ಕಾಯ್ಕಿಣಿಗೆ ಕುಸುಮಾಗ್ರಜ ಪ್ರಶಸ್ತಿ

ಜಯಂತ್ ಕಾಯ್ಕಿಣಿ ಅವರಿಗೆ ಪ್ರೀತಿಯ ಅಭಿನಂದನೆ. ಸದಾ ಉತ್ಸಾಹದ ಬುಗ್ಗೆ ,ಭಾಷೆಯನ್ನು ಮಾತು ಮತ್ತು ದೇಹದ ಮೂಲಕ ಆವಾಹಿಸಿಕೊಂಡು ಬಳಸುವ ಕವಿ ಕತೆಗಾರ ಕಥನದ ಸೊಗಸುಗಾರ ಜಯಂತ್ ಗೆ ಇನ್ನೊಂದು ಚಿಲುಮೆ ಈ ಪ್ರಶಸ್ತಿ.
ಇದರಲ್ಲಿ ಭಾಗಿ ಆಗಿರುವ ಯಶವತರಾವ್ ಚವಾನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು ದೂರಶಿಕ್ಷಣದ ಸಾಧನೆಯಲ್ಲಿ ದೇಶದ ಒಟ್ಟು ೧೩ ಮುಕ್ತ ವಿವಿಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ.
ನಾನು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿದ್ದಾಗ ನಾಸಿಕ್ ನಲ್ಲಿ ಇರುವ ಈ ಮುಕ್ತ ವಿವಿಯನ್ನು ಸಂದರ್ಶಿಸಿ ಅಧ್ಯಯನ ಮಾಡಿ ತುಂಬಾ ಅನುಭವ ಪಡೆದಿದ್ದೆ.ಆಗ ಅಲ್ಲಿ ಕುಲಪತಿ ಆಗಿದ್ದ ರಾಜನ್ ವೆಳುಕರ್ ಅವರು ದೇಶದಲ್ಲಿ ದೂರಶಿಕ್ಷಣದ ಅವಕಾಶ ಮತ್ತು ಗುಣಮಟ್ಟಕ್ಕಾಗಿ ನಮ್ಮೊಂದಿಗೆ ಸಕ್ರಿಯವಾಗಿ ಕೆಲಸಮಾಡಿದ್ದರು.
ಅಂತಹ ನಿಜವಾದ ಮುಕ್ತ ವಿವಿಯ ಸಹಯೋಗದ ಪ್ರಶಸ್ತಿ ನಮ್ಮ ಕಾಯ್ಕಿಣಿ ಅವರಿಗೆ ಬಂದದ್ದು ಇನ್ನಷ್ಟು ಅಭಿಮಾನದ ಸಂಗತಿ.
-ಬಿ ಎ ವಿವೇಕ ರೈ

‍ಲೇಖಕರು avadhi

March 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

13 ಪ್ರತಿಕ್ರಿಯೆಗಳು

 1. bavivekrai

  ಜಯಂತ್ ಕಾಯ್ಕಿಣಿ ಅವರಿಗೆ ಪ್ರೀತಿಯ ಅಭಿನಂದನೆ. ಸದಾ ಉತ್ಸಾಹದ ಬುಗ್ಗೆ ,ಭಾಷೆಯನ್ನು ಮಾತು ಮತ್ತು ದೇಹದ ಮೂಲಕ ಆವಾಹಿಸಿಕೊಂಡು ಬಳಸುವ ಕವಿ ಕತೆಗಾರ ಕಥನದ ಸೊಗಸುಗಾರ ಜಯಂತ್ ಗೆ ಇನ್ನೊಂದು ಚಿಲುಮೆ ಈ ಪ್ರಶಸ್ತಿ.ಇದರಲ್ಲಿ ಭಾಗಿ ಆಗಿರುವ ಯಶವತರಾವ್ ಚವಾನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು ದೂರಶಿಕ್ಷಣದ ಸಾಧನೆಯಲ್ಲಿ ದೇಶದ ಒಟ್ಟು ೧೩ ಮುಕ್ತ ವಿವಿಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ.ನಾನು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿದ್ದಾಗ ನಾಸಿಕ್ ನಲ್ಲಿ ಇರುವ ಈ ಮುಕ್ತ ವಿವಿಯನ್ನು ಸಂದರ್ಶಿಸಿ ಅಧ್ಯಯನ ಮಾಡಿ ತುಂಬಾ ಅನುಭವ ಪಡೆದಿದ್ದೆ.ಆಗ ಅಲ್ಲಿ ಕುಲಪತಿ ಆಗಿದ್ದ ರಾಜನ್ ವೆಳುಕರ್ ಅವರು ದೇಶದಲ್ಲಿ ದೂರಶಿಕ್ಷಣದ ಅವಕಾಶ ಮತ್ತು ಗುಣಮಟ್ಟಕ್ಕಾಗಿ ನಮ್ಮೊಂದಿಗೆ ಸಕ್ರಿಯವಾಗಿ ಕೆಲಸಮಾಡಿದ್ದರು.ಅಂತಹ ನಿಜವಾದ ಮುಕ್ತ ವಿವಿಯ ಸಹಯೋಗದ ಪ್ರಶಸ್ತಿ ನಮ್ಮ ಕಾಯ್ಕಿಣಿ ಅವರಿಗೆ ಬಂದದ್ದು ಇನ್ನಷ್ಟು ಅಭಿಮಾನದ ಸಂಗತಿ. ವಿವೇಕ ರೈ

  ಪ್ರತಿಕ್ರಿಯೆ
 2. d.s.ramaswamy

  ಬೆಳಿಗ್ಗೆ ಕನ್ನಡಪ್ರಭದಲ್ಲಿ ಸುದ್ದಿ ಓದಿದಾಗಿಂದಲೂ ಶುಭಾಷಯ ಹೇಳಲು ನಿಮ್ಮ ಮೊಬೈಲ್ ಗೆ ರಿಂಗ್ ಮಾಡಿದರೆ ಅದು ಬದಲಾಗಿದೆ! ಅವಧಿ ಮೂಲಕ ಜಯಂತ್ ನಿಮಗೆ ಶುಭಾಷಯ ಹೇಳುತ್ತಿದ್ದೇನೆ.ನಿಮ್ಮ ಹೊಸ ನಂಬರು ಕಳಿಸುತ್ತೀರಲ್ಲ?-ಡಿ.ಎಸ್.ರಾಮಸ್ವಾಮಿ

  ಪ್ರತಿಕ್ರಿಯೆ
 3. HSV

  jayanthge prItiya shubhaashaya. mUvattu varShada geLeya. prItiya kavi. kannadada mahatvada kategaara. tuMba saMtOOShavaagide.
  HSV

  ಪ್ರತಿಕ್ರಿಯೆ
 4. k.puttaswamy

  ಸದಾ ಸುಖಿಯಂತೆ ಕಾಣುವ, ನಿರಂತರ ಉತ್ಸಾಹ,ತುಂಟತನ ಮತ್ತು ಕಾಡುವ ಸಾಲುಗಳ ಸರದಾರನಿಗೆ ತಕ್ಕ ಸನ್ಮಾನ. ಅವರ ಬದುಕು ಮತ್ತಷ್ಟು ಯಶಸ್ಸು ಕಾಣಲಿ – ಕೆ. ಪುಟ್ಟಸ್ವಾಮಿ

  ಪ್ರತಿಕ್ರಿಯೆ
 5. Meera

  ತುಂಬಾ ಖುಷಿಯಾಯ್ತು. ಜಯಂತ್‍ರಿಗೆ ಶುಭಾಶಯಗಳು.
  ~ಮೀರ.

  ಪ್ರತಿಕ್ರಿಯೆ
 6. sunandakadame

  ಆನುದಾದಾ, ಅಕ್ಕರೆಯ ಅಭಿನಂದನೆ ನಿನಗೆ.
  -ಸುನಂದಾ

  ಪ್ರತಿಕ್ರಿಯೆ
 7. jayant kaikini

  akkareya avadhi balagakke nenapu, dhanyavaadagalu.ee anireekshitha mannanege, nimmellara aptha abhinandanege arhanagalu yathnisuve. – jayant

  ಪ್ರತಿಕ್ರಿಯೆ
 8. chandrashekhar vastrad

  jayantge arha prashasti sandide. kannadada gou rva hehhisida mitranige abhinandanegalu

  ಪ್ರತಿಕ್ರಿಯೆ
 9. arundati

  ಕುಸುಮಾಗ್ರಜ .. ಮೊಟ್ಟ ಮೊದಲ ಪುರಸ್ಕೃತ ..
  ಅಭಿನಂದನೆಗಳು. ತುಂಬಾ ಅಕ್ಕರೆಯ ಅಭಿನಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: