ಕ್ಲಿಕ್ ಆಯ್ತು ಕವಿತೆ : ಅಗೆದರಷ್ಟೇ ಅವಶೇಷ

d-s-ramaswamy

ಡಿ ಎಸ್ ರಾಮಸ್ವಾಮಿ

 

ಅಗೆದರೆ ತಾನೆ ಅವಶೇಷ ದಕ್ಕುವುದು

ಹಳೆಯ ಚಿತ್ರಗಳೆಲ್ಲ ಕಣ್ಮುಂದೆ ನಿಲ್ಲುವುದು

ಕ್ಲಿಕ್ಕಿಸಿದ ಸಂದರ್ಭಗಳ ಲೆಕ್ಕ ಸಿಕ್ಕುವುದು

ಇದ್ದಲ್ಲೇ ಸ್ಥಿರವಾದ ಸಂಗತಿಗಳ ಬಿಚ್ಚುವುದು.

 

ಆದರೇನು ಮಾಡುವುದು

ತನ್ನನ್ನು ತಾನೇ ಚಿತ್ರಿಸುವವಕಾಶ ಸುಲಭ-

ಕ್ಕೊಲಿಯದು ಸೆಲ್ಫಿ ಇಲ್ಲದ ಕ್ಯಾಮರಾಗಳಲ್ಲಿ

ಪುರಾತನ ಕಾಲದ  ಕತ್ತಲ ಸಹವಾಸ

ಗೊತ್ತೇ ಇಲ್ಲದ ಆಧುನಿಕತೆಯ ಕೃತಕತೆಗಳಲ್ಲಿ.

 

ತೆಗೆದದ್ದನ್ನೆಲ್ಲ ಚಿತ್ರ ಪಟವಾಗಿಸುವ ಮೊದಲು

ಗುಡ್ ಒನ್ಸ್ ಗಳನ್ನಷ್ಟೇ ಆಯುವ ಕುಶಲ ಕಲೆ

ಒಲಿಯುವುದಕ್ಕೆ ನಿರಂತರದ ಏಕ ನಿಷ್ಠೆಯ ತಪಸ್ಸು

ಸಿದ್ಧಿ ಸಾಧನೆಗೆ ಚಿತ್ರಗಳೇ ಯಾವತ್ತೂ ಸಾಕ್ಷಿಗಳು

 

ಚಿತ್ರ ಕ್ಲಿಕ್ಕಿಸುವ ಕ್ಯಾಮರಾಕ್ಕಿರುವ ತಾಕತ್ತು

ಬಳಸುವವರಿಗೆ ಗೊತ್ತಿದ್ದರಷ್ಟೇ ದಾಖಲೆ

ನೆರಳು ಬೆಳಕು ಸಮಯ ಸಂದರ್ಭ

ಅರಿವಿದ್ದರಷ್ಟೇ ಅರಳುವುದು ಸಾಹಿತ್ಯ ಚಿತ್ರ ಕಲೆ

‍ಲೇಖಕರು admin

October 20, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Dr.T yellappa

  ಪ್ರೀತಿಯ ರಾಮಸ್ವಾಮಿ ಸರ್ ನಿಮ್ಮ ಕವಿತೆ ಓದಿದ ಕೂಡಲೇ ಅಡಿಗರ ” ಆಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡಿತು ಗೆರೆಮಿರಿವ ಚಿನ್ನದದಿರು ” ಸಾಲುಗಳು ನೆನಪಾದವು .ಹಾಗೆಯೇ ಕೆ .ಎಸ್.ನ.ರ ಕುಂಕುಮಭೂಮಿ ಕವಿತೆಯ ಸಾಲುಗಳು ನೆನಪಾದವು.ಇದು ಬರೇ ನೆನಪಾಗುವ ಸಂಗತಿ ಮಾತ್ರ ಅಲ್ಲ. ಕಾವ್ಯ ಪರಂಪರೆ ಯೊಂದಿಗೆ ಅದರ ವಾರಸುಧಾರನಾದ ಸಂವೇದನಾಶೀಲ ಕವಿಯೊಬ್ಬನು ನಡೆಸುವ ಅನುಸಂಧಾನ .ಅಡಿಗರ ಮಾತಲ್ಲೇ ಉಲಿಯುವುದಾದರೆ ..ಈ ನಿಮ್ಮ ಕವಿತೆ ಕವಿ ಮಾಡಬಹುದಾದ ಅಸಲು ಕಸುಬು. ಪರಂಪರೆಯನ್ನು ಶೋಧಿಸಿ ಅಪರಂಜಿ ಚಿನ್ನವನ್ನು ಸೋಸುವ ಅಸಲು ಕಸುಬಿನ ..ಅಚ್ಚುಕಟ್ಟುತನ ಈ ಕವಿತೆಯಲ್ಲಿದೆ. ಇತ್ತುಗಳ ಧ್ವಜವ ಎತ್ತಿಕಟ್ಟದೆ, ಬೇರುಸತ್ತ ಮರದ ಮರ್ಮರ ಲಾಲಿಯವ ಹಾಡದೆ ,ಇಹದ ಜೊತೆಗಿನ ಸೆಲ್ಪಿ ಸಂಬಂಧವನ್ನು ,ಸಂಭ್ರಮ ವನ್ನು …ಅನುಭವಿಸುವ ಜರೂರತ್ತಿನ …ಹಾಕಿಕತ್ತನ್ನು ಮಂಡಿಸುವ ಒಂದಳ್ಳೆ ಕವಿತೆ ನಿಮ್ಮ ದು . ಅಭಿನಂದನೆ ನಿಮಗೆ. (.ಡಾ.ಟಿ.ಯಲ್ಲಪ್ಪ.)

  ಪ್ರತಿಕ್ರಿಯೆ
  • D S Ramaswamy

   ಧನ್ಯವಾದ ಸರ್. ಈ ನಡುವೆ ಕವಿತೆ ಬರೆಯುವುದಿರಲಿ ಓದುವುದಕ್ಕೂ ದಕ್ಕದ ಬಿಡುವು.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: