ಗರುಡ ಸುತ್ತ….

Ameture photographer D GARUD(2)
ವೃತ್ತಿಯಿಂದ ಪತ್ರಕರ್ತರಾಗಿರುವ ಡಿ.ಗರುಡ ಅವರು ಪ್ರವೃತ್ತಿಯಿಂದ ಛಾಯಾಗ್ರಾಹಕರು. ದುಬಾರಿ ಎನ್ನಿಸುವ ಛಾಯಾಚಿತ್ರ ಹವ್ಯಾಸವನ್ನು ಕೇವಲ ತಮ್ಮ ಮನೆಯಲ್ಲಿನ ಅಲ್ಬಂಗೆ ಸೀಮಿತವಾಗಿ ಇಟ್ಟುಕೊಳ್ಳಲು ಬಯಸದ ಅವರು “ನನ್ನ ಸುತ್ತ” ಎನ್ನುವ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ.
ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾದ ರೀತಿಯಲ್ಲಿ ಕಂಡಿದ್ದಾರೆ. ತಾವು ಕಂಡಿದ್ದನ್ನು ಛಾಯಾಚಿತ್ರಗಳ ಮೂಲಕ ಕಲಾ ಪ್ರಿಯರಾದ ಸಹೃದಯರ ಮುಂದೆ ಇಡುತ್ತಿದ್ದಾರೆ. ಜೂನ್ 6, 2009 (ಶನಿವಾರ)ರಂದು “ನನ್ನ ಸುತ್ತ” ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಏರ್ಪಡಿಸಿದ್ದಾರೆ.
NANNA SUTTA-5(3)
ಐಡಿಯಾ-ಜಿ ಹಾಗೂ ಗರುಡ ನಾಟ್ಯ ಸಂಘದ ಸಹಯೋಗದಲ್ಲಿ ನಡೆಯಲಿರುವ “ನನ್ನ ಸುತ್ತ” ಪ್ರದರ್ಶನದಲ್ಲಿ ಸುಮಾರು ನೂರೈವತ್ತು ಛಾಯಾಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಪ್ರದರ್ಶನವನ್ನು ಕ್ರಿಕೆಟ್ ಆಟಗಾರ ದೊಡ್ಡ ಗಣೀಶ್ ಅವರು ಶನಿವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹ್ಯೂಮರ್ ಕ್ಲಬ್ ಇಂಟರ್ನ್ಯಾಷನಲ್ ಸ್ಥಾಪಕ ಅಧ್ಯಕ್ಷರಾದ ವೈ.ಎಂ.ಎನ್.ಮೂರ್ತಿ ಅವರು ವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ರತ್ನಾ ಎಂ.ಶ್ರೀನಿವಾಸ್ ಹಾಗೂ ಖ್ಯಾತ ಟೆಲಿವಿಷನ್ ನಟರಾದ ಅಂಬರೀಷ್ ಸಾರಂಗಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.
ದಿನಾಂಕ: 6ನೇ ಜೂನ್ 2009 (ಶನಿವಾರ)
ಛಾಯಾಚಿತ್ರಗಳ ಪ್ರದರ್ಶನ ಸಮಯ: ಬೆಳಿಗ್ಗೆ 11.00ರಿಂದ ರಾತ್ರಿ 7ರವರೆಗೆ
ಸ್ಥಳ: ಮನೋರಮಾ ಹಾಲ್,
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,
ಬಿ.ಪಿ.ವಾಡಿಯಾ ರಸ್ತೆ,
ಬಸವನಗುಡಿ, ಬೆಂಗಳೂರು-560 004

‍ಲೇಖಕರು avadhi

May 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This