ಕೆಲವು ದ್ವಿಪದಿಗಳು

– ಬಸವರಾಜ ಸೂಳಿಬಾವಿ ಲಡಾಯಿ ಪ್ರಕಾಶನ 1 ಬಂಜೆ ಎಂದು ಹಂಗಿಸಿದ ಮನೆ-ಮಂದಿಯಾಸೆ ಅಲ್ಲೇ ನೆಲೆ ನಿಂತಿತು ಮನೆ ಬಾಗಿಲಿಗೆ ಬಂದು ತಾಯೀ ಎಂದು ಕರೆದ ಭಿಕ್ಷುಕನ ಬಯಕೆ ಹಾಗೆ ಮುನ್ನಡೆಯಿತು 2 ಹಾರುವ ಹಕ್ಕಿ ನಗುವ ನಿನ್ನ ಕಂಗಳು ಪದಗಳಿಲ್ಲದ ನನ್ನ ಕವಿತೆಯನ್ನು ಇನ್ನೆಲ್ಲೂ ಹುಡುಕಬೇಡ 3 ಬದುಕೆ ಹೀಗೆ ಕಾಡುವುದಕ್ಕಿಂತ ಇರುವ ಕಣ್ಣೀರೆಲ್ಲ ಒಮ್ಮೆಗೆ ಕುಡಿದುಬಿಡು ಕೊನೆಯ ಹನಿಗೆ ನಾಲಿಗೆ ಚಾಚಿದ ಉನ್ಮಾದವ ಹೆಜ್ಜೆಗೊಮ್ಮೆ ಕೊಲ್ಲಬೇಡ 4 ಹಿಂದಿನಂತಲ್ಲ ಈ ಸಲದ ಬೇಸಿಗೆ ಬಿಸಿಲ ಬೇಗೆಗೆ ಬವಳಿ ಬರುವಂಥ ಸೂರ್ಯನುರಿ ನಮ್ಮಿಂದಾಗಿಯೇ ನಮ್ಮಂತೆ ಆ ಸೂರ್ಯನಲ್ಲೂ ಬೆಳೆದಿದೆ ಸುಮ್ಮನೆ ಸುಡುವ ಗುಣ 5 ಕಾಲದಿಂದ ಕಾಲಕೆ ಈ ಬದುಕು ಸೋಲುತ್ತಲೇ ಬಂದಿತು ಏನು ಮಾಡುವುದು ಶತ್ರು ಹೊರಗಡೆ ಇರುವನೆಂದು ತಿಳಿದಿದ್ದೆ ತಪ್ಪಾಯಿತು 6 ನಾನು ನಿನ್ನ ಪ್ರೀತಿಸುತ್ತಿರುವೆ ಆ ಕಾರಣಕ್ಕಾಗಿ ನೀನು ನನ್ನನು ಕೊಲ್ಲುತ್ತಿರುವೆ ಮನ್ನಿಸು ಜೀವವೆ ವಿರಹದ ಬೇಗೆಗೆ ನನ್ನಲಿ ಬೇರೆ ಶಬ್ದಗಳಿಲ್ಲ……………… 7 ಈ ದುಃಖವನು ಗಾಳಿಗೆ ತಲುಪಿಸಿದೆ ದಯಾಳು ಗಾಳಿ ಉದುರಿಬೀಳುವ ಎಲೆಯ ಮೌನದ ಗಳಿಗೆಯನು ಬೊಗಸೆಗೆ ತುಂಬಿತು 8 ನಿನ್ನ ಅಂದಾಜಿನಂತೆ ಲೋಕವೆ ಅದೆಷ್ಟೊ ಸಲ ದಾರಿ ತಪ್ಪಿದ್ದೇನೆ ನನ್ನ ತಪ್ಪೇನಿತ್ತು ನಿನ್ನ ಸರಿ ದಾರಿಯಲಿ ಹೋದಾಗಲೆಲ್ಲ ನನಗವಳ ಮನೆಯೇ ಕಾಣಲಿಲ್ಲ! 9 ಅಕ್ಷರವಾಗುವ ದುಃಖವೆ ನೀನಿಲ್ಲಿರಬೇಡ ಕಣ್ಣೀರನ್ನ ಕವಿತೆಯೆಂದು ಯಾರೂ ಕರೆಯುವುದಿಲ್ಲ 10 ಕೇಳಿದ ಮಾತು ಕಠೋರ ಕೇಳದಿರುವ ಮಾತು ಇನ್ನೂ ಕಠೋರ ಆ ಮಾತು ಸುಳ್ಳೆನ್ನಲಾರೆ ನಾನುಂಡನುಭವವು ನಿನ್ನ ಹಾಗೆ ಬರಿಯಗೊಡದು 11 ನೀನು ಬದುಕಿಸಿದೆ ಅದಕೆಂದೇ ನನಗೀಗ ಸಾವಿನನುಭವ  ]]>

‍ಲೇಖಕರು G

June 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನೆಂದರೆ ನೀ ಅಷ್ಟೇ

ನೀನೆಂದರೆ ನೀ ಅಷ್ಟೇ

ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ...

ನಮ್ಮ ಬುದ್ಧ

ನಮ್ಮ ಬುದ್ಧ

ಎಚ್ ವಿ ಶ್ರೀನಿಧಿ ಈಗೀಗನನಗೆ ಎಲ್ಲೆಡೆ ಕಾಣುವುದುಅರೆ ನಿಮೀಲಿತ ನೇತ್ರದ,ಪದ್ಮಾಸನದಲ್ಲಿ ಕೂತ,ಗುಂಗುರು ಕೂದಲ ಬುದ್ಧ. ಅಂತಸ್ತಿಗೆ ತಕ್ಕ...

ಜೇನು ಸೈನ್ಯ ಮತ್ತು ನಾನು!

ಜೇನು ಸೈನ್ಯ ಮತ್ತು ನಾನು!

ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!...

4 ಪ್ರತಿಕ್ರಿಯೆಗಳು

  1. mahantesh navalkal

    basu
    ivu muttidare kaige antibaruva suvasaneyante ive.milana mattu viprlambadalli namage modalu kaduvadu vipralmbave nimma kavyakke bagashaha shaktiyagiddu adu,snkocha beda prakatisi illadiddre odugarannu doorvittu vanchusidantaguttade

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ mahantesh navalkalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: