ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಅಂತಿಮ ಭಾಗ

ಇಲ್ಲಿಯವರೆಗೆ

ಮಲ್ಲಿಕಾರ್ಜುನ ಹೊಸಪಾಳ್ಯ

ಕೆನೆತ್ ಕಾಲದಲ್ಲಿ ರಾಂಪುರಕ್ಕೂ ಬೈಲೂರಿಗೂ ನೇರ ರಸ್ತೆ ಇರಲಿಲ್ಲ. ವಾಹನದಲ್ಲಾದರೆ ಕೊಳ್ಳೆಗಾಲಕ್ಕೆ ಹೋಗಿಯೇ ಬರಬೇಕಿತ್ತು. ಆದರೆ 19 ಮೈಲಿ ಉದ್ದದ ಒಂದು ಕಾಲ್ದಾರಿ ಇರುತ್ತದೆ, ಕೆನೆತ್ ಅದನ್ನೇ ಬಳಸಿ ರಾಂಪುರದಿಂದ ನಡೆಯುತ್ತಾ ಬೈಲೂರು ತಲುಪುತ್ತಾನೆ. ಆದರೆ ಈಗ ಲೊಕ್ಕನಹಳ್ಳಿ ಬಳಿಯಿಂದ ರಾಂಪುರಕ್ಕೆ ನೇರ ಸುಮಾರಾದ ಟಾರು ರಸ್ತೆ ಆಗಿದ್ದರಿಂದ ನಮಗೆ ಆ ಸಮಸ್ಯೆ ಇರಲಿಲ್ಲ,

ರಾಂಪುರದ ನರಭಕ್ಷಕನ ಮೂಲ ಮಲೆಮಹದೇಶ್ವರ ಬೆಟ್ಟಸಾಲಿನ ಪೊನ್ನಾಚಿ ಕಾಡು. ಅಲ್ಲಿನ ಕಾಫéಿತೋಟಗಳಲ್ಲಿ ದನ-ಕರುಗಳನ್ನು ಹಿಡಿದು ಉಪಟಳ ಕೊಡುತ್ತಿತ್ತು. ಇದರಿಂದ ಬೇಸತ್ತ ಒಬ್ಬ ಪ್ಲಾಂಟರ್ ಕೊಯಮತ್ತೂರಿನಿಂದ ದೊಡ್ಡ ಜಿನ್ ಕತ್ತರಿಯನ್ನು ಮಾಡಿಸಿ ತಂದು ಹುಲಿ ಅರ್ದಂಬರ್ಧ ತಿಂದಿದ್ದ ಹಸುವೊಂದರ ಕಳೇಬರದ ಹತ್ತಿರ ಒಡ್ಡುತ್ತಾರೆ. ಹಸು ತಿನ್ನಲು ಬಂದ ಹುಲಿಯ ತಲೆಭಾಗ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಸತತ ಎರಡು ದಿನಗಳ ಕಾಲ ಆರ್ಭಟಿಸುತ್ತಾ ಒದ್ದಾಡಿದ ಹುಲಿ ಕೊನೆಗೂ ಕತ್ತರಿಯಿಂದ ಬಿಡಿಸಿಕೊಳ್ಳುತ್ತದೆ, ಆದರೆ ಎಳೆದಾಟದಲ್ಲಿ ಅದರ ಒಂದು ಕಣ್ಣು ಮತ್ತು ಒಂದು ಕಿವಿ ಕಿತ್ತು ಹೋಗುತ್ತವೆ. ಮುಖವೆಲ್ಲಾ ವಿಕಾರವಾಗುತ್ತದೆ.

ಎರಡು ತಿಂಗಳು ಹುಲಿಯ ಸದ್ದೇ ಇರುವುದಿಲ್ಲ, ಎಲ್ಲರೂ ಅದು ಸತ್ತಿತೆಂದೇ ತಿಳಿಯುತ್ತಾರೆ, ಆದರೆ ಒಂದು ದಿನ ಜೈಕೇನ್ ಎಂಬ ಸೋಲಿಗನ ಹೆಂಡತಿಯನ್ನು ಆತನ ಕಣ್ಣೆದುರಿಗೇ ಹುಲಿ ಹೊತ್ತೊಯ್ಯುತ್ತದೆ. ಒಕ್ಕಣ್ಣು, ಒಕ್ಕಿವಿಯ, ವಿಕಾರ ಮುಖದ ಹುಲಿಯನ್ನು ಜೈಕೇನ್ ಸ್ಪಷ್ಟವಾಗಿ ನೋಡುತ್ತಾನೆ.

ಹೀಗೆ ದನಗಳನ್ನು ಹಿಡಿಯುತ್ತಿದ್ದ ಸಾಧಾರಣ ಹುಲಿ ನರಭಕ್ಷಕನಾಗಿ ಪರಿವರ್ತನೆಯಾಗುತ್ತದೆ.

ಅದರ ಮುಂದಿನ ಬಲಿ- ನಾವೀಗ ಹೋಗುತ್ತಿರುವ ರಾಂಪುರದಲ್ಲಾಗುತ್ತದೆ. ಆ ನಂತರದ ಬಲಿ ನಾವೀಗಾಗಲೇ ನೋಡಿದ ಬೈಲೂರಿನ 21ನೇ ಮೈಲಿಕಲ್ಲಿನ ಬಳಿ. ಹೀಗೆ ಮೂರು ಜನರನ್ನು ಹುಲಿ ಹಿಡಿದ ನಂತರ ಜನ ಭಯಭೀತರಾಗುತ್ತಾರೆ. ಆಗ ಕೊಯಮತ್ತೂರು ವಿಭಾಗದ ಅರಣ್ಯಾಧಿಕಾರಿ ಕೆನೆತ್ಗೆ ಪತ್ರ ಬರೆದು ಕರೆಸಿಕೊಳ್ಳುತ್ತಾನೆ. ಕೆನೆತ್ ಮೊದಲು ಭೇಟಿ ನೀಡುವುದು ರಾಂಪುರಕ್ಕೆ.

ರಾಂಪುರದ ಹೆಸರನ್ನು ವೀರಪ್ಪನ್ನಿಂದಾಗಿ ಬಹುತೇಕರು ಕೇಳಿರಬಹುದು. ತಮ್ಮವನನ್ನು ಪೋಲೀಸರು ಕೊಂದ ಕಾರಣಕ್ಕಾಗಿ ರಾಂಪುರದ ಸ್ಟೇಷನ್ ಮೇಲೆ ದಾಳಿ ಮಾಡಿ ಐವರು ಪೇದೆಗಳನ್ನು ವೀರಪ್ಪನ್ ಹತ್ಯೆ ಮಾಡಿರುತ್ತಾನೆ. ಅಲ್ಲದೆ ಪೊಲೀಸ್ ಅಧಿಕಾರಿಗಳಾದ ಹರಿಕೃಷ್ಣ ಮತ್ತು ಶಕೀಲ್ ಅಹಮದ್ರನ್ನು ಮೋಸದಿಂದ ಕೊಂದ ಪಾಲಾರ್ ಸೇತುವೆಯೂ ರಾಂಪುರಕ್ಕೆ ಸನಿಹದಲ್ಲೇ ಇದೆ.

ಹೀಗೆ ಹಿಂದೆ ನರಭಕ್ಷಕನ ಕಾರಣಕ್ಕೂ, ಇತ್ತೀಚೆಗೆ ವೀರಪ್ಪನ್ ಹತ್ಯೆಗಳ ಕಾರಣಕ್ಕೂ ರಾಂಪುರ ಖ್ಯಾತಿ ಗಳಿಸಿದೆ.

ಈ ರಾಂಪುರದಲ್ಲಿ ಕೆನೆತ್ ಉಳಿದುಕೊಂಡಿದ್ದ ಅರಣ್ಯ ವಸತಿಗೃಹವನ್ನು ನೋಡಲು ನಾವು ಹೊರಟಿದ್ದೆವು. ಇನ್ನೇನು ರಾಂಪುರ ಸ್ವಲ್ಪದೂರ ಇದೆ ಎನ್ನುವಂತೆ ಕೇಪಿಯ ಸಹೋದ್ಯೋಗಿ ಕಾಯುತ್ತಿದ್ದರು. ಆರೋಗ್ಯಸ್ವಾಮಿ ಎಂಬ ಸ್ಥಳೀಯರೊಂದಿಗೆ ವಸತಿಗೃಹದತ್ತ ಹೆಜ್ಜೆ ಹಾಕಿದೆವು. ಐದತ್ತು ನಿಮಿಷ ನಡೆದ ನಂತರ ಒಂದು ಮೆಟ್ರಿಕ್ ಪೂರ್ವ ಸಕರ್ಾರಿ ಬಾಲಕರ ವಸತಿ ನಿಲಯದ ಎದುರು ನಿಂತರು. ಅವರ ಮುಖದಲ್ಲಿ ನಾವೀಗಾಗಲೇ ನಿಗದಿತ ಸ್ಥಳ ತಲುಪಿದ್ದೇವೆಂಬ ಭಾವನೆ ಇತ್ತು. ನಾವು ಸುತ್ತ-ಮುತ್ತ ನೋಡಿದೆವು. ವಸತಿಗೃಹ ಕಣ್ಣಿಗೆ ಬೀಳಲಿಲ್ಲ.

‘ಎಲ್ಲಿದೆ ಐಬಿ?’- ಪ್ರಶ್ನೆ ಹಾಕಿದೆವು.

‘ಇದೇ ಐಬಿ, ಅದುನ್ನೆಲ್ಲಾ ಪೂತರ್ಿ ಡೆಮಾಲಿಶ್ ಮಾಡಿ ಈ ಹಾಸ್ಟೆಲ್ ಕಟ್ಟೆವ್ರೆ’ ಎಂದರು ಆರೋಗ್ಯಸ್ವಾಮಿ .

‘ಅಯ್ಯೋ ಶಿವನೇ!’ ಎಂಬ ಉದ್ಘಾರ ನಮ್ಮಿಂದ ಹೊರಟಿತು. ಏಳೆಂಟು ವರ್ಷಗಳಿಂದ ಈಚೆಗೆ ಐಬಿಯನ್ನು ಕೆಡವಿಹಾಕಿದ್ದರು. ಅದರ ಕುರುಹುಗಳಾಗಿ ಹಳೆಯ ಗೋಡೆಕಲ್ಲುಗಳು ಅಲ್ಲೆಲ್ಲಾ ಬಿದ್ದಿದ್ದವು, ಆಗ ಬಳಸಲ್ಪಡುತ್ತಿದ್ದ ಚೌಕಾಕಾರದ ನೀರಿನ ದೊಡ್ಡ ಟ್ಯಾಂಕಿ ಮಾತ್ರ ಹಾಗೇ ಇತ್ತು. ಆದರೆ ಅದೀಗ ನಿರುಪಯೋಗಿ. ಕೆನೆತ್ ಉಳಿದಿದ್ದ ವಸತಿಗೃಹ ನೋಡಲು ಬಂದ ನಮಗೆ ಆಘಾತವಾಗಿತ್ತು. ಹೆಚ್ಚು ಹೊತ್ತು ಅಲ್ಲಿರಲು ಮನಸ್ಸಾಗಲಿಲ್ಲ.

ಆ ಊರಲ್ಲಿ ನಮ್ಮನ್ನು ಟೀ ಕುಡಿಯಲು ಆಹ್ವಾನಿಸಿದ ರಂಗಸ್ವಾಮಿ, ರಾಂಪುರದ ಐಬಿಯನ್ನೇ ಕರಾರುವಾಕ್ಕಾಗಿ ಹೋಲುವ ಐಬಿಯೊಂದು ಹತ್ತಿರದ ಕೌದಳ್ಳಿಯಲ್ಲಿದೆ ಎಂಬ ಮಾಹಿತಿ ನೀಡಿದರು. ಅಲ್ಲಿಗೆ ಹೋದೆವು. ಗೇಟು ಹಾಕಿ ಬೀಗ ಜಡಿದಿದ್ದರು. ಅಲ್ಲಿಂದ ಅನತಿ ದೂರದಲ್ಲಿ ಐಬಿ ಕಾಣುತ್ತಿತ್ತು. ಇನ್ನೇನು ಮಾಡುವ್ಯದು? ಗೋಡೆ ಹಾರಿದೆವು! ಹೆಂಚಿನಲ್ಲಿ ನಿಮರ್ಾಣವಾಗಿದ್ದ ಆಕರ್ಷಕ ಕಟ್ಟಡ. ಇಷ್ಟು ಸುಂದರವಾಗಿದ್ದ ಕಟ್ಟಡವನ್ನು ಕೆಡವಿ ಹಾಕಿದ್ದಾರಲ್ಲ ಎಂದು ರಾಂಪುರದ ಐಬಿಯನ್ನು ನೆನೆಸಿಕೊಂಡು ಬೇಜಾರಾಯಿತು.

ಅಲ್ಲಿಂದ ಹೊರಟು ಪಾಲಾರ್ ಸೇತುವೆ ದಾಟಿ ಮಲೆಮಹದೇಶ್ವರ ಕಾಡಿನ ದಾರಿಯಲ್ಲಿ ಮುಂದುವರಿದೆವು. ಪೊನ್ನಾಚಿಕಡೆಗೆ ಹೋಗುವ ರಸ್ತೆ ತಿರುವು ಸಿಕ್ಕುವ ವೇಳೆಗೆ ಕತ್ತಲಾಗುತ್ತಿತ್ತು. ಸುಮಾರು ಹೊತ್ತು ಅಲ್ಲಿನ ಎತ್ತರದ ಪ್ರದೇಶದಲ್ಲಿ ನಿಂತು ಕಾಡು ನೋಡಿದೆವು. ನಮ್ಮ ಕಣ್ಣೆದುರಿಗೆ ಅಗಾಧವಾಗಿ ಹಬ್ಬಿದ್ದ ಕಾನನ ಸಂಜೆಗಪ್ಪಿನಲ್ಲಿ ರಮ್ಯವಾಗಿತ್ತು. ಸುಮಾರು ಎಂಭತ್ತು ವರ್ಷಗಳ ಹಿಂದೆ ಇದೇ ಕಾಡಿನ ಯಾವುದೋ ಮೂಲೆಯಲ್ಲಿ ದನ ಹಿಡಿದ ಹುಲಿಯೊಂದು ನಂತರ ನರಭಕ್ಷಕನಾಗಿ, ಅರವತ್ತು ಮೈಲಿ ಸುತ್ತಳತೆಯ ಜನರನ್ನು ಭಯಗೊಳಿಸಿ, ಕೆನೆತ್ ಅಂಡರ್ಸನ್ ಎಂಬ ಬ್ರಿಟಿಷ್ ಬೇಟೆಗಾರನ ಕೈಯಲ್ಲಿ ಸತ್ತು, ಆ ಅನುಭವಗಳನ್ನು ಆತ ಪುಸ್ತಕರೂಪದಲ್ಲಿ ಬರೆದು, ಅದಾಗಿ ಎಷ್ಟೋ ವರ್ಷಗಳ ನಂತರ ತೇಜಸ್ವಿಯವರು ಆ ಅನುಭವಗಳನ್ನು ಕನ್ನಡಕ್ಕಿಳಿಸಿ, ಅದನ್ನು ಓದಿದ ನಾವು ಆ ಜಾಗಗಳನ್ನು ಹುಡುಕಾಡುತ್ತಾ ಅಲೆದಾಡುತ್ತಾ . . . . . . .

* * *

 

ಮಲ್ಲಿಕ್ ಮುಂದೆ ಯಾವ ಜಾಗ, ಜಲ್ದಿ ಜಲ್ದಿ ಡಿಸೈಡ್ ಮಾಡು..?-ಪ್ಯಾಟಿಯ ಪ್ರಶ್ನೆ

ಜವಳಗಿರಿ ನರಭಕ್ಷಕ, ಇಲ್ಲಾ ಸೂಲಕುಂಟೆ ನರಭಕ್ಷಕನ ಹುಡುಕ್ಕೊಂಡೋಗನ- ನನ್ನ ಉತ್ತರ.

ರೀ ಆ ತ್ಯಾಗಥರ್ಿ ನರಭಕ್ಷಕನ್ನ ಹೊಡೆದ ಜಾಗ ನಮ್ಮೂರಿಗೆ ಭಾಳ ಹತ್ರ ಅದೆ. ಅಲ್ಲಿಗೆ ಬನ್ನಿ ಹೋಗಾನ ನಂದೀಶ್ ಆಹ್ವಾನ.

ರಾಂಪುರದಿಂದ ಇನ್ನೂ ನಮ್-ನಮ್ಮ ಊರುಗಳಿಗೇ ಹೋಗಿಲ್ಲ, ಆಗಲೇ ಘನ ಗಂಭೀರವಾಗಿ ಮುಂದಿನ ಪ್ಲ್ಯಾನ್ ಡಿಸ್ಕಸ್ ಮಾಡುತ್ತಿದ್ದ ನಮ್ಮನ್ನು ನೋಡಿ ಕೇಪಿ-ಸೀಮಾ ನಗುತ್ತಿದ್ದರು.

ನಾವು ಓಡಾಡಿ ನೋಡಿದ ಸ್ಥಳಗಳ ಮ್ಯಾಪ್

ಮುಗಿಯಿತು … (ಸಧ್ಯಕ್ಕೆ!)

‍ಲೇಖಕರು G

October 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. Shivashankar

  ಕುತೂಹಲಭರಿತವಾಗಿ ಮೂಡಿಬಂದ ಸರಣಿ.ಕೊನೆಯಲ್ಲಿ ನೀಡಿರುವ ಮ್ಯಾಪ್ ಉಪಯುಕ್ತ. ಕೆನೆತ್ ಬೇಟೆಯಾಡಿದ ಸ್ಥಳಗಳನ್ನೆಲ್ಲಾ ಸೇರಿಸಿ ಟೂರಿಸಂ ಪ್ಯಾಕೇಜ್ ಮಾಡಿದರೆ ಚೆನ್ನಾಗಿರುತ್ತದೆ ಅಲ್ಲವೇ?

  ಪ್ರತಿಕ್ರಿಯೆ
 2. Tarabenahalli Shadakshari

  ನಿರೂಪಣೆ ತುಂಬಾ ಚೆನ್ನಾಗಿದೆ ಮಲ್ಲಿ….
  ನಿಮ್ಮೊಂದಿಗೆ ನಮ್ಮನ್ನೂ ಕರೆದೊಯ್ಯುತ್ತಿರುವುದಕ್ಕೆ ತುಂಬಾ ಧನ್ಯವಾದಗಳು…
  ಕೇ.ಪಿ.ಗೆ …ಪ್ಯಾಟಿಗೂ ಕೂಡ…ನನ್ನ ನೆನಪುಗಳು…
  ಇಂತಿ ನಿಮ್ಮ ಪ್ರೀತಿಯ…
  ಷಡಕ್ಷರಿ ತರಬೇನಹಳ್ಳಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: