ಕಾಲಿಗೆ ಚಕ್ರ ಕನಸಿಗೆ ಕಣ್ಣು ಟೂರ್ ಟೈಮ್

– ಶ್ರೀನಿವಾಸ ಜೋಕಟ್ಟೆ

ಈ ಶ್ರೀನಿವಾಸ ಜೋಕಟ್ಟೆ ಅದ್ಯಾವಾಗ ಮುಂಬೈಯಲ್ಲಿ ಇರ್ತಾರೋ, ಅದ್ಯಾವಾಗ ಜೋಕಟ್ಟೆಗೆ ಬರ್ತಾರೋ ಗೊತ್ತಿಲ್ಲ. ಮುಂಬೈಯಲ್ಲೊಂದು ಜೋಕಟ್ಟೆ ಸೃಷ್ಟಿಯಾಗಿರುವುದಂತೂ ನಿಜ. ಶ್ರೀನಿವಾಸ ಅಂದರೆ ಯಾರಿಗೂ ಪರಿಚಯವಾಗಲಿಕ್ಕಿಲ್ಲ. ಆದರೆ ಜೋಕಟ್ಟೆ ಎಂದರೆ ಇವರದ್ದೇ ಮುಖ ಕಣ್ಣೆದುರಿಗೆ ಬರುತ್ತದೆ. ಮೊದಲು ಹೆಸರಿಗೆ ಒಂದು ಐಡೆಂಟಿಟಿ ಎಂದು ಊರಿನ ಹೆಸರನ್ನು ಹಾಕಿಕೊಂಡ ಶ್ರೀನಿವಾಸ ಇವತ್ತು ಜೋಕಟ್ಟೆ ಎಂದೇ ಪರಿಚಿತರಾಗಿರುವುದು ಗಮನ ಸೆಳೆಯುವ ಸಂಗತಿ.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಇದೆ; ಹಾಗೆಯೇ ಜೋಕಟ್ಟೆ ಬರೆಯದೆ ಬಿಟ್ಟ ವಿಷಯವಿಲ್ಲ. ಅದರಲ್ಲೂ ಮುಂಬೈಗೆ ಸಂಬಂಧಿಸಿ ಜೋಕಟ್ಟೆ ಸಾಕಷ್ಟು ಬರೆದಿದ್ದಾರೆ. ಇಲ್ಲಿ ದೂರದ ಬೆಂಗಳೂರಿನಲ್ಲಿ ಕುಳಿತು ’ಮುಂಬೈ ಬಗ್ಗೆ ಏನನ್ನಾದರೂ ಪ್ರಕಟಿಸೋಣ’ ಎಂದುಕೊಂಡರೆ ತಕ್ಷಣ ನೆನಪಾಗು ನಾಲ್ಕೈದು ಹೆಸರುಗಳಲ್ಲಿ ಜೋಕಟ್ಟೆಯವರದ್ದೂ ಒಂದು. ಅದರಲ್ಲೂ ಇತ್ತೀಚೆಗೆ ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಾಡುತ್ತಿರುವ ಜೋಕಟ್ಟೆ ಪ್ರವಾಸ ಕಥನಕ್ಕೆ ಜೋತುಬಿದ್ದು ನೋಡಿದ್ದನ್ನೆಲ್ಲ ಬರೆಯುತ್ತಿದ್ದಾರೆ. ಕಣ್ಣೋಟದ ಜತೆಗೆ, ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಓದುಗರ ಜ್ಞಾನದಾಹ ತಣಿಸುತ್ತಿದ್ದಾರೆ. ಇಲ್ಲಿರುವ ಎಲ್ಲಾ ಲೇಕನಗಳೂ ಓದಿಸಿಕೊಂಡು ಹೋಗುತ್ತವೆ. ಮಾಹಿತಿಗಳನ್ನೂ ನೀಡುತ್ತವೆ.
ಜೋಕಟ್ಟೆ ಮನಸ್ಸು ಮಾಡಿದರೆ ಇನ್ನಷ್ಟು ಚೆನ್ನಾಗಿ ಬರೆಯಬಲ್ಲರು ಎನ್ನುವುದೂ ನಿಜ.ಸಮಗ್ರ ಮಾಹಿತಿಗಳಷ್ಟೇ ಪ್ರವಾಸ ಕಥನ ಆಗುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಂಡು, ತನ್ನೊಳಗಿನ ವರದಿಗಾರ ಮತ್ತು ಕಥನಗಾರನ ನಡುವಣ ಅಂತರವನ್ನು ಎಚ್ಚರದಿಂದ ಕಾಯ್ದುಕೊಂಡರೆ ಜೋಕಟ್ಟೆ ಲೇಖಕನಾಗಿ ಇನ್ನಷ್ಟು ಎತ್ತರಕ್ಕೆ ಏರಬಹುದು. ಅವರಿಗೆ ಆ ಏಣಿ ಸಿಕ್ಕಲಿ ಎನ್ನುವುದು ನನ್ನ ನಮ್ರ ಹಾರೈಕೆ.
– ಬಿ.ಎಂ.ಹನೀಫ್
ಸಹಾಯಕ ಸಂಪಾದಕ
ಸುಧಾ ವಾರಪತ್ರಿಕೆ, ಬೆಂಗಳೂರು

‍ಲೇಖಕರು avadhi

July 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This