ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ “ಅಭ್ಯಾಸ”

ಬೆಳ್ಳಾಲ ಗೋಪಿನಾಥ ರಾವ್

ಕೃಪೆ: ಕನ್ನಡ ಬ್ಲಾಗರ್ಸ್

ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ “ಸ್ವಸ್ತಿಶ್ರೀ” ಯಲ್ಲಿ ಹಾಜರ್. ಭರ್ಜರಿ ಉಪಹಾರ ಸ್ವೀಕರಿಸಿ ಮತ್ತೊಮ್ಮೆ ಎಚ್ಚೆಸ್ವಿಯವರ ಎರಡನೇ ಅಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಿಕೊಂಡೆವು. ಅವರ ಅಖ್ಯಾನದ ಸೂಜಿಗಲ್ಲಿನ ಸೆಳೆತವೊಂದೆಡೆಯಾದರೆ , ಈ ಸಾರಿ ನಾನು ತಂದಿದ್ದ-ನನ್ನ ಟಾಕ್ ಬುಕ್ ಮತ್ತು ಕ್ಯಾಮರಾ – ಗುರುವರ್ಯರ ವಾಣಿಯನ್ನು ಸಾಕ್ಷಿಯಾಗಿಸಲು, ಅದೆಷ್ಟು ಪರಿಣಾಮಕಾರಿಯಾಗಿರಿಸಿದೆ ಎಂದು ನೀವುಗಳೇ ಹೇಳಬೇಕು. ನಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ನಾವೆಲ್ಲಾ ಮುಳುಗಿ ಹೋಗುತ್ತಾ ಯಾಂತ್ರಿಕವಾಗಿ , ನಮ್ಮ ಕರ್ತವ್ಯಗಳನ್ನೂಅದರಿಂದಾಗಿ , ನಮ್ಮ ನಮ್ಮನ್ನೇ ಮರೆಯುತ್ತಾ ಬದುಕುವ ಈ ದಿನಗಳಲ್ಲಿ ಗುರುಗಳ ಈ “ಅಭ್ಯಾಸ” ನಮ್ಮನ್ನು ಒಂದು ದಿನದ ಮಟ್ಟಿಗಾದರೂ ಮಾನವರನ್ನಾಗಿಸಿ ಬಿಡುವತ್ತ ಸೂಜಿಗಲ್ಲಿನಂತೆ ಆಕರ್ಷಿಸಿ
ಬಿಡುತ್ತದೆ. ಅವರೇ ತಿಳಿಸಿದಂತೆ ಈ ಒಂದು ದಿನದ ಪುಳಕ ನಮ್ಮೆಲ್ಲರನ್ನೂ ಕಾಲಯಾನದಲ್ಲಿ ಕನ್ನಡದ ಒಂದು ಸಾವಿರ ವರ್ಷದ ಹಿಂದೆ ತಲುಪಿಸಿ ಧನ್ಯರನ್ನಾಗಿಸಿ ಬಿಟ್ಟಿತು.

ನಾಡೋಜ ಪಂಪ ಸರಿ ಸುಮಾರು ಹತ್ತನೇ ಶತಮಾನದ ಕವಿ.( ೯೦೨ ರಿಂದ ೯೪೬) ಆಗೆಲ್ಲಾ ಪುರಾಣ, ಕಾವ್ಯಗಳು ಸಾಮಾನ್ಯ ಜನರ ಕಿವಿಗೂ ಬಿಳುತ್ತಿರಲಿಲ್ಲ, ಅದೇನಿದ್ದರೂ ರಾಜಾಶ್ರಯಗಳಲ್ಲಿ ಮಾತ್ರ.ಆದುದರಿಂದಲೇ ಜನಸಾಮಾನ್ಯರಿಂದ, ಅವರ ಚಿತ್ರಣಗಳು ಆರಿಸಿ,ಶೋಧಿತಗೊಂಡು ಹೊರಬಂದವುಗಳಾಗಿರುತ್ತಿದ್ದವು.ರಾಜ ಮಹಾರಾಜರುಗಳ ಮುಖವಾಣಿಗಳೇ ಆಗಿರುತ್ತಿದ್ದವು.ನಾಡೋಜ ಪಂಪ ಹಿಂದೂ ರಾಜ ೨ ನೆಯ ಅರಿಕೇಸರಿಯ ಅಸ್ಥಾನದಲ್ಲಿ ಒಬ್ಬ ಯೋಧ..ಈತನ ತಂದೆ ಅಭಿರಾಮ ದೇವ .( ಅಥವಾ ಭೀಮಪ್ಪಯ್ಯ, ತಾಯಿ ಅಬ್ಬನಬ್ಬೆ) ಮೂಲತ ಭ್ರಾಹ್ಮಣ,ನಂತರ ಜೈನ ಧರ್ಮ ಸ್ವೀಕರಿದ, ಈತನ ತಾಯಿ ಅನ್ನಿಗಿರಿ , ಮೂಲತ ಕರ್ನಾಟಕದವರು,
ಪಶ್ಚಿಮ ಘಟ್ಟದ ಬನವಾಸಿ, ದಟ್ಟ ಕಾಡುಗಳು ತುಂಬಿ ಹರಿವ ನದಿ, ಕೊಳ್ಳ,ಜಲಪಾತ, ಹಸುರು ಗಳಲ್ಲೇ ಕಳೆದ ಬಾಲ್ಯ ಪಂಪನ ಮೇಲೆ ಪ್ರಭಾವ ಬೀರಿದ್ದು ಅವನ ಕಾವ್ಯಗಳಲ್ಲಿ ಹೇರಾಳವಾಗಿ ಕಂಡು ಬರುತ್ತದೆ.  ಆರಂಕುಶವಿಟ್ಟೋಡಮ್ ನೆನೆವುದೆನ್ನ ಮನವು ಬನವಾಸಿ ದೇಸವಮ್ ಮತ್ತು  ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವದು ಬನವಾಸಿ ದೇಸದೋಳ್” ಆತನ ಪ್ರಾವೀಣ್ಯತೆ ಸಂಗೀತ, ಸಾಹಿತ್ಯ, ಕಲೆ, ವಾಣಿಜ್ಯ,ಮತ್ತು ವೈದ್ಯಕೀಯ, ನೃತ್ಯ, ಮತ್ತು ಕಾಮಸೂತ್ರ ಗಳಂತಹ ಪ್ರತಿಯೊಂದೂ ಕ್ಷೇತ್ರಗಳಲ್ಲಿದ್ದು, ಅವನ ಕಾವ್ಯಗಳಲ್ಲಿ ಬಿಂಬಿಸಿ ಅವನ ಕೃತಿಗಳನ್ನು ಮಹತ್ತರವಾಗಿಸಿವೆ. ಪಂಪನ ಮೊದಲೂ ಸಾಕಷ್ಟು ಕವಿಗಳಿದ್ದರೂ .ಅವನ ಕಾವ್ಯದ ಗುಣ ವಿಶೇಷಣ ಗಳು ಬೇರೆ ಯಾವುದೇ ಕಾವ್ಯದಲ್ಲಿರಲಿಲ್ಲ,ಕಾಲ ದೇಶದ ಐಕ್ಯತೆ ಅವನ ಬರವಣಿಗೆಯಲ್ಲಿ ಸಾಧ್ಯವಾಗುತ್ತದೆ, ಅದಕ್ಕೆಂದೇ ಅವನನ್ನು “ಆದಿಕವಿ” ಎಂದು ಕರೆಯುವರು.

ಪಂಪನ ಗುರು ಜೈನ ಮುನಿ ಶ್ರವಣ ಬೆಳಗೊಳದ ಜಿನ ಸೇನಾಚಾರ್ಯರ ಪೂರ್ವ ಪುರಾಣವನ್ನು ಆಧರಿಸಿ ತನ್ನ ೩೯ ನೇ ವಯಸ್ಸಿನಲ್ಲಿ ಆರೇ ತಿಂಗಳಲ್ಲಿ ೧೬ ಅಶ್ವಾಸಗಳುಳ್ಳ “ಆದಿ ಪುರಾಣ” ಬರೆದ .ಪಾಪ ಪುಣ್ಯಗಳ ಚಕ್ರದಿಂದ ಹೊರಬಂದಾಗ ಲೇ “ಕರ್ಮ ಕ್ಷಯ” ಇದೇ ಜೈನ ಧರ್ಮದಲ್ಲಿ ನ ಕೊನೆಯ ಅವಸ್ಥೆ.ಮುಖ್ಯತ ಇಡೀ ಪುರಾಣ ಆದಿದೇವ, ವೃಷಭ ದೇವ ಯಾ ಪುರುದೇವ ನದ್ದಾಗಿದ್ದು ೩ ಮಜಲುಗಳಲ್ಲಿದೆ. ಆತನ “ಭವಾವಳಿ” ಮೊದಲನೆಯದು ಅವನ ಹಿಂದಿನ ಜನ್ಮ ಜನ್ಮಾಂತರದ ಕಥೆ.ಎರಡನೆಯದು ಆದಿದೇವನ ಜೀವನ ಚರಿತ್ರೆ,ಮತ್ತು ಮೂರನೆಯ ಮಜಲು ಆತನ ಮಕ್ಕಳಾದ ಭರತ ಮತ್ತು ಬಾಹುಬಲಿ ಕಥೆಯಾಗಿದೆ.ಜೀವ ವಿಕಾಸದ ಚಿತ್ರ, ಪ್ರತಿ ಮನುಷ್ಯ ದೇವನಾಗೋ ಸಾಧ್ಯತೆಯಿದೆ ಎನ್ನುವದನ್ನು ಪ್ರತಿಪಾದಿಸಿದ್ದು ಪ್ರಾಯಶ ಜೈನ ಧರ್ಮ ಮಾತ್ರ.ಪಂಪನ ಬಿರುದಾವಳಿಗಳು ಕವಿತಾ ಗುಣಾರ್ಣವ, ಮತ್ತು ಸಂಸಾರ ಸಾರೋದಯ.

ವ್ಯಾಸ ಭಾರತವನ್ನು ಆಧರಿಸಿ ವಿಕ್ರಮಾರ್ಜುನ ವಿಜಯವನ್ನೂ ಬರೆದಿದ್ದಾನೆ. ಇದು ಕವಿತ್ವದ ಇತಿಹಾಸದಲ್ಲೇ ಹೊಸ ಪ್ರಯೋಗ.ತನ್ನ ರಾಜ, ಧನಿ, ಪ್ರಿಯ ಗೆಳೆಯನಾದ ಅರಿಕೇಸರಿಯನ್ನೂ ಮಹಾಭಾರತದ ಅರ್ಜುನನ್ನೂ ಸೇರಿಸಿ ವರ್ತಮಾನ ಮತ್ತು ಪುರಾಣಗಳೆರಡನ್ನೂ ಮೇಳೈಸಿ ನಡೆಸಿ, ಯಶಸ್ಸು ಬಿಕ್ಕಟ್ಟು ಎರಡನ್ನೂ ಪಡೆಯುತ್ತಾನೆ. ದ್ರೌಪತಿ ಮಹಾ ಭಾರತದಲ್ಲಿ ಪಾಂಡವರ ಪತ್ನಿಯಾದರೆ ಇದರಲ್ಲಿ ಅರ್ಜುನನೊಬ್ಬನ (ಅರಿಕೇಸರಿ) ಪತ್ನಿ.ಮಹಾಭಾರತದ ವಸ್ತ್ರಾಪಹರಣ ಕೂಡಾ ಇಲ್ಲಿ “ಮುಡಿಯನ್ನೆಳೆವ” ಪ್ರಕರಣ ಮಾತ್ರವಾಗುತ್ತದೆ. ಜೈನ ರಾಜರ ತತ್ಕಾಲಿಕ ಮೌಲ್ಯಗಳನ್ನು ಗೋಗೃಹಣ, ಸ್ತ್ರೀಕುಲದ ರಕ್ಷಣೆ ಮತ್ತುಯಜ್ಞ ಯಾಗಾದಿಗಳ ರಕ್ಷಣೆ ಯನ್ನು ಬಿಂಬಿಸಿ ಅದೇ ಪರಂಪರೆ ಮುಂದುವರಿಸುತ್ತಾನೆ.ಜೈನ ಧರ್ಮದಲ್ಲಿ ಅಹಿಂಸೆಯೇ ಮೂಲಮಂತ್ರವಾಗಿದ್ದರೂ ಕಾವ್ಯ ಧರ್ಮಕ್ಕಾಗಿ ಹಿಂಸೆಯನ್ನು ಬಿಂಬಿಸುವಂತಹಾ ಯುದ್ಧ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಅದಕ್ಕೆ ನ್ಯಾಯ ದೊರಕಿಸಿಕೊಡುತ್ತಾನೆ.ಜೈನ ಧರ್ಮದಂತೆ ಕೊನೆಯ ಜನ್ಮ ಮನುಷ್ಯನದ್ದಾಗಬೇಕಿದ್ದರು ತತ್ವ ಮೀರುವ ವಿಷಯವಾದ ” ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ…” ಎಂದು ಹೇಳುತ್ತಾ ಮಾನವೀಯಧರ್ಮವನ್ನು ಪ್ರತಿಪಾದಿಸುತ್ತಾನೆ. ಪಂಪನ ಕವಿತ್ವ ತನ್ನ ತನವನ್ನು ಮೀರಿ ವಿಕ್ರಮಾರ್ಜುನವಿಜಯದ ಕೊನೆಯಲ್ಲಿ ಧರ್ಮ,ನಿಯಮ, ನಿಶ್ಚಯ, ರಾಜಭಕ್ತಿಯನ್ನು ಮೀರಿ ಕರ್ಣನನ್ನು ಉತ್ತುಂಗಕ್ಕೇರಿಸುತ್ತಾ” ಕರ್ಣ ರಸಾಯನವಲ್ತೇ..” ಕರ್ಣನನ್ನೇ ನೆನೆಯಲು ಹೇಳುತ್ತಾನೆ .

‍ಲೇಖಕರು avadhi

May 31, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This