ಕಾವ್ಯ ನಾದದ ವಿಕ್ರಮ ವಿಸಾಜಿ

vikram-visaji-final1
ಒಂದು ಕಾಲವಿತ್ತು. ಕನ್ನಡ ಎಂ ಎ ಓದುತ್ತಿದ್ದ ಹುಡುಗನೊಬ್ಬ ಕೃಷ್ಣ ಆಲನಹಳ್ಳಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದ. ಆತ ಇಲ್ಲವಾದಾಗ ಬರೆದ ಕವಿತೆಯಲ್ಲಿ ‘ವೀರ್ಯ’ ಎಂಬ ಶಬ್ದವಿತ್ತು. ಕಲಬುರ್ಗಿಯ ವಿದ್ವಾಂಸರು ಬೆಚ್ಚಿ ಬಿದ್ದು ಕುಳಿತಿದ್ದರು. ‘ಅದೇನ್ ಬರೀತಾನ್ರಿ ಬರೀ ಹೊಲಸು’ ಎಂದು ಸ್ವತಹ ಪಾಠ ಹೇಳುತ್ತಿದ್ದ ಗುರುಗಳೇ ಹಣೆಪಟ್ಟಿಯನ್ನೂ ಕಟ್ಟಿಬಿಟ್ಟಿದ್ದರು. ಈ ಹುಡುಗ ವಿಕ್ರಮ ವಿಸಾಜಿ.
ಅಪ್ಪ ವಿ ಬಿ ವಿಸಾಜಿ ಅಧ್ಯಾಪಕರು. ಆಗಿನ ಕಾಲಕ್ಕೇ ಸಾಕಷ್ಟು ಓದಿದವರು. ಭಾಲ್ಕಿ ಶರಣರ ಚಿಂತನೆಗಳಲ್ಲಿ ಬೆಳೆದವರು. ದೂರದ ಭಾಲ್ಕಿಗೆ ಕನ್ನಡದ ಎಲ್ಲಾ ಪುಸ್ತಕಗಳನ್ನೂ ದೂರದೂರುಗಳಿಂದ ತರಿಸಿದವರು. ಮಗನಿಗೆ ಮನೆಯೇ ಮೊದಲ ಪಾಠಶಾಲೆಯಾಯಿತು. ಅಪ್ಪನ ಗರಡಿಯಲ್ಲಿ ಅರಳಿದ ಹುಡುಗ ಹಾಲುಗಲ್ಲದ ವೇಳೆಯಲ್ಲೇ ಕವನ ಸಂಕಲನದ ಮೇಲೆ ಸಂಕಲನ ಪ್ರಕಟಿಸಿದ. ಓದಲು ಕಲ್ಬುರ್ಗಿಗೆ ಬಂದದ್ದೇ ಬಂದದ್ದು. ರೆಕ್ಕೆ ಬಿಚ್ಚಿ ಆಕಾಶ ನೆಚ್ಚುವ ಕೆಲಸ ಆರಂಭವಾಯಿತು. img_62732
ವಿಕ್ರಮ ಅಪ್ಪನ ತೆಕ್ಕೆಯಿಂದ ಹೊರಬಂದು ಇನ್ನಷ್ಟು ಮತ್ತಷ್ಟು ಹೊಸತು ಕೈಗೆತ್ತಿಕೊಂಡ. ರಾಜಶೇಖರ ಹತಗುಂದಿ, ಚಿತ್ರ ಶೇಖರ ಕಂಠಿ, ಅಮರೇಶ ನುಗಡೋಣಿ ಅವರ ಸಹವಾಸ ಈತನ ಓದಿಗೆ ಇನ್ನಷ್ಟು ಕುಮ್ಮಕ್ಕು ಕೊಟ್ಟಿತು. ಆ ಸಂದರ್ಭದಲ್ಲಿಯೇ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಕಣ್ಣಿಗೆ ಬಿದ್ದ ಹುಡುಗ ‘ತಮಾಷಾ’ ಮೂಲಕ ಅಕ್ಷರ ಜಗತ್ತಿಗೆ ನಡೆದೇಬಿಟ್ಟ.
ವಿಕ್ರಮನಿಗೆ ಕಾವ್ಯ ಒಂದು ಗುಂಗು. ಡಾಕ್ಟರೇಟ್ ಗಾಗಿ ಆತ ಕೈಗೆತ್ತಿಕೊಂಡದ್ದು ಕಂಬಾರರ ಕಾವ್ಯವನ್ನು. ಕಂಬಾರರ ನಾಟಕಗಳ ಬಗೆಗಿನ ಕೃತಿಯೊಂದು ಈಗಾಗಲೇ ‘ಸಂಚಯ’ ಪ್ರಕಟಿಸಿದೆ. ಈ ಪುಸ್ತಕಕ್ಕೆ ವಿಕ್ರಮ್ ಬರೆದ ಸಂಪಾದಕೀಯ ಮಾತುಗಳು ಕನ್ನಡಕ್ಕೆ ಒಬ್ಬ ಗಂಭೀರ ವಿಮರ್ಶಕನ ಆಗಮನವನ್ನು ಸಾರಿದೆ.
ವಿಕ್ರಮ್ ಸದ್ಯ ಕಲ್ಬುರ್ಗಿ ವಿವಿಯ ರಾಯಚೂರು ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ . ಸಾಲಿ, ಕಂಠಿ, ಋಗ್ವೇದಿ, ಅರುಣ, ಸತೀಶ್ ಪಾಟೀಲ, ತುರುವೀಹಾಳ ಚಂದ್ರು ಹೀಗೆ ಗೆಳೆಯರ ಸಂಗಕ್ಕೆ ಸದಾ ಹಾತೊರೆಯುವ ಈತ ಕನ್ನಡದಲ್ಲಿ ಒಳ್ಳೆಯ ಮನಸ್ಸಿನ ಒಂದು ಕೂಟಕ್ಕೆ ಕಾರಣವಾಗಲಿ.

‍ಲೇಖಕರು avadhi

December 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ರವೀಂದ್ರ ಬಟಗೇರಿ

  ನಾನು ವಿಕ್ರಮ್ ಸರ್ ಅವರಿಂದ ತುಂಬಾ ಪ್ರಭಾವಿತನಾಗಿದ್ದೇನೆ ಅವರ ಪಾಠಮಾಡುವ ಶೈಲಿ,ವಿದ್ಯಾರ್ಥಿಗಳೊಂದಿಗೆ ಅವರು ನಡೆಸುವ ಚರ್ಚೆಗಳು ಮತ್ತೆ ಅವರ ಕವನ ಓದುವ ಬಗೆ ಎಲ್ಲವು ನನಗೆ ಅವರಿಂದ ಆಕರ್ಷಿತನನ್ನಾಗಿ ಮಾಡಿದೆ.ನನಗೆ ಅವರ ಶಿಷ್ಯನಾಗಿ ಕಲಿಯಲು ಸಿಕ್ಕಿರುವ ಅವಕಾಶ ನನ್ನ ಒಂದು ಲಕ್ ಅಂತಲೇ ತಿಳಕೊಂಡಿದಿನಿ

  ಪ್ರತಿಕ್ರಿಯೆ
 2. rajreddy patil

  Hi
  I know Visaji since my post graduation days in Gulbarga University, GULBAGA. We had stayed in same hostel with adjoining corridors, where Visaji room no. was 1 out of 200 rooms. My dear friend please keeps writing in our own language of Hyd-Kar tongue touching our hearts. Feeling proud to be his hostel mate and wish him all the best.
  Warm wishes,
  Rajreddy Patil,
  Sedam, Bangalore

  ಪ್ರತಿಕ್ರಿಯೆ
 3. ಮಹಾಂತೇಶ ಪಾಟೀಲ

  ವಿಕ್ರಮ ವಿಸಾಜಿ ಸರ್ ನನ್ನ ಪಿಎಚ್.ಡಿ ಮಾರ್ಗದರ್ಶಕರು ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆ ಅನ್ನಿಸುತ್ತದೆ. ಅವರು ನನಗೆ ಕತೆ, ಕವನ, ಕಾದಂದರಿ ಸೂಕ್ಷ್ಮತೆಗಳನ್ನು ಗ್ರಹಿಸಿ ವಿಮರ್ಶಿಸಬೇಕೆಂದು ಹೇಳುವ ಮಾತು ನಂಗಿಷ್ಟಾ.. ಅವರ ಪಾಠ ಕೇಳುವಾಗ ವಿಷಯವನ್ನು ಸರಳವಾಗಿ, ಅಷ್ಟೇ ಆತ್ಮೀಯವಾಗಿ ನಿರೂಪಿಸುತ್ತರೆ.ಮತ್ತೆ ಪಾಠದ ನಡು ನಡುವೇ ಹಾಸ್ಯದ ಬುಗ್ಗೆಗಳು ಕಡಿಮೆ ಇರಲ್ಲಾ..!

  ಪ್ರತಿಕ್ರಿಯೆ
 4. ವೀರಣ್ಣ ಮಂಠಾಳಕರ್

  ಡಾ. ವಿಕ್ರಮ ಸರ್, ಅವರು ಬೀದರ ಜಿಲ್ಲೆಯ ಒಬ್ಬ ಪ್ರತಿಭಾವಂತ ಸಾಹಿತಿಗಳಲ್ಲಿ ಗಂಭೀರ ಸಾಹಿತ್ಯ ಚಿಂತಕರಾಗಿದ್ದಾರೆ. ಉತ್ತಮ ಕಾವ್ಯ ರಚನೆಗಳೊಂದಿಗೆ ಗಮನ ಸೆಳೆಯುವ ಇವರು, ಇವರಲ್ಲಿರುವ ವಿಮರ್ಶಾತ್ಮಕ ದೃಷ್ಠಿಕೋನ ಆಲೋಚನೆಗಳು ನನ್ನಂಥವರಿಗೆ ತುಂಬಾ ಮೆಚ್ಚುಗೆಯಾಗುತ್ತದೆ. ಅಷ್ಟೇ ಅಲ್ಲದೇ ವಿಕ್ರಮ ವಿಸಾಜಿಯವರು ನಮ್ಮೂರಿನ ಪಕ್ಕದ ಕೋಹಿನೂರು ಗ್ರಾಮದವರೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಪ್ರತಿಯೊಬ್ಬ ಸಾಹಿತ್ಯಾಸಕ್ತರಿಗೆ ಮಾದರಿಯಾಗಿ ನಿಲ್ಲಬಲ್ಲ ಡಾ. ವಿಕ್ರಮ ವಿಸಾಜಿ ನನ್ನ ಆತ್ಮೀಯರಲ್ಲಿ ಒಬ್ಬರಾಗಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇಂತಹ ಕವಿ, ವಿಮರ್ಶಕ ಅದೇಷ್ಟೇ ಎತ್ತರಕ್ಕೇರಿದರೂ ಹುಟ್ಟಿ ಬೆಳೆದ ಮಣ್ಣನ್ನು ಮರೆಯದೆ ಮತ್ತೆ ಮತ್ತೆ ನೆನಪಾಗಿಸಿಕೊಳ್ಳುತ್ತಾರೆ. ಇದು ಅವರಲ್ಲಿರುವ ದೊಡ್ಡ ಗುಣ. ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ಸಾಹಿತ್ಯ ರಚನೆ ಓದುಗರಿಗೆ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿರುವುದು ಇವರಲ್ಲಿರುವ ಆಸಕ್ತಿ, ಸತತ ಪರಿಶ್ರಮ ಇಷ್ಟ ಪಡುತ್ತೇನೆ.
  ಬೆಸ್ಟ್ ಆಫ್ ಲಕ್ ವಿಕ್ರಮ ಸರ್.
  ವಂದನೆಗಳೊಂದಿಗೆ
  ನಿಮ್ಮ,
  ವೀರಣ್ಣ ಮಂಠಾಳಕರ್
  ಮೊ.ನಂ. 8105783103

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: