವದಲ್ಲಿ ಜೀವಮಾನದ ಆಸೆಯೆಲ್ಲ ತೀರಿಸಿಕೊಂಡ ಅವನು.
  ಅವಳು ಮಾತ್ರ ಮೂಲೆ ತಡಕುತ್ತ ಸೆರಗಿನ ತುದಿ ಹಿಡಿದು ಸೊರಗುಟ್ಟುತ್ತಿದ್ದಳು, ” ಈ ಮಗು ನನಗೆ ದಕ್ಕುವುದಿಲ್ಲವಲ್ಲ!?”

  * * *

  ಸುಖದ ಒಂಭತ್ತು ತಿಂಗಳಿಗೆ ಒಂಭತ್ತೇ ನಿಮಿಷ. ಸರಕ್ಕನೆ ಸರಿದುಹೋಗಿತ್ತು ಕಾಲ.
  ಕೈಸೋಲುವ ಬೆಣ್ಣೆಮಗು, ಮೈತುಂಬಿ ನಿಂತಿತ್ತು.
  ಮಗ್ಗುಲಾಗಿ ಮೊಲೆಯೂಡಬೇಕು… ನಾಜೂಕುಗಿತ್ತಿ ಸಣ್ಣಗೆ ಚೀರಿದಳು. “ಅಯ್ಯೋ! ಇನ್ಫೆಕ್ಷನ್ ಆದೀತು!”
  ಒಂಭತ್ತು ತಿಂಗಳು ಹೊತ್ತ ಹೊಟ್ಟೆಯಿಂದ ಆಗದ್ದು, ಹೊಸ ಹಾಲಿಂದ ಆಗುತ್ತೆ. ಬಡತನ ಹೊಲೆಯಲ್ಲವೇ!?
  ಮಗುವನಪ್ಪಿದ ಗಂಡ- ಹೆಂಡತಿ ಕಾನೂನಿನ ಹಾಳೆಗಳಲ್ಲಿ ಎಲ್ಲೆಲ್ಲೋ ಸೈನು ಹಾಕಿಸಿಕೊಂಡರು.
  ” ಈ ಮಗುವಿನೊಂದಿಗೆ ನಾನು ಯಾವ ಬಗೆಯ ಸಂಬಂಧವನ್ನೂ ಇರಿಸಿಕೊಳ್ಳುವುದಿಲ್ಲ” – ಸಧ್ಯ! ಅವಳಿಗೆ ಕಾಣದಷ್ಟು ನೀರು ತುಂಬಿತ್ತು ಕಣ್ಣಲ್ಲಿ!!
  ಅಂವ ಮಾತ್ರ ಕೊಟ್ಟದ್ದು ಸಾಲದೆಂದು ಚೌಕಶಿ ನಡೆಸುತ್ತ, ಹಣಪೀಕುತ್ತ, ಸತಾಯಿಸುತ್ತ ನಿಂತುಬಿಟ್ಟಿದ್ದ.

  * * *

  ದುಡ್ಡಿಲ್ಲದ್ದು ಬಡತನವಲ್ಲವಂತೆ. ಇದ್ದ ದುಡ್ಡು ಇಲ್ಲವಾಗುವುದೇ ಬಡತನವಂತೆ!
  ಹೊರಟಲ್ಲಿಗೇ ಬಂದು ಸೇರಿತ್ತು ಸಂಸಾರ. ಮನೆ ಹಡದಿಗೆ ಏನೊಂದೂ ಸಾಲದೀಗ.
  ಅವನಿಗೋ, ದುಡ್ಡಿನ ರುಚಿಹತ್ತಿಹೋಗಿತ್ತು. ಅವನ ಹಪಹಪಿಗೆ ಅವಳ ಸಿಡುಕು.

  ಕೈಲಾಗದ ಗಂಡಸಿಗೆ ಮೈಯೆಲ್ಲ ಪೌರುಷ!
  ಅದಕ್ಕೇ, ಅರಚುತ್ತಿದ್ದಾನೆ ಈಗ, “ಹೆಂಗಸರಿಗೇನು? ಮೈ ಮಾರಿಯಾದರೂ…”

  ಪ್ರತಿಕ್ರಿಯೆ
 5. basavakumar t.n

  BHEESHMANA BAGGE BAREDADDU NIJAKKU CHENNAGIDE,MAHABHARATADA BAGGE YELLARIGU ONDU SELETAVIDDE IRUVUDU ,HAAGU YELLARIGU IRUVA ABHIPRAYAGALU NIDAANAVAAGI BERE BERE NILUVAGALLANNU TEGEDU KOLLUTTIDEYENO ANNISUTTIDE.CHETANA KANNADA BHASHE BALAKE ,HIDITA CHENNAGIDE,BAREYUTTIRE HEEGENE.
  BASAVKUMAR,MANGALORE

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: