ಕೊರತೆಯಾದವು ಕಾಂಡೋಮ್ ಗಳು ಇಲ್ಲಿ..

P For…

-ಲೀಲಾ ಸಂಪಿಗೆ

ಕಾಂಡೂಮ್ ಮತ್ತು ಒಲಿಂಪಿಕ್ಸ್
2000ದಲ್ಲಿ  ಸಿಡ್ನಿಯಲ್ಲಿ  ನಡೆದ  ಒಲಂಪಿಕ್ಸ್ ನಲ್ಲಿ   ‘ಕಾಂಡೂಮ್ ವೀಕ್’,  ‘ಸೆಕ್ಸ್ ಡೇ’ಗಳನ್ನು   ಆಚರಿಸಲಾಗಿತ್ತು . ಸಿಡ್ನಿ ಒಲಂಪಿಕ್ಸ್ ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಎರಡು ವಾರಗಳಲ್ಲಿ 51   ಕಾಂಡೋಮ್ ಗಳನ್ನು ಬಳಸಿದ್ದರು. ಸಿಡ್ನಿ ಒಲಂಪಿಕ್ಸ್ ನಲ್ಲಿ ಪೂರೈಸಿದ ಕಾಂಡೋಮ್ ಗಳು  ಕೊರತೆಯಾದವು. ಇದನ್ನು ಗಮನಿಸಿದ ಅಧಿಕಾರಿಗಳು ಅಥೆನ್ಸ್ ಒಲಂಪಿಕ್ಸ್ ನಲ್ಲಿ ಇದರ ದುಪ್ಪಟ್ಟು  ಕಾಂಡೋಮ್ ಗಳನ್ನು  ಒದಗಿಸಿದರು.
ಈ  ಸಂದರ್ಭಕ್ಕಾಗಿ ಜಗತ್ತಿನ ಬಹುದೊಡ್ಡ ಕಾಂಡೂಮ್ ಉತ್ಪಾದನಾ ಕೇಂದ್ರಗಳು ಹುಟ್ಟಿಕೊಂಡಿವೆ.   ಅವುಗಳ ಮಧ್ಯೆ ಪೈಪೋಟಿ ಉತ್ತುಂಗಕ್ಕೇರಿದೆ. ಕೋಟ್ಯಾಂತರ  ರೂಪಾಯಿಗಳ ವಹಿವಾಟನ್ನು ಕೊಡುತ್ತಿರುವ  ಕಾಂಡೂಮ್  ಉತ್ಪಾದಕರು ಕಾಂಡೂಮ್ ಮಾರಾಟಕ್ಕಾಗಿ ಇನ್ನಿಲ್ಲದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ,  ಖಾಸಗಿ ಒಡೆತನದ ಉತ್ಪಾದನಾ ಕೇಂದ್ರಗಳು ಬಹುತೇಕ ರಾಷ್ಟ್ರಗಳ ಆದಾಯ ಮೂಲಗಳಾಗಿವೆ.
ಆದ್ದರಿಂದಲೇ ಒಲಿಂಪಿಕ್ಸ್ ನಡೆಯುವ ಎಲ್ಲ ಪ್ರದೇಶಗಳಲ್ಲಿ ವಿಶೇಷವಾಗಿ ಏಡ್ಸ್ ನಿಯಂತ್ರಣ ಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಒಲಂಪಿಕ್ಸ್ ಗಾಗಿ  ನಡೆಯುತ್ತಿರುವ  ಕಟ್ಟಡ  ನಿರ್ಮಾಣ ಪ್ರದೇಶಗಳಲ್ಲಿ  ಕಾಂಡೋಮ್  ಬಳಕೆ  ಮತ್ತು  ಮಹತ್ವದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದೆ. ಬೀಜಿಂಗ್ ನ ಪ್ರಮುಖ 3700 hotel  ಗಳ  ಕೋಣೆಗಳಲ್ಲಿ ಯಥೇಚ್ಛವಾಗಿ ಕಾಂಡೋಮ್ ಲಭ್ಯವಿರುವಂತೆ ವ್ಯವಸ್ಥೆ   ಮಾಡಲಾಗಿದೆ.
ಕಾಂಡೂಮ್ ಬಳಕೆಯ ಮಹತ್ವ ಸಾರುವ ಫ್ಯಾಷನ್ ಷೋ ಕೂಡ ಸಂಘಟಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಡೂಮ್ ಒಲಂಪಿಕ್ಸ್ ನ ಒಂದು ಭಾಗವಾಗಿದೆ.
ಎಚ್.ಐ.ವಿ /ಏಡ್ಸ್  ಭೀತಿ ಪ್ರತೀ ರಾಷ್ಟ್ರವನ್ನು ಕಾಡುತ್ತಿರುವುದೇ ಇದಕ್ಕೆ ಕಾರಣವಿರಬಹುದು. 1992ರ    ಒಲಿಂಪಿಕ್ಸ್ ಬಳಿಕ ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಕಾಂಡೂಮ್ ಸರಬರಾಜನ್ನು ಕಡ್ಡಾಯಗೊಳಿಸಲಾಗಿದೆ.

2000 ದಲ್ಲಿ ನಡೆದ ಸಿಡ್ನಿ ಒಲಂಪಿಕ್ಸ್ ನಲ್ಲಿ ಕಾಮನ ಬಿಲ್ಲಿನ ಬಣ್ಣಗಳ ಕಾಂಡೂಮ್ ಗಳನ್ನು  ಕ್ರೀಡಾಪಟುಗಳಿಗೆ ವಿತರಿಸಲಾಗಿತ್ತು. ಸಿಡ್ನಿಯಲ್ಲಿ 84 ರಾಷ್ಟ್ರಗಖ ೩೫೦೦ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಎಲ್ಲರೂ    ಹರೆಯದ ಅವರಿಗೆಂದೇ ಒಲಿಂಪಿಕ್ಸ್ ಗ್ರಾಮ ನಿರ್ಮಿಸಲಾಗಿತ್ತು. ಜನವಸತಿಯಿಂದ ಇವರು ದೂರ ಇರುವಂತೆ ಹಾಗೂ ಅವರ ವಾಸಸ್ಥಳದ ಸುತ್ತಲೂ ಬೇಲಿ ನಿರ್ಮಿಸಲಾಗಿತ್ತು. ಅವರ ಪ್ರತೀ ಕೋಣೆಯಲ್ಲೂ, ರೆಸ್ಟೋರೆಂಟ್ ಗಳಲ್ಲಿ ಕಾಂಡೋಮ್ ಗಳು ಮುಕ್ತವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಕಾಂಡೂಮ್ ಲಭ್ಯತೆಯಿಂದ ಕ್ರೀಡಾಪಟುಗಳು  ತಮ್ಮ ಆರೋಗ್ಯದ ಬಗ್ಗೆ, ಲೈಂಗಿಕ ರೋಗಗಳ ಬಗ್ಗೆ ಆತಂಕಪಡುವ ಅಗತ್ಯವಿರಲಿಲ್ಲ. ಜೊತೆಗೆ ಅವರಕ್ರಿದಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು   ಕಾಂಡೂಮ್ ವಿತರಕ ಸಂಸ್ಥೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬೀಜಿಂಗ್ ನಲ್ಲಿ ಈಗಾಗಲೇ ಕಾಂಡೂಮ್ ಜಾಹಿರಾತಿಗಾಗಿ ೪೧ ಕಾಂಡೂಮ್ ಪ್ಯಾಷನ್ ಷೋಗಳನ್ನು ಆಯೋಜಿಸಲಾಗಿದೆ. ವಿವಿಧ ಬಣ್ಣ ಆಕಾರ ಹೊಂದಿರುವ ಕಾಂಡೋಮ್ ಗಳಿಂದಲೇ     ತಯಾರಿಸಿದ ಉಡುಪುಗಳನ್ನು ತೊಟ್ಟ ವೈಯ್ಯಾರಿಯರು ಕಾಂಡೂಮ್ ಪ್ರಚಾರ ನಡೆಸಿದ್ದಾರೆ.
ಕಾಂಡೂಮ್ ಮತ್ತು ಪರಿಸರ ಹಾನಿ
ಉಪಯೋಗಿಸಿದ   ಕಾಂಡೋಮ್ ಗಳನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುವುದು ಆತಂಕಕಾರಿ ವಿಚಾರವಾಗಿದೆ. ಪರಿಸರವಾದಿಗಳೂ ಕೂಡ ಈ ವಿಚಾರದಲ್ಲಿ ಮಡಿವಂತಿಕೆ ತೋರಿವೆಯೋ ಏನೋ ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಬೆರಳೆಣಿಕೆಯಷ್ಟು ಅಲ್ಲಲ್ಲಿ ಈ ಬಗ್ಗೆ ಚರ್ಚೆಯಾದರು ಪರಿಸ್ಥಿತಿಯ ಗಂಭೀರತೆಯಷ್ಟರ ಮಟ್ಟಿಗೆ ಚರ್ಚೆಯಾಗುತ್ತಿಲ್ಲ.
ಚೀನಾ ಸರ್ಕಾರ ರೀ ಸೈಕಲಿಂಗ್ ಕಾಂಡೋಮನ್ನು ಉತ್ತೇಜಿಸುತ್ತಿದೆ ಹಾಗೂ ಬಳಸಿದ ಕಾಂಡೋಮ್ ನಿಂದ ಯಾವ ವಸ್ತುಗಳನ್ನು ಪುನರ್ ಉತ್ಪಾದನೆ ಮಾಡಬಹುದೆಂದು ಯೋಚಿಸುತ್ತಿರುವುದೂ ಸ್ವಾಗತಾರ್ಹವಾಗಿದೆ.
ಎಲ್ಲ ಕಾಳಜಿಗಳನ್ನು ಮೀರಿ ನಿಂತು ಲಾಭಬಡುಕುತನದ ಮನೋಭಾವ ಹೊಂದಿರುವ ರಾಷ್ಟ್ರಗಳಲ್ಲಿ ಬಳಸಿದ ಕಾಂಡೋಮ್ ಗಳಿಂದಾಗುವ ಪರಿಸರ ಹಾನಿಯ ಬಗ್ಗೆಯೂ ಗಂಭೀರತೆಯಿಲ್ಲದಂತಾಗಿದೆ. ಆರೋಗ್ಯ ರಕ್ಷಣೆ    ಹೆಸರಿನಲ್ಲಿ ಸಾಕಷ್ಟು ವ್ಯಾಪಾರವನ್ನು  ಮಾಡಿಕೊಳ್ಳುತ್ತಿರುವ  ಕಾಂಡೂಮ್  ಉತ್ಪಾದನಾ ಸಂಸ್ಥೆಗಳೂ ಕೂಡ ಈ ಬಗ್ಗೆ ಕಾಳಜಿವಹಿಸಬೇಕಾಗುವುದು ಅತ್ಯಗತ್ಯವಾಗಿದೆ.

‍ಲೇಖಕರು avadhi

August 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದೊಂದು ಕಾಂಡೂಮ್ ಸುಟ್ಟ ಘಟನೆ…

P For... ಡಾ ಲೀಲಾ ಸಂಪಿಗೆ ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ...

5 ಪ್ರತಿಕ್ರಿಯೆಗಳು

 1. sunaath

  ಹೌದಲ್ಲ! ಸಮಸ್ಯೆಯನ್ನು ಪರಿಹರಿಸುವ ಸಾಧನವೇ ಮತ್ತೊಂದು ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಇದು ಕೊಡುವ ಸಂದೇಶ:
  ಯಾವುದು ಅನೈಸರ್ಗಿಕವೋ ಅದು ಸಮಸ್ಯೆಗೆ ಕಾರಣ.

  ಪ್ರತಿಕ್ರಿಯೆ
 2. nagaraja

  ೨ ವಾರಕ್ಕೆ ೫೧ ಕಾಂಡೋಂಗಳು ಅಂದ್ರೆ ದಿನಕ್ಕೆ ೪ ಆಯ್ತು! ಅವನ್ನೆಲ್ಲಾ ಬಲೂನುಗಳಾಗಿ ಊದಿ ಆಕಾಶಕ್ಕೆ ಬಿಟ್ರೋ ಅಥವಾ…. ಗೊತಾಗ್ಲಿಲ್ಲ! ೨ ವಾರಾನೂ ರೂಮಲ್ಲೇ ಇದ್ರೋ ಅಥವಾ ಹೊರಗೆ ಬಂದು ಆಟ ಆಡುದ್ರೋ ಇಲ್ವೋ ಗೊತ್ತಾಗ್ಲಿಲ್ಲ!

  ಪ್ರತಿಕ್ರಿಯೆ
 3. uniquesupri

  ಕುತೂಹಲಕರವಾಗಿದೆ. ಭಾರತ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
  ಸುನಾಥರೇ, ನೀವು ಗ್ರಹಿಸಿದ ಸಂದೇಶ ಯಾಕೋ ಸರಿಯಾದ ಸಂದೇಶ ಕೊಡುತ್ತಲಿಲ್ಲ ಅನ್ನಿಸುತ್ತದೆ.

  ಪ್ರತಿಕ್ರಿಯೆ
 4. sunaath

  ಅತಿಕಾಮ ಹಾಗೂ ಸ್ವೇಚ್ಛಾಕಾಮ ಅನೈಸರ್ಗಿಕವಾದಂಥವು. ಇದರ ಫಲವನ್ನು ನಿಯಂತ್ರಿಸಲು ಕಾಂಡೋಮ್ ಬೇಕು. ಆದರೆ ಈ ಕಾಂಡೋಮ್‌ಗಳು ಅತಿಕಾಮ ಹಾಗು ಸ್ವೇಚ್ಛಾಕಾಮವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ನನ್ನ ತಿಳಿವಳಿಕೆ.
  ಭಾರತವೂ ಸಹ ಜಗತ್ತಿನ ಬಹುತೇಕ ದೇಶಗಳಂತೆ (–ಮುಸ್ಲಿಮ್ ದೇಶಗಳ ಹೊರತಾಗಿ–) ಹೆಣ್ಣುಮಕ್ಕಳ ಶೋಷಣೆಯನ್ನೆ fashion ಮಾಡಿಕೊಂಡಿದೆ. ಹೀಗಾಗಿ, ಭಾರತವು ಓಲಿಂಪಿಕ್ ಕೂಟವನ್ನು “ಯಶಸ್ವಿ”ಯಾಗಿ ನಿರ್ವಹಿಸುವದರಲ್ಲಿ ಸಂಶಯ ಬೇಡ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: