ಕೆಲವರು ಹಾಗಿರ್ತಾರೆ….

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ಕೆಲವರು ಹಾಗಿರ್ತಾರೆ…
ಪಟಪಟ ಅಂತ ಮಾತಾಡ್ತಾರೆ. ಚಕಚಕ ಅಂತ ಕೆಲಸ ಮಾಡ್ತಾರೆ. ಒಂದು ರಾಶಿ ಕೆಲಸಗಳನ್ನು ನಾನು ಮಾಡ್ತೀನಿ ಅಂತ ಒಪ್ಕೊಂಡು ಬಿಡ್ತಾರೆ. ಯಾವುದಾದರೂ ಒಂದು ದೊಡ್ಡ ಕೆಲಸ ಮುಗಿಸಿದ ತಕ್ಷಣ ಸ್ವಲ್ಪ ಆರಾಮಾಗಿಬಿಡೋಣ ಅಂದುಕೊಳ್ಳೋದೇ ಇಲ್ಲ. ಕೈಯಲ್ಲಿರೋ ಕೆಲಸ ಮುಗಿಯೋದಕ್ಕೆ ಮುಂಚೇನೇ ಮುಂದೇನು ಮಾಡೋದು ಅಂತ ಯೋಚನೆ ಮಾಡ್ತಿರ್ತಾರೆ.
ನನ್ನ ಅಜ್ಜಿ ಇಂಥೋರೇ. ಅವರಿಗೆ ಒಂದಲ್ಲ ಒಂದು ಕೆಲಸ ಮಾಡ್ತಿರಲೇ ಬೇಕು. ಅವರು ಮಾಡಿದ್ರೆ ಹೋಗ್ಲಿ, ಅವರ ಕಣ್ಣಿಗೆ ಕಾಣೋರು ಯಾರೂ ಸುಮ್ಮನೆ ಕೂತಿರಬಾರದು. ನಿಮ್ಮಜ್ಜಿ ಕಂಬನಾದರೂ ಸುತ್ತು ಅನ್ನುವಂಥೋರು ಅಂತಿರ್ತಾರೆ ಅಮ್ಮ. ಇಂಥವರಿಗೆ ತಡಿ, ಸ್ವಲ್ಪ ಸುಧಾರಿಸ್ಕೋ ಅಂತೇನಾದ್ರೂ ಹೇಳಿದ್ರೆ’ ನೀನೆಂಥ ಮನುಷ್ಯ ಅನ್ನೋ ಹಾಗೆ ನೋಡ್ತಾರೆ. ಇಂಥವರಿಗೆ ಕ್ಯೂನಲ್ಲಿ ನಿಲ್ಲೋದಂದ್ರೆ ರೇಜಿಗೆ. ಟ್ರಾಫಿಕ್ ಜಾಮ್‌ನಲ್ಲಿ ಇಂಥೋರು ಸಿಕ್ಕಿಹಾಕಿಕೊಂಡು ಬಿಟ್ರೆ ಮುಗೀತು.

ಒಂದಿವಸ ಮಂಗಳೂರಿಂದ ಬೆಂಗಳೂರಿಗೆ ಟ್ರೇನಲ್ಲಿ ಹೋಗ್ತಿದ್ದೆ. ಅದೇನು ತೊಂದ್ರೆ ಆಯ್ತೋ ಏನೋ, ಮೈಸೂರು ದಾಟಿದ ಮೇಲೆ ಅಲ್ಲೆಲ್ಲೋ ನಿಲ್ಲಿಸಿಬಿಟ್ರು. ಎಷ್ಟು ಹೊತ್ತಾದರೂ ಹೊರಡಲೇ ಇಲ್ಲ. ನನ್ನ ಎದುರುಗಡೆ ಸೀಟಲ್ಲಿ ಕೂತಿದ್ದ ಅಂಕಲ್ ಒಬ್ಬರು ಸಣ್ಣಗೆ ಇರಿಟೇಟ್ ಆಗ್ತಿದ್ದಾರೆ ಅನಿಸ್ತಿತ್ತು. ವಾಚ್ ನೋಡಿಕೊಳ್ಳೋದು, ಕಿಟಕಿಯಿಂದ ಇಣಕೋದು ಮಾಡುತ್ತಾ ಚಡಪಡಿಸುತ್ತಿದ್ದೋರು, ಇದ್ದಕ್ಕಿದ್ದ ಹಾಗೆ ಟ್ರೇನಿನ ಬಾಗಿಲ ಬಳಿ ಹೋಗಿ ಬಾಗಿಲನ್ನು ಒದೆಯತೊಡಗಿದರು. ಇಂಥವರನು? ನೋಡಿಯೇ ಕಬೀರ್ ಹೇಳಿರಬೇಕು:
ಧೀರೇ ಧೀರೇ ರೇ ಮನ
ಧೀರೇ ಸಬ್ ಕುಚ್ ಹೋಯ್
ಮಾಲಿ ಸೀಂಚೇ ಸೌ ಗಡಾ
ರಿತು ಆಯೇ ಫಲ್ ಹೋಯ್
ಅದಲ್ಲದೇ ಇಂಥವರಿಗೆ ಎಲ್ಲರ ಮೇಲೆ ಚಿಕ್ಕದೊಂದು ಅನುಮಾನ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ತುಂಬ ಬೇಗ ಇರಿಟೇಟ್ ಆಗ್ತಾರೆ. ಕೋಪಾನಂತೂ ಕೇಳಲೇಬೇಡಿ. ಬೇಕಾದ್ರೆ ಗಮನಿಸಿ ನೋಡಿ, ಈ ರೀತಿ ಜನ ಯಾವಾಗ್ಲೂ ಎಲ್ಲಿಗೋ ಹೋಗಬೇಕಾಗಿರೋರ ಥರ ಗಡಿಬಿಡಿಯಲ್ಲಿರ್ತಾರೆ. ಆಡುವ ಪ್ರತಿಯೊಂದು ಆಟದಲ್ಲೂ ತಾವೇ ಗೆಲ್ಲಬೇಕು ಅನ್ನೋ ಹಟ ಇವರದು. ಎಲ್ಲರೂ ನಮ್ಮನ್ನು ಗುರುತಿಸಲಿ ಎಂಬ ಹಂಬಲ. ನಾನೆಷ್ಟು ಸಾಧಿಸಿದ್ದೀನಿ ಅನ್ನೋದು ಇವರಿಗೆ ಮುಖ್ಯವೇ ಹೊರತು, ಸಾಧನೆಯ ಗುಣಮಟ್ಟ ಅಲ್ಲ. ಆದರೆ ಮಾಡಬೇಕಾದ್ದನ್ನು ಅಚ್ಚುಕಟ್ಟಾಗಿ ಮಾಡಿ ಸರಿಯಾದ ಸಮಯಕ್ಕೆ ಮುಗಿಸುತ್ತಾರೆ. ಇವರ ಆತುರದ ಗಾಬರಿಯ ಸ್ವಭಾವದಿಂದ ಇವರಿಗೆ ಹೃದಯ ಸಂಬಂಧಿ ತೊಂದರೆಗಳು, ರಕ್ತದೊತ್ತಡಗಳನ್ನು ಬಳುವಳಿಯಾಗಿ ಕೊಡುತ್ತದೆ. ಮನಶ್ಯಾಸ್ತಜ್ಞರು ಇಂಥ ಸ್ವಭಾವದವರನ್ನೆಲ್ಲ ಟೈಪ್ ಎ ವ್ಯಕ್ತಿತ್ವದವರು ಅಂತ ಕರೆದರು.
ಇನ್ನೊಂದು ಥರದವರಿರುತ್ತಾರೆ. ನೀವೇನೇ ತಿಪ್ಪರಲಾಗ ಹಾಕಿದ್ರೂ ಹೇಳಿದ ಕೆಲಸ ನೀವು ಹೇಳಿದ ಸಮಯಕ್ಕೆ ಮಾಡಿ ಕೊಡೋದಿಲ್ಲ. ಅವರ ಮನಸ್ಸಿಗೆ ಬಂದಾಗಲೇ ಮಾಡೋದು. ಅವರಿಗೇನಾದರೂ ಮಾಡಬೇಕು ಅನ್ನಿಸಿದ್ರೆ ಸಿಕ್ಕಾಪಟ್ಟೆ ಕಷ್ಟ-ಇಷ್ಟಪಟ್ಟು ಕೆಲಸ ಮಾಡುತ್ತಾರೆ. ಜನರ ಜೊತೆಗೂ ಸಮಯದ ಜೊತೆಗೂ ಅವರಿಗೆ ಜಗಳ ಇರುವುದಿಲ್ಲ. ಆರಾಮಾಗಿ ಖುಷಿ ಖುಷಿಯಾಗಿ ಇರುತ್ತಾರೆ. ಅವರು ಸಂದರ್ಭಗಳನ್ನು ಒಪ್ಪಿಕೊಂಡು ಅದರ ಪ್ರಕಾರ ಕೆಲಸ ಮಾಡುತ್ತಾರೆ.
ಸಾಮಾನ್ಯವಾಗಿ ಮೃದು ಸ್ವಭಾವದವರು. ಯಾವತ್ತೂ ಗಡಿಬಿಡಿ ಮಾಡಿಕೊಳ್ಳುವುದಿಲ್ಲ. ನಾಳೆಯೇ ಮುಗಿಸಬೇಕು ಅಂತ ನೀವೇನಾದರೂ ಕೆಲಸ ಹೇಳಿದ್ರೆ, ಓಕೆ ಅಂತ ನಿಮ್ಮ ಮುಂದೆ ಒಪ್ಕೊಂಡು ತಮಗಿಷ್ಟವಾದರೆ ಮಾಡ್ತಾರೆ. ಇಲ್ಲವಾದರೆ ಆರಾಮವಾಗಿ ಯಾವ ಪಾಪಪ್ರಜ್ಞೆಯ ಲವಲೇಶವೂ ಇಲ್ಲದೇ ಸಿನಿಮಾ ನೋಡ್ತಾ ಕೂತ್ಕೋತಾರೆ. ಯದ್ವಾತದ್ವಾ ಸಮಾಧಾನ ಇವರಿಗೆ. ಜೀವನದ ಪ್ರತಿಯೊಂದು ಆಟವನ್ನೂ ಖುಶಿಗೆ ಗೆಲ್ಲೋದಕ್ಕೆ ಆಡ್ತಾರೆ. ಗೆದ್ದರೆ ಸಂತೋಷ, ಸೋತರೆ ಆಡಿದ ಖುಷಿ.
ಮನಶ್ಯಾಸ್ತ್ರಜ್ಞರು ಇಂಥವರನ್ನೆಲ್ಲ ಟೈಪ್ ಬಿ ಪರ್ಸನಾಲಿಟಿ ಎಂದು ಕರೆದರು. ಇನರಿಗೆ ಹೃದಯ ಸಂಬಂಧೀ ಕಾಯಿಲೆಗಳು ಕಮ್ಮಿಯಂತೆ. ನಮ್ಮಲ್ಲಿ ಹೆಚ್ಚು ಜನ ಇವರೆಡರ ಮಧ್ಯದ ಕೆಟಗರಿಗೆ ಸೇರುತ್ತೇವೆ.
ಇಲ್ಲೊಂದು ಆಟ ಇದೆ. ನೀವು ಟೈಪ್ ಎ ವರ್ಗಕ್ಕೆ ಸೇರಿದವರು ಹೌದೋ ಅಲ್ಲವೋ ಎಂದು ತಿಳಿದುಕೊಳ್ಳೋ ಆಟ. ಕೆಲವು ಪ್ರಶ್ನೆಗಳಿರುತ್ತವೆ. ಅದಕ್ಕೆ ತಕ್ಕಂತೆ ಉತ್ತ ಗಳು. ಈ ಉತ್ತರಗಳಲ್ಲಿ ನಿಮ್ಮ ಸ್ವಭಾವಕ್ಕೆ ಯಾವುದು ಹೊಂದುತ್ತೋ ಅದಕ್ಕೆ ಟಿಕ್ ಮಾಡಿ. ಯಾವುದೇ ಪ್ರಶ್ನೆಗೂ ಸರಿ ತಪ್ಪು ಎನ್ನುವುದಿಲ್ಲ:
ಪ್ರಶ್ನೆಗಳು ಹೀಗಿವೆ:
೧. ಪ್ರತಿದಿನ ನಿಮ್ಮ ಜೀವನ..
ಎ.ಸಮಸ್ಯೆಗಳಿಂದ ತುಂಬಿರುತ್ತೆ.
ಬಿ. ಛಾಲೆಂಜುಗಳಿಂದ ತುಂಬಿರುತ್ತೆ.
ಸಿ. ಎಲ್ಲಾ ಅಂದ್ಕೊಂಡದ್ದೇ ಇರುತ್ತೆ.
ಡಿ. ಅಂಥದ್ದೇನಿಲ್ರೀ.
೨. ಸಿಕ್ಕಾಪಟ್ಟೆ ಒತ್ತಡದಲ್ಲಿದ್ದಾಗ ಸಾಮಾನ್ಯವಾಗಿ
ಎ. ಅದರ ಬಗ್ಗೆ ಏನಾದ್ರೂ ಮಾಡಿ ಕೈ ತೊಳ್ಕೋತೀರ
ಬಿ.ತುಂಬ ನಿಧಾನವಾಗಿ ಯೋಚಿಸಿ ನಿರ್ಧಾರ ಮಾಡಿ ಕೆಲಸ ಮಾಡ್ತೀರ
೩.ಎಷ್ಟು ಫಾಸ್ಟಾಗಿ ಊಟ ಮಾಡ್ತೀರಾ
ಎ. ಗಬಗಬ, ಎಲ್ಲರೂ ಮುಗಿಸೋದಕ್ಕಿಂತ ಮುಂಚೇನೇ.
ಬಿ. ಸ್ವಲ್ಪ ಫಾಸ್ಟಾಗಿ
ಸಿ. ತುಂಬಾ ಫಾಸ್ಟೂ ಇಲ್ಲ. ನಿಧಾನವೂ ಅಲ್ಲ.
ಡಿ. ನಿಧಾನವಾಗಿ ಊಟ ಮಾಡ್ತೀನಿ
೪. ನಿಮ್ಮ ಬೆಸ್ಟ್ ಫ್ರೆಂಡ್ ನೀವು ಫಾಸ್ಟಾಗಿ ಊಟ ಮಾಡ್ತೀರಂತ ಯಾವತ್ತಾದ್ರೂ ಹೇಳಿದ್ದಾರಾ?
ಎ. ಹೌದು, ಯಾವಾಗ್ಲೂ ಅದೊಂದು ಕಂಪ್ಲೇಂಟು.
ಬಿ. ಆಗಾಗ ಹೇಳ್ತಿರ್ತಾರೆ.
ಸಿ. ಇಲ್ಲ
೫. ಯಾರಾದ್ರಾ ಮಾತಾಡ್ತಿರೋದನ್ನು ಕೇಳ್ತಿರೋವಾಗ ಬೇಗ ಬೇಗ ಹೇಳಿ ಮುಗಿಸಿ ಅಂತ ಹೇಳೋಣ ಅನ್ಸುತ್ತಾ?
ಎ. ಯಾವಾಗ್ಲೂ, ಅದ್ಯಾಕ್ ಜನ ನಿಧಾನವಾಗಿ ಮಾತಾಡ್ತಾರೋ ಗೊತ್ತಿಲ್ಲ.
ಬಿ. ಆಗಾಗ
ಸಿ. ಇಲ್ಲಪ್ಪಾ, ಎಷ್ಟು ಬೇಕಾದ್ರೂ ಟೈಮ್ ತಗೊಳ್ಳಲಿ.
೬. ಯಾರಾದ್ರೂ ಮಾತಾಡ್ತಿಬೇಕಾದ್ರೆ ಬೇಗ ಹೇಳಿ ಮುಗಿಸ್ಲಿ, ಅವರು ಪದಗಳಿಗೆ ಹುಡುಕ್ತಿರುವಾಗ ನೀವೇ ಹೇಳ್ಕೊಟ್ ಬಿಡ್ತೀರಾ.
ಎ .ಯಾವಾಗ್ಲೂ
ಬಿ . ಆಗಾಗ
ಸಿ. ನೆವರ್
೭.ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿದಾಗ, ಎಷ್ಟ್ ಸಾರಿ ಲೇಟಾಗಿ ಹೋಗಿದ್ದೀರಾ?
ಎ. ಒಂದೊಂದ್ಸಾರಿ ಲೇಟಾಗುತ್ತೆ, ಏನ್ಮಾಡೋದು..
ಬಿ. ಯಾವಾಗ್ಲೋ, ಅಪರೂಪಕ್ಕೊಂದೊಂದು ಸಲ.
ಸಿ. ಇಲ್ವೇ ಇಲ್ಲ, ನಾನು ಆನ್ ಟೈಮ್.
೮. ನಿಮ್ ಬಗ್ಗೆ ನಿಮಗೇನನ್ಸುತ್ತೆ.
ಎ. ಸಿಕ್ಕಾಪಟ್ಟೆ ಕಾಂಪಿಟಿಟಿವ್
ಬಿ. ಸ್ವಲ್ಪ ಕಾಂಪಿಟಿಟಿವ್.
ಸಿ. ರಿಲೇಟಿವ್ಲೀ ಈಸಿ ಗೋಯಿಂಗ್
೪. ವೆರಿ ಈಸಿ ಗೋಯಿಂಗ್.
೯. ನಿಮ್ಮನ್ನು ನಿಮ್ ಫ್ರೆಂಡ್ಸು ಏನಂತಾರೆ.
.ಎ. ಸಿಕ್ಕಾಪಟ್ಟೆ ಕಾಂಪಿಟಿಟಿವ್
ಬಿ. ಸ್ವಲ್ಪ ಕಾಂಪಿಟಿಟಿವ್.
ಸಿ. ರಿಲೇಟಿವ್ಲೀ ಈಸಿ ಗೋಯಿಂಗ್
೪. ವೆರಿ ಈಸಿ ಗೋಯಿಂಗ್.
೧೦. ಬೇರೆಯವರು ನಿಮ್ಮ ಬಗ್ಗೆ ಏನಂತಾರೆ?
ಎ. ಸಿಕ್ಕಾಪಟ್ಟೆ ನಿಧಾನ, ಸ್ವಲ್ಪ ಫಾಸ್ಟಾಗಬೇಕು
ಬಿ. ಪರವಾಗಿಲ್ಲ, ನಿಧಾನವೂ ಅಲ್ಲ ಫಾಸ್ಟೂ ಅಲ್ಲ
ಸಿ. ಸಿಕ್ಕಾಪಟ್ಟೆ ಫಾಸ್ಟಪ್ಪ, ಅದೇನು ಮಾಡ್ತಾನೆ ಅಂತ ಗೊತ್ತಾಗೋಲ್ಲ. ಸ್ವಲ್ಪ ನಿಧಾನ ಆದ್ರೆ ವಾಸಿ.
೧೧. ನಿಮ್ಮ ಬಗ್ಗೆ ಚೆನ್ನಾಗಿ ತಿಳ್ಕೊಂಡಿರೋರರ ಪ್ರಕಾರ ನಿಮಗೆ ಬೇರೆಯವರಿಗೆ ಸ್ವಲ್ಪ ಕಡಿಮೆ ಚೈತನ್ಯ ಅಂತಾರಾ
ಎ. ಹೂಂ ಹೇಳ್ತಾರೆ
ಬಿ. ಹೇಳ್ತಾರೆ ಅನ್ಸುತ್ತೆ
ಸಿ. ಹೇಳಲ್ಲ ಅನ್ಸುತ್ತೆ
ಡಿ. ಇಲ್ಲಪ್ಪಾ, ನಾನು ತುಂಬಾ ಎನರ್ಜೆಟಿಕ್
೧೨. ನಿಮ್ಮ ಕೆಲಸದಲ್ಲಿ ಎಷ್ಟು ಸಲ ಡೆಡ್ಲೈನ್ ಫೇಸ್ ಮಾಡ್ತೀರಾ
ಎ. ಪ್ರತಿದಿನ
ಬಿ. ವಾರಕ್ಕೊಂದ್ಸಲ
ಸಿ. ತಿಂಗಳಿಗೊಂದ್ಸಲ
ಡಿ. ತುಂಬಾ ಅಪರೂಪ
೧೩. ನಿಮ್ನಿಮಗೇ ನೀವು ಡೆಡ್ಲೈನ್ ಹಾಕ್ಕೋತೀರಾ?
ಎ. ಹೋಗ್ರೀ, ನಂಗೇನೂ ಹುಚ್ಚಾ
ಬಿ.ಯಾವಾಗ್ಲಾದ್ರೂ ಒಂದೊಂದು ಸಲ
ಸಿ. ಯಾವಾಗ್ಲೂ
೧೪. ಯಾವಾಗ್ಲಾದ್ರೂ ನೀವು ಎರಡು ಮೂರು ಕೆಲಸಗಳನ್ನು ಒಟ್ಟೊಟ್ಟಿಗೇ ಮಾಡಿದ್ದೀರಾ
ಎ. ಇಲ್ಲ, ಹೆಂಗ್ರೀ ಮಾಡೋಕ್ಕಾಗತ್ತೆ
ಬಿ. ಅಪರೂಪಕ್ಕೊಂದ್ಸಾರಿ ಮಾಡ್ತೀನಿ
ಸಿ. ಹೌದು, ಒಂದೇ ಕೆಲಸ ಬೋರು, ಎರಡೋ ಮೂರೋ ಇರ್ಲೇ ಬೇಕು.
೧೫. ರಜಾ ಇದ್ದಾಗ, ದಸರಾ, ದೀಪಾವಳಿ ಹೊತ್ತಲ್ಲೂ ಕೆಲಸ ಮಾಡ್ತೀರಾ
ಎ. ಹೌದು, ಟೈಮ್ ವೇಸ್ಟ್ ಮಾಡಬಾರದು ನೋಡಿ.
ಬಿ. ಇಲ್ಲ, ನಂಗೇನು ತಿಕ್ಕಲಾ
ಸಿ. ಕೆಲಸ ಇದ್ರೆ ಮಾಡ್ತೀನಿ, ಯಾವಾಗ್ಲೂ ಅಲ್ಲ.
ಕೆಳಗೆ ಕೊಟ್ಟಿರುವ ಉತ್ತರವೂ ನಿಮ್ಮ ಉತ್ತರವೂ ಒಂದೇ ಆಗಿದ್ರೆ ಒಂದೊಂದು ಮಾರ್ಕು ಕೊಡ್ತಾ ಬನ್ನಿ
೧. ಎ ಅಥವಾ ಬಿ. ೨. ಎ. ೩. ಎ ಅಥವಾ ಬಿ. ೪. ಎ. ೫. ಎ. ೬. ಎ. ೭. ಸಿ. ೮. ಎ ಅಥವಾ ಬಿ. ೯. ಎ ಅಥವಾ ಸಿ. ೧೦. ಸಿ. ೧೧. ಡಿ. ೧೨. ಸಿ. ೧೩. ಸಿ ೧೪. ಸಿ. ೧೫. ಎ.
ನಿಮ್ಮ ಮಾರ್ಕು ಹನ್ನೆರಡಕ್ಕಿಂತ ಹೆಚ್ಚಿದ್ರೆ ನೀವು ಟೈಪ್ ಎ, ಐದಕ್ಕಿಂತ ಕಮ್ಮಿಯಿದ್ರೆ ಟೈಪ್ ಬಿ ಸ್ವಭಾವದವರು. ಐದಕ್ಕಿಂತ ಜಾಸ್ತಿ ಹನ್ನೆರಡಕ್ಕಿಂತ ಕಮ್ಮಿ ಇದ್ರೆ ಎರಡರ ಮಧ್ಯದ ವ್ಯಕ್ತಿತ್ವ ನಿಮ್ಮದು. ಇದೇ ನಿಮ್ಮ ಸ್ವಭಾವ ನಿರ್ಧರಿಸುತ್ತೆ ಅಂತ ಅಲ್ಲ. ನೀವೇನು ಅಂತ ತಿಳ್ಕೊಳ್ಳೋಕೆ ಒಂದು ರಫ್ ಗೈಡ್ ಇದು.
ನಾನು ಈ ಕಾಲಮ್ ಬರೆಯೋದಕ್ಕೆ ಶುರು ಮಾಡ್ಡಾಗಿಂದ ನೀನೂ ಟೈಪ್ ಎ ಆಗ್ತಿದ್ದೀಯಾ ಅಂತ ಅಮ್ಮ ತಮಾಷೆ ಮಾಡ್ತಾರೆ. ಆದ್ರೆ ಮನಸ್ಸಿಗೆ ಬಂದ ಟೈಮಿಗೆ ಕಳಿಸಿ ಟೈಪ್ ಬಿ ಬುದ್ಧೀನೇ ತೋರಿಸ್ತಿದ್ದೀನಿ.
ಯಾವ ಮನಶ್ಯಾಸ್ತ್ರ ಏನೇ ಹೇಳಿದ್ರೂ ಬರಿಯೋರು ಬೇರೇ ಟೈಪು.

‍ಲೇಖಕರು avadhi

October 3, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. shiva

    its boring! u get thousands of this kind of tests if u search in google! where the writer siri has gone?:(

    ಪ್ರತಿಕ್ರಿಯೆ
  2. Guru Baliga

    ಹೌದು ಟಿಕಲ್ ಒಂದೇ ನಿಮಗೆ ಸಾವಿರಾರು ಟೆಸ್ಟ್ ಕೊಡತ್ತೆ. ಆದರೆ ಸಿರಿಯ ಕನ್ನಡ ಟೆಸ್ಟ್ ಸಿಗಲ್ಲ. ಪ್ರತಿ ಆಪ್ಶನ್ ಕೂಡ ಒಂದೊಂದು “ಟಿಕಲ್” ಇಲ್ಲಿ. ನಾನೂ ಇದನ್ನ ಉತ್ತರ ಮಾಡಿಲ್ಲ ಆದರೆ ಪೂರ್ತಿ ಟೆಸ್ಟ್ ಅನ್ನು ರಸವತ್ತಾಗಿ ಓದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: