ಕೊಳಲು ಉಲಿದ ನೆನಪು

-ಅರವಿ0ದ ನಾವಡ
ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ0ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ0ಗೀತಕ್ಕಿದೆ ಎ0ಬುದು ನಿಜ. ಅದಕ್ಕಿ0ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆದ್ರ್ರಗೊ0ಡಿದ್ದೇನೆ. ಮನಸ್ಸು ತೇವಗೊ0ಡಿದೆ ಎನಿಸುತ್ತದೆ.

ರಸ್ತೆಯ ಮೇಲೆ ಕೊಳಲು ಮಾರುತ್ತಾ ಬರುವ ಕುಶಲಕಮರ್ಿಗೆ ನಮಸ್ಕರಿಸಬೇಕು. ವಾಸ್ತವವಾಗಿ ಅವನೇ ಈ ಹುಚ್ಚು ಹಿಡಿಸಿದವನು. ಈತ ಬರೀ ಕೊಳಲು ಮಾರುವುದಿಲ್ಲ. ಅದಕ್ಕೆ ಪ್ರತಿಯಾಗಿ ಕೊರಳನ್ನು ಅವನ ಉಸಿರನ್ನು ಫé್ರೀ ಕೊಡುತ್ತಾನೆ. ಅವನ ನುಡಿಸುವಿಕೆಯಲ್ಲಿ ಹೊರಹೊಮ್ಮುವ ಪ್ರತಿ ನಾದದಲ್ಲೂ ಆದ್ರ್ರತೆ ಇದೆ.
ಅವನ ಹೆಸರು ಗೊತ್ತಿಲ್ಲ.
ಭದ್ರಾವತಿಯಲ್ಲಿ ನನ್ನ ದೊಡ್ಡಪ್ಪನ ಮನೆಯ ಮು0ದೆ ವಾರಕ್ಕೊಮ್ಮೆ ಈ ಕುಶಲಕಮರ್ಿ ಬರುತ್ತಿದ್ದ. ಅವನಿಗೆ ವ್ಯಾಪಾರ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವನು ಎ0ದಿಗೂ ತಪ್ಪಿಸುತ್ತಿರಲಿಲ್ಲ. ಬರುವಾಗ “ತನು ಡೋಲೇ ಮನು ಡೋಲೇ” ಯನ್ನೋ, “ಬೋಲೋರೆ ಪಪಿಹರಾ” ವನ್ನೋ ಅಥವಾ ಯಾವುದೋ ಅರ್ಥವಾಗದ ಮೀರಾ ಭಜನವನ್ನು ನುಡಿಸಿಕೊ0ಡು ಬರುತ್ತಿದ್ದ. ನಮಗೆ ಮೀರಾ ಭಜನ್ಸ್ ಸಾಹಿತ್ಯವಾಗಲೀ ಅರ್ಥವಾಗಲೀ ಗೊತ್ತಿರಲಿಲ್ಲ. ಆದರೆ ಆ ನಾದ ಇಷ್ಟವಾಗುತ್ತಿತ್ತು. ಮನಸ್ಸೆಲ್ಲಾ ಅದೇ ತು0ಬಿಕೊಳ್ಳುತ್ತಿತ್ತು.

“ಗಾಯಿಯೇ ಗಣಪತಿ, ಜಗವ0ದನಾ” ಇ0ಥಾ ಗೀತೆಗಳು ನನಗೆ ದೊರೆತಿದ್ದು ಆಗಲೇ. ನನ್ನ ಅಕ್ಕ ಗಾಯತ್ರಿ, ಸಾವಿತ್ರಿ ಇಬ್ಬರೂ ಈ ಗೀತೆಗಳನ್ನು ಗುನುಗುತ್ತಿದ್ದುದರಿ0ದ ಅವನು ನುಡಿಸುವ ಗೀತೆಯೂ ಇದೇ ಎ0ದು ತಿಳಿದಿತ್ತು. ಆದರೆ ಜೇಬು ತು0ಬಾ ಕೊಳಲುಗಳನ್ನು ತು0ಬಿಕೊ0ಡು ಹತ್ತು ರೂಪಾಯಿಗೆ ಒ0ದು ಎನ್ನುತ್ತಾ ಮಾರಿ ಬರುವವನ ಮು0ದೆ ಚೌಕಾಶಿಗೆ ಏಳು ರೂಪಾಯಿಗೆ ಒ0ದು ಕೊಳಲನ್ನು ಕೊ0ಡು ಹಾಳು ಮಾಡಿದ ನೆನಪು ನನಗಿದೆ.
ಆತ ಯಾವುದೇ ಹೊಸ ಗೀತೆಯಿ0ದ ಹಿಡಿದು ಹಳೆಯ ಗೀತೆಯ ಮಾಧುರ್ಯವನ್ನು ತು0ಬಿ ಕೊಡಬಲ್ಲ. ಆತ ಹಿಡಿಸಿದ ಹುಚ್ಚು ಈಗ ದೊಡ್ಡ ಮಟ್ಟಕ್ಕೇರಿದೆ. ನಾನು ಹಿ0ದೂಸ್ಥಾನಿ ಶೈಲಿಯ ಕೊಳಲು ನುಡಿಸುವಿಕೆ ಕಲಿಯಲು ಹೋಗಿ ವಿಫಲನಾದೆ. ಆದರೂ ಹುಚ್ಚು ಬಿಟ್ಟಿಲ್ಲ. ರವಿಪ್ರಸಾದ್ ಚೌರಾಸಿಯಾರಿ0ದ ಹಿಡಿದು ಕೊಳಲು ನುಡಿಸುವ ಪ್ರತಿಯೊಬ್ಬನೂ ನನಗೆ ಇಷ್ಟವಾಗುತ್ತಾನೆ. ಇವರಲ್ಲಿ ನನಗೆ ನಾದವನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ.
ಒ0ದು ಬಿದಿರ ಕೋಲಿನೊಳಗೆ ಉಸಿರು ತು0ಬಿದರೆ ಹೊಮ್ಮುವಾಗ ರಾಗವಾಗಿ ಮಾರ್ಪಡುವುದೇ ಅದ್ಭುತ ಸೃಷ್ಟಿಗೆ ಸಮಾನ. ಸೃಜನಶೀಲತೆಯ ಪದಕ್ಕೆ ಅರ್ಥ ಸಿಗುವುದೇ ಇಲ್ಲಿ ಎ0ದು ತೋರುತ್ತದೆ. ಎಷ್ಟೋ ಬಾರಿ ನನಗೆ ನಾನೇ ಸೋತದ್ದು ಈ ನಾದವನ್ನು ಆಲಿಸುವಾಗ. ಅದಕ್ಕೆ ಬೃ0ದಾವನದ ಸುತ್ತ ಭಕ್ತ ಮೀರೆ ಕೊಳಲುಗಾನ ಕೇಳುತ್ತಾ ಕುಳಿತು ಬಿಟ್ಟಳು. ಜಗತ್ತೇ ಅವಳನ್ನು ನೋಡುತ್ತಿದ್ದರೂ ಅವಳಿಗೆ ಕೊಳಲ ಗಾನ, ಮುರಳಿ ಲೋಲ ಬಿಟ್ಟರೆ ಏನೂ ಕಾಣಲಿಲ್ಲ. ಹಾಗೆಯೇ ಗೋಪಿಯರೆಲ್ಲಾ ಕೊಳಲಿನ ಹಿ0ದೆ, ಅದರ ನಾದದ ಹಿ0ದೆ ನಡೆದದ್ದು ಎಲ್ಲಿಯವರೆಗೆ ಎ0ದರೆ ಆತ್ಮತೃಪ್ತಿ ಸಿಕ್ಕುವವರೆಗೆ. ವಾಸ್ತವವಾಗಿ ಗೋಪಿಯರೆಲ್ಲಾ ಮನ ಸೋತಿದ್ದು ಕೃಷ್ಣನಿಗಲ್ಲ, ಅವನ ಮುರಳೀಗಾನಕ್ಕೆ!
ಮುರಳಿ ಕೃಷ್ಣನ ಶ್ರೇಷ್ಠತೆಯನ್ನು ಹೆಚ್ಚಿಸಿತು.
ಒ0ದು ವೇಳೆ ತಾನು ಊದಿದ ಉಸಿರನ್ನು ವೇಣುನಾದವಾಗಿ ಹೊರಹೊಮ್ಮಿಸದಿದ್ದರೆ ಕೃಷ್ಣ ಏನು ಮಾಡುತ್ತಿದ್ದ?
‘ಹಂಗಾಮ’ದಿಂದ ಹೆಕ್ಕಿದ್ದು

‍ಲೇಖಕರು avadhi

September 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

  1. shreedevi arvind

    ನಾವಡರೆ, ಯಾರು ರವಿಪ್ರಸಾದ್ ಚೌರಾಸಿಯಾ? ಹರಿಪ್ರಸಾದ್ ಹೋಗಿ ರವಿಪ್ರಸಾದ್ ಆದಂಗಿದೆ ಅನ್ಸತ್ತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: