– ಬಸವರಾಜ ಸೂಳಿಬಾವಿ
ಲಡಾಯಿ ಪ್ರಕಾಶನ
1
ಬಂಜೆ ಎಂದು ಹಂಗಿಸಿದ ಮನೆ-ಮಂದಿಯಾಸೆ ಅಲ್ಲೇ ನೆಲೆ ನಿಂತಿತು
ಮನೆ ಬಾಗಿಲಿಗೆ ಬಂದು ತಾಯೀ ಎಂದು ಕರೆದ ಭಿಕ್ಷುಕನ ಬಯಕೆ ಹಾಗೆ ಮುನ್ನಡೆಯಿತು
2
ಹಾರುವ ಹಕ್ಕಿ ನಗುವ ನಿನ್ನ ಕಂಗಳು
ಪದಗಳಿಲ್ಲದ ನನ್ನ ಕವಿತೆಯನ್ನು ಇನ್ನೆಲ್ಲೂ ಹುಡುಕಬೇಡ
3
ಬದುಕೆ ಹೀಗೆ ಕಾಡುವುದಕ್ಕಿಂತ ಇರುವ ಕಣ್ಣೀರೆಲ್ಲ ಒಮ್ಮೆಗೆ ಕುಡಿದುಬಿಡು
ಕೊನೆಯ ಹನಿಗೆ ನಾಲಿಗೆ ಚಾಚಿದ ಉನ್ಮಾದವ ಹೆಜ್ಜೆಗೊಮ್ಮೆ ಕೊಲ್ಲಬೇಡ
4
ಹಿಂದಿನಂತಲ್ಲ ಈ ಸಲದ ಬೇಸಿಗೆ ಬಿಸಿಲ ಬೇಗೆಗೆ ಬವಳಿ ಬರುವಂಥ ಸೂರ್ಯನುರಿ
ನಮ್ಮಿಂದಾಗಿಯೇ ನಮ್ಮಂತೆ ಆ ಸೂರ್ಯನಲ್ಲೂ ಬೆಳೆದಿದೆ ಸುಮ್ಮನೆ ಸುಡುವ ಗುಣ
5
ಕಾಲದಿಂದ ಕಾಲಕೆ ಈ ಬದುಕು ಸೋಲುತ್ತಲೇ ಬಂದಿತು
ಏನು ಮಾಡುವುದು ಶತ್ರು ಹೊರಗಡೆ ಇರುವನೆಂದು ತಿಳಿದಿದ್ದೆ ತಪ್ಪಾಯಿತು
6
ನಾನು ನಿನ್ನ ಪ್ರೀತಿಸುತ್ತಿರುವೆ ಆ ಕಾರಣಕ್ಕಾಗಿ ನೀನು ನನ್ನನು ಕೊಲ್ಲುತ್ತಿರುವೆ
ಮನ್ನಿಸು ಜೀವವೆ ವಿರಹದ ಬೇಗೆಗೆ ನನ್ನಲಿ ಬೇರೆ ಶಬ್ದಗಳಿಲ್ಲ………………
7
ಈ ದುಃಖವನು ಗಾಳಿಗೆ ತಲುಪಿಸಿದೆ
ದಯಾಳು ಗಾಳಿ ಉದುರಿಬೀಳುವ ಎಲೆಯ ಮೌನದ ಗಳಿಗೆಯನು ಬೊಗಸೆಗೆ ತುಂಬಿತು
8
ನಿನ್ನ ಅಂದಾಜಿನಂತೆ ಲೋಕವೆ ಅದೆಷ್ಟೊ ಸಲ ದಾರಿ ತಪ್ಪಿದ್ದೇನೆ
ನನ್ನ ತಪ್ಪೇನಿತ್ತು ನಿನ್ನ ಸರಿ ದಾರಿಯಲಿ ಹೋದಾಗಲೆಲ್ಲ ನನಗವಳ ಮನೆಯೇ ಕಾಣಲಿಲ್ಲ!
9
ಅಕ್ಷರವಾಗುವ ದುಃಖವೆ ನೀನಿಲ್ಲಿರಬೇಡ
ಕಣ್ಣೀರನ್ನ ಕವಿತೆಯೆಂದು ಯಾರೂ ಕರೆಯುವುದಿಲ್ಲ
10
ಕೇಳಿದ ಮಾತು ಕಠೋರ ಕೇಳದಿರುವ ಮಾತು ಇನ್ನೂ ಕಠೋರ
ಆ ಮಾತು ಸುಳ್ಳೆನ್ನಲಾರೆ ನಾನುಂಡನುಭವವು ನಿನ್ನ ಹಾಗೆ ಬರಿಯಗೊಡದು
11
ನೀನು ಬದುಕಿಸಿದೆ
ಅದಕೆಂದೇ ನನಗೀಗ ಸಾವಿನನುಭವ
]]>
ಈ ಆಸೆಯ ಬಸುರು ಬಲು ಭಾರ…
ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...
very nice
nice
touching!
basu
ivu muttidare kaige antibaruva suvasaneyante ive.milana mattu viprlambadalli namage modalu kaduvadu vipralmbave nimma kavyakke bagashaha shaktiyagiddu adu,snkocha beda prakatisi illadiddre odugarannu doorvittu vanchusidantaguttade