ಕೊನೆಗೂ ಒಂದು ಸೀರೆ!

chetana2.jpg“ಭಾಮಿನಿ ಷಟ್ಪದಿ”

p12big.gif

 

ಚೇತನಾ ತೀರ್ಥಹಳ್ಳಿ

ಷ್ಟು ಸಂಭಾಳಿಸಿದ್ರೂ ಜಾರುತ್ತ ಕಾಡ್ತಿದ್ದ ಸೀರೆ ಮೇಲೆ ರೇಗಿ ಹೋಗಿತ್ತು.
ಅದೂ ಸಾವಿಗೆ ಸಾಥ್ ನೀಡ್ತಿಲ್ಲ!

“ಸಾವಿನ ಮಾತ್ಯಾಕೇ ಆಡ್ತೀ?” ಗೆಳತಿ ಕೇಳಿದ್ದಳು.
ನನ್ನಲ್ಲಿ ಅಂಥದ್ದೇನು ಅರೆ ಆಗಿರೋದು? ಹಾಳಾದವ ಯಾರದೋ ಪಲ್ಲು…
ಫ್ಯಾನಿಗೆ ಸೀರೆ ಕಟ್ಟಲು ಹೋಗಿ ಆಯ ತಪ್ಪಿದಳು. ಕಾಟಿನ ಮೇಲೆ ಪೇರಿಸಿಟ್ಟಿದ್ದ ಕುರ್ಚಿಗಳು ಧುಡುಮ್ಮನೆ ಉರುಳಿದವು.

“ಅಂವ ಆ ಭೋಸುಡಿಯನ್ನ ಮದುವೆಯೊಂದು ಆಗ್ಬೇಕಿತ್ತು…. ಆಮೇಲೆ ನೋಡ್ಕೊಳ್ತಿದ್ದೆ!!” ಸುಮ್ಮಸುಮ್ಮನೆ ಅವಡುಗಚ್ಚಿದಳು.
ಸರೀ… ಯಾರನ್ನ? ಓ ಅವತ್ತು ಫೋನಲ್ಲಿ ನಕ್ಕಿದ್ದಳಲ್ಲ ಅವಳನ್ನ? ಗಂಡುಡುಗೆಯ ಸ್ಕೂಟಿ ಹುಡುಗಿ- ಇವಳನ್ನ? ಅವಳ ವೈಯ್ಯಾರಿ ಅಮ್ಮ ಡುಮ್ಮಿ ಹೆಂಗಸನ್ನ?
ಕಳ್ಳ! ಒಂದೇ ಮನೆಯ ಕನ್ನ ಎಷ್ಟು ದಿನ ಕೊರೆದಾನು?

ಅಲಮಾರಿಯ ಸೀರೆಗಳೆಲ್ಲ ರಾಶಿ ಬಿದ್ದವು.
ನಾಲಾಯಕ್ಕು ಗಂಡು. ಒಂದು ಕರ್ಚೀಫಾದರೂ ಕೊಡಿಸಿದ್ದಿದ್ದರೆ..
ಎಲ್ಲ ತವರಿನಿಂದ ತಂದಿದ್ದು.
ಅವೂ ಇವನ ಹಾಗೆ ಜಾರಲು ಕಲಿತಿದ್ದು ಯಾವಾಗ!?

ಹ್ಹ್… ಕೊನೆಗೂ ಒಂದು ಸೀರೆ.
ಕಟ್ಟುವ ಹೊತ್ತಿಗೆ ನೀರಾಗಿ ಇಳೀತಿದ್ದಳು.
ಹಾಗೆ ಕಟ್ಟಿದ ಫ್ಯಾನನ್ನೇ ತಿರುಗಿಸಿ ಹಾಯಾದಳು.
ಸುಯ್ ಸೈಡ್ ನೋಟು ರೊಂಯ್ಯನೆ ಹಾರಿತು.
“ತಥ್! ಇದನ್ನೂ ನನ್ನ “ಕೊನೆಯ ಕಥೆ” ಅಂತ ಕತೆ ಕಟ್ಟಿಯಾರು ಮತ್ತೆ!!” ಪರಪರನೆ ಹರಿದು ಬಿಸಾಡಿದಳು.

ಮೇಲೇನೋ ಕಟ್ಟಾಯ್ತು. ಕೆಳಗೆ ಗಂಟು ಹಾಕೋದು ಹೇಗೆ?
“ಅವಳು ಫ್ರಿಜಿಡ್.” ಯಾವಳ ಹತ್ತಿರವೋ ಅಂವ “ಪಾಪ” ಆಗುತ್ತಿದ್ದ.
ಕೊಂದೇಬಿಡಬೇಕನಿಸಿತ್ತು.

ಅರೆ! ಗಂಟು ಹಾಕೋದು ಹೇಗೆ?
ಅಮ್ಮನ ತಾಕೀತು. “ಸೆರಗಲ್ಲಿ ಗಂಟು ಹಾಕ್ಕೊಳ್ಳೋದನ್ನ ಕಲಿ ಮೊದ್ಲು!”

ಅಂತೂ ಕುಣಿಕೆ ರೆಡಿ. ಅಂವ, ಅವಳು, ಮತ್ತೊಬ್ಬಳು… ಎಲ್ಲ ಗಿರಗಿರಗಿರ…
ಈಗ ಕುತ್ತಿಗೆ ಗಿರಿಯುತ್ತೆ. ಉಸಿರು ಕಟ್ಟುತ್ತೆ. ಕಣ್ಕತ್ತಲು. ಕೈ-ಕಾಲು ವಿಲವಿಲ… ನಾಲಿಗೆ ಹೊರಬರುವುದೇನೋ?
ಪಿಚ್ಚರಿನಲ್ಲಿ ತೋರಿಸುವ ಹಾಗೆ!

ಊಹೂಂ…
ಫ್ಯಾನಿಂದ ಸೀರೆ ಸರಕ್ಕನೆ ಕಳಚಿತ್ತು.
ಗಂಟು
ನಿಂತಿರಲಿಲ್ಲ.
ಬಿಕ್ಕಿ ಬಿಕ್ಕಿ ನಕ್ಕಳು. ಎದೆ ಬಿರಿಯುತ್ತಿತ್ತು. ನಗು, ನಡಗುತ್ತಿತ್ತು.

ಆಮೇಲೆ?
ಗೊತ್ತಿಲ್ಲ.

‍ಲೇಖಕರು avadhi

November 15, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

2 ಪ್ರತಿಕ್ರಿಯೆಗಳು

  1. ನರೇಂದ್ರ

    ಅಂಥ ಒಂದು ಕ್ಷಣ ಫಲಿಸಿ ಇಂದಿಗೆ ಎರಡು ವರ್ಷಗಳ ಹಿಂದೆ ಹೊರಟೇ ಹೋದವಳ ನೆನಪಾಯ್ತು. ಡಾಕ್ಟರುಗಳೆಲ್ಲ ಆಸೆ ಬಿಟ್ಟ ಮೇಲೂ ಎಷ್ಟೋ ಹೊತ್ತು ಹಾಸ್ಪಿಟಲಿನ ಬೆಡ್ ಮೇಲೆ ಉಸಿರೆಳುತ್ತಿದ್ದಳಂತೆ, ಕೊನೆಯ ಕೆಲವೇ ಲೆಕ್ಕದ ಉಸಿರುಗಳು…. ಅದನ್ನು ನೋಡಲಿಲ್ಲ ನಾನು, ಆದರೆ ನೋಡಿದ ನೆನಪು ಕಾಡುತ್ತಲೇ ಇರುತ್ತದೆ, ಹೀಗೆ ಓದಿದಾಗ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: