ಖಾಸಗಿತನಕ್ಕೆ ಲಗ್ಗೆಯಿಟ್ಟಾಗ ಸಹಿಸಲಾಗದು

2005313120668860690_rs

ಚೇತನಾ ತೀರ್ಥಹಳ್ಳಿ

ಅನಾಮಿಕ ಕಮೆಂಟುಗಳ/ಟಿಗರ ಬಗ್ಗೆ ಬಂದ ಸಲಹೆಗಳನ್ನು ನೋಡಿದೆ. ಬಹುತೇಕರು ಇಗ್ನೋರ್ ಮಾಡುವುದು, ಡಿಲೀಟ್ ಮಾಡುವುದು ಉತ್ತಮ ಉಪಾಯವೆಂದಿದ್ದಾರೆ. ಒಂದಿಬ್ಬರು ಪೂರ್ವ ತಯಾರಿ ನಡೆಸ್ಕೊಂಡಿರಬೇಕು ಅಂದಿದಾರೆ.

ನನ್ನ ಪ್ರಕಾರ ಮತ್ತು ಸಹಬ್ಲಾಗಿಗರೊಂದಿಬ್ಬರು ಹೇಳಿರುವಂತೆ ಹೀಗೆ ಸುಮ್ಮನಿದ್ದುಬಿಡುವುದು ಅನಾಮಿಕ ಕಮೆಂಟುದಾರರಿಗೆ ಪ್ರೋತ್ಸಾಹ ಕೊಟ್ಟಂತೆ ಅನಿಸುತ್ತದೆ ನನಗೆ. ಎಲ್ಲಿಯವರೆಗೂ ಇಂತಹ ಅನಾಮಿಕರಿಂದ ಸಮಸ್ಯೆಯಿರೋದಿಲ್ವೋ ಅಲ್ಲೀವರ್ಗೂ ಅದು ಯಾರು, ಎತ್ತ ಅನ್ನುವ ತಲೆಬಿಸಿ ನಾವೂ ಮಾಡ್ಕೊಳೋದಿಲ್ಲ. ಅದು ನಮ್ಮ ಖಾಸಗಿತನಕ್ಕೆ ಲಗ್ಗೆಯಿಟ್ಟಾಗ ಮಾತ್ರ ಸಹಿಸಲಾಗದು.

ನನ್ನ ಬ್ಲಾಗಿನ ಉದಾಹರಣೆ ಕೊಡೋದೇ ಆದರೆ, ಫೋನಾನ್, ಸೆಕ್ಯುಲರ್, ಸ್ಟ್ರಗಲ್ ಫಾರ್ ಟ್ರುತ್, ರೆಡ್ ಅಲರ್ಟ್, ಡೆವಿಲ್ಸ್ ಮೊದಲಾದ ಜೀವಿಗಳ ಕಮೆಂಟುಗಳು ವಿಪರೀತವಾಗಿ ಬರುತ್ತಿದ್ದವು. ಈ ಫೋನ್ ಆನ್ ಅನ್ನುವ ಪ್ರಾಣಿಯ ಐಪಿ ‘ಸಾಗರ್’ ಹೆಸರಲ್ಲಿ ಕಮೆಂಟ್ ಮಾಡಿದ್ದ ಪ್ರಾಣಿಯ ಐಪಿ (ಅದು ಹೆಣ್ಣೋ, ಗಂಡೋ, ಎರಡೂನೋ, ಅಲ್ಲವೋ ತಿಳಿಯದ್ದರಿಂದ ಹೀಗೆ ಹೇಳಬೇಕಾಗುತ್ತಿದೆ. ಕ್ಷಮೆಯಿರಲಿ) ಒಂದೇ ಆಗಿದ್ದರಿಂದ ಮುಂದಿನ ಕ್ರಮ ತೆಗೆದುಕೊಳ್ಳೋಣವೆಂದುಕೊಂಡೆ. ಆದರೂ ಸುಧಾರಣೆಗೆ ಮತ್ತೊಂದು ಅವಕಾಶ ಕೊಡುವಾ ಅಂತ ಸುಮ್ಮನುಳಿದೆ. ಆ ಹೊತ್ತಿಗೆ ಏನಾಯ್ತೋ, ಆತನ ಕಮೆಂಟ್ ನಿಂತಿತು. ಆತ ಅಶ್ಲೀಲ ಪದ ಬಳಸಿ ಕಮೆಂಟ್ ಮಾಡಿದ್ದು, ಸೈಬರ್ ಕ್ರಮಕ್ಕೆ ಅರ್ಹವಾಗಿಯೂ ಇತ್ತು.

ಹೀಗೆ ನೇರಾನೇರಾ ಕಾನೂನಿನ ಬಾಗಿಲು ತಟ್ಟುವುದಕ್ಕೆ ಹಿಂಜರಿಕೆಯೂ ಆಯ್ತೆನ್ನಿ. ಯಾಕೆಂದರೆ ಸ್ಟ್ರಗಲ್ ಫಾರ್ ಟ್ರುತ್ ನಿಂದ ಬಂದಿದ್ದು ಬೆದರಿಕೆಯ ಕಮೆಂಟು. ‘ಒಬ್ಬಳೇ ಇರ್ತೀಯ, ನೋಡಿಕೊಳ್ತೇವೆ’ ಅನ್ನುವಂಥದ್ದು. ಮನಸಿನಾಗಿನ ಮಾತು ಅನ್ನುವ ಮನಸಿಲ್ಲದ ಜೀವಿಯೊಂದು ಬ್ಲ್ಯಾಕ್ ಮೇಲ್ ನಂಥ ಕಮೆಂಟ್ ಮಾಡಿದಾಗ ಮಾತ್ರ ನನ್ನಿಬ್ಬರ್ ಬ್ಲಾಗ್ ಗೆಳೆಯರ ಸಹಾಯ ಪಡೆದು ಪತ್ತೆ ಹಚ್ಚಲು, ಕಂಪ್ಲೇಂಟ್ ನೀಡಲು ಮುಂದಾದೆ. ಆತ ಯಾರೆಂದು ಗೊತ್ತಾಗುವ ವೇಳೆಗೆ ಕೆಲಸ ಕಳೆದುಕೊಂಡು ಬೀದಿಗಿಳಿದುಹೋಗಿದ್ದ. ಹೊಸತಾಗಿ ಶಿಕ್ಷಿಸಲು ಏನೂ ಉಳಿಯದ್ದರಿಂದ ಮಾನವೀಯತೆಯಿಂದಾಗಿ ಸುಮ್ಮನಾಗಬೇಕಾಯ್ತು.

ಬಹುಶಃ ಕಮೆಂಟ್ ಗಳನ್ನ ಇಗ್ನೋರ್ ಮಾಡಿ ಅನ್ನುವವರಿಗೆ ಅದರ ಹಿಂಸೆಯ ಅರಿವು ಇರಲಾರದು. ನನ್ನನ್ನು ಗಮನಿಸ್ತಿರುವ, ಬೆದರಿಸ್ತಿರುವ ವ್ಯಕ್ತಿ ಯಾರೆಂದೇ ತಿಳಿಯದೆ ಅವರನ್ನ ಎದುರಿಸೋದಾದರೂ ಹೇಗೆ? ಗೊತ್ತಾದನಂತರದ ಮಾತು ಬೇರೆ. ಆದರೆ ಆ ಹಿಂಸೆ ನೀಡುವ ಮಾನಸಿಕ ಆಘಾತ ಎಂಥದು ಅಂದಾಜಿದೆಯಾ?

ನಾನು ಮತ್ತೆ ಮತ್ತೆ ಬ್ಲಾಗ್ ಡಿಲೀಟ್ ಮಾಡೋದು, ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಡೋದೂ ಇದೇ ಕಾರಣಕ್ಕೆ. ಸೂಕ್ಷ್ಮ ಮನಸಿಗೆ ಇದೆಲ್ಲ ಆತಂಕ ತರುವ ಸಂಗತಿಯೇ ಸರಿ. ಅಕಾರಣ ದ್ವೇಷಕ್ಕೆ ಪಕ್ಕಾಗುವ ನೋವು ಕೂಡ ಕಾಡುತ್ತದೆ. ಬಹಳ ಸೆನ್ಸಿಟಿವ್ ಆಗಿರುವ ನಾನು, ಲೇಖನ, ವಸ್ತು, ವಿಷಯದ ಹೊರತಾದ ಯಾವ ಕಮೆಂಟ್ ಬಂದರೂ ತಲ್ಲಣಗೊಳ್ತೇನೆ. ಸ್ವತಃ ಮೋಹನ್ ಒಮ್ಮೆ ಹೇಳಿದ್ದರು, ನಾವು ಯಾವುದರಿಂದ ಬೇಸರಗೊಳ್ತೇವೆ ಅಂತ ತೋರಿಸ್ಕೊಳ್ಳಬಾರದು. ವಿಕೃತ ಮನಸಿನ ಜನ ಮತ್ತೆ ಮತ್ತೆ ಅದೇ ಪೆಟ್ಟನ್ನು ನೀಡ್ತಾರೆ ಅಂತ. ಬಟ್ ಹೇಗೆ ಸಾಧ್ಯ? ಇನ್ನು ಸಹಿಸುವಿಕೆ ಸಾಧ್ಯವಿಲ್ಲ ಅಂದಾಗಲೂ ತೋರಿಸಿಕೊಳ್ಳದೆ ಉಳಿಯೋದು ಹೇಗೆ?

ಹಾಗೇನೇ, ಅನಾಮಿಕ ಕಮೆಂಟುದಾರರನ್ನು ಪತ್ತೆಹಚ್ಚೋದೇನೂ ಸುಲಭವಲ್ಲ ಅನ್ನೋದು ಗೊತ್ತಿದೆ. ಯಾರದಾದರೂ ಮೇಲ್ ಐಡಿ ಗೊತ್ತಿದ್ದರೆ ಸಾಕು, ಅದನ್ನ ಬಳಸ್ಕೊಂಡು ಯಾರು ಬೇಕಾದರೂ ಎಲ್ಲಿಂದ ಬೇಕಾದರೂ, ಯಾರ ಹೆಸರಲ್ಲಾದರೂ ಕಮೆಂಟು ಮಾಡಬಹುದು. ಸಮಸ್ಯೆ ಇಷ್ಟು ಸಂಕೀರ್ಣವಾಗಿರೋದ್ಲಿಂದಲೇ ಕಳೆದೊಂದು ವರ್ಷದಿಂದ ಪ್ರಯತ್ನಿಸ್ತಿದ್ದರೂ ಪರಿಹಾರ ಹೊಳೆಯುತ್ತಿಲ್ಲ. ಹಾ… ತಕ್ಕಮಟ್ಟಿಗೆ ಸಿಕ್ಕಿದೆ, ಬ್ಲಾಗಿಂಗ್ ಕಡಿಮೆ ಮಾಡಿದ ಮೇಲೆ!

ಬಟ್, ನಮ್ಮ ಸೃಜನಶೀಲತೆಗೆ, ಅಭಿವ್ಯಕ್ತಿಗೆ ವೇದಿಕೆಯಾಗಿರುವ ಮಾಧ್ಯಮವೊಂದನ್ನು ಯಾರೋ ಮುಖಹೀನರ ಕಾರಣದಿಂದ ಬಿಟ್ಟುಕೊಡಬೇಕಾಗ್ತದಲ್ಲ ಅನ್ನುವುದು ನೋವಿನ ವಿಷಯ. ಮೊನ್ನೆ ಗೆಳೆಯನೊಬ್ಬ ಹೇಳಿದ, ಬ್ಲಾಗಿಂಗ್- ಬ್ಲಾಗಿಂಗ್ ಅಷ್ಟೇ. ಅದನ್ಯಾಕೆ ಸೀರಿಯಸ್ಸಾಗಿ ತೊಗೋತೀರಿ? ಅದು ನಮ್ಮ ಪಾಡಿಗೆ ಬರೆದುಕೊಳ್ಳುವ ಖಾಸಗಿ ಸಂಗತಿಯಷ್ಟೇ ಅಂತ.

ಬ್ಲಾಗ್ ಮೂಲ ಉದ್ದೇಶ, ಶುರುವಿಟ್ಟ ಮೂಲ ಕಾರಣ ಅದೇ ಇರಬಹುದು. ಆದರೆ ಅದರ ಸಾಧ್ಯತೆಗಳು ಅದನ್ನೂ ಮೀರಿ ಇರುವಾಗ, ಜವಾಬ್ದಾರಿಯುತ ನಾಗರಿಕ ಅಭಿವ್ಯಕ್ತಿ- ಚರ್ಚೆಯ ಮಧ್ಯಮವಾಗಿರುವಾಗ ಅದರ ಸದ್ಬಳಕೆ ಮಾಡಿಕೊಳ್ಳಬಾರದೇಕೆ? ಹಾಗೆ ನೋಡಿದರೆ ಸಾಹಿತ್ಯ ಕೂಡ ಶುರುವಲ್ಲಿ ಆತ್ಮ ತೃಪ್ತಿಗೆಂದೇ ಇದ್ದುದು. ಈ ಬಗ್ಗೆ ಸಂಸ್ಕೃತದಲ್ಲಿ ಸಾಕಷ್ಟು ಹೇಳಿಕೆ/ನಿಯಮಗಳಿವೆ. ಆಮೇಲೆ ಅದು ದೇವ ಸ್ತುತಿ, ರಾಜ ಸ್ತುತಿ, ಇತಿಹಾಸ ನಿರೂಪಣೆ, ಇತ್ತೀಚಿನ ಶತಮಾನಗಳಲ್ಲಿ ಸಮಾಜಮುಖಿಯಾಗಿ ಪರಿವರ್ತನೆಗೊಳ್ಳುತ್ತ ಬಂತು. ನಾನೇನೂ ಬ್ಲಾಗಿಂಗ್ ನಿಂದ ತತ್ ಕ್ಷಣಕ್ಕೆ ಭಾರೀ ನಿರೀಕ್ಷೆಯನ್ನೇನೂ ಇಟ್ಟುಕೊಂಡಿಲ್ಲ. ಆದರೆ ಆಸೆಯನ್ನಂತೂ ಇರಿಸಿಕೊಂಡಿದೇನೆ. ಈ ನಿಟ್ಟಿನಲ್ಲಿ ಚಿಕ್ಕದೊಂದು ಕಾಲುದಾರಿಯಾಗುವುದಾದರೂ ಸರಿಯೇ, ಯಾಕಾಗಬಾರದು? ಇದು ನನ್ನ ಯೋಚನೆ.

ಬಹುಶಃ ಬಗೆಹರಿಯದ ಸಮಸ್ಯೆಯನ್ನ ಮುಂದಿಟ್ಕೊಂಡು ನಾವು ಚರ್ಚಿಸ್ತಿದೇವೇನೋ… ಬಟ್, ಇನ್ನಾದರೂ ಅನಾಮಿಕ ಕಮೆಂಟುದಾರರು ತಮ್ಮ ಬೇಜವಾಬ್ದಾರಿ ಮತ್ತು ವಿಕೃತಿಯಿಂದ ಆಗುವ ಸಮಸ್ಯೆಗಳನ್ನರಿತು ಸರಿದರಿಗೆ ಬರಬಹುದಾದರೆ ಸಂತೋಷ

‍ಲೇಖಕರು avadhi

August 22, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

6 ಪ್ರತಿಕ್ರಿಯೆಗಳು

 1. hneshakumar@gmail.com

  ಅಂತಹ ಮನೋವೈಕಲ್ಯರ ಮಾತಿಗೆ ಹೆದರಿ ಬ್ಲಾಗ್ನ ಅಭಿವ್ಯಕ್ತಿಯನ್ನ ನೀವು ನಿಲ್ಲಿಸಬೇಡಿ,ನಿಮ್ಮ ವಿಚಾರಗಳು ಹರಿಯುತಿರಲಿ ಚೇತನರವರೇ…

  ಪ್ರತಿಕ್ರಿಯೆ
  • Chetana teerthahalli

   ನಮಸ್ತೇ
   ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ಜತೆಯಾಗುವ, ಪ್ರೀತಿಯ ಜನರು ನೀವೆಲ್ಲ ಇದೀರೆಂಬ ನಂಬಿಕೆ ಮೊದಲೇ ಇದ್ದಿದ್ದರೆ ನಾನು ಅವತ್ತೇ ನನ್ನ ಬ್ಲಾಗಿನಲ್ಲಿ ಜೋರಾದ ದನಿಯೆತ್ತಬಹುದಿತ್ತೇನೋ? ಆದರೆ ಏನು ಬರೆದರೂ, ಚರ್ಚೆಗೆ ಚಾಲನೆ ನೀಡಿದರೂ ‘ಪಬ್ಲಿಸಿಟಿ ಸ್ಟಂಟ್’ ಅನಿಸ್ಕೊಂಡ ನೋವು ಹಿಂಜರಿಯುವ ಹಾಗೆ ಮಾಡಿತು. ಇನ್ನೀಗ ಈ ಬೆಂಬಲ ಯಾವತ್ತೂ ನನ್ನಲ್ಲಿ ಧೈರ್ಯ ತುಂಬಲಿದೆ. ಮತ್ತೆ ಬ್ಲಾಗಿಂಗ್ ಕಡೆಗೆ ನನ್ನನ್ನು ಸೆಳೆಯುತ್ತಿದೆ.
   ಮತ್ತೊಮ್ಮೆ,
   ಧನ್ಯವಾದ.

   ನಲ್ಮೆ,
   ಚೇತನಾ ತೀರ್ಥಹಳ್ಳಿ

   ಪ್ರತಿಕ್ರಿಯೆ
 2. Manjunath

  Hello Chetna,
  I was wondering , why did u and tina stopped blogging. i am realising that. i am not staying in India, and these kind of sencible blogs give me strength to live ( dont think i am exaggerating, it is true. for we like outsiders who are not a part of social life where we are living these are the connections to life).
  Although i have never or very less commented because of my lazyness, but i am regular viewer of ur blog.
  I request you to pls continue bloggging. i have many difference of openions about what u say. but i like what u say the way u say
  regards
  mnjunath

  ಪ್ರತಿಕ್ರಿಯೆ
 3. ggovindraaj@gmail.com

  its happy to know that you fought against person who posted u an indecent comment and u left him unounished for he, at that time had already lost his job. However, you should not lose your patience and you just delete the comment. even if it irritable so much. Its good that you still care less for such comments. Happy blogging.

  ಪ್ರತಿಕ್ರಿಯೆ
 4. ಚಂದಿನ

  ಆತ್ಮೀಯ ಚೇತನಾ ಹಾಗು ಟೀನಾ ಅವರೆ,

  ಮುಖೇಡಿ ಕಾಮೆಂಟಿಗರಿಗೆ ಹೆದರಿ ಬ್ಲಾಗಿಂಗ್ ನಿಲ್ಲಿಸುವುದರಿಂದ, ಪರೋಕ್ಷವಾಗಿ ಅವರ ಗೆಲುವಿಗೆ ನೀವುಗಳು ಸಹಕರಿಸುತ್ತಿದ್ದೀರಿ, ನಿಮ್ಮ ಹಾಗು ಟೀನಾರವರ ಬ್ಲಾಗ್ ಗಳು ಇತ್ತೀಚೆಗೆ ಮೌನವಾಗಿರುವುದಕ್ಕೆ ಕಾರಣ ಈ ಮುಖೇಡಿಗರ ಕಾಮೆಂಟುಗಳಾದಲ್ಲಿ, ಬ್ಲಾಗಿಂಗ್ ನಿಲ್ಲಿಸುವ ನಿಮ್ಮ ನಿಲುವು ಖಂಡಿತ ಸರಿಯಾದುದಲ್ಲ ಎಂಬುದು ನನ್ನ ದೃಢವಾದ ಅನಿಸಿಕೆ.

  ಈಗಾಗಲೇ, ನೀವುಗಳು ಸಾಕಷ್ಟು ಓದುಗರನ್ನು ಹೊಂದಿದ್ದು ಕೇವಲ ಕೆಲವು ಕಿಡಿಗೇಡಿಗಳು ಹೊಟ್ಟೆಕಿಚ್ಚಿನಿಂದಲೂ, ಸಾಮಾನ್ಯ ಪರಿಜ್ಞಾನದ ಕೊರತೆಯಿಂದಲೂ ಈ ರೀತಿ ವಿಕೃತವಾಗಿ ನಡೆದುಕೊಳ್ಳುವ ಸಾಧ್ಯತೆಗಳಿವೆ.

  ಇಂಥವರೊಂದಿಗೆ ಸದಾ ಹೋರಾಡುವ ಸಂಯಮ ಹಾಗು ಸ್ಧೈರ್ಯ ಈಗಾಗಲೇ ನೀವು ತೋರಿಸಿದ್ದೀರಿ. ಅವರನ್ನು ಮಾನಸಿಕವಾಗಿ ಸದೆಬಡಿಯುವುದು ನಿಮ್ಮ ದೃಢ ನಿಲುವಾಗಿದ್ದಲ್ಲಿ ನೀವುಗಳು ಕೂಡಲೇ ಬ್ಲಾಗಿಂಗ್ ಉರುಪಿಂದ ಶುರುಮಾಡಲೇಬೇಕೆಂಬುದು ನನ್ನ ಸಲಹೆ ಹಾಗು ವಿನಂತಿ.

  ನಲ್ಮೆಯ
  ಚಂದಿನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: