ಖಡಕ್ ಬರಹಗಳನ್ನು ಸಹಿಸಲಾರದೆ…

no_hate

‘ಮೀಡಿಯಾ ಮಿರ್ಚಿ’ಯನ್ನು ಆರಂಭದಿಂದಲೂ ಓದುತ್ತಿದ್ದೇನೆ, ಮೆಚ್ಚಿದ್ದೇನೆ.

‘…ಮಿರ್ಚಿ’ಯಲ್ಲಿ ’ಏಕೆ ಹೀಗಾಯ್ತೋ, ನಾನು ಕಾಣೆನು…’ ಲೇಖನವನ್ನೂ, ’ಅವಧಿ’ಯಲ್ಲಿ ಅದೇ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರವನ್ನೂ, ಮತ್ತೆ ’…ಮಿರ್ಚಿ’ಯಲ್ಲಿ ನೀವು ಆ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಆಯ್ದು ಕ್ರೋಡೀಕರಿಸಿ ಬರೆದ ಬರಹವನ್ನೂ ಓದಿದ್ದೇನೆ.

…ನೀವು ಅತ್ಯವಶ್ಯ ಚರ್ಚೆಯೊಂದಕ್ಕೆ ನಾಂದಿ ಹಾಡಿ ಅತ್ಯುತ್ತಮ ಕೆಲಸ ಮಾಡಿದ್ದೀರಿ.

ಅಂದಹಾಗೆ, ಕೆಲವು ತಿಂಗಳುಗಳ ಕೆಳಗೆ, ಒಂದೆರಡು ಪೋರ್ಟಲ್‌ಗಳಲ್ಲಿ ನನ್ನ ಕೆಲವು ಖಡಕ್ ಬರಹಗಳನ್ನು ಸಹಿಸಲಾರದೆ ಕೆಲವು ಅನಾಮಿಕರು ವೃಥಾ ದೂಷಣೆ ಮತ್ತು ಸುಳ್ಳು ಆರೋಪಗಳ ಮೂಲಕ ನನ್ನನ್ನು ಧೃತಿಗೆಡಿಸಲು ಪ್ರಯತ್ನಿಸಿದರು. ಆರಂಭದಲ್ಲಿ ನನಗೆ ಬೇಸರವಾಯಿತಾದರೂ ಅವುಗಳಿಗೆಲ್ಲ ತಕ್ಕ ಉತ್ತರ ನೀಡುತ್ತಬಂದಾಗ ಅವರೆಲ್ಲ ಕರಗಿಹೋದರು.

ಕಳೆದ ನಲವತ್ತೆರಡು ವರ್ಷಗಳಿಂದ ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಬರೆಯುತ್ತ, ನುಡಿದಂತೆ ನಡೆಯುತ್ತ, ನಡೆದುದನ್ನೇ (ಶ್ಲೇಷೆ ಉದ್ದೇಶಿತ) ನುಡಿಯುತ್ತ ಬಂದಿರುವ ನಾನಿಂದು ಅಂತರ್ಜಾಲದಲ್ಲಿ ಬರೆಯುತ್ತಿರುವುದು ಯಾವ ಪ್ರಚಾರ-ಪ್ರಸಿದ್ಧಿಯ ಬಯಕೆಯಿಂದಲೂ ಅಲ್ಲ; ಕನ್ನಡ ಪತ್ರಿಕೆ ತಲುಪದ, ಎಲ್ಲ ಪತ್ರಿಕೆ ಓದದ, ವಿಶೇಷವಾಗಿ ಯುವಪೀಳಿಗೆಯ ಗಮನಕ್ಕೆ ವಿಚಾರಗಳು ಬರಲಿ, ಅದರಿಂದಾಗಿ ಸಮಾಜಕ್ಕೆ ಒಳ್ಳಿತಾಗಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ. ಸದುದ್ದೇಶಪೂರ್ಣ ಪ್ರಾಮಾಣಿಕ ಬರಹಗಾರರು ಅಂತರ್ಜಾಲ (ಕು)ವಿಹಾರಿ ಕೆಲವರ ಕುಚೋದ್ಯದಿಂದಾಗಿ ತೆರೆಮರೆಗೆ ಸರಿದರೆ ಅದರಿಂದ ಸಮಾಜಕ್ಕೆ ನಷ್ಟ. ಹೀಗಿರುವಾಗ ನೀವು ಬುಡಹಾಕಿದ ಚರ್ಚೆ ಇಂದು ಅತ್ಯಂತ ಜರೂರಾದುದಾಗಿದೆ.

ನನ್ನ ಧನ್ಯವಾದವನ್ನು ಸ್ವೀಕರಿಸಿ..

ವಂದನೆಗಳು.

ಎಚ್. ಆನಂದರಾಮ ಶಾಸ್ತ್ರೀ

‍ಲೇಖಕರು avadhi

August 23, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This