ಕುಪ್ಪಳಿಯಲ್ಲಿ ಅಣಬೆ ­ಏಳಲಿಲ್ಲ; ­ಮೀನು ­ಬಿದ್ದವು

ಅಣಬೆ ಎಂದರೆ ಪಂಚಪ್ರಾಣ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಹಣಬೆ ಸಿಗದೇ ನಿರಾಸೆಗೊಂಡ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

­ನನಗೆ ­ರಾತ್ರಿ ­ಎಲ್ಲ ­ಒಂದೇ ­ಚಿಂತೆ. ­ನಾಳೆ ­ಅಣಬೆ ­ಏಳುತ್ತವೆ! ­ಅವುಗಳನ್ನು ಬೇರೆಯವರು ­ನೋಡುವ ­ಮೊದಲೇ ಸಂಗ್ರಹಿ­ಸಬೇಕು ­ಎಂಬುದು. ­ನನ್ನ ­ಈ ಕಲ್ಪ­ನೆಗೆ ಪೂರ­ಕ­ವಾಗಿ ­ನಮ್ಮ ­ಗುಂಡ ‘­ನಾಳೆ ­ಅಣಬೆ ­ಏಳಬಹುದು’ ­ಎಂದು ­ಭವಿಷ್ಯ ನುಡಿ­ದಿದ್ದ­ನಲ್ಲದೆ ­ಅವು ­ಏಳುವ ­ಜಾಗವನ್ನೂ ­ತೋರಿಸಿದ್ದ. ­

ಆ ­ಜಾಗ ­ಬೇರೆಲ್ಲೂ ­ಅಲ್ಲ, ­ನಮ್ಮ ­ಕಚೇರಿ ­ಇರುವ ­ಕುವೆಂಪು ಶತ­ಮಾನೋತ್ಸವ ­ಭವನ ಹೇಮಾಂಗಣದ ಮುಂದುಗಡೆಯೇ! ಗುಂಪುಗುಂಪಾಗಿ ­ಸಣ್ಣ ಕೋಪಿನಂತೆ ಬೆಳೆ­ದಿರುವ ­ವಿವಿಧ ಗಿಡಮರ ಬಳ್ಳಿಗಳ ನೆಳ­ಲಿನ ­ಸುಪುಷ್ಪ ಮಣ್ಣಿನಲ್ಲಿ ಪ್ರತಿ­ವರ್ಷ ­ಅಸಂಖ್ಯಾತ ­ಅಣಬೆಗಳು ­ಏಳುತ್ತವೆ ­ಎಂದು ­ಗುಂಡ ­ಆ ಜಾಗಗಳನ್ನೆಲ್ಲಾ ­ತೋರಿಸಿದ್ದ.

­ಅಲ್ಲದೆ ಕವಿಶೈ­ಲದ ­ದಾರಿಯ ಅಕ್ಕಪಕ್ಕದ ­ಕಾಡಿನ ಮರಗಳ­ಡಿಯಲ್ಲಿ ­ಎಲ್ಲೆಲ್ಲಿ ­ಅಣಬೆ ­ಏಳುತ್ತವೆ ­ಎಂದೂ ­ತೋರಿಸಿದ್ದ. ನನಗೆ ಚಿಕ್ಕಂ­ದಿ­ನಿಂದಲೂ ­ಅಣಬೆ ­ಎಂದರೆ ಪಂಚಪ್ರಾಣ. ­ನಮ್ಮದು ­ಬಯಲು ಸೀಮೆಯಾದರೂ ಮಳೆಗಾ­ಲದ ನಂತರದ ತಂಪಿನ ­ತೇವಕ್ಕೆ ­ಆಗಸ್ಟ್‌ ­ತಿಂಗಳು ­ಮಣ್ಣು ಹದ­ವಾಗಿ ­ನಮ್ಮ ­ಹೊಲದ ­ಒಂದು ಅಂಚಿನಲ್ಲಿದ್ದ ­ತಬಸೀ ಮರಗಳ ಪದತಳದಲ್ಲಿ ­ರಾಶಿ ­ರಾಶಿ ­ಮೊಗಟು ­ಅಣಬೆ ಏಳುತ್ತಿದ್ದವು.

­ಅದೇ ­ಹೊಲದ ­ಇನ್ನೊಂದು ­ಅಂಚಿನ ಹುತ್ತಗಳ ­ತುಂಬ ­ಹುತ್ತ ­ಅಣಬೆ ಚಿಗುರುತ್ತಿದ್ದವು. ಇತ್ತೀಚೆ­ಗಿನ ವರ್ಷಗಳಲ್ಲಿ ­ಆ ತೋಪೇ ಮಾಯವಾ­ಗಿದೆ. ಬೋರ್‌­ವೆಲ್‌ನ ­ನೀರು ರಾಸಾಯನಿ­ಕಗಳ ­ಜೊತೆ ­ಸೇರಿ ­ಮಣ್ಣಿನ ­ನೈಜ ಗುಣಗಳು ಸರ್ವನಾಶವಾ­ಗಿದೆ. ­ಅಷ್ಟೇ ­ಅಲ್ಲದೆ ನಿಯತ­ವಾದ ­ಮಳೆಯೂ ­ಇಲ್ಲ. ಸುರಿದರೆ ಹುಚ್ಚ­ನಂತೆ ­ಸುರಿದು, ಇಲ್ಲವಾದರೆ ತಿಂಗಳುಗಟ್ಟಲೆ ­ಇರುವುದೇ ­ಇಲ್ಲ. ­ಅಣಬೆಯ ­ಆ ಪ್ರಪಂಚವೇ ­ಕೆಲವು ಹಳ್ಳಿಗ­ಳಿಗೆ ­ಈಗ ­ನೆನಪು ಮಾತ್ರ.

ಮೊದಲ ಮಳೆಯಲ್ಲಿ ­ಗುಡುಗು ­ಹುಟ್ಟಿ, ­ಬೆಳಗ್ಗೆ ­ಬಿಸಿಲು ಹೊಡೆದರೆ ­ಅಣಬೆ ­ಏಳುತ್ತವೆ, ಗುಡುಗಿಗೆ ­ನೆಲ ಬಾಯಿ ಬಿಡುತ್ತದೆ, ­ಎಳೆ ಬಿಸಿ­ಲಿಗೆ ­ಅಣಬೆ ­ಮೊಳೆತು ಮೇಲೇರುತ್ತವೆ ­ಎಂದು ­ಗುಂಡ ಉಪದೇ­ಶಿ­ಸಿದ್ದ. ­ಬೆಳಗ್ಗೆ ­ಎದ್ದವನೇ ­ನನ್ನ ­ಬಾಲ್ಯದ ­ಅಣಬೆ ರುಚಿಯನ್ನು ­ನಾಲಿಗೆಯ ರಸಗ್ರಂ­ಥಿಗಳಲ್ಲೆಲ್ಲಾ ಕಲ್ಪಿ­ಸಿಕೊಂಡು ­ಗುಂಡ ­ತೋರಿಸಿದ್ದ ­ಪ್ರತಿಯೊಂದು ­ಜಾಗವನ್ನೂ ಕಾತುರದಿಂದ ಹುಡುಕಿದೆ.

­ಮಳೆ ನಿಂತು ಬಿಸಿಲೂ ಬಿದ್ದಿದ್ದರಿಂದ ­ಅಣಬೆ ­ಏಳಲೇಬೇಕು ­ಎಂಬುದ ­ನನ್ನ ­ಒಳ ಮನಸ್ಸಿನ ­ತರ್ಕ. ­ಆದರೆ ­ಎಲ್ಲಿಯೂ ಅಣಬೆ ­ಇಲ್ಲ. ಕವಿಶೈ­ಲದ ­ದಟ್ಟ ಕಾನ­ನದ ಜಾಗಗಳಲ್ಲೂ ­ಅಣಬೆ ­ಎದ್ದಿಲ್ಲ. ನಿರಾ­ಸೆಯೋ ­ನಿರಾಸೆ. ಕವಿಶೈ­ಲದಲ್ಲಿ ­ಅಣಬೆ ಹುಡುಕುತ್ತಿರುವಾಗ ­ಮರದ ಬುಡದಲ್ಲಿದ್ದ ­ಹಸಿರು ಹುಲ್ಲಿನಲ್ಲಿ ­ಕುಂತಿದ್ದ ­ಹಸಿರು ­ಹಾವೊಂದು ­ನನ್ನ ­ಹೆಜ್ಜೆ ಸಪ್ಪಳಕ್ಕೆ ­ಚಿಮ್ಮಿ ರಾಕೆಟ್ ವೇಗದಲ್ಲಿ ­ಮರದ ­ನೆತ್ತಿಗೆ ­ಏರಿತು.

­ಒಂದು ­ಕ್ಷಣ ­ಬೆಚ್ಚಿದ ­ನಾನು ­ಆ ­ಹಸಿರು ­ಹಾವಿನ ಸೌಂದರ್ಯವನ್ನೇ ­ನೋಡುತ್ತಾ ­ಅಣಬೆ ­ಸಿಗದ ನಿರಾ­ಸೆಯಲ್ಲಿ ­ಎಷ್ಟು ಹೊತ್ತು ನಿಂತಿದ್ದೆನೋ, ­ನನಗೇ ­ಗೊತ್ತಿಲ್ಲ. ­ಮಧ್ಯಾಹ್ನ ­ಮೂರು ಗಂಟೆಯವರೆಗೆ ­ಬಿಡುವು ­ಕೊಟ್ಟಿದ್ದ ­ಮಳೆ ­ಮತ್ತೆ ಆರಂಭವಾಯಿತು. ­ಜಡಿ ಮಳೆ­ಯಾಗಿ ­ಸುರುವಾಗಿ ಬರ­ಬರುತ್ತಾ ­ಒಂದೇ ­ಸಮನೆ ಜೋರಾ­ಗಿಯೇ ಅಪ್ಪಳಿ­ಸತೊಡಗಿತು. ನನ್ನ ­ಕಚೇರಿಯ ­ಎದುರು ಭಾಗದಲ್ಲಿ ­ನಾನು ­ಕುಂತಿದ್ದ ಜಾಗ­ದಿಂದಲೇ ­ಮಳೆಯ ವೈಭ­ವವನ್ನು ­ನೋಡುವ ­ಅದೃಷ್ಟ ನನ್ನದಾ­ಗಿತ್ತು.

­ಅಂದು ­ರಾತ್ರಿ ­ಸುಮಾರು ­ಎಂಟು ಗಂಟೆಯವರೆಗೆ ‘­ಕುವೆಂಪು ­ತಂತ್ರಾಂಶ’­ಕ್ಕೆ ಸಂಬಂ­ಧಿ­ಸಿದಂತೆ ­ಮುಂದಿನ ­ವಾರ ನಡೆಯಲಿದ್ದ ಪೂರ್ವಭಾವಿ ­ಸಭೆಯ ಸಿದ್ಧತೆಗಳನ್ನು ­ಮುಗಿಸಿ, ­ನಂತರ ­ಟಾರ್ಚ್‌ ­ಹಿಡಿದು ಗಡಿ­ಕಲ್ಲಿನ ­ಕಡೆಗೆ ­ನಾನು ­ಮತ್ತು ಗುಂಡ ­ಇಬ್ಬರೂ ಹೊರಟೆವು. ಯಾಕೆಂದರೆ ಗೆಸ್ಟ್‌­ ಹೌ­ಸಿಗೇ ­ಊಟ ­ತಂದು ನೀಡುತ್ತಿದ್ದ ­ಕವಿ ­ಮನೆಯ ­ಕ್ಯಾಂಟಿನ್ನಿನ ಸುಧಾಕರ್ ­ಅಂದು ­ರಜೆ ­ಹಾಕಿದ್ದ.

ಅನಿವಾರ್ಯವಾಗಿ ಒಂದೂ­ವರೆ ­ಕಿ.ಮೀ. ­ನಡೆದು ಗಡೀ­ಕಲ್ಲಿನ ­ಏಕೈಕ ಹೋಟೆಲ್‌­ನಲ್ಲಿ ­ಊಟ ಮಾಡಬೇ­ಕಿತ್ತು. ಕವಿಶೈಲಕ್ಕೆ ­ಹೋಗುವ ­ರಸ್ತೆಯ ತಿರುವಿಗೆ ಅಭಿಮುಖ­ವಾ­ಗಿರುವ ­ತೇಜಸ್ವಿ ­ಸ್ಮಾರಕವನ್ನು ­ದಾಟಿ ­ಮುಂದೆ ಹೋಗುತ್ತಿದ್ದೆವು. ­ಒಂದು ­ಕಿರು ಹಳ್ಳಕ್ಕೆ ಕಟ್ಟಿರುವ ­ಪುಟ್ಟ ­ಸೇತುವೆಯೊಂದು ಅಲ್ಲಿ ಸಿಗುತ್ತದೆ. ­

ಆ ­ಸೇತುವೆ ­ಮೇಲೆ ಹೋಗುತ್ತಿದ್ದಂತೆ ­ನೀರು ­ಧುಮ್ಮಿಕ್ಕುವ ­ಸದ್ದು ­ಕಿವಿಗೆ ಹೊಡೆದಂತೆ ಕೇಳಿ­ಬರುತ್ತಿತ್ತು. ­ಅದು ­ಚಿಕ್ಕ ಹಳ್ಳವಾದರೂ ­ಹೆಚ್ಚಿದ ­ಮಳೆಯ ಕಾರ­ಣಕ್ಕೆ ರಭ­ಸ­ದಿಂದ ಬರುತ್ತಿದ್ದ ­ನೀರು, ­ಅಡ್ಡ ­ಸಿಗುವ ಬಂಡೆಗಲ್ಲೊಂದಕ್ಕೆ ­ಹೊಡೆದು ಚಿಮ್ಮುತ್ತಿದ್ದುದರಿಂದ ­ಅಂಥ ­ಸದ್ದು ಬರುತ್ತಿತ್ತು. ­

ನಾನು ­ಮತ್ತು ­ಗುಂಡ ­ಇಬ್ಬರೂ ­ನಮ್ಮ ­ಬ್ಯಾಟರಿ ಬೆಳ­ಕಿ­ನಲ್ಲಿಯೇ ­ಆ ­ದೃಶ್ಯವನ್ನು ­ನೋಡಿ ಮುಂದುವ­ರಿದೆವು. ­ಹಾಗೇ ಮುಂದೆ ಎಡಭಾಗಕ್ಕೆ ­ಸಿಗುವ ಇಳಿಜಾ­ರಿನ ಗದ್ದೆಗಳಲ್ಲಿ ­ಜುಳುಜುಳು ಹರಿಯುವ ­ನೀರಿನ ನೀನಾದ ­ಕಿವಿಗೆ ­ಬಿತ್ತು. ­ಗದ್ದೆ ಬಯಲಿ­ನಲ್ಲಿ ­ಅಲ್ಲಲ್ಲಿ ­ಹತ್ತಾರು ಬ್ಯಾಟ­ರಿಗಳ ­ಮಿಂಚು ­ಬೆಳಕು ಸಣ್ಣ­ಸಣ್ಣ ಕಿರ­ಣಗಳಂತೆ ­ನಮ್ಮ ­ಕಣ್ಣಿಗೂ ಹೊಡೆಯುತ್ತಿತ್ತು. ­

ಆ ಬಿರುಮಳೆಯಲ್ಲಿ ­ಅದೆಂಥ ­ಬೆಳಕು ­ಎಂದು ಕುತೂ­ಹ­ಲ­ದಿಂದ ­ಗುಂಡನನ್ನು ­ಕೇಳಿದೆ. ‘ಅವರೆಲ್ಲ ­ಹತ್ತು ­ಮೀನು ಹಿಡಿಯೋ ­ಜನ ­ಸಾರು’ ­ಎಂದ. ಮುಂಗಾ­ರಿನ ­ಮೊದಲ ­ಮಳೆಗೆ ­ನಮ್ಮ ಕೆರೆ­ಯಿಂದಲೂ ­ನೀರಿಗೆ ­ವಿರುದ್ಧ ದಿಕ್ಕಿ­ನಲ್ಲಿ ­ಸಸ್ಲು ಮೀನುಗಳ ­ಯಾತ್ರೆಯನ್ನು ಚಿಕ್ಕಂ­ದಿ­ನಲ್ಲಿ ­ನಾನೂ ­ಕಂಡಿದ್ದೆ. ­ಊರಿನ ಬಳ­ಕೆಗಾಗಿ ­ಇದ್ದ ­ಸಣ್ಣ ­ಕೆರೆ ಬೇಸಿಗೆಗೆ ­ಪೂರಾ ಒಣಗದೇ ­ಇದ್ದ ಪಕ್ಷದಲ್ಲಿ ­ಮೂರು ­ನಾಲ್ಕು ವರ್ಷಗ­ಳಿಗೊಮ್ಮೆ ­ಮೀನು ಹತ್ತುತ್ತಿದ್ದವು. ­

ಊರ ­ಜನ ­ಕೊಡಮೆ ­ಮತ್ತು ­ಚಿಲುಮೆ ­ಎಂಬ ಸಾಧ­ನಗಳನ್ನು ­ಬಳಸಿ, ಕಿತ್ತಾಡುತ್ತಾ ­ಮೀನು ಹಿಡಿಯುತ್ತಿದ್ದರು. ಸಿಕ್ಕಿದ­ವರ ­ಸೀರುಂಡೆ. ಸಿಕ್ಕಿರುವ­ವ­ರಿಗೆ ­ಉಂಟು, ಇಲ್ಲದಿದ್ದರೆ ­ಇಲ್ಲ. ­ಮೀನು ­ಸಿಗದ ನತದೃಷ್ಟ­ರಿಗೆ ಸಂತೆಗಳಲ್ಲಿ ಸಿಗುತ್ತಿದ್ದ ಕರಿಮೀನೇ ಗತಿ­ಯಾಗುತ್ತಿತ್ತು.

­ಆದರೆ ­ಇಲ್ಲಿ ಹಾಗಿರ­ಲಿಲ್ಲ. ­ಗದ್ದೆ ಗದ್ದೆಗಳಲ್ಲಿ ­ಮೀನು. ಹಳ್ಳಕೊಳ್ಳ ­ಕೆರೆ ಕಟ್ಟೆಗಳಲ್ಲಿ ­ಅಡಗಿದ್ದ ಮೀನುಗಳೆಲ್ಲ ­ತಮ್ಮ ಸಂತಾನಾ­ಭಿವೃ­ದ್ಧಿಗಾಗಿ ­ಹೊಸ ­ನೀರಿನ ಜಾಡುಗಳನ್ನು ­ಹಿಡಿದು ಹೊರ­ಟಿವೆ! ­ಊಟ ­ಮಾಡಿ ­ನಂತರ ­ನಾವೂ ­ಈ ಗದ್ದೆಗಳ ಹತ್ತಿರ ­ಬರೋಣ ­ಎಂದು ಗುಂಡ­ನಿಗೆ ­ಹೇಳಿದೆ. ­ಗುಂಡ ­ಉತ್ಸಾಹದಿಂದ ­ಒಪ್ಪಿದ.

ವಾಸ್ತ­ವ­ವಾಗಿ ­ನಮ್ಮ ­ಗುಂಡನ ಜೀವ­ವೆಲ್ಲ ಗದ್ದೆಗಳಲ್ಲಿ ­ಹತ್ತು ­ಮೀನು ಹಿಡಿಯುವ­ವರ ಸಂಗಡವೇ ­ಇತ್ತು. ­ಅವನು ­ಅದನ್ನು ಬಾಯಿಬಿಟ್ಟು ­ಹೇಳಿಯೂ ­ಹೇಳಿದ. ‘­ನೀವು ­ಇವೊತ್ತು ­ಇಷ್ಟೊತ್ತು ಆಫೀಸಿ­ನಲ್ಲೇ ­ಉಳಿದ್ರಲ್ಲಾ ­ಸಾರು, ­ಇಲ್ದಿದ್ರೆ ­ನಿಮ್ಗೆ ­ಹೇಳಿ ರಾತ್ರಿ ­ಹನ್ನೆರಡು ಗಂಟೆ­ವರೆಗೆ ­ನಾನೂ ­ಮೀನು ­ಬೇಟೆಗೆ ­ಹೋಗೋದೇ ­ಸೈ ­ಆಗಿತ್ತು” ­ಎಂದ.

‘­ಅಲ್ಲಾ ­ಮಾರಾಯ ­ನನಗೇನು ­ಗೊತ್ತಿತ್ತು, ­ಇವೊತ್ತು ­ಮೀನು ­ಬೇಟೆ ­ಅಂತ, ­ನೀನು ಹೇಳಬೇಕಾ­ಗಿತ್ತು’ ­ಎಂದು ದಬಾಯಿಸಿದೆ. ‘­ಆದ್ರೂ ­ಕಾಲ ­ಮಿಂಚಿಲ್ಲ ­ನಡಿ’ ­ಎಂದು ಪ್ರೋತ್ಸಾ­ಹಿ­ಸಿದೆ. ಗಡಿ­ಕಲ್ಲಿನ ­ಶೆಟ್ಟರ ಹೋಟೆ­ಲಿ­ನಲ್ಲಿ ­ಉಂಡೆವೋ ಇಲ್ಲವೋ ­ಎನ್ನುವಂತೆ ­ಊಟದ ­ಶಾಸ್ತ್ರ ­ಮಾಡಿ ­ಓಡೋಡಿ ­ಬಂದೆವು. ­ನಾನು ­ಒಂದು ­ಗದ್ದೆ ಬದುವಿನ ­ಮೇಲೆ ­ನಿಂತೆ. ­ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ­ಅದನ್ನು ­ಲೆಕ್ಕಿಸದೆ, ­ಟಾರ್ಚ್‌ ಬೆಳ­ಕಿ­ನಲ್ಲಿ ಹೊಳೆಯುತ್ತಿದ್ದ ಮೀನುಗ­ಳಿಗೆ ­ದೊಣ್ಣೆಯಿಂದ ಹೊಡೆದು, ­ರಕ್ತ ಒಸರುವಂತೆ ­ಮಾಡಿ,

­ಅದು ಚಲಿ­ಸದಂತಾದಾಗ ­ಹಿಡಿದು ­ಬುಟ್ಟಿಗೆ ­ತುಂಬುತ್ತಿದ್ದರು. ­ಹತ್ತಾರು ­ಯುವಕರು ­ಮತ್ತು ­ಮಧ್ಯ ವಯಸ್ಕರ ­ಪಡೆಯೇ ­ಅಲ್ಲಿತ್ತು. ­ಇಡೀ ­ಗದ್ದೆ ­ಬಯಲು ರಣರಂಗ­ವಾ­ಗಿತ್ತು. ಮೀನುಗಳ ­ಸುಗ್ಗಿಯೇ ­ಸುಗ್ಗಿ. ಕಾಲುಕಾ­ಲಿಗೆ ಸಿಗುವಷ್ಟು ಮೀನುಗಳ ­ರಾಶಿ. ­ಉಡುಪಿಯ ­ಮಲ್ಪೆ ಬಂದ­ರಿ­ನಲ್ಲಿ ಬರುವಷ್ಟು ­ಮೀನಿನ ­ಕಮಟು ­ವಾಸನೆ ­ಮೂಗಿಗೆ ಬಡಿಯುತ್ತಿತ್ತು. ­ಯಾವ ­ಯಾವ ­ಬಗೆಯ ­ಮೀನುಗಳು? ಅಲ್ಲಿದ್ದ­ವ­ರಿಂದ ಹೆಸರುಗಳನ್ನು ಸಂಗ್ರ­ಹಿ­ಸಿದೆ. ­

ಸಸ್ಲು, ­ಗಿರಲು, ­ಕೊರುವ, ­ಕುಚ್ಚು, ­ಬಾಳೆ, ­ಮುಗುಡು, ­ಚೇಳು, ­ಕೊಳ್ಳೆ, ­ಗೊಚ್ಚಲು, ­ಮರುಗುಂಡು, ­ಕೆರ್ಸಿ, ­ಓಡಲು ­ಮುಂತಾದ ವಿಧ­ವಿಧ­ವಾದ ಮೀನುಗಳ ­ಶಿಖಾರಿ ­ಅಲ್ಲಿ ನಡೆ­ದಿತ್ತು. ­ಟಾರ್ಚ್‌ ಬೆಳ­ಕಿಗೆ ನಾಟ್ಯ­ವಾಡುತ್ತಾ ಮಿಂಚುತ್ತಿದ್ದ ದೊಡ್ಡ ­ಮೀನುಗಳು ಮರುಕ್ಷ­ಣಕ್ಕೆ ­ದೊಣ್ಣೆ ­ಏಟು ­ತಿಂದು ರಕ್ತಕಾರಿ ­ಮೂರ್ಚೆ ಬೀಳುತ್ತಿದ್ದವು. ಸಣ್ಣ ಮೀನುಗಳು ಚಿಲುಮೆ ಬಲೆಗೆ ಬಿದ್ದು ಸೆರೆಯಾಗುತ್ತಿದ್ದವು. ­

ಇದು ­ನೂರಾರು ವರ್ಷಗ­ಳಿಂದ ಸಂಪ್ರದಾಯದಂತೆ ­ನಡೆದು ­ಬಂದ ­ಪದ್ಧತಿ. ­ತಮ್ಮ ವಂಶಾ­ಭಿವೃ­ದ್ಧಿಗಾಗಿ ಹತ್ತುತ್ತಿದ್ದ ಲಕ್ಷಾಂತರ ಮೀನುಗಳಲ್ಲಿ ಶಿಖಾ­ರಿಕೆ ಸಿಗುತ್ತಿದ್ದುದು ­ಕೇವಲ ­ಶೇ. 20ರಷ್ಟು ­ಮಾತ್ರ. ­ಉಳಿದವು ­ಹಳ್ಳದ ಕೋಡಿ­ನಲ್ಲಿ, ­ಗದ್ದೆಯ ಬಿಲಗಳಲ್ಲಿ, ­ಮಣ್ಣಿನ ಪಸೆಯಲ್ಲಿ ­ಅಡಗಿ ­ಜೀವ ಉಳಿಸಿಕೊಳ್ಳುತ್ತ­ವಂತೆ. ­ಹಾಗೆ ­ಉಳಿದ ­ಮೀನುಗಳು ­ತಮ್ಮ ಗಬ್ಬದಲ್ಲಿರುವ ಕೋಟ್ಯಾಂತರ ­ತತ್ತಿಗಳನ್ನು ­ಹೊಸ ­ನೀರಿನ ರಕ್ಷಣಾತ್ಮಕ ಜಾಗಗಳಲ್ಲಿ ­ಇಟ್ಟು ­ಬಂದ ­ದಾರಿಯಲ್ಲಿ ಹಿಂತಿರುಗುತ್ತ­ವಂತೆ.

­ಗದ್ದೆಯ ತೋಡುಗಳಲ್ಲಿ, ­ಹಳ್ಳದ ­ಅಂಚಿನ ­ಸಣ್ಣ ­ಸಣ್ಣ ಮಡುಗಳಲ್ಲಿ, ­ನೀರು ­ತುಂಬಿದ ­ಹುಲ್ಲಿನ ಪಸೆಗಳಲ್ಲಿ ­ಹೀಗೆ ಎಲ್ಲಂದರಲ್ಲಿ ­ಮೀನಿನ ­ಮೊಟ್ಟೆಗಳು ­ತಮ್ಮ ­ಜಾಗ ಕಂಡುಕೊಳ್ಳುತ್ತವೆ. ಮಳೆಗಾ­ಲದಾದ್ಯಂತ ­ಅವು ಮರಿ­ಯಾಗಿ ಬೆಳೆಯುವ ­ಕ್ರಿಯೆ ನಡೆಯುತ್ತದೆ. ­ಅವಕ್ಕೆ ಚಲಿಸುವ ­ಶಕ್ತಿ ಬರುತ್ತಿದಂತೆ ­ಇಳಿ ­ನೀರಿನ ­ದಾರಿ ­ಕಂಡುಕೊಂಡು ­ಆ ­ನೀರು ­ಇಳಿಯುತ್ತಾ ­ಹೋದಂತೆ ­ಅವೂ ಪಯಣಿಸುತ್ತಾ ಹಳ್ಳಕೊಳ್ಳ ­ಕೆರೆ ಕಟ್ಟೆಗಳನ್ನು ಸೇರಿಕೊಳ್ಳುತ್ತವೆ. ­

ಇದೊಂದು ಜೀವಜಾ­ಲದ ನಿಯಮಿತ ­ಪ್ರಕ್ರಿಯೆ. ­ಕಲ್ಕುಳಿ ವಿಠ­ಲ­ಹೆಗ್ಡೆ ­ತಮ್ಮ ‘­ಮಂಗನ ಬ್ಯಾಟೆ’ ಕೃತಿಯಲ್ಲಿ ­ಈ ­ಹತ್ತು ಮೀನುಗಳ ­ಮತ್ತೊಂದು ರಹಸ್ಯವನ್ನು ­ಬಯಲು ಮಾಡುತ್ತಾರೆ. ಮೀನುಗಳ ಕಾಮ ಕೇಳಿಗೂ ­ಇದೇ ಸಂದರ್ಭ­ವಂತೆ.

ಮಳೆಗಾ­ಲದ ­ಮೂರು ­ತಿಂಗಳು ­ಆಹಾರ ­ತಿಂದು, ­ಮೊಟ್ಟೆ ­ಮರಿ ­ಮಾಡಿ ­ಒಂಬತ್ತು ­ತಿಂಗಳು ­ಭೂಮಿಯ ­ಆಳದ ಅಜ್ಞಾತ­ಸ್ಥಳದಲ್ಲಿ ­ಹುದುಗಿ ­ಕುಳಿತ ­ಏಡಿಕಪ್ಪೆ, ­ನೀರುಳ್ಳಿ ­ಹಾವು ಮತ್ತಿತರ ­ಜೀವಿಗಳು, ಬೇಸಿಗೆಯಲ್ಲಿ ಸ್ಮಶಾ­ನದಂತೆ ಬೆಂಗಾಡಾ­ಗಿದ್ದ ­ಗದ್ದೆ ಬಯಲಲ್ಲಿ ­ಮಳೆ ­ನೀರು ­ನಿಂತ ­ಕೂಡಲೇ ­ಎಲ್ಲೆಂದರಲ್ಲಿ ಗೋಚ­ರಿಸುತ್ತವೆ. ­ಮಳೆ ­ಬಂದಾಗ ­ಒಂದೇ ­ಬಾರಿಗೆ ­ಕಾಣುವ ­ಇವೆಲ್ಲಾ ಎಲ್ಲಿಂದ­ಬಂದ್ವು, ­ಇಷ್ಟು ­ದಿನ ­ಎಲ್ಲಿ ­ಇದ್ವು ­ಎನ್ನುವುದೇ ­ವಿಸ್ಮಯ.

­ನಿನ್ನೆ ­ಇಲ್ಲದವು ­ಇವತ್ತು ಆಕಾ­ಶ­ದಿಂದ ­ಬಿದ್ದವೇನು ­ಅಂದುಕೊಳ್ಳಬೇಕು. ­ಬತ್ತಿದ ಹೊಳೆಯಲ್ಲಿ ಹೊಟ್ಟೆತುಂಬಾ ­ಮೊಟ್ಟೆ ­ಕಟ್ಟಿಕೊಂಡು ಈಜಾಡುತ್ತಿದ್ದ ­ಮೀನುಗಳು ನೆರೆಮಳೆ­ಯಾಗುತ್ತಿದ್ದಂತೆ ಬಯಲಿಗೆ ಬೆದೆ­ಯಾಡಲು ­ಬರ‌್ತವೆ. ­ಒಂದು ಹೆಣ್ಣಿನೊಂ­ದಿಗೆ ­ನಾಲ್ಕಾರು ­ಗಂಡು ­ಮೀನುಗಳು ಹಲುಬಿನ ದನಗಳಂತೆ ­ಮೈಮೇಲೆ ಎಚ್ಚರ­ವಿಲ್ಲದೆ ­ಹಾರಿಕೊಂಡು ­ಏರಿಕೊಂಡು ­ತಮ್ಮ ­ಜನ್ಮ ­ಸಾರ್ಥಕ ಮಾಡಿಕೊಳ್ಳೋಕೆ ­ಪೈಪೋಟಿ ಮಾಡ್ತಿರ‌್ತವೆ.

­ದುರಂತ ­ನೋಡಿ, ­ಹೀಗೆ ­ಮೀನು ­ದ್ದೆ ಬಯಲಿಗೆ ­ಬರೋದು ಹದಮಳೆ ನೆರೆಮಳೆ­ಯಾದರೆ ­ಮಾತ್ರ. ಹೊಟ್ಟೆಯೊಳಗೆ ­ತನ್ನಷ್ಟೇ ­ಗಾತ್ರದ ­ತತ್ತಿಚೀಲ ಕಟ್ಟಿಕೊಂ­ಡಿದ್ದರೂ ­ಮಳೆ ಹದ­ವಾಗದೆ ­ಗಂಡು ­ಹೆಣ್ಣು ಸೇರುವು­ದಿಲ್ಲ. ಕೈಕಾಲುಗ­ಳಿಲ್ಲದ ­ಮೀನುಗಳು ನೀರಿ­ನಲ್ಲಿ ­ಹೇಗೆ ಸೇರುತ್ತವೆ ­ಯೋಚಿಸಿ, ­ಅಂದೆಂಥ ವಿಕಾ­ಸದ ­ವಿಸ್ಮಯ ­ನೋಡಿ. ನೀರಿ­ನಲ್ಲಿ ­ಮೀನು ­ಒಂದರ ­ಮೇಲೆ ­ಒಂದು ­ಸವಾರಿ ­ಮಾಡಲು, ­ತಬ್ಬಿಕೊಳ್ಳಲು ­ಸಾಧ್ಯವೇ ­ಇಲ್ಲ. ­ಹೆಣ್ಣು ­ಮೀನಿನ ­ಹೊಟ್ಟೆ ­ಅಡಿ ­ಇರುವ ಜನನೇಂದ್ರಿಯವನ್ನು ­ಗಂಡು ­ಮೀನಿನ ­ಮೂಗಿನ ತುದಿಯಿರುವ ಪುರುಷಕಾಯ ­ಸೇರಬೇಕು ­ಎಂಥ ­ಅದ್ಭುತ ­ಅಲ್ಲವೇ! ­ಅದಕ್ಕೇ ­ಒಂದು ­ಹೆಣ್ಣು ­ಮೀನಿನ ­ಜೊತೆ ಲೆಕ್ಕವಿಲ್ಲದಷ್ಟು ­ಗಂಡು ­ಮೀನುಗಳು ಜಡೆ­ಕಟ್ಟಿ ಎಚ್ಚರ­ವಿಲ್ಲದೇ ಓಡುತ್ತವೆ. ­

ಮೊಟ್ಟೆ ­ಇಡುವ ­ಯಾವುದೇ ­ಪ್ರಾಣಿ ­ಆಗಲಿ, ­ಮೊಟ್ಟೆ ­ಮರಿ ­ಮಾಡಲು ­ಸೂಕ್ತ ವಾತಾ­ವರಣ, ­ರಕ್ಷಣೆ ­ಸಿಗದೆ ಸೇರುವು­ದಿಲ್ಲ; ­ಅವುಗಳ ­ಮೊಟ್ಟೆ ಮರಿ­ಯಾಗುವುದೂ ­ಇಲ್ಲ. ಗೂಡುಕಟ್ಟದೆ ­ಹಕ್ಕಿಗಳು ಸೇರುವು­ದಿಲ್ಲ, ­ಮೊಟ್ಟೆ ­ಇಡುವುದೂ ­ಇಲ್ಲ. ಹಾಗಾ­ಗಿಯೇ ಪ್ರಾಣಿಗಳಲ್ಲಿ ವೇಶ್ಯಾ­ವಾ­ಟಿಕೆ, ­ಅತ್ಯಾಚಾರ ನಡೆಯುವು­ದಿಲ್ಲ! ­ಅಷ್ಟು ಮಾತ್ರ­ವಲ್ಲ, ­ಸೂಕ್ತ ಪರಿ­ಸರ ­ಒದಗಿ ಬರ­ದಿದ್ದರೆ, ­ಮೀನಿನ ­ಮೊಟ್ಟೆ ಮರಿ­ಯಾಗದೆ ಅಂತರ್‌ ದ­ಹ­ನ­ವಾಗಿ ಹೊಟ್ಟೆಯೊಳಗೇ ­ಕೊಬ್ಬಾಗಿ ಪರಿ­ವರ್ತ­ನೆ­ಯಾಗುತ್ತದೆ.

ಪ್ರಾರಂಭದ ­ಮಳೆ ಭರ­ವ­ಸೆಯಂತೆ ಬಿರುಸಾಗಿ ­ಬಿದ್ದರೆ ಮಲೆ­ನಾ­ಡಿನ ­ಗದ್ದೆ ­ಬಯಲು ­ಎಲ್ಲವೂ ಜಲಚರಗಳ ಮರಿಗಳ ­ತೊಟ್ಟಿಲು. ­ಸೂಕ್ತ ­ಕಾಲಕ್ಕೆ ಸರಿ­ಯಾಗಿ ­ನೆರೆ ­ಮಳೆ ಬರ­ದಿದ್ದರೆ ­ಯಾವುದೇ ­ಮೀನು, ­ಕಪ್ಪೆ, ­ಏಡಿಗಳು ಮರಿ­ಮಾಡುವು­ದಿಲ್ಲ; ­ಮೊಟ್ಟೆಗಳು ಮರಿ­ಯಾಗುವುದೇ ­ಇಲ್ಲ, ­ಜೀವ ಬರುವುದೇ ­ಇಲ್ಲಾ, ­ಎಂಥಾ ­ದುರಂತ!

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This