ಕುಪ್ಪಳಿಯಲ್ಲಿ ಸಾಂಗತ್ಯ..

ಹಾಲಿವುಡ್ ನಲ್ಲಿ ಬಳಸಲಾದ ಅತ್ಯಾಧುನಿಕ ತಾಂತ್ರಿಕತೆ ಭಾರತಕ್ಕೆ, ಬೆಂಗಳೂರಿಗೆ ಬರಲು ವರ್ಷಗಟ್ಟಲೇ ಬೇಕಾಗಿಲ್ಲ. ಕೇವಲ ಎರಡು ತಿಂಗಳಲ್ಲಿ ಆ ತಾಂತ್ರಿಕ ಆವಿಷ್ಕಾರ ಕನ್ನಡ ಸಿನಿಮಾಗಳಲ್ಲೂ ಹರಿದಾಡಬಹುದು. ಆದರೆ ಅದನ್ನು ಬಳಸುವ ಸಂದರ್ಭದಲ್ಲಿ ನಮ್ಮ ನಮ್ಮ ಅಗತ್ಯ ಮತ್ತು ಔಚಿತ್ಯವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಪ್ರೇಕ್ಷಕ ಯಾವುದನ್ನೂ ನಂಬದ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು. ಡಿಜಿಟಲ್ ತಂತ್ರಜ್ಞಾನ ಸಿನಿಮಾ ವಿತರಣೆಯ ಕೆಲಸವನ್ನು ಹಗುರಗೊಳಿಸಿದೆ ಎಂದ ಅವರು, ಕ್ಯೂಬ್ ಇತ್ಯಾದಿ ತಂತ್ರಜ್ಞಾನದಿಂದ ಒಂದೇ ನೆಲೆಯಿಂದ ನೂರಾರು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಸಾಕಷ್ಟು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಬಂದಿವೆ. ಇವುಗಳಿಂದ ಏಕಕಾಲದಲ್ಲಿ ಹಲವು ಪ್ರದರ್ಶನಗಳನ್ನು ತೋರಿಸಲು ಸಾಧ್ಯವಾಗಿದೆ. ಇಂತಹ ಮಲ್ಟಿಫ್ಲೆಕ್ಸ್ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಂದರೆ ಬಹಳ ಅನುಕೂಲವಾದೀತು ಎಂದು ಅಭಿಪ್ರಾಯಪಟ್ಟರು. ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಚಿತ್ರ ನಿರ್ಮಾಪಕಿ ರೇಖಾರಾಣಿ, ಇಂದು ಕಥೆ ಕೇಳುವ ವ್ಯವಧಾನವೇ ಬಹಳಷ್ಟು ನಿರ್ದೇಶಕರು, ನಿರ್ಮಾಪಕರಿಗಿಲ್ಲ. ಹಾಗಾಗಿ ಐದಾರು ಚಿತ್ರ ಸೇರಿಸಿ ಒಂದು ಕಥೆ ಹೆಣೆದು ಚಿತ್ರ ರೂಪಿಸುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು. ಚಿತ್ರಕಥೆ ಬರೆಯುವುದು ಕಷ್ಟಕರವೆನ್ನುವುದಕ್ಕಿಂತಲೂ ಅತ್ಯಂತ ಸೃಜನಶೀಲವಾದುದು. ಅದು ಹೆಚ್ಚು ಸಮಯವನ್ನು ಬೇಡುವಂಥದ್ದು ಎಂದ ಅವರು, ಸಿನಿಮಾ ಮಾಧ್ಯಮವನ್ನು ತಿಳಿಯಲು ಬಯಸುವ ಆಸಕ್ತ ಯುವಜನರಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಮಾತನಾಡಿ, ಸಾಂಗತ್ಯ ಮೂರು ವರ್ಷಗಳಿಂದ ಇಂತಹ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಜನರಿಗೆ ಮಾಹಿತಿ ಒದಗಿಸುವ ಇಂತಹ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಆಶಿಸಿದರು.

ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಎರಡು ದಿನಗಳಲ್ಲಿ ಆರು ಚಿತ್ರಗಳು ಪ್ರದರ್ಶಿತವಾದವು. ಚಿತ್ರ ಶಿಬಿರದಲ್ಲಿ ಪ್ರದರ್ಶಿತವಾದ ಕನ್ನಡದ ಒಲವೇ ಮಂದಾರ ಚಲನಚಿತ್ರದ ಕುರಿತು ಮುಕ್ತ ಚರ್ಚೆ ನಡೆಯಿತು. ಕೆಲವೊಂದು ಸಣ್ಣಪುಟ್ಟ ಲೋಪದೋಷಗಳ ಮಧ್ಯೆ ಒಂದು ಒಳ್ಳೆಯ ಪ್ರಯತ್ನ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ ಗುರುಸ್ವಾಮಿ, ಮೊದಲ ದಿನದಂದು ಸಿನಿಮಾದಲ್ಲಿ ನಿರೂಪಣಾ ಕೌಶಲ್ಯದ ಕುರಿತು ಮಾತನಾಡಿದರು. ಕೊಪ್ಪದ ವಕೀಲರಾದ ಸುಧೀರ್ ಕೊಪ್ಪ ಮುರೊಳ್ಳಿ ನಿರೂಪಿಸಿದರು. ಆರು ಚಿತ್ರಗಳ ಪೈಕಿ ಐದು ಚಿತ್ರಗಳ ಚರ್ಚೆಯನ್ನು ಟೀನಾ ಶಶಿಕಾಂತ್, ನಿರಂಜನ್, ದೇವನೂರು ಚಂದ್ರು, ಪರಮೇಶ್ ಗುರುಸ್ವಾಮಿ ನಡೆಸಿಕೊಟ್ಟರು. ಶಿಬಿರಾರ್ಥಿಗಳಾದ ಅಕ್ಕಿಕಾಳು ವೆಂಕಟೇಶ್, ಮಂಜುನಾಥ್, ಶಶಿಧರ್ ಹೊಸಕೋಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.]]>

‍ಲೇಖಕರು G

February 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

3 ಪ್ರತಿಕ್ರಿಯೆಗಳು

  1. Manjula Narayanarao

    Very nice experience neatly organised and programmes very well made.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Manjula NarayanaraoCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: