‘ಕೋವಿಗೊಂದು ಕನ್ನಡಕ’ ವಿಶಿಷ್ಟ ರಂಗಪ್ರಯೋಗ

ಸುಷ್ಮ

ಕನ್ನಡ ನಾಟಕ : ಕೋವಿಗೊಂದು ಕನ್ನಡಕ

ಸ್ಲಾವೋಮಿರ್ ಮ್ರೋಜೆಕ್ ರ ‘ಚಾರ್ಲಿ’ ಆಧಾರಿತ

23 ಜನವರಿ | 60 ನಿ | 3.30 ಮತ್ತು 7.30 | ರಂಗ ಶಂಕರ, ಜೆ ಪಿ ನಗರ, ಬೆಂಗಳೂರು

24 ಜನವರಿ | ಸಂಜೆ 7 ಕ್ಕೆ | ಸಂಚಾರಿ ಥಿಯೇಟರ್ ‘Empty Space’

ಉತ್ತರಹಳ್ಳಿ ರಸ್ತೆ, ಶಾಂತಿ ಸಾಗರ್ ಬಳಿ

ಟಿಕೆಟ್ ಗಳಿಗೆ ಸಂಪರ್ಕಿಸಿ – 990012400 / www.bookmyshow.com

‘ಕೋವಿಗೊಂದು ಕನ್ನಡಕ’

ಕೋವಿ ಹಿಡಿದು ತನ್ನ ಶತ್ರುವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತ್ರುವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತ್ರುವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು, ನೋಡಿ ನಾಟಕ ‘ಕೋವಿಗೊಂದು ಕನ್ನಡಕ!’

ರೂಪಾಂತರ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್

ರಂಗ ಶಾಸ್ತ್ರ : ನಿಶಾ ಅಬ್ದುಲ್ಲಾ

ರಂಗ ವಿನ್ಯಾಸ: ಶ್ರೀಧರ್ ಮೂರ್ತಿ

ಸಂಗೀತ ಸಂಯೋಜನೆ : ಉತ್ಥಾನ ಭಾರೀಘಾಟ್

ಬೆಳಕು ವಿನ್ಯಾಸ : ವಿನಯ್ ಚಂದ್ರ ಪಿ.

ನಿರ್ಮಾಣ ನಿರ್ವಹಣೆ: ಅರುಣ್ ಡಿ ಟಿ, ಸುಷ್ಮ

ರಂಗದ ಮೇಲೆ: ವಿಜಯ್ ಕುಲ್ಕರ್ಣಿ, ರಾಗ್ ಅರಸ್, ಸುನಿಲ್ ಕುಮಾರ್ ವಿ

ಭಿತ್ತಿಪತ್ರ ವಿನ್ಯಾಸ: ಸತೀಶ್ ಗಂಗಯ್ಯ

ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಪ್ರಸ್ತುತಿ

‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’

2015ರಲ್ಲಿ ‘ಚೆರ್ರಿ ತೋಟ’ ನಾಟಕದೊಂದಿಗೆ ರೂಪುಗೊಂಡ ರಂಗ ತಂಡ ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್.’

ರಂಗ ಭೂಮಿಯಲ್ಲಿ ಹೊಸತನ್ನು ಹುಡುಕಿ ಹೋರಾಟ, ಸುಮಾರು 25 ವರ್ಷಗಳ ಒಟ್ಟು ಅನುಭವವುಳ್ಳ 3 ಗೆಳೆಯರ ಕನಸು, ಬೆಂಗಳೂರು ಥೀಯೇಟರ್ ಕಲೆಕ್ಟಿವ್, ರೂಪುಗೊಂಡಿದ್ದು ‘ರಂಗ ಶಂಕರ’ದ ಯುವ ನಾಟಕೋತ್ಸವದಲ್ಲಿ ವೆಂಕಟೇಶ್ ಪ್ರಸಾದ್ ರವರಿಗೆ ನಾಟಕ ನಿರ್ದೇಶಿಸಲು ಅವಕಾಶ ದೊರೆತಾಗ.

ಜಾಗತಿಕ ರಂಗಭೂಮಿಯಲ್ಲಿ ನಡೆಯುತ್ತಿರುವ ಹೊಸ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ರಯೋಗಿಸುವ ಹಂಬಲದಿಂದ ಹುಟ್ಟಿದ ಬೆಂಗಳೂರು ಥೀಯೇಟರ್ ಕಲೆಕ್ಟಿವ್ ಗೆ ಈಗ 3 ವರ್ಷ ತುಂಬಿದೆ.

ಜನಪ್ರಿಯ ಮಾದರಿಯ ನಾಟಕಗಳು ಮತ್ತು ಮನರಂಜನೆ ಮಾತ್ರ ಕೇಂದ್ರವಾಗಿಟ್ಟುಕೊಂಡ ಪ್ರಯೋಗಗಳನ್ನು ಹೊರತುಪಡಿಸಿ, ಉತ್ತಮ ಗುಣಮಟ್ಟದ, ಸಮಾಜ ಮುಖಿಯಾದ ಗಂಭೀರ ವಿಷಯಗಳನ್ನೂ ಜನರಿಗೆ ತಲುಪಿಸುವ ಉದ್ದೇಶ ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನದು.

ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನ ಮೊದಲ ಪ್ರಯೋಗ, ಚೆರ್ರಿ ತೋಟ 25 ಪ್ರದರ್ಶನಗಳನ್ನು ಕಂಡಿದ್ದು ಉತ್ತಮ ಪ್ರತಿಕ್ರಿಯೆ ಮತ್ತು ಜನಮನ್ನಣೆ ಪಡೆದಿದೆ. ವೆಂಕಟೇಶ್ ಪ್ರಸಾದ್ ರವರ ನಿರ್ದೇಶನದ ನಾಟಕ, ಮೈಸೂರು ರಂಗಾಯಣದ ಗ್ರೀಷ್ಮ ರಂಗೋತ್ಸವದಲ್ಲಿ, ಗುಲ್ಬರ್ಗಾ ರಂಗಾಯಣದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದೆ.

ಪ್ರಕಾಶ್ ಬೆಳವಾಡಿಯವರ ನಿರ್ದೇಶನ ಬೆಕೆಟ್, ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನ ಎರಡನೇ ಪ್ರಯತ್ನ. ಧರ್ಮ ಮತ್ತು ರಾಜಕಾರಣಗಳ ಒಳ ಸಂಬಂಧ ಮತ್ತು ಒಂದರ ಮೇಲೆ ಮತ್ತೊಂದು ಬೀರವ ಪರಿಣಾಮಗಳನ್ನು ಕುರಿತಾದ ನಾಟಕ. ಕನ್ನಡದಲ್ಲಿ ಬಹುತೇಕ ಪ್ರದರ್ಶನಗೊಳ್ಳದ ‘ಬೆಕೆಟ್’ ನಾಟಕದ ಪ್ರಯೋಗ ನಮ್ಮ ಹೆಮ್ಮೆಯಾಗಿದೆ.

ಮೂರನೇ ಪ್ರಯೋಗವಾಗಿ ಆಯ್ಕೆ ಮಾಡಿಕೊಂಡ ‘ಒಂದು ಪ್ರೀತಿಯ ಕಥೆ’ ನಾಟಕವು ಹೆಣ್ಣೊಬ್ಬಳ ಸಲಿಂಗ ಪ್ರೇಮದ ಕುರಿತಾದ ನಾಟಕ. ಮರಾಠಿ ಮೂಲದ ವಿಜಯ್ ತೆಂಡೂಲ್ಕರ್ ರ ‘ಮಿತ್ರಾಚಿ ಗೋಷ್ಟ್’ ನಾಟಕವನ್ನು ಕನ್ನಡಕ್ಕೆ ಅನುವಾದ ಮತ್ತು ನಿರ್ದೇಶನ ವೆಂಕಟೇಶ್ ಪ್ರಸಾದ್ ರವರು ಮಾಡಿದ್ದಾರೆ.

ಈ ವಿಷಯದ ಕುರಿತಾದ ಮೊದಲ ಕನ್ನಡ ನಾಟಕವಾಗಿದ್ದು ಇದರ ಬಗ್ಗೆ ಹೆಮ್ಮೆ ಇದ್ದರೂ, ನಮ್ಮ ನಡುವಿನಲ್ಲೇ ಬದುಕುವ ಒಂದು ಸಮುದಾಯ ಬಗೆಗಿನ ನಾಟಕ ಇನ್ನೂ ಕನ್ನಡದಲ್ಲಿ ಪ್ರಯೋಗಗೊಳ್ಳದಿರುವುದು ವಿಷಾದನೀಯ ಕೂಡ.

ಈ ನಾಟಕದ ಬಗ್ಗೆ ವೆಂಕಟೇಶ್ ಪ್ರಸಾದ್ ಹೀಗೆ ವಿವರಿಸಿದ್ದಾರೆ.

‘ಇದು ಸ್ವಲ್ಪ ಗಂಭೀರವಾದ ನಾಟಕ. ಇದಕ್ಕೆ ಜನಪ್ರಿಯ ಮಾದರಿಯ ನಾಟಕಗಳಂತೆ ಪ್ರೇಕ್ಷಕರು ಬರುವುದು ಕಷ್ಟ. ಹಾಗಂತ ಜನಪ್ರಿಯಗೊಳಿಸಬೇಕು, ರಂಗಮಂದಿರ ತುಂಬಬೇಕು ಎಂಬ ಒಂದೇ ಕಾರಣಕ್ಕೆ ನಾಟಕದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ನಮಗೆ ಇಷ್ಟವಿಲ್ಲ. ಹಾಗೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಹಾಗೆ ನಾಟಕಗಳನ್ನು ಮಾಡಬೇಕು ಎನ್ನುವುದೇ ನಮ್ಮ ತಂಡದ ಮೂಲ ಉದ್ದೇಶಗಳಲ್ಲಿ ಒಂದು.’

ನಿರ್ದೇಶಕರ ಬಗ್ಗೆ

ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ವೆಂಕಟೇಶ್ ಪ್ರಸಾದ್, ನಟರಾಗಿ, ಸಂಘಟಕರಾಗಿ ಮತ್ತು ಇತ್ತೀಚಿಗೆ ನಿರ್ದೇಶಕರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಬಹುಪಾಲು ರಂಗಭೂಮಿಯ ಸಾಂಗತ್ಯವನ್ನು ಅಂದರೆ ಸುಮಾರು 11 ವರ್ಷಗಳ ಕಾಲ ‘ಸಮುದಾಯ’ ಸಂಘಟನೆ ಜೊತೆ ಗುರುತಿಸಿಕೊಂಡ ವೆಂಕಟೇಶ್ ಪ್ರಸಾದ್, ರಂಗಭೂಮಿಯ ಮತ್ತು ಸಂಘಟನೆಯ ಪಾಠಗಳನ್ನು ಕಲಿತಿದ್ದು ಸಮುದಾಯದಲ್ಲಿ.  ಎಮ್ ಎಸ್ ಸತ್ಯು ಅವರ ‘ಕುರಿ’ ನಾಟಕದಲ್ಲಿ ಪಾತ್ರ ಮಾಡುವ ಮೂಲಕ ಸಮುದಾಯ ಪ್ರವೇಶಿಸಿದ ಇವರು, ನಂತರ ಸಮುದಾಯದ ಎಲ್ಲಾ ಚಟುವಟಿಕೆಗಳ ಭಾಗವಾದ ಇವರು, ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತದ ಪ್ರಮುಖ ನಿರ್ದೇಶಕರಾದ ಎಮ್ ಎಸ್ ಸತ್ಯು, ಪ್ರಕಾಶ್ ಬೆಳವಾಡಿ, ಶ್ರೀಪಾದ್ ಭಟ್, ಸ್ಯಾಮ್ ಕುಟ್ಟಿ ಪಟ್ಟಂಕರಿ, ಅಭಿಷೇಕ್ ಮಜುಮ್ದಾರ್, ಮೋಹಿತ್ ಟಕಾಲ್ಕರ್, ಸುರೇಂದ್ರನಾಥ್ ಮುಂತಾದ ಪ್ರಮುಖ ನಿರ್ದೇಶಕರ ಜೊತೆ ನಟರಾಗಿ, ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಇವರು, ಸಮುದಾಯದ ಪ್ರಮುಖ ನಾಟಕಗಳಾದ ‘ಕುರಿ’ ‘ಜುಗಾರಿ ಕ್ರಾಸ್’ ‘ಪಂಪ ಭಾರತ’ ‘ಕತ್ತಲೆ ದಾರಿ ದೂರ’ ‘ಸುತ್ತಿ ಕೊಂಡರೆ ಸರ್ಪ’ ‘ಕಲ್ಯಾಣದ ಕೊನೆಯ ದಿನಗಳು’ ‘ನಮ್ಮ ರಾಬರ್ಟ್ ಕ್ಲೈವ್’ ‘ತುಘಲಕ್’ ಹೀಗೆ ಹಲವು ಮಹತ್ವದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರು ಅಭಿನಯಿಸಿರುವ ‘ತುಘಲಕ್’ ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾದ ಸಂಚಲನ ಮೂಡಿಸಿದ ನಾಟಕ. ಇವರ ತುಘಲಕ್ ಪಾತ್ರ ನಿರ್ವಹಣೆ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

‍ಲೇಖಕರು Avadhi

January 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This