ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?
ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.
ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.
ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ
120408095421greetings-card-for-true-heroes-011208-bp-01
dundiraj
[email protected]
ಇಂತಹ ಸಂಧರ್ಭಗಳಲ್ಲಿ ಮಾಧ್ಯಮದವರನ್ನು ದೂರವಿಡಬೇಕು.
ಟಿ ವಿ ಯಲ್ಲಿ ಕೆಲವರು ಮುಂಬೈ  ಘಟನೆಯನ್ನು ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು.
+++
ಸಂದೀಪ್ ಕಾಮತ್
kadalateera.blogspot.com
[email protected]
ಒಂದು ದೃಷ್ಟಿಯಲ್ಲಿ ನೋಡಿದ್ರೆ ಮಾಧ್ಯಮದವರು ಮಾಡಿದ್ದು ತಪ್ಪು.ಆದ್ರೆ at the same time ಟಿವಿ ಮುಂದೆ ಕೋಟ್ಯಾಂತರ ಜನ ಕಣ್ಣು ಮಿಟುಕಿಸದೆ ಕೂತಿದ್ರೂ ಅನ್ನೋದೂ ನಿಜ. ಜನರಿಗೆ ಮಾರನೇ ದಿನದ ಪೇಪರ್ ನಲ್ಲಿ ಬರೋ ನ್ಯೂಸ್ ನೋಡೋ ಅಷ್ಟು ವ್ಯವಧಾನವೂ ಇಲ್ಲ ಬಿಡಿ. ಈಗ ತೋರಿಸಿದ ನ್ಯೂಸೇ ಇನ್ನು ಒಂದು ಘಂಟೆ ಬಿಟ್ಟು ತೋರಿಸಿದ್ರೆ ’ಬಡ್ಡಿ ಮಕ್ಕಳು ತೋರಿಸಿದ್ದೇ ತೋರಿಸ್ತಾರೆ, ಏನೂ ಹೊಸದು ತೋರಿಸ್ತಾ ಇಲ್ಲ ’ ಅಂತ ಬಯ್ಯೋದೂ ನಾವೇ ಅಲ್ವ??
ಒಂದು ಕಾಲ ಇತ್ತು ಪಕ್ಕದ ಊರಿನಲ್ಲಿ ಭೂಕಂಪ ಆಗಿ ಸತ್ರೂ ರಾತ್ರಿ ೮.೩೦ ಕ್ಕೆ ಡಿಡಿ ನ್ಯೂಸ್ ನೋಡಿನೇ ಅಥವಾ ಮಾರನೇ ದಿನ ಪ್ರಜಾವಾಣಿ ನೋಡಿನೇ ಗೊತ್ತಾಗೋ ಪರಿಸ್ಥಿತಿ ಇತ್ತು.
ಆದ್ರೆ ಈಗ ಇನ್ಸ್ಟಂಟ್ ಕಾಫಿ ಥರ ಎಲ್ಲ ಥಟ್ ಅಂತ ಬರಬೇಕು. ಇಂಟರನೆಟ್ ಪೇಜ್ ಸ್ವಲ್ಪ ತಡವಾಗಿ ಓಪನ್ ಆದ್ರೂ ಬಿ.ಎಸ್.ಎನ್.ಎಲ್ ಗೆ ಹಿಡಿ ಶಾಪ ಹಾಕಿನೇ ಮುಂದೆ ಪಯಣ ನಮ್ಮದು!
ನನಗೆ ಗೊತ್ತಿರೋ ಪ್ರಕಾರ ನ್ಯೂಸ್ ಚ್ಯಾನೆಲ್ ನವರು ಡಿಲೇಡ್ ಲೈವ್ ತೋರಿಸಿದ್ದು .ನಾನು ನೋಡಿದ್ದು ಟೈಮ್ಸ್ ನೌ ಹಾಗಾಗಿ ಅರ್ನಾಬ್ ಪದೇ ಪದೇ ’ನೀವು ನೋಡ್ತಾ ಇರೋದು ಅರ್ಧ ಘಂಟೆ ಹಿಂದೆ ರೆಕಾರ್ಡ್ ಮಾಡಿರೋದು ’ ಅಂತ ಪದೇ ಪದೇ ಹೇಳ್ತಾ ಇರೋದು ನಾನೇ ನೋಡಿದ್ದೆ.
ಆದರೂ ಮಾಧ್ಯಮದವ್ರು ಎಚ್ಚರವಾಗಿರ್ಬೇಕು ನಿಜ.ಆ ಉಗ್ರಗಾಮಿ ಚಡ್ಡಿಯ ಕಲರ್ ನಿಂದ ಹಿಡಿದು ಎಲ್ಲ ಹೇಳಿ ಬಿಡ್ತಾರೆ. ಅದು ನಿಜ ಹೇಳ್ತಾರೋ ಊಹಿಸಿ ಹೇಳ್ತಾರೋ ದೇವರಿಗೇ ಗೊತ್ತು!
ಇದನ್ನು ಉಗ್ರಗಾಮಿಗಳು ನೋಡಿ ಮುಂದಿನ ಸ್ಟ್ರಾಟೆಜಿ ಮಾಡೋದೂ ನಿಜ!
ನೀವೇನೆ ಹೇಳಿ ಲೈವ್ ಅನ್ನೋದು ಜನರ ಹಾಸುಹೊಕ್ಕಾಗಿ ಬಿಟ್ಟಿದೆ.ಕೇವಲ ಏಳು ನಿಮಿಶ ಡೀಲೇ ಮಾಡಿ ತೋರಿಸೋ ಕ್ರಿಕೆಟ್ ಮಾಚೇ ನಮಗೆ ಬೇಡ ಅಂತ ಹೆಳಿದ್ದು ನಾವೇ ಅಲ್ವ??
ಅದಿನ್ನ್ನೇನು ಲೈವ್ ನೋಡ್ತೀವೊ ನಾವು!!!(ಅಮೆರಿಕಾದಲ್ಲಿ ಮಿಲನ ಮಹೋತ್ಸವವನ್ನೆ ಲೈವ್ ತೋರಿಸ್ತಾರಂತೆ ಕಾಸ್ ಕೊಟ್ರೆ! )

‍ಲೇಖಕರು avadhi

December 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

4 ಪ್ರತಿಕ್ರಿಯೆಗಳು

 1. ನರೇಂದ್ರ

  ದಯವಿಟ್ಟು ನಳಿನ್ ಮೆಹ್ತಾ ಬರೆದಿರುವ India on Telivision ಎಂಬ ಪುಸ್ತಕ ಗಮನಿಸಿ. ಹಾರ್ಪರ್ ಕಾಲಿನ್ಸ್ ಹೊರತಂದಿರುವ ಈ ಕೃತಿಯ ಬಗ್ಗೆ ಈ ಬಾರಿಯ Frontline ಪತ್ರಿಕೆಯಲ್ಲಿ ವಿವರವಾದ ಚರ್ಚೆ ಇದೆ. ಟೀವಿ ಮಾಧ್ಯಮ ಹೇಗೆ ನಮ್ಮ ಜನರ ಯೋಚನಾಧಾಟಿಯನ್ನೇ ತಿದ್ದಿ ಬಿಟ್ಟಿದೆ ಎನ್ನುವುದನ್ನು ಈ ಪುಸ್ತಕ ಅಚ್ಚುಕಟ್ಟಾಗಿ ವಿವರಿಸಿದೆಯಂತೆ. ಮಾಧ್ಯಮ ನಮ್ಮ ಮೆದುಳನ್ನು ಆಕ್ರಮಿಸದಂತೆ ಎಚ್ಚರವಹಿಸಲು ಇಂಥ ಚರ್ಚೆ, ಪುಸ್ತಕ ಅತ್ಯಾವಶ್ಯಕ.

  ಪ್ರತಿಕ್ರಿಯೆ
 2. subrmani

  ಭಯೋತ್ಪಾದಕರ ಮಾನಸಿಕ ಸ್ಥೈರ್ಯ ಹೆಚ್ಚಿಸಿದ್ದು ಮಾಧ್ಯಮಗಳೇ.ಏಕೆಂದರೆ ಮುಖ್ಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹೀಗಿಗೆ ಎಂದು ಪ್ರಮುಖರು ಸತ್ತ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಲೇ ಇದ್ದವು.ಹೊಟೇಲ್ ಗಳಲ್ಲಿ ಅಡಗಿ ಕುಳಿತ ಉಗ್ರರು ಟಿವಿಯಲ್ಲಿ ನೋಡಿ ಗೆಲುವಿನ ಕೇಕೆ ಹಾಕಿರಬಹುದು.
  ಹಾಗಾಗಿ ಮಾಧ್ಯಮಗಳದ್ದು ಪರಕಾಯ ಪ್ರವೇಶ ಎಂದು ಖಂಡಿತಾ ಭಾವಿಸಬೇಕಾಗಿಲ್ಲ.
  ಏಕೆಂದರೆ,ಟಿಆರ್ ಪಿ ಜಪ ನಡೆಯುತ್ತಿತ್ತು.ದಿಗ್ಭ್ರಾಂತರಾಗಿ ಟಿವಿ ವೀಕ್ಷಕರು ಇದಕ್ಕೆಲ್ಲಾ ಸಾಥ್ ನೀಡುತ್ತಿದ್ದರು.

  ಪ್ರತಿಕ್ರಿಯೆ
 3. ಮಧುಸೂದನ್.ವಿ

  ಜವಾಬ್ದಾರಿ ರಹಿತರಾಗಿ, ಮುಂದಾಲೋಚನೆಯನ್ನ ಮರೆತು, ಸಾಮಾಜಿಕ ಬದ್ಧತೆಯನ್ನ ಸಮಾಧಿಯನ್ನಾಗಿ ಮಾಡಿ ಕೈಗೊಳ್ಳುವ ಎಲ್ಲಾ ಕೆಲಸಗಳೂ ಇಂಥಹ ಅಚಾತುರ್ಯವನ್ನ ಸೃಷ್ಟಿ ಮಾಡುತ್ತವೆ ಹಾಗೂ ನಾವು ಮೌನವಾಗಿ ಕುಳಿತು ಇದೆಲ್ಲವನ್ನು ವೀಕ್ಷಿಸುವವರೆಗೂ ಅವು ಮುಂದುವರೆಯುತ್ತಲೇ ಇರುತ್ತವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: