ಕುಂವೀ ಗಾಂಧಿ ಕ್ಲಾಸ್ ರೆಡಿ, ತಪ್ಪದೇ ಬುಕ್ ಮಾಡಿ..

“ಗಾಂಧಿ ಕ್ಲಾಸ್” ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕತೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳಿಸಿದ್ದಾರೆಯೆ?

ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ- ಛಲದಿಂದಾಗಿ ಸಾಕಷ್ಟಿದ್ದ ಸ್ಥಿರ-ಚರಾಸ್ತಿಗಳನ್ನು ಕಳೆದುಕೊಂಡು ಅಹನಹ್ಯನಿಗೆ ಒದ್ದಾಡುವ ಸ್ಥಿತಿಗೆ ಬಂದ “ಹೀರೋ” ತಂದೆಯ ಮಗನಾಗಿ, ಅನೇಕರ ಸಹಾಯದಿಂದ, ಅತಿ ಕಷ್ಟದಿಂದ ಎಸ್ಸೆಸ್ಸೆಲ್ಸಿ ಪಾಸಾಗಿ ಕೆಲಸವಿಲ್ಲದೆ ಸೈನ್ ಬೋಡರ್್ ಪೇಂಟರ್ ಆಗುವ, ರೇಲ್ವೇ ದಿನಗೂಲಿಯಾಗುವ, ರೇಲ್ವೇ ಪ್ಲಾಟ್ಫಾರಂನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರರಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, “ಕಪ್ಪು” ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ್ದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ ಅರಮನೆ ಕಾದಂಬರಿಯ ಬ್ಲಬರ್್ ತೋರಿಸಿ ಅಮೆರಿಕಾಕಕ್ಕೆ ವೀಸಾಪಡೆಯುವ- ಇಂತ ವ್ಯಕ್ತಿ ಕಥಾ ನಾಯಕನಾಗಿರುವುದು;

ಆ ವ್ಯಕ್ತಿಯೇ ಕವಿಯಾಗಿ, ಸಾಹಿತ್ಯಕ ಕ್ಷೇತ್ರವನ್ನು ಪ್ರವೇಶಿಸಿ, ಅಶ್ವಥ್ ಅವರ ಕೂಗಾಟಕ್ಕೆ ಹೆದರಿ ಒಂದು ರಾತ್ರಿಯಲ್ಲಿ 15 ಹಾಡು ಬರೆದು ಅಗಾಧ ಜನಪ್ರಿಯತೆ ಪಡೆಯುವ, ನೂರಾರು ಕತೆ ಬರೆದು ಸವೆದ ತನ್ನ ನಡುಬೆರಳನ್ನು “ಇದೊಂದು ರೂಪಕ” ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ 600 ಪುಟಗಳ ” ಶಾಮಣ್ಣ” ಎಂಬ ಕಾದಂಬರಿ ಬರೆದು ಪ್ರಸಿದ್ಧನಾದ, ” ಅರಮನೆ” ಎಂಬ 1200 ಪುಟಗಳ ಕಾದಂಬರಿಯನ್ನು 500 ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ, ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ- ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಯೂ ಆಗಿರುವುದು;

ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ: ಅಥವಾ ಸೋಮಶೇಖರ್ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅದ್ಭುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆ, ಇತ್ಯಾದಿಗಳೊಡನೆ ಗ್ರಹಿಸುವಲ್ಲಿಗೆ- ಶಂಭೋ ಶಂಕರ ಮಹಾದೇವ.

– ಡಾ.ಸಿ.ಎನ್.ರಾಮಚಂದ್ರನ್

‍ಲೇಖಕರು avadhi

July 20, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

8 ಪ್ರತಿಕ್ರಿಯೆಗಳು

 1. maletesh urs

  “gandhi class”nalli kootu, rochaka kathanaka ooduva koothala kumvi sir…aadastu bega barli nimma “gandhi class”.

  ಪ್ರತಿಕ್ರಿಯೆ
 2. RJ

  ಬೆನ್ನುಡಿಯೇ ಇಷ್ಟೊಂದು colourful ಆಗಿರಬೇಕಾದರೆ
  ಒಳಗೆನೇನಿರಬಹುದು?
  ಹಿಂದೊಮ್ಮೆ ಯಾರೋ ವರ್ಣಿಸಿದಂತೆ ‘ಕುಂವೀ’ ಅವರ
  ಎಲ್ಲ ಬರಹಗಳನ್ನು ಗಟ್ಟಿಯಾಗಿ ಎಲ್ಲರಿಗೂ ಕೇಳಿಸುವಂತೆ
  ಓದಿಕೊಳ್ಳಬಹುದು..
  ಆದಷ್ಟು ಬೇಗ ಪುಸ್ತಕ ಬರಲಿ ಎಂಬ ಆಸೆಯೊಂದಿಗೆ,
  -RJ

  ಪ್ರತಿಕ್ರಿಯೆ
 3. aditi

  Sir,
  tamma hosa krutigagi abhinadanegalu.
  onderadu barahakkene sustagibiduva nanna hosa
  kalada geleyara kandu kopa baruttide. prakashakaru yaru?

  ಪ್ರತಿಕ್ರಿಯೆ
 4. Laxminarayana Bhat P

  ಡಾ| ಸಿ.ಎನ್.ಆರ್. ಅವರ ‘ಬೆನ್ನುಡಿ’ ಗಳ ಬಗ್ಗೆಯೇ ಒಂದು ಲೇಖನ ಬರೆಯಬಹುದು. ಇಡೀ ಕೃತಿಯ ಹೂರಣವನ್ನು ಅದರ ಎಲ್ಲಾ ವಿಶಿಷ್ಟತೆಗಳೊಂದಿಗೆ ಕರಾರುವಾಕ್ಕಾಗಿ ಕನಿಷ್ಠ ಶಬ್ದಗಳಲ್ಲಿ ಹಿಡಿದಿಡುವ ಅವರ ಅದ್ಭುತ ಶಕ್ತಿ, ಸೂಕ್ಷ್ಮಗ್ರಾಹಿತ್ವ ಒಂದು ವಿಸ್ಮಯ ಮತ್ತು ಅಷ್ಟೇ ಅನುಪಮವಾದುದು.

  ಪ್ರತಿಕ್ರಿಯೆ
 5. HSV

  ಅದಮ್ಯಕ್ರಿಯಾಶೀಲ ಕುಂವಿ ಅವರ ಹೊಸಕೃತಿಯ ನಿರೀಕ್ಷೆಯಲ್ಲಿ-
  ಎಚ್ಚೆಸ್ವಿ

  ಪ್ರತಿಕ್ರಿಯೆ
 6. ranganna k

  “ಗಾದಿಲಿಂಗ ದೊರೆಯೇ ನಿನಗಾರು ಸರಿಯೇ
  ಸರಿ ಎಂದವರ ಹಲ್ಲು ಮುರಿಯೆ ,,, ಬಹುಪರ್ರಾ ……ಬಹುಪರ್ರಾ…..”
  ಕರ್ಣಾಟಕಾಂಧ್ರ ‘ಗಳ ಗಡಿಯ ಹಗರಿ ದಂಡೆಯ ಆ ಊರುಗಳಲ್ಲಿ ಈ ಹಾಡು ಸರ್ವೇ ಸಾಮಾನ್ಯ ವಾಗಿ ಕೇಳಿ ಬರುತ್ತದೆ. ಆ ಹಾಡು ಗುಳ್ಯಂ ಗಾದಿಲಿಂಗಪ್ಪ ತಾತನನ್ನು ಸ್ತುತಿಸಿ ಬರೆದದ್ದು, ಅಸಲಿಗೆ, ಈ ಗಾದಿಲಿಂಗ ದೊರೆಯ ಸನ್ನಿಧಾನದಲ್ಲಿ ತಿಂಗಳಿಗೊಂದು ಕೊಲೆಯಾಗುತಿದ್ದದ್ದು, ಅದೇ ಗುಳ್ಯಂ ಗ್ರಾಮದಿಂದ ಐಡು ಮೈಲು ದೂರದ ಊರಿನವನು ನಾನು.

  ನನ್ನದೇ ಪರಿಸರದಲ್ಲಿ ಬದುಕಿದ ಮತ್ತು ಬಳಿಸಿಕೊಂಡು ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆಯುವ ಮಟ್ಟಿನ ಬರಹಗಳನ್ನು ಬರೆಯುತ್ತಾರೆ ಎಂಬುದು ಸಾಮಾನ್ಯ ಮಾತಲ್ಲ, ಅದು ಕುಥೂಹಳಕಾರಿಯು ಹೌದು. ಕುದ್ದಾಗಿ ಮೇಸ್ಟ್ರೆ ಹೇಳುತ್ತಾರೆ. “ಮಟ ಮಟ ಮಧ್ಯಾನದ ಹೊತ್ತಲ್ಲಿ, ಒಂದು ಸುತ್ತು ಬಳ್ಳಾರಿಯಿಂದ ಹಗರಿ ದಂಡೆಯ ಊರುಗಳಿಗೆ ಬರಿ ಬಸ್ಸಲ್ಲಿ ಹೋಗಿ ಬಂದರೆ ಸಾಕು” ಎನ್ನುತ್ತಾರೆ. ಮೇಸ್ಟ್ರು ಮನಸ್ಸು ಮಾಡಿದ್ದರೆ, ಇವತ್ತಿಗೆ ಯಾವುದಾದರು ವಿಶ್ವ ವಿದ್ಯಾನಿಲಯದಲ್ಲಿ ಹತ್ತಾರು ಸಾವಿರಗಟ್ಟಲೆ ಸಂಬಳ ಎಣಿಸಬಹುದಿತ್ತು. ಆದರೆ ಅದನ್ನು ಬಿಟ್ಟು, ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿಯೇ ಸೇವೆ ಮುಗಿಸಿದರು. ಅವರಿಗಾದ ಮೋಸಗಳನ್ನು ಕೇಳಿದ್ದೆ. ಅದು ಸಿನೆಮಾ ನೋಡಿದ ಮೇಲೆ. ಇಂಥಹ ಅದೆಷ್ಟು ಕಷ್ಟಗಳ ಮದ್ಯೆಯೇ ಬದುಕಿದ್ದಾರೆ. ನಾನಂತೂ ತೀವ್ರ ಕುತೂಹಲದಿಂದ ಕಾಯುತ್ತಿದ್ದೇನೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: