ಕ್ಲಿಕ್ ಆಯ್ತು ಕವಿತೆ: ಈ ಆಟ ಶುರುವಾಗಿದ್ದು ಬಹಳ ಹಿಂದೆ..

ಆಟ..

ನಂ ಪಾರ್ವತಿ 

ಈ ಆಟ ಶುರುವಾಗಿದ್ದು ಬಹಳ ಹಿಂದೆ

ಅಪ್ಪ ಸೌದೆ ಒಡೆಯುತ್ತಾ, ಅಮ್ಮ ಎಸರಿಗಿಡುತ್ತಾ,

ಸುತ್ತಲ ಸಕಲ ಕೆಲಸವ ಮಾಡಿಮುಗಿಸೋ ಹಡಾಹುಡಿಯಲ್ಲಿ

ಮುಳುಗಿದ್ದಾಗ…

ಅಕ್ಕ-ಅಣ್ಣದಿರು, ತಮ್ಮ-ತಂಗಿಯರ ಒಟ್ಟಿಕೊಂಡು

ಅಪ್ಪ-ಅಮ್ಮನ ಆಟ ಆಡುವಾಗ, ಪೂಜೆ-ಆಟ ಆಡುವಾಗ..

ಇವುಗಳ ನಡುವೆ

ನಿರ್ವಿಘ್ಙ ಮನೆಯ ಕೆಲಸ ನಡೆಯುತ್ತಿದ್ದಾಗ…

click-aytu-kavite-5

ಭಾವದ ಅರಿವಿಲ್ಲದ, ಕೆಲಸದ ಹೊರೆಯಿಲ್ಲದ,

ನಾಳಿನ ಚಿಂತೆಯಿಲ್ಲದ, ಇಂದಿನ ಹಂಗೂ ಇಲ್ಲದ ಆಟದ ಹೊತ್ತಲ್ಲಿ. …

 

ಯಾವುದೂ ಕಾಡಲಿಲ್ಲ, ಯಾವುದೂ ಬೇಡಲಿಲ್ಲ,

ಎಷ್ಟುಬಾರಿ ಆಡಿದರೂ ಮುಗಿಯಲಿಲ್ಲ…

ಆಟಕ್ಕೆ ಜೀವ-ಜೀವನದ ಹೊರೆಯಿಲ್ಲ.

 

ಆಟ ಅಲ್ಲಿಗೇ ನಿಲ್ಲುವುದಿಲ್ಲ..

ದೇಹ ಬೆಳೆದಂತೆ, ಭಾವ ಬದಲಾಗಲಿಲ್ಲ, ಆಟ ನಿಲ್ಲಲಿಲ್ಲ..

 

ಜೊತೆನಡೆವ, ಹುಡುಕಾಡುವ, ಕಾಡುವ,  ಬೇಡುವ

ಎಲ್ಲಾ ತಂತುಗಳ ಬದಿಗಿರಿಸಿ, ಹೊಸಕಿ ಹಾಕಿ…

ಕಥೆಯಲ್ಲಿ, ಹಾಡಿನಲ್ಲಿ, ಪುರಾಣದಲ್ಲಿ, ಚರಿತ್ರೆಯಲ್ಲಿ

ಮೂಡಿದ ಚಿತ್ರವಾಗಿಬಿಡುವ ತವಕ …

ಕೊನೆಗೆ, ಗುಡಿಯ ಕಲ್ಲಿನ ಮೂರ್ತಿಯಾಗುವ ತೆವಲು…

ತನ್ನೊಳಗಿನ ರೂಪವ ಕಾಣಲು ದಿಗಿಲು…

 

ಅವಳು , ಅವನನ್ನು ಕೊಂದಳಂತೆ,  ಆಗ..

ಈಗ ನಾನು ನಿನ್ನ ಕೊಲ್ಲಲು ಸಾಕು ಈ ಸಮರ್ಥನೆ!

ನನ್ನ ಹುಚ್ಚಾಟಕ್ಕೆ, ತೆವಲಿಗೆ, ಕೋಪ-ಪ್ರತಾಪಕ್ಕೆ ಎಲ್ಲಕ್ಕೂ ಕಾರಣ ಹೊರಗಿದೆ…

ಯಾವ ಕ್ರೌರ್ಯವೂ ನನ್ನದಲ್ಲ

ಕಥೆಯ ಹಿಂದಣ ಬದುಕಿನ ಬಳುವಳಿಯೇ ಎಲ್ಲಾ

 

ನನ್ನದಾಗದ  ಭಾವಕ್ಕೆ ಬಲಿಯಾದ ಬದುಕುಗಳಿಗೆ

ಮರುಗದು ಮನ, ಮೂಡಲೊಲ್ಲದು ಕರುಣ…

 

ಬದಲಾದರೆ ಭಾವ,

ಅಪ್ಪಿಕೊಂಡರೆ ನೋವ

ಆಟವೂ ಬದಲಾಗಬಹುದು…

ನೋಟವೂ ಮಾಗಬಹುದು…

‍ಲೇಖಕರು Admin

October 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕ್ಲಿಕ್ ಆಯ್ತು ಕವಿತೆ: ನಟರಾಣಿ ನಾನು ನಟರಾಜನಲ್ಲ..

ನಾಗೇಶ ಮೈಸೂರು ನಟರಾಣಿ ನಾನು ನಟರಾಜನಲ್ಲ ಪ್ರಳಯವಲ್ಲ ಪ್ರಥಮ ಪುನರುಜ್ಜೀವನ ಸಂಭ್ರಮ ಮೆಟ್ಟಿ ನಿಲ್ಲುವೆ ಪುರುಷದ ಅಹಂಕಾರದ ನಿಮಿತ್ತ ಸೃಷ್ಟಿಗದೆ...

ಕ್ಲಿಕ್ ಆಯ್ತು ಕವಿತೆ: ಯಾರಿವನು ಪುರುಷ?

ವಿದಾಯದ ವೈಖರಿ ಕುಸುಮಾ ಪಟೇಲ್  ಯಾರಿವನು? ಪರಶಿವನೋ ಪರಶುರಾಮನೋ ಕಾಮನೋ, ಯಾ ದೇವ, ದಾನವ, ಮಾನವ ಸಮ್ಮಿಶ್ರನೋ? ಯಾರಿವನು? ಪುರುಷ ಯಾರಿವನು?...

4 ಪ್ರತಿಕ್ರಿಯೆಗಳು

 1. C. N. Ramachandran

  ಆತಿ ಹಳೆಯ ’ಆಟ’ದ ಅತಿ ಹೊಸ ವ್ಯಾಖ್ಯಾನ ತುಂಬಾ ಅರ್ಥಪೂರ್ಣವಾಗಿದೆ. ಹಾರ್ದಿಕ ಅಭಿನಂದನೆಗಳು.
  ರಾಮಚಂದ್ರನ್

  ಪ್ರತಿಕ್ರಿಯೆ
  • N. Parvathi

   ತುಂಬಾ, ತುಂಬಾ ಧನ್ಯವಾದಗಳು ಸರ್.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: