ಕೆಂಡಸಂಪಿಗೆ ಇನ್ನಿಲ್ಲ

Fullscreen capture 1012009 94655 PM
‘ಕೆಂಡಸಂಪಿಗೆ’ ಇನ್ನಿಲ್ಲ. ಅಬ್ದುಲ್ ರಶೀದ್ ಪ್ರೀತಿಯಿಂದ ಆರಂಭಿಸಿದ, ಅನೇಕರನ್ನು ಕಂಪ್ಯೂಟರ್ ತೆರೆಯ ಮುಂದೆ ಎಳೆ ತಂದು ಕೂರಿಸಿದ ‘ಕೆಂಡಸಂಪಿಗೆ’ ಇನ್ನಿಲ್ಲ. ಇದು ಆನ್ಲೈನ್ ಪತ್ರಿಕೆಗಳ ವಾಸ್ತವ ಲೋಕಕ್ಕೆ ಹಿಡಿದ ಕನ್ನಡಿಯೇ?
ಕನ್ನಡದ ಆನ್ಲೈನ್ ಲೋಕ ಖಾಸಗಿ ಲೋಕದಲ್ಲೇ ಗಿರಕಿ ಹೊಡೆಯುತ್ತಿದ್ದಾಗ ಅದಕ್ಕೆ ಸಾಹಿತ್ಯ ಪತ್ರಿಕೆಯ ಸ್ಪರ್ಶವನ್ನು ನೀಡಿದ್ದು ಕೆಂಡಸಂಪಿಗೆ. ಅಬ್ದುಲ್ ರಶೀದ್ ತಮ್ಮ ‘ಮೈಸೂರ್ ಪೋಸ್ಟ್’ ಮೂಲಕ ಒಂದು ದೊಡ್ಡ ಓದುಗ ಬಳಗವನ್ನು ಕಟ್ಟಿಕೊಂಡರು. ಆ ಬಳಗವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕರೆದೊಯ್ಯಲು ಕೆಂಡಸಂಪಿಗೆ ಕಟ್ಟಿದರು. ಇಲ್ಲಿನ ಅಂಕಣಗಳು ಕನ್ನಡಕ್ಕೆ ಒಂದು ಒಳ್ಳೆಯ ಓದನ್ನು ದೊರಕಿಸಿಕೊಟ್ಟಿತು. ಕೆಂಡ ಸಂಪಿಗೆ ಗೆದ್ದಿತು ಎಂದುಕೊಳ್ಳುತ್ತಿರುವಾಗಲೇ ಇನ್ನಿಲ್ಲ ಎಂಬ ಸುದ್ದಿ.
ಈ ಮಧ್ಯೆ ಕೆಂಡ ಸಂಪಿಗೆಯ ಒಳ್ಳೆಯ ಬರಹಗಳು ಪುಸ್ತಕ ರೂಪದಲ್ಲಿ ಬರುತ್ತಿದೆ ಎಂಬ ಸುದ್ದಿ ಇದೆ. ಅದು ಖಂಡಿತಾ ಓದುಗರ ಕೈಯಲ್ಲಿರುವಂತಾಗಬೇಕು. ಕೆಂಡಸಂಪಿಗೆಯ ಘಮ ನಮ್ಮೊಳಗೆ ಆಡುತ್ತಿರಬೇಕು. ಒಂದು ಒಳ್ಳೆಯ ಓದನ್ನು ಕೊಟ್ಟ ರಶೀದರಿಗೆ ವಂದನೆಗಳು

ಎಚ್ ಆನಂದರಾಮ ಶಾಸ್ತ್ರಿ ಅವರು ಬರೆದ ಕವಿತೆಯೊಂದು ಇಲ್ಲಿದೆ
ಘಮಘಮ ಪರಿಮಳ
ಮಸ್ತಿಷ್ಕದ ನಾಸಿಕಕ್ಕೆ;
ಮಧುರಾನುಭವ
ಅದರ ಹೃದಯಕ್ಕೆ
ಕಡು ಸುವಾಸನೆಯ
ಕೆಂಡಸಂಪಿಗೆ
ಇನ್ನಿಲ್ಲ!
ನಡುನೀರಿನಲ್ಲಿ
ಮುಳುಗಿಹೋಯಿತಲ್ಲ!
ಮಿದುಳ ಕಣ್ಣಿಗೆ ಅದರಂದ
ಸೊಂಪಾಗಿತ್ತು,
ಸಂಪಿಗೆ
ಹದುಳ ತಪ್ಪಿ
ಹೊರಟುಹೋಯಿತೇ?
ಘ್ರಾಣಿಸಿದವರೆ ಎಲ್ಲ,
ಪೋಷಿಸಿದವರಿಲ್ಲ
ಎಂದೇ
ಮುದುಡಿತೇ?
ಏನೇ ಆದರೂ
ಇದು ಸಲ್ಲ
ಇದು ಸಲ್ಲ.
-ಎಚ್. ಆನಂದರಾಮ ಶಾಸ್ತ್ರೀ


‍ಲೇಖಕರು avadhi

October 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. vasanth

  It is very sad to see sudden end to wonderful literary website.
  I used to visit kendasampige every day.hereafter.
  i feel sad about it.
  Vasanth

  ಪ್ರತಿಕ್ರಿಯೆ
 2. sritri

  ಸುದ್ದಿ ತಿಳಿದು ಬೇಸರವಾಯಿತು. ಆದರೆ ಅನಿರೀಕ್ಷಿತವೆನಿಸಲಿಲ್ಲ.
  ಶಾಸ್ತ್ರಿಗಳೆಂದಂತೆ,
  ಏನೇ ಆದರೂ
  ಇದು ಸಲ್ಲ
  ಇದು ಸಲ್ಲ

  ಪ್ರತಿಕ್ರಿಯೆ
 3. naveedahamedkhan

  ಕೆಂಡಸಂಪಿಗೆ ಇನ್ನಿಲ್ಲ ಅನ್ನುವುದೇ ಅಸಹನೀಯ. ಕೆಲಸದ ಒತ್ತಡಗಳೊಂದಿಗೆ ಪ್ರಸ್ತುತ ವಿದ್ಯಮಾನಗಳ ನೋವು,ಆಘಾತಗಳಿಂದ ಕೆಲವು ಗಳಿಗೆ ಸಾಂತ್ವನ ನೀಡುತ್ತಿದ್ದ ಕೆಂಡಸಂಪಿಗೆ ಇರಬೇಕಿತ್ತು.
  -ತುಮಕೂರ್ ನವೀದ್

  ಪ್ರತಿಕ್ರಿಯೆ
 4. udayakumar habbu

  “ಕೆಂಡ ಸಂಪಿಗೆ” ನಿಂತಿದ್ದು ನಮ್ಮೆಲ್ಲರಿಗೆ ತುಂಬಲಾರದ ನಷ್ಟವೆಂದರೆ ಕ್ಲೀಷೆಯಾದೀತು. ನಿಜಕ್ಕೂ ನಾನು ಒಂದು ಒಳ್ಳೆಯ ಓದಿನ ತಾಣವನ್ನು ಮಿಸ್ ಮಾಡ್ಕೋತಿದೀನಿ.ಸೊರಿ ಕೆಂಡ ಸಂಪಿಗೆ ನೀನು ಮತ್ತೆ ಬಂದು ನಿನ್ನ ಪರಿಮಳವನ್ನು ಹರಡು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: