ಕ್ಲಿಕ್ ಆಯ್ತು ಕವಿತೆ: ಆ ಕ್ಯಾಮೆರಾ ಇದೇ ಇರಬಹುದಾ..??

ಸ್ಮೈಲ್ ಪ್ಲೀಜ್

lakshman

ಲಕ್ಷ್ಮಣ್

ನಡು ಹಗಲಿಗೆ
ನಡು ಮುರಿದು ಬಿದ್ದ ಬೆಳಕಿಗೆ
ಬೆನ್ನು ಮಾಡಿ
ಕ್ಯಾಮೆರ ಹೆಗಲೇರಿಸಿಕೊಂಡ ಕೆವಿನ್
ಚಿತ್ರಗಳ ಬೇಟೆಗೆ ಹೊರಡುತ್ತಾನೆ

ಭೂಗೋಳದಂತಿರುವ ಬೊಕ್ಕ ತಲೆ
ಕಡ್ಡಿ ಕೈ ಕಾಲು
ಬೆನ್ನಿಗಂಟಿರುವ ಹೊಟ್ಟೆ ಏದುಸಿರು ಬಿಡುತ
ನೆಲಕಂಟಿಕೊಂಡೆ
ಹಸಿವಿನಿಂದ ನರಳಿ ನರಳಿ
ತೆವಳುತಿರುವ ಸೋಮಾಲಿಯಾದ ಹಸುಳೆಗಳ
ಬಳಿ ತೆರಳಿ ‘ಸ್ಮೈಲ್ ಪ್ಲೀಜ್, ಸ್ಮೈಲ್ ಪ್ಲೀಜ್’
ಎಂದು
ಕ್ಷಾಮದ ಬಿಳಿ ಹಲ್ಲು ನಗೆಗಳ ಚಿತ್ರ ಸೆರೆಹಿಡಿಯುತ್ತಾನೆ

unnamed

ಇನ್ನೇನು ಸಾವು ಕಣ್ಣಾಲಿಗಳಲೇ
ತೇಲುತಿರುವ
ಹಸುಳೆಯ ಹಸಿ ಬಿಸಿ ಮಾಂಸ ತಿನ್ನಲು
ತುಸು ದೂರದಲ್ಲೇ ರಣ ಹದ್ದಿನ ಕಣ್ಣೂ
ಹೊಂಚು ಹಾಕಿದೆ ಏಕಕಾಲಕ್ಕೆ

ಸರಳುಗಳ ಹಿಂದಿನ
ಕೈದಿಯ ನೆರಳನು
ಸುಂದರಿಯ ನಡುವಿನ ಹಸಿ ಬಿಸಿ
ತೊಗಲ ಸವರಿ ಸೆರೆ ಹಿಡಿದ ಕ್ಯಾಮೆರಾದ
ಕಣ್ಣೇ
ಎಣ್ಣೆ ಕಾಣದ ಭೂಗೋಳದಂತ
ಬಕ ನೆತ್ತಿಯ ಸವರಿ
ಕ್ಷಿತಿಜಕ್ಕೆ ಹಾರಿದೆ.

ಅಪರೂಪದ ಪಟ ಸೆರೆ ಹಿಡಿದ
ಗೆದ್ದ ಖುಷಿಯಲ್ಲಿ ಬೀಗಿದವನು ಆ ದಿನ
ತುಸು ಹೆಚ್ಚೇ ಸಿಗರೇಟು ಉರಿಸಿದ

ಮುಂದೇನು?

ದಿನಗಳು ಸವೆಯುತಿವೆ
ಯುಗಗಳಂತೆ
ಯಾತನೆಗಳು ಪಾಳಿಯಲ್ಲಿ ಬರುತಿವೆ
ಹಗಲು ರಾತ್ರಿ
ಗಸ್ತಿಯಲಿ ನಿಂತ ದಫೇದಾರನು ನಿದ್ದೆಗೆ
ಜಾರಿದಂತೆ
ಅಥವ ನಟಿಸುತ್ತಾನೆ ಕಳ್ಳ ಬೆಕ್ಕಿನಂತೆ
ಸರಳುಗಳ ಹಿಂದಿನ
ನೆರಳು ಯಾವ ಕ್ಯಾಮರಾ ಕಣ್ಣಿಗೂ
ಸೆರೆಯಾಗುತಿಲ್ಲ
ತನ್ನ ನೆರಳಿಗೆ ತಾನೆ ಬೆಚ್ಚುತ
ಜೈಲು ಸರಳಿನ ಹಿಂದೆ
ತಾನೆ ಬಂಧಿಯಾಗುತ
ನಿಟ್ಟಿರಿಳುನಿಲಿ ಕ್ಷಾಮದ ಹಲ್ಲುಗಳು
ಇವನನ್ನೇ ಇಂಚಿಂಚಾಗಿ
ಇರಿದು ತಿಂದ ಪಾಪ ಪ್ರಜ್ಞೆಯ ದುಸ್ವಪ್ನಗಳು

—–

kevin-karter-pulitzer-somaliaಸೋಮಾಲಿಯದ ಭೀಕರ ಕ್ಷಾಮದ ಸಂದರ್ಭದಲ್ಲಿ ಛಾಯಾಗ್ರಾಹಕ ಕೆವಿನ ಕಾರ್ಟಿನನಿಗೆ, ಈಗಲೋ ಆಗಲೋ ಜೀವ ಹೋಗಬಹುದಾದ ಹಸುಳೆಯನ್ನು ತಿನ್ನಬಹುದೆಂಬ ಆಸೆಯಿಂದ ತುಸು ತೂರದಲ್ಲೇ ಹೊಂಚು ಹಾಕಿ ಕುಳಿತ ರಣಹದ್ದಿನ ಚಿತ್ರ ಸೆರೆಯಾಗುತ್ತದೆ.

ಈ ಚಿತ್ರ ಇಡೀ ವಿಶ್ವದ ಕರುಳನ್ನೆಕಿವುಚಿ ಹಾಕುತ್ತದೆ.

ಈ ಚಿತ್ರ ಕ್ಕೆ ಪುಲಿಟ್ಜರ್ ಪ್ರಶಸ್ತಿ ಯೂ ಸಿಗುತ್ತದೆ. ಆದರೆ ಆ ಹಸುಳೆಯನ್ನು ರಕ್ಷಿಸಲಾಗದ ಪಾಪ ಪ್ರಜ್ಞೆಯಲ್ಲಿ ನರಳಿ ಕೆವಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ..

ಮುಂದೆ ಮಗು ಬದುಕುಳಿಯಿತಾ?ಅಥವ ಯಾರೋ ಆಹಾರ ನೀಡಿ ಬದುಕುಳಿಸಿದರಾ?ಅಥವ ಈ ಚಿತ್ರ ಸೆರೆಯಾದ ಕೆಲವೇ ಗಳಿಗೆಯಲ್ಲಿ ಸತ್ತು ರಣಹದ್ದಿನ ಪಾಲಾಯಿತಾ?

ಕೆವಿನ್ ಏನೋ ಆತ್ಮಹ್ತತ್ಯೆ ಮಾಡಿಕೊಂಡ ಆದರೆ ಆ ಚಿತ್ರ ಸೆರೆ ಹಿಡಿದ ಕ್ಯಾಮೆರಾ ಏನಾಯಿತು ?
ಎಂಬ ಪ್ರಶ್ನೆ ನನ್ನನ್ನೂ ಕಾಡಿತು. ಆ ಕ್ಯಾಮೆರಾ ಇದೇ ಇರಬಹುದಾ

‍ಲೇಖಕರು admin

October 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anonymous

    ಮಾರ್ಮಿಕ ನೆನಪು ಮರ್ಮಾಘಾತ ನೀಡುತ್ತದೆ.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: