ಕೊರೊನಾ ಕಾಲಘಟ್ಟದಲ್ಲಿ ಆತ್ಮವಿಶ್ವಾಸ

ಲತಾ ಸಂತೋಷ ‌ಶೆಟ್ಟಿ

ಇಡಿ ಜಗತ್ತನ್ನೇ ತಲ್ಲಣಗೊಳಿಸಿರುವ  ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು  ಸರಕಾರ ವಿಧಿಸಿದ ಧೀರ್ಘ ಕಾಲದ ‌ಲಾಕ್ ಡೌನ್ ಹಿನ್ನೆಲೆ ಯಲ್ಲಿ ಮಾರ್ಚ್ ಕೊನೆಯ ವಾರದಿಂದ ವಾಣಿಜ್ಯ ನಗರಿ, ಕರ್ಮ ಭೂಮಿ ಎಂದೆಲ್ಲಾ ಕರೆಸಿಕೊಂಡ‌ ಮಾಯನಗರಿ‌ ಮುಂಬಯಿಯ ಎಲ್ಲಾ ‌ವಹಿವಾಟು ಸ್ಥಬ್ದಗೊಂಡು ಎಂದೂ ನಿದ್ರಿಸದ  ನಗರದಲ್ಲಿ  ನೀರವ ಆವರಿಸಿದೆ. ಆದಾಯವಿಲ್ಲದೆ ಬದುಕು ಸಾಗಿಸಬೇಕಾದ ಪರಿಸ್ಥಿತಿ ಒದಗಿಬಂದಿದ್ದು  ಕೊರೊನಾ ಕರಿನೆರಳಿನ ಕಪಿ ಮುಷ್ಟಿಯಲ್ಲಿ ಜನಜೀವನ ಚಿಂತಾಜನಕವಾಗಿದೆ .

ಲೆಕ್ಕವಿಲ್ಲದಷ್ಟು ಮಂದಿ ಕೊರೊನಾ‌ ಮಹಾಮಾರಿಯ ತೀವ್ರ ಹೊಡೆತ ದಿಂದ ತಪ್ಪಿಸಿಕೊಳ್ಳಲು ಮುಂಬಯಿ ಯಿಂದ ತಮ್ಮ ಊರಿನತ್ತ ಮುಖಮಾಡಿ ಪಯಣ ಬೆಳೆಸಿದರು .ಊರಿನಲ್ಲಿ  ಆದ ಕೊರೈಂಟೆನ್‌ಗೊಂದಲ, ಗದ್ದಲ, ಕೊರೊನಾ ಪರೀಕ್ಷೆಯ ಫಲಿತಾಂಶದ  ಬಗೆಗಿನ ಸಂಶಯಗಳು ಮಾಧ್ಯಮದ ಮೂಲಕ ಪ್ರಸಾರ ವಾಗುತ್ತಿದ್ದುದ್ದನ್ನು ನೋಡಿಯೇ ಭಯಪಟ್ಟ ನಾವು ಮನೆಯೊಳಗಿಂದ  ಕದಲಲ್ಲಿಲ್ಲ.

ಕೊರೊನಾ ಕಾಲ ಘಟ್ಟದಲ್ಲಿ ಆರೋಗ್ಯವಾಗಿ ಉಳಿದವರೇ   ಭಾಗ್ಯಾಶಾಲಿಗಳು.  ಕೊರೊನಾ ಮಹಾಮಾರಿ ಎಲ್ಲರ ಕನಸು ಕಮರಿಸಲು ಪ್ರಯತ್ನಿಸಿದೆ.  ಸೋಲಿನ ಬಗ್ಗೆ ಯೋಚಿಸುವುದ‌ಬಿಟ್ಟು ಆತ್ಮವಿಶ್ವಾಸ ಹೆಚ್ಚಿ ಸಿಕೊಂಡು ಕನಸುಗಳನ್ನು ಬಲಗೊಳಿಸಿ ಕೊಳ್ಳೊಣ.

ಗಾಣದೆತ್ತಿನಂತೆ ದುಡಿಯುತ್ತಿದ್ದವರು  ಜೀವ ಉಸಿ‌ಕೊಂಡರೆ  ಸಾಕೆಂದು  ಮನೆಒಳಗೆ ಉಳಿದವರೆ‌ ಹೆಚ್ಚು . ಕೊರೊನಾ ಮಹಾಮಾರಿಯ ಸಮಯದಲ್ಲಿ ಶೋಕಿ ಜೀವನಕ್ಕೆ, ತಳುಕು ಬಳುಕಿನ  ನಲಿವಿನಾಟಕ್ಕೆ ಮಂಗಳ ಹಾಡಿ ವಿವಿಧ ಕೃತಕ ಪಾನೀಯಗಳನ್ನು ಸೇವಿಸುತ್ತಿದ್ದವರು ಒಮ್ಮೆ ಗೆ ಆರೋಗ್ಯಕ್ಕೆ ಹೆಚ್ಚಿನ ಮಹತ್ವಕೊಡಲು ಪ್ರಾರಂಬಿಸಿ  ಲಿಂಬೆ, ತುಳಸಿ, ಅರಶಿಣ, ಶುಂಠಿ ಕಶಾಯಕ್ಕೆ ಹೆಚ್ಚಿನ ಮಹತ್ವ ನೀಡಿ ಅದನ್ನು ಕುಡಿಯುವುದನ್ನು ರೂಢಿಸಿಕೊಂಡವರು‌ ಅನೇಕ.

ಮಾಡಿದ್ದುಣ್ಣೋ ಮಹಾರಾಯ ಎಂಬ ನಾಣ್ಣುಡಿಯಂತೆ ನೋವುನಲಿವಿಗೆ ಸ್ಪಂದಿಸಲು‌ ಸಮಯವಿಲ್ಲದೆ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುವ ವೇಗದ ನಡಿಗೆಗೆ ಕೊರೊನಾ‌ಬ್ರೆಕ್  ಹಾಕಿತು. ಕೆಲವರಂತು ಕಾಲ‌ ಕಾಲಕ್ಕೆ ಊಟ‌ನಿದ್ದೆಗೂ  ಸಮಯ ಕೊಡದೆ ಹಾರಾಟದ ಬದುಕಿನಲ್ಲಿ ಸಂಗ್ರಹಿಸುವ  ತವಕದಲ್ಲಿ  ನಾನು ನನ್ನದು ಎಂಬ ನಶೆಯಲ್ಲಿ  ನನಗೆ ಸರಿಸಮಾನರು ಯಾರು ಇಲ್ಲ ನನ್ನಿಂದಲೆ ಎಂಬ ಭಾವನೆ‌ ನಡೆ ನುಡಿಯಲ್ಲಿ ಎದ್ದುಕಾಣುವುದು ಕೊರೊನಾ‌ ಬಂದ  ಮೇಲೆ ನನ್ನೊಳಗಿನ “ನಾನು ” ಹೋದರೆ ಮುಂದಿನ ಜೀವನ ಬಹು ಸುಂದರ ಆಗ‌ಬಹುದು.

ಕೊರೊನಾ ಮಹಾಮಾರಿಯಿಂದ ಸಾವು – ನೋವು, ಕಷ್ಟ  -ನಷ್ಟಗಳು ಅಪಾರ ಆಗಿದ್ದು ನಿಜ. ಆದರೆ  ಮಾನವೀಯ ಸಂಬಂಧಗಳು ಸಡಿಲ ಗೊಳ್ಳುತಿರುವುದು  ವಿಷಾದನೀಯ . ಸೋಲು ಗೆಲುವು ಬದುಕೆಂಬ ನಾಣ್ಯದ  ಎರಡು ಮುಖಗಳಿದ್ದಂತೆ. ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವಿಕರಿಸುವುದೇ ಸುಂದರ‌ ಬದುಕಿನ ಗುಟ್ಟು. ಜೀವನದ ಏಳು ಬೀಳು, ಕಷ್ಟ – ಸುಖ, ಒಳಿತು- ಕೆಡುಕುಗಳ  ಬಗ್ಗೆ ಅವರವರದ್ದೆ ಆದ ಅನಿಸಿಕೆ ಭಾವನೆ  ಗಳಿರುತ್ತವೆ.

ಜೀವನವನ್ನು ಅನುಭವಿಸುವ ನೋಡುವ  ನೋಟವು ಬೇರೆ ಬೇರೆ ಯಾಗಿರುತ್ತದೆ. ಆದರೂ ಮನೆಯ ವ್ಯಕ್ತಿಗಳು ಅಪರಿಚಿತರಂತೆ ಭಾಸವಾಗದೆ ಲಾಕ್ ಡೌನ್ ನಿಂದ ಶಾಲಾ ಕಾಲೇಜು ವ್ಯಾಪಾರ ವ್ಯವಹಾರಗಳು ಇಲ್ಲದೆ ಮನೆಯೊಳಗೆ ಮನೆಮಂದಿಯೊಂದಿಗೆ ಕಾಲ‌ಕಳೆಯುತ್ತಿರುವುದು ಕೊರೊನಾ ಬಂದು  ಕೌಟುಂಬಿಕ ಪ್ರೀತಿ ಯನ್ನು ಹೆಚ್ವಿಸಿತು ಅನ್ನಿಸುತ್ತಿದೆ.

‌‌‌ ಈ ಜೀವನ ಒಂದು ವರದಾನ . ಜಗತ್ತಿನ ವಿಸ್ಮಯ  ಸೌಂದರ್ಯ ಕೌತುಕ ಆಗು ಹೋಗುಗಳನ್ನು ಕಣ್ತುಂಬಿಕೊಳ್ಳುವ ವಿಶಿಷ್ಟ ಶಕ್ತಿ ಮಾನವನಿಗೆ ಇದೆ. ಸಕಾರಾತ್ಮಕ ಭಾವ ಯಶಸ್ವಿಗೆ ಪ್ರೇರಣೆ . ಈ ಜೀವನ ಎಂದರೆ ಜೀವಿಸುವುದು‌ ಮಾತ್ರವಲ್ಲ ಸಂಭ್ರಮಿಸ ಬೇಕು. ಆದರೆ ಕೊರೊನಾ ಮಹಾಮಾರಿಯ ಪ್ರಸ್ತುತ  ದಿನಗಳಲ್ಲಿ ಭಯ ಹಾಗೂ ಒತ್ತಡದ‌  ಜೊತೆಗೆ ಜೀವನ ‌ನಿಭಾಯಿಸಲು ಕಷ್ಟಕರ ವಾದ ಕಠಿಣ ಸಂದರ್ಭವನ್ನು ಪ್ರತಿ ನಿತ್ಯ ಪ್ರತಿ ಕ್ಷಣ  ಜನ ಎದುರಿಸುತ್ತಿದ್ದಾರೆ.

ಅಲ್ಲಲ್ಲಿ ಕೇಳಿ ಬರುವ ಕೊರೊನಾ ದಿಂದ ಉಂಟಾದ ಸಾವು ನೋವಿನ ಸುದ್ದಿ, ಆಸ್ಪತ್ರೆಯ ಬಿಲ್ಲುಗಳ ವಿವರ ,ಅದರಲ್ಲೂ ನಾವು ವಾಸಿಸುತ್ತಿರುವ ಅಕ್ಕಪಕ್ಕದ ಕಟ್ಟಡಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚು ತ್ತಾ ಹೋದಾಗ ನಗರಪಾಲಿಕೆಯ  ಎಚ್ಚರಿಕೆಯ ಸಂದೇಶ ಸಾರುವ ಧ್ವನಿ ವರ್ಧಕಗಳು ಅರಚುತ್ತಾ ಬಂದಾಗ, ಅಂಬ್ಯುಲೆನ್ಸ್ ನಮ್ಮ ಪರಿಸರದಲ್ಲಿ ಸೈರನ್ ಭಾರಿಸಿದಾಗ ಚಿಂತೆ ಕಾಡಿದ್ದೆ ಕಾಡಿದ್ದು. ಚಿಂತೆ ‌ಮಾಡಿ ಆಗುವ ಪ್ರಯೋಜನವಿಲ್ಲ ಚಿಂತೆಗೂ ಚಿತೆಗೂ ಇರುವ ವ್ಯತ್ಯಾಸ ಎಂದರೆ‌ ಸೊನ್ನೆ .

ಚಿತೆ ಸತ್ತವರ ಶರೀರ ಸುಟ್ಟರೆ‌ ಚಿಂತೆಯು ಜೀವಂತ ಇರುವವರನ್ನು ಸುಡುತ್ತದೆ ಎನ್ನುವ‌ ಅರಿವಿದ್ದರೂ  ತಿಂಗಳು‌ ಗಟ್ಟಲೇ ಭಯದಲ್ಲೆ ಕಳೆದಿದ್ದೆವು. ಋಣಾತ್ಮಕ ಭಾವವನ್ನು ಬಿಟ್ಟು ನಮ್ಮೊಳಗಿನ ಮಹಾತ್ವಾಕಾಂಕ್ಷಿಯನ್ನು ಉಳಿಸಿಕೊಳ್ಳಬೇಕು. ಇಂದಿನ ಮುಂಬಯಿನ ಪರಿಸ್ಥಿತಿ ‌ಹಾಗೂ ಕೊರೊನಾ ದಿಂದ ಜೀವನಕ್ಕೆ ಸಿಕ್ಕ‌ಫಲಿತಾಂಶಕ್ಕೆ‌ ಹೆದರಿ ಇನ್ನೂ ಮಾಗಿ‌ಬೆಳೆಯ ಬೇಕು.

ಕಡ್ಡಿಯಂತ ಸಮಸ್ಯೆ ಯನ್ನು ಗುಡ್ಡಮಾಡಿ ಕೊರಗುವುದರಿಂದ  ಇದ್ದದರಲ್ಲಿ‌ ನೆಮ್ಮದಿಯಿಂದ ಬದುಕುವುದು ಸುಲಭಮಾರ್ಗ. ಸರಳ ಸುಂದರ ಜೀವನಕ್ಕೆ ‌ಬೇಕಾದ ಸೂತ್ರಗಳನ್ನು ಬಳಸಿಕೊಂಡು‌ ನಾಳೆ‌ ಇಂದಿಗಿಂತ ಸುಂದರ ವಾಗಿರುತ್ತದೆ ಎಂಬ ಆಶಾಭಾವನೆ ಬದುಕಿನ‌ ದಿಕ್ಕನ್ನು ಬದಲಿಸ‌ಬಲ್ಲದು.

ಆಧುನಿಕ ಬದುಕಿನ‌ ಸಂಕೀರ್ಣತೆ ನಮ್ಮನ್ನು ‌ಒಂದಲ್ಲ ಒಂದು ಬಾರಿ‌ ಕಂಗೆಡಿಸಿರುತ್ತದೆ ನಿಜ ಆದರೆ ಅದರಿಂದ ಹೊರ‌ಬಂದು ಬದುಕನ್ನು ಸರಳಗೊಳಿಸಿ‌  ಒಳ್ಳೆಯ‌ ಚಿಂತನೆಗೆ ಒಳಗಾದಲ್ಲಿ‌ ಕೊರೊನಾ‌ ದಿಂದ‌ ಒದಗಿದ‌ ಬೆಟ್ಟದಷ್ಟು ಸಮಸ್ಯೆಯನ್ನು ‌ ಹೂವಿನಷ್ಟು ಹಗುರವಾಗಿಸಿಕೊಳ್ಳ ಬಹುದು. ಕಾಲ‌ಎಲ್ಲವನ್ನೂ ಸರಿದೂಗಿಸುತ್ತದೆ.

ಎಲ್ಲರೂ ಚೆನ್ನಾಗಿರಲು ಬಯಸುತ್ತಾರೆ. ಆದರೆ ಚೆನ್ನಾಗಿರುವುದರ ಚೌಕಟ್ಟು ಏನು ಎನ್ನುವುದನ್ನು ಅರ್ಥವಾಡಿಕೊಂಡರೆ ಪರಿಪೂರ್ಣ ತೆ ಹೊಂದುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಬಾಂಧವ್ಯ ಗಟ್ಟಿಗೊಳಿಸ‌ಬಹುದು. ಇಂದು ‌ಕರೊನಾ‌ ಕಾಲದಲ್ಲಿ‌ ಅನುಭವಿಸಿದ‌ ನೋವು ಒಳಗಿಂದೊಳಗೆ‌ ಎಡೆ ಬಿಡದೆ‌ಕಾಡ‌ಬಹುದು.

ಯಾರದ್ದೋ‌ ಚುಚ್ಚುಮಾತು, ಆದ ಅವಮಾನ, ತಿರಸ್ಕಾರ, ನಷ್ಟಗಳು ವರ್ಷಗಳೆ ಉರುಳಿದರೂ ಹೊಸಗಾಯದಂತೆ‌  ನಿರಂತರ ನೋಯುತ್ತಿರಬಹುದು. ಕೊರೊನಾ ಸಂಕಟದಲ್ಲಿ‌ನಡೆದ ಅಸಹಾಯಕ ಫಟನೆಗಳಿಂದ‌ ಬಲಹೀನರಾಗದೆ ಮನೋಬಲ ಹೆಚ್ಚಿಸಿಕೊಳ್ಳೋಣ.

ಪಶು- ಪಕ್ಷಿಗಳಿಗೆ‌  ಬದುಕಲು ಜಾಗವಿಲ್ಲದಂತೆ ಮಾಡಿದ್ದ ಮಾನವ. ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ ಕೊರೊನ ಮಹಾಮಾರಿ‌ ನೆವನದಲ್ಲಿ  ಈ‌ ಪ್ರಕೃತಿ ತನ್ನನ್ನು ಉಳಿಸಿಕೊಳ್ಳಲು ಕೊರೊನಾ ಎಂಬ ಸೂತ್ರ ವನ್ಮು ಬಳಸಿತೆ ಎಂದೆನಿಸುತ್ತಿದೆ. ಇದುವರೆಗೆ ಪರಿಸರ ನಮ್ಮ ನ್ನು ಜೋಪಾನವಾಗಿ ರಕ್ಷಿಸಿ  ಸಹಿಸಿಕೊಂಡು ಮೃದು ಧೋರಣೆ ತಳೆದುಕೊಂಡಿದ್ದವು.

ಅದೇ ಮಾನವ ಯಾವಾಗ ದುರಾಶೆಯ ಎಲ್ಲೆ‌ಮೀರಿ ವಿಕೃತಿ ತೋರಿದನೋ ಅಂದಿನಿಂದಲೇ‌ ಮೃತ್ಯುಧೊರಣೆಯ ರೂಪದಲ್ಲಿ ಕೊರೊನಾ ಧರೆಗಿಳಿದು‌ ಮರಣ ಮೃದಂಗ ಬಾರಿಸಲು ಪ್ರಾರಂಭವಾಯಿತು ಎನ್ನಬಹುದು. ಒಟ್ಟಿನಲ್ಲಿ ಕೊರೊನಾ ಕಾಲಘಟ್ಟದಲ್ಲಿ  ಆತ್ಮವಿಶ್ವಾಸ ‌ಹೆಚ್ಚಿಸಿಕೋಳ್ಳುವ ಅಗತ್ಯವಿದೆ.

( ಲತಾ ಸಂತೋಷ್ ಶೆಟ್ಟಿ ಅವರು ‘ ಹೊಂಗನಸು’ ಲೇಖನಗಳ ಸಂಕಲನ ಮೂಲಕ ಗಮನ ಸೆಳೆದವರು. ವಿಚಾರ ಸಾಹಿತ್ಯದಲ್ಲಿ ಆಸಕ್ತಿ.ಬಂಟರವಾಣಿ,ಯಶಸ್ವಿ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿ ಇದ್ದಾರೆ.)

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This