ಹೀಗೊಂದು ಮುಖವಾಡ ಪ್ರಕರಣ

ಕಿರಿಚುವವರಿಗೆ ಪ್ರತಿಕ್ರಿಯೆ ನೀಡಲಾರೆ…

anonymous

…..ಇನ್ನೂ ಕೆಲವು ಪ್ರತಿಕ್ರಿಯೆಗಳನ್ನು ಅನಾಮಿಕರು ಬರೆದಿರುವುದರಿಂದ ಅವರ ಮುಖಗಳು ಕಾಣುವುದಿಲ್ಲ. ಅಂದರೆ ಇದೆಲ್ಲ ಮುಖವಾಡಗಳಿಂದ ಬಂದ ಮಾತುಗಳು…..

….ಮಾತನಾಡುವವರು ತಾವು ಯಾರು ಎಂಬುದನ್ನು ಬಹಿರಂಗಪಡಿಸಿ ಮಾತನಾಡಿದರೆ ಅದಕ್ಕೆ ತೂಕ ಬರುತ್ತದೆ. ಅರ್ಥಪೂರ್ಣವಾಗಿ ಚರ್ಚೆ ಮಾಡಲು ಅವಕಾಶವಾಗುತ್ತದೆ. ಇಂಥಹ ಚರ್ಚೆಗಳಿಗೆ ನಾನು ಸದಾ ಸಿದ್ಧ. ಆದರೆ ಮುಖವಾಡದ ಹಿಂದಿರುವ ಕುರೂಪ ಮುಖಗಳ ಬಗ್ಗೆ ನಾನು ಮಾತನಾಡಲಾರೆ. ಎಲ್ಲಿಯೋ ನಿಂತು ಮನಸ್ಸಿಗೆ ಬಂದ ಹಾಗೆ ಕಿರಿಚುವವರಿಗೆ ಪ್ರತಿಕ್ರಿಯೆ ನೀಡಲಾರೆ

-ಶಶಿಧರ ಭಟ್

ಮುಖ್ಯಸ್ಥರು

ಸುವರ್ಣ ನ್ಯೂಸ್

‘ಕುಮ್ರಿ’ ಯಲ್ಲಿ

‍ಲೇಖಕರು avadhi

August 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

 1. chetana Teerthahalli

  ನಮಸ್ತೇ

  ಮುಖಹೀನರಾಗಿ ಕಮೆಂಟ್ ಮಾಡೋದು- ಇದೊಂದು ವಿಕೃತಿಯಲ್ಲದೆ ಬೇರೇನೂ ಅಲ್ಲ. ಮುಖವಿಲ್ಲದ ಬ್ಲಾಗ್ ಗಳಷ್ಟೇ ಮುಖವಿಲ್ಲದ ಕಮೆಂಟುದಾರರೂ ಇದ್ದಾರೆ. ವಿಷಯಕ್ಕೆ ಸಂಬಂಧಿಸಿದ ಹಾಗೆ, ಆದರೆ ಕೀಳು ಭಾಷೆಯಲ್ಲಿ ಕಮೆಂಟ್ ಮಾಡುವವರು ಕೆಲವರಾದರೆ, ಅಸಲು ಲೇಖನದ ವಿಷಯಾಂತರ ಮಾಡಿ ಹಾದಿ ತಪ್ಪಿಸುವ ಮುಖಹೀನರು ಕೆಲವರು. ಮತ್ತೆ ಕೆಲವರಿದ್ದಾರೆ, ಅವರು ಸುಖಾಸುಮ್ಮನೆ ಹೆಣ್ಣುಮಕ್ಕಳ ಹೆಸರಲ್ಲಿ ಕಮೆಂಟ್ ಮಾಡಿ ಖುಷಿಪಡುತ್ತಾರೆ. ಇದು ಮಾತ್ರ ನಿರುಪದ್ರವಿ ವರ್ಗ. ಹೆಣ್ಣುಹೆಸರಿಟ್ಟುಕೊಳ್ಳುವ ತೆವಲೊಂದು ಬಿಟ್ಟರೆ ಅಂಥಾ ಏನೂ ಸಮಸ್ಯೆಯಾಗೋದಿಲ್ಲ ಇವರಿಂದ.

  ನಾನೂ ಅದನ್ನೇ ಹೇಳ್ತೇನೆ. ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವಾಗ ಹೆಸರು ಹಾಕದಿದ್ದರೂ ನಡೆಯುತ್ತೆ. ಹಾಗಂತ ಯಾರೋ ಬರೆದಿದ್ದನ್ನ ಎಲ್ಲರೂ ಮೆಚ್ಚಿ ಹೊಗಳಲೇ ಬೇಕೆಂದೇನೂ ಇಲ್ಲ. ಬಯ್ಯಬೇಕೆನಿಸಿದರೆ ಅವಶ್ಯವಾಗಿ ಅವಕಾಶವಿದೆ. ಹೇಡಿಗಳು ಮಾತ್ರವೇ ಹೀಗೆ ಮುಖಹೀನರಾಗಿ ಕಮೆಂಟ್ ಮಾಡುವವರು. ಇದನ್ನು ವಿರೋಧಿಸುವವರ ಜೊತೆಯಲ್ಲಿ ನಾನಂತೂ ಇದ್ದೇನೆ.

  ಹೀಗೆ ಅನಾನಿಮಸ್ ಕಮೆಂಟುಗಳು ಕೊಟ್ಟ ಆಘಾತ ಒಂದೆರಡಲ್ಲ ನನಗೆ. ತೀರಾ ವೈಯಕ್ತಿಕ ಸಂಗತಿಗಳವರೆಗೂ ಈ ಪ್ರಹಾರ ನಡೆದಿದೆ. ಇದರಿಂದ ಬೇಸತ್ತು ಬ್ಲಾಗ್ ಅಪ್ ಡೇಟ್ ಮಾಡುವುದನ್ನೇ ಕಡಿಮೆ ಮಾಡಿಬಿಟ್ಟಿದೇನೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂಥ ಅನುಭವ ಜಾಸ್ತಿ ಅನ್ನೋದು ನನ್ನ ಅನಿಸಿಕೆ. ಬ್ಲಾಗ್ ನಲ್ಲಿ ಬರುವ ಹೇಟ್ ಕಮೆಂಟ್ ಗಳು, ಹೆರಾಸ್ ಮಾಡುವಂಥ ಕಮೆಂಟ್ ಗಳು ಸೈಬರ್ ಕ್ರೈಮ್ ವ್ಯಾಪ್ತಿಗೆ ಬರುತ್ತದೆಯಾ? ಇಂಥವರನ್ನು ಪತ್ತೆ ಹಚ್ಚೋದು ಹೇಗೆ? ಇದರಿಂದ ಉಂಟಾಗುವ ಮಾನಸಿಕ ತಲ್ಲಣದಿಂದ ಹೊರಬರೋದು ಹೇಗೆ ಇತ್ಯಾದಿ ಕುರಿತು ಯಾರಾದರೂ ಮಾಹಿತಿ ನೀಡಿದರೆ ನಾನು ಆಭಾರಿಯಾಗಿರುತ್ತೇನೆ.

  ಅವಧಿ,
  ಸುಮಾರು ಒಂದು ವರ್ಷದ ಹಿಂದಿನಿಂದಲೂ ಅನಾಮಿಕ ಕಮೆಂಟುದಾರರಿಂದ ಇಂತಹ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದೇನೆ. ತಿರುಗಿ ಉತ್ತರಿಸಿದ್ದು, ಐಪಿ ನಂಬರಿನ ಮೂಲಕ ಕೆಲವರನ್ನು ಪತ್ತೆ ಹಚ್ಚಿ ಝಾಡಿಸಿದ್ದು ಕೂಡ ನಡೆದಿದೆ. ಆದರೆ ಇವೆಲ್ಲ ಏಕಾಂಗಿ ಹೋರಾಟವಾಗಿತ್ತಷ್ಟೆ. ಈಗ ಇದೊಂದು ಸಂಘಟಿತ ಪ್ರಯತ್ನವಾಗಿ, ನಾನು ಬಹಳವಾಗಿ ಪ್ರೀತಿಸುವ ಬ್ಲಾಗ್ಲೋಕದ ಸ್ವಾಸ್ಥ್ಯ ರಕ್ಷಣೆಯಾಗುವ ಹಾಗಿದ್ದರೆ ಯಾಕಾಗಬಾರದು? ನಾವು ಕೆಲವರು ಇಷ್ಟು ದಿನ ನಮ್ಮಲ್ಲೇ ಗೊಣಗುತ್ತಿದ್ದೆವು. ನೀವು ದನಿಯೆತ್ತಿದ್ದು ಒಳ್ಳೆಯದಾಯ್ತು. ಈ ಬಗ್ಗೆ ಚರ್ಚಿಸಲು, ಚರ್ಚೆ ಮಾತ್ರವಲ್ಲ, ಪರಿಹಾರದ ನಿಟ್ಟಿನಲ್ಲಿ ಸಮಾಲೋಚಿಸಲು ಇದೊಂದು ವೇದಿಕೆಯಾಗಬಾರದೇಕೆ?

  ಧನ್ಯವಾದ.

  ನಲ್ಮೆ,
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 2. Berlinder

  ಗೌರವಿತ ಸುಮಿತ್ರ ಶಶಿಧರ ಭಟ್
  ನಮಿಸುತ ಈ ಪತ್ರ ಸಿದ್ಧಿಸುವೆ ಅಚ್ಚುಕಟ್ಟು
  ಮುಖವಾಡವಿಟ್ ರಚಿಸುವ ಕಾಮೆಂಟ್
  ಮಾಡುವುದು ಕೆಲರ ವಾಡಿಕೆಯ ಪಟ್ಟು
  *
  ಅಂಥ ಕಾಮೆಂಟ್ ಮೇಲೆ ಕಾಮೆಂಟ್
  ಚಾಲಿಸಿದ (ನಿಮ್ಮ) ಪಾಯ್ಂಟ್ ಓದಿ ಮನವಿಟ್ಟು
  ಚಿಂತಿಸುತ ಅಭಿಮತಗಳ ತೆರೆದಿಟ್
  ಅಪ್ರತೀತ ವಾಡಿಕೆ ಕುರಿತ ಈ ಗಿಟ್ಟು
  *
  ಮುಖ ತೋರದೆ ಕಾಮೆಂಟ್ ಮಾಡುವರು ಹಲವರು
  ಜೊತೆಗೆ ನಾಮ ಬಚ್ಚಿಟ್ಟು ತೀಡುವರು ಕೆಲವರು.
  ಸ್ತ್ರೀನಾಮ ಇಟ್ಟುಕೊಂಡ ನಃಪುಂಸಕ ಇನ್ನಿತರರು,
  ಅಸ್ತಿರ ಗುಣದ ಗಂಡಲ್ಲದ ಗುಂಡಿಗೆಯ ನರರು.
  *
  ಅಂಥವರ ಮಾತು ಮಾಡುವುದು ಆಲಸಿಕೆ
  ಎಂಥವರವರು ನೋಡಲು ಹಿಡಿಸುವರೆ ಮನಕೆ?
  ಮೊರೆಮುಚ್ಚು ನಾಮಹೀನರ ಗುರುತು ಪಿಶಾಚಿ,
  ಬರುವವು ಹುಚ್ಚು ಭೂತಗಳು ಮತ್ತು ತೋಚಿ.
  *
  ನಾನಾವಿಧ ಕಾಮೆಂಟ್-ಗಳ ಅವತಾರ
  ಅನರ್ಥ ಹರಟೆ ಭಾಷೆಗೆ ಗಾಳ ಇನ್ನಿತರ
  ಕಾಲ ಕದಿಯುವ ಗಲ್ಲುಮಾತು ತರಾತರ
  ತಲೆ ಕೊರೆಯುತ ಮನಹಿಂಡುತ ಇತರರ.
  *
  ಅದೊಂದು ವಿಧಿಯಂತೆ ಶ್ರದ್ಧಾವಂತರಿಗೆ
  ಇನ್ನೊಂದು ಅನ್ಯಾಯ ಬದ್ಧ ಚಿಂತರಿಗೆ
  ಶೋಧಿಸಿದರೆ ಶುದ್ಧಾಶುದ್ಧ ’ಬ್ಲೊಗ್’ ವೇಧಿಕೆ
  ಭೋಧಕ ಶಾಲೆ ಆಗಬಹುದು ’ಸಬ್‍ಲೋಗ್’ ಜನಕೆ.
  *
  ವಿ.ಸೂ.
  ಕೆಲವೆಡೆ ಕೆಲವು ನಾಮಗಳಿಗಿರಬೇಕು ವಿನಾಯತಿ,
  ಸ್ತ್ರೀಪುರುಷರ ಹೆಸರಾಗಿವುದು ವಾಡಿಕೆಯ ಪ್ರತೀತಿ.
  ವಿಶ್ವದೆಲ್ಲೆಡೆ ಅದೊಂದು ಅಪರೂಪದ ಪದ್ಧತಿ
  ಜಯ, ವಿಜಯ, ಶೀಲ, ಚಂದ್ರ, ಇಂದ್ರ – ಇತಿ.
  *
  ’ಪ್ರೊಫ಼ೈಲ್’ ನಲ್ಲಿ ತಿಳಿಸಿರುವೆ ನಾ ಗಂಡುಲಿಂಗ,
  ’ಪ್ರಿನ್ಸಿಪಿ‍ಎಲ್’ ಮೊದಲನಾಮ ’ಮಹೇಂದ್ರ’ ಸಂಗ!
  ಇದರ ಹಿನ್ನೆಲೆಯಲಿ ನಾ ಮಾಡಿಲ್ಲ ಪ್ರಮಾಧ,
  ಅದರರ್ಥವೀಕ್ಷಣೆ ಪರಿಗಣನ ವಿತರಣ ವಿವಿಧ!
  *
  – ವಿಜಯಶೀಲ (ಕಾವ್ಯನಾಮ), ಭೆರ್ಲಿನ್, ೨೦.೦೮.೦೯.
  *

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: