ಕಾರಂತ ಬ್ಯಾಲೆ : ಹೆಚ್ಚಿನ ಮಾಹಿತಿ

-ಜಯಲಕ್ಷ್ಮೀ ಪಾಟೀಲ್. ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳು ಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ. ಈ ವೆಬ್ ಸೈಟಿನ ಮೂಲಕ ಶಿವರಾಮ ಕಾರಂತರ ಸುಮಾರು ನಲವತ್ತು ಸಾವಿರ ಪುಟಗಳಷ್ಟು ಸಾಹಿತ್ಯ, ಹತ್ತು ಸಾವಿರ ಪುಟಗಳಷ್ಟು ಹಸ್ತಪ್ರತಿಗಳು, ವಿಡಿಯೋಗಳು, ಚಿತ್ತಗಳು ಜಗತ್ತಿನೆಲ್ಲೆಡೆ ಉಚಿತವಾಗಿ ವೀಕ್ಷಿಸಲು ಹಾಗೂ ಓದಲು ಜಗತ್ತಿನೆಲ್ಲೆಡೆ ಲಭ್ಯವಾಗಲಿವೆ. ಈ ವೆಬ್ ಸೈಟಿನ ಜೊತೆ ಶಿವರಾಮ ಕಾರಂತರ ವಿಶಿಷ್ಟ ಹಾಗೂ ಜಗದೇಕ ಸೃಷ್ಟಿಯಾದ ಯಕ್ಷಗಾನ ಬ್ಯಾಲೆಯ ಸಿಡಿಗಳು ಅಭಿಮಾನಿಗಳಿಗೆ ಲಭ್ಯವಿವೆ. ಈ ಸಿ.ಡಿಗಳು ಅತ್ಯಂತ ಅಪರೂಪದವುಗಳಾಗಿದ್ದು ಜಗತ್ತಿನ ಯಾವ ಭಾಗದಲ್ಲೂ ಲಭ್ಯವಿಲ್ಲ. ಕಾರಂತರ ವೆಬ್ ಸೈಟ್ ನ ವಿನ್ಯಾಸದ ಹಾಗೂ ಅಭಿವೃದ್ಧಿಯ ವೆಚ್ಚಕ್ಕಾಗಿ ಈ ಸಿಡಿಗಳ ಮಾರಾಟದಿಂದ ಬರುವ ಸಂಪೂರ್ಣ ಹಣವನ್ನು ವಿನಿಯೋಗಿಲು ಉದ್ದೇಶಿಲಾಗಿದೆ. ಸಿಡಿಗಳಲ್ಲಿ ಸ್ವತಃ ಕಾರಂತರೇ ನಿರ್ದೇಶಿಸಿದ ಹಾಗೂ ವಿವರಣೆ ನೀಡಿದ ಯಕ್ಷಗಾನ ಬ್ಯಾಲೆಗಳ ವಿಡಿಯೋ ಇವೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಸಿಡಿಗಳಲ್ಲಿರುವ ವಿಡಿಯೋಗಳು ಹೀಗಿವೆ, ೧. ರಾಮಾಯಣ ೨. ಗಯನ ಚರಿತ್ರೆ ೩. ಕನಕಾಂಗಿ ಕಲ್ಯಾಣ. ೪. ಚಿತ್ರಾಂಗದಾ. ೫. ನಳದಮಯಂತಿ. ಈ ಸಿಡಿ ಗಳು ಅತ್ಯಂತ ನಿಯಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದ್ದು ಮೊದಲು ಬಂದವರಿಗೆ ಆದ್ಯತೆ ಮೇಲೆ ನೀಡಲಾಗುತ್ತದೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಒಂದು ಸೆಟ್ ನ ಬೆಲೆ ರೂ.೫೦೦/- ಮಾತ್ರ. ಸಿಡಿಗಳು ಬೇಕಿರುವ ಅಭಿಮಾನಿಗಳು  ತಮ್ಮ ವಿಳಾಸವನ್ನು ಹಾಗೂ ತಲುಪಿಸಬೇಕಾದ ಸಮಯವನ್ನು ಬರೆಯಬಹುದು. ಮನೆಗೆ ಸಿಡಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.  [email protected] ಗೆ ಮೇಲ್ ಮಾಡಿ http://www.shivaramkarantha.in/]]>

‍ಲೇಖಕರು avadhi

October 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This