ಕಿಂಡಿ ಹೇಳುವ ಕಥೆಗಳು..

ಡಾ. ವಿನತೆ ಶರ್ಮ

ಮನುಷ್ಯರ ಮನಸ್ಸಿಗೆ ನೂರಾರು ಬಾಗಿಲುಗಳು, ಕಿಟಕಿಗಳು. ಅವು ತೆರೆದುಕೊಂಡಾಗ ಸಾವಿರಾರು ಕಥೆಗಳು ಬಿಚ್ಚಿಕೊಳ್ಳುತ್ತವೆ. ಹುಟ್ಟುತ್ತವೆ. ಮುಚ್ಚಿಕೊಂಡಾಗ ಅವುಗಳ ಹಿಂದೆ ಇರುವ ಮುಖಗಳ ದನಿಗಳು ಎಷ್ಟೋ.

ಆದರೆ ನಾವು ಕಟ್ಟುವ ನಮ್ಮ ‘ಮನೆ’ಗೆ ಒಂದೇ ಹೆಬ್ಬಾಗಿಲು, ಹಲವಾರು ಕಿಟಕಿಗಳು. ಅವೂ ಕೂಡ ನಮ್ಮ ಮನಸ್ಸುಗಳ ರೀತಿಯೇ ಅನೇಕ ಕಥೆಗಳನ್ನು ಹೇಳುತ್ತವೆ. ನಾವು ಅವುಗಳ ಚೌಕಟ್ಟು, ಅಂದ ಚೆಂದ, ವಿನ್ಯಾಸ, ಅವುಗಳ ಮೈಗೆ ಬಳಸಿದ img_5203ವಸ್ತುಗಳು, ಅವಿರುವ ತಾಣ, ದಿಕ್ಕು, ಉದ್ದ, ಅಗಲ … ಎಲ್ಲವನ್ನೂ ಗಮನಿಸುತ್ತಾ ಹೋದರೆ ಅವುಗಳ ಕಥಾ ಹಂದರಕ್ಕೆ ಆಮಂತ್ರಣ ಸಿಕ್ಕೇಬಿಡುತ್ತದೆ.

ಆ ಮನೆಯನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ಒಡೆಯ ಇಗೋ ಇದೇ ಬಾಗಿಲಿನಿಂದ ಶವವಾಗಿ ಹೊರಟ. ಅಂದು ಮೌನವಾದ ಬಾಗಿಲು ಹಾಗೆ ಇದೆ – ಮಂಕು ಬಡಿದು. ಆಗೋ ಆ ಬಾಗಿಲುಗಳು ಹಲವರನ್ನು ನೋಡಿ ಮುಚ್ಚಿಕೊಂಡಿರಬಹುದು. ಬೇಡದಿದ್ದರೂ ಕೆಲವರಿಗೆ ತೆರೆದುಕೊಳ್ಳುವ ಪಾಡು ಆ ಕಿಟಕಿಗಳಿಗೆ ಬಂದಿರಬಹುದು.

ಹುಡುಗಿಯೊಬ್ಬಳು ಕಿಟಕಿಯಿಂದ ಉದ್ದಾನುದ್ದದ ಬಟ್ಟೆಯನ್ನು ಜೋತು ಬಿಟ್ಟು ಕೆಳಗಿಳಿದು ಮತ್ತೆಂದೂ ಈ ಮನೆಗೆ ನಾ ಕಾಲಿಡಲಾರೆ ಎಂದು ತಪ್ಪಿಸಿಕೊಂಡಿರಬಹುದು. ಅದನ್ನು ನೋಡಿದ ಹಿಂಬಾಗಿಲು ಮುಸಿ ಮುಸಿ ನಕ್ಕಾಗ ಕೇಳಿಸಿಕೊಂಡ ಹೆಬ್ಬಾಗಿಲು ನಿಟ್ಟುಸಿರು ಬಿಟ್ಟಿರಬಹುದು.

ಹುಡುಗನೊಬ್ಬನು ತನ್ನ ಚೆಲುವರಸಿಗೆ ಬರೆದ ಪ್ರೇಮ ಸಂದೇಶವನ್ನ ರವಾನಿಸಿದ್ದು ಈ ಕಿಟಕಿಯೇ.
ಅಜ್ಜಿಯೊಬ್ಬರು ಹೊಸದಾಗಿ ಹುಟ್ಟಿದ ಮೊಮ್ಮಗಳ ಪುಟ್ಟ ಹಾಸಿಗೆಗೆ ಮಲ್ಲಿಗೆ ಹೂವ ಮೆತ್ತೆನೆಯ ರಜ್ಹಾಯಿ ತೊಡಿಸಿದ್ದನ್ನು ನೋಡಿ ನಸು ನಕ್ಕ ಈ ಕಿಟಕಿಗಳು.

ಆ ಬಾಗಿಲುಗಳು, ಕಿಟಕಿಗಳು ನೋಡಿದ ನಲಿವು, ನಗೆ, ಉಲ್ಲಾಸ, ಸಂಭ್ರಮ, ಹರ್ಷ ಪಟ್ಟನೆ ಕಾಣಿಸಿಕೊಳ್ಳುತ್ತವೆ. ಆ ಕಥಾ ಹಂದರದಲ್ಲಿ ಸಿಕ್ಕುವ ಪಾತ್ರಗಳು, ಅವು ಮುಚ್ಚಿಟ್ಟುಕೊಂಡ ಮುಖಗಳು, ಜೋಪಾನವಾಗಿ ಅಡಗಿಸಿದ್ದ ಗುಟ್ಟುಗಳು, ಎಂದೆಂದಿಗೂ ಹೇಳಲಾರದ ನೋವುಗಳು ಎಲ್ಲವೂ ಸಿಕ್ಕಿಬಿಡುತ್ತವೆ. ಅವುಗಳಲ್ಲಿ ಎಲ್ಲೋ ನಮ್ಮದೂ ಕೂಡ ಕೊಂಚ ಇದೆಯೇನೋ ಅನ್ನಿಸಿಬಿಡುವುದೂ ಆಗಬಹುದು.

ನಾನು ೨೦೧೫ ರಲ್ಲಿ ಫ್ರಾನ್ಸ್ ದೇಶದಲ್ಲಿ ಓಡಾಡುತ್ತಿದ್ದಾಗ ನನ್ನನ್ನು ಆಕರ್ಷಿಸಿದ ಫ್ರೆಂಚ್ ಮನೆಗಳ ಕಿಟಕಿ ಬಾಗಿಲುಗಳ ಕೆಲ ಚಿತ್ರಗಳು ಇವು.

imgp0817 imgp0993 imgp0995 imgp0998 imgp0999 imgp1012 imgp0996

‍ಲೇಖಕರು Admin

September 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This